ತಾಮಸನಿರಸನಸ್ಥಲ - ನಂಟುಭಕ್ತಿ
ಆರಾಧ್ಯ ಪ್ರಾಣಲಿಂಗವೆಂದರಿದು,
ಪೂರ್ವಗುಣವಳಿದು ಪುನರ್ಜಾತನಾದ ಬಳಿಕ,
ಸಂಸಾರಬಂಧುಗಳೆನ್ನವರೆಂದೊಡೆ
ʼನಂಟುಭಕ್ತಿ ನಾಯಕನರಕʼ-ಇಂತೆಂದುದು ಕೂಡಲಸಂಗನ ವಚನ.
Transliteration Ārādhya prāṇaliṅgavendaridu,
pūrvaguṇavaḷidu punarjātanāda baḷika,
sansārabandhugaḷennavarendoḍe
ʼnaṇṭubhakti nāyakanarakaʼ-intendudu kūḍalasaṅgana vacana.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If, knowing Prāṇaliṅga worshipful,
If, with your bygone sins effaced,
Being born again you say,
'The kinsmen of the world are mine,'
The word of KūḍalaSaṅga hath said :
'Arch-hell is this kinsfolk love !'
Translated by: L M A Menezes, S M Angadi
Hindi Translation प्राणलिंग को आराध्य जान
पूर्व गुणों को नष्ट कर पुनर्जात होने के पश्चात्
पारिवारिक बंधुओं को अपना कहे
तो वह पारिवारिक भक्ति है
कूडलसंगमदेव का वचन है, उससे नायक नरक होगा ॥
Translated by: Banakara K Gowdappa
Telugu Translation ప్రాణలింగ మారాధ్య మని తెలిసి,
పూర్వగుణము విడిచి పునర్జాతుడైన వెనుక
సాంసారికబంధువుల నావార లని
ప్రీతిచూపుట పరమనరకమని
చాటె కూడల సంగని వచనము
Translated by: Dr. Badala Ramaiah
Tamil Translation குருவே பிராணலிங்க வென்றுணர்ந்த பின்,
முன்னியல்பழிந்து, மறுபிறவி எய்திய பின்,
வாழ்க்கை, உறவினர் என்னவரெனின் அவ்வுறவு
கீழ்நரகம் என இயம்புகிறதன்றோ
கூடல சங்கனின் பொன்மொழி.
Translated by: Smt. Kalyani Venkataraman, Chennai
Marathi Translation
प्राणलिंगाला आराध्य मानून,
माझे पूर्वगुण नष्ट होऊन पुर्नजन्म मिळता,
संसारबंधूनां आपले म्हणणे ही खोटी भक्ती.
तया घोर नरक असे,
कूडलसंगमदेवाचे वचन आहे.
Translated by Shalini Sreeshaila Doddamani
ಶಬ್ದಾರ್ಥಗಳು ಪುನರ್ಜಾತ = ಪುನರ್ ಜನ್ಮ;
ಕನ್ನಡ ವ್ಯಾಖ್ಯಾನ ದೀಕ್ಷೆಯನ್ನು ಕೈಕೊಂಡು ಇಷ್ಟಲಿಂಗೋಪಾಸನೆಯನ್ನು ಆರಂಭಿಸಿದಾತನು-ಮತ್ತೊಂದು ಜನ್ಮ ಧರಿಸಿದಂತೆಯೇ. ಅವನು ತನ್ನ ಹಿಂದಿನ ಜೀವನರೀತಿಯನ್ನೇ ದೃಷ್ಟಿಯನ್ನೇ ಬದಲಾಯಿಸಿರುವನು. ಅಂದಮೇಲೆ ಹಳೆಯ ಜೀವನರೀತಿಯಲ್ಲೇ ದೃಷ್ಟಿಯಲ್ಲೇ ಉಳಿದಿರುವ ಅವನ ಬಂಧುಗಳಿಗೂ ಅವನಿಗೂ ಲೋಕ ವ್ಯವಹಾರವಿರಬಹುದಾದರೂ ನಂಟಸ್ತಿಕೆ ಇರುವುದಿಲ್ಲವೆನ್ನುತ್ತಾರೆ ಬಸವಣ್ಣನವರು.
ಇಂಥ ನವಶಿವಭಕ್ತನು ತನ್ನ ಹಳೆಯ ಹುಟ್ಟನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು-ಅದರ ಸುತ್ತಲೇ ತಿರುಗುತ್ತ-ಅದೇ ತನ್ನ ಜೀವನಪರಿಧಿಯೆಂಬ ಕ್ಷುದ್ರಮಿತಿಯವನಲ್ಲ. ಸ್ವೀಕರಿಸಿದ ಶಿವದೀಕ್ಷೆ ತನ್ನ ಬಾಳಿನ ಹೊಸ ಆಯಾಮಗಳನ್ನು ದೂರದಿಗಂತಗಳನ್ನೂ ತೆರೆದು ಕೈಬೀಸಿ ಕರೆಯುತ್ತಿದೆಯೆಂಬುದನ್ನು ಗಮನಿಸಿರುವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು