ತಾಳ ಮರದ ಕೆಳಗೆ ಒಂದು ಹಾಲ ಹರವಿಯಿರ್ದೊಡೆ
ಅದ ಹಾಲಹರವಿಯೆನ್ನರು, ಸುರೆಯ ಹರವಿಯೆಂಬರು,
ಈ ಭಾವನಿಂದೆಯ ಮಾಣಿಸಾ, ಕೂಡಲಸಂಗಮದೇವಾ.
Transliteration Tāḷa marada keḷage ondu hāla haraviyirdoḍe
ada hālaharaviyennaru, sureya haraviyembaru,
ī bhāvanindeya māṇisā, kūḍalasaṅgamadēvā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Seeing a pot of milk
Beneath a toddy tree,
They do not say, 'A pot of milk,'
They say, 'A toddy pot.'
O Lord Kūḍala Saṅgama,
Pray, rid them of such perverse thought !
Translated by: L M A Menezes, S M Angadi
Hindi Translation ताल - वृक्ष –तले दूध का घड़ा हो,
तो उसे दूध का घड़ा न कहकर
मदिरा का घड़ा कहते हैं
कूडलसंगमदेव, यह भाव निंदा दूर करो ॥
Translated by: Banakara K Gowdappa
Telugu Translation తాటి క్రింద నొక్క పాలదుత్త యుండిన
పాలకుండ కాదది సురాభాండ మందురే;
భావనిందను మాన్పు మో కూడల సంగయ్య.
Translated by: Dr. Badala Ramaiah
Tamil Translation பனை மரத்தின் கீழே ஒரு பாற்குடமிருப்பின்
அதனைப் பாற்குடமென்னார், கள்ளுக்குடமென்பர்
இப்புன்மைத் தன்மையினைக் களைவாய்
கூடல சங்கம தேவனே.
Translated by: Smt. Kalyani Venkataraman, Chennai
Marathi Translation
ताडीवृक्षाखाली दूधाचा डेरा असला
तरी त्यास दूधाचा डेरा न म्हणता दारुचा डेरा म्हणतात.
ही भावनिंदा दूर करावी कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ನಿಂದೆ = ತೆಗಳು; ಸುರೆ = ಮಧ್ಯಪಾನ; ಹರವಿ = ಹರಡು;
ಕನ್ನಡ ವ್ಯಾಖ್ಯಾನ ಬಸವಣ್ಣನವರ ಶಿವಮತಕ್ಕೆ ಮತಾಂತರಗೊಂಡವನು ತನ್ನ ಪೂರ್ವಮತಸಂಬಂಧಗಳಿಂದ ಕಳಚಿ ಕೊಳ್ಳುವುದನ್ನು “ಪೂರ್ವಾಶ್ರಯ ನಿರಸನ” ಎನ್ನುವರು, ಈ ಪೂರ್ವಾಶ್ರಯನಿರಸನವಾಗದಿದ್ದರೆ ಭವತಾಮಸನಿರಸನವಾಗುವುದಿಲ್ಲ. ಆ ತಾಮಸನಿರಸನವಾಗದಿದ್ದರೆ-ಶಿವದೀಕ್ಷೆ ತೆಗೆದುಕೊಂಡವನನ್ನು ಶಿವಭಕ್ತನೆಂದು ಶರಣಸಂಘ ಸ್ವೀಕರಿಸುವುದಾದರೂ ಹೇಗೆ ?
ಬಸವಣ್ಣನವರು ಹುಟ್ಟಿನಿಂದ ಬ್ರಾಹ್ಮಣರಾಗಿದ್ದು ಶಿವಮತಕ್ಕೆ ದೀಕ್ಷೆ ಕೈಕೊಂಡರಾದವರಾಗಿ-ಅದೇ ಮತಕ್ಕೆ ಬಂದು ಸೇರಿದ್ದ (ಕಡಿಮೆ ಜಾತಿಯವರೆಂಬ) ಜನ ಅವರನ್ನು ಸಲಿಗೆಯಿಂದ ಸಂಪರ್ಕಿಸಲು ಅಳುಕುತ್ತಿದ್ದರು.ಇದನ್ನು ಕುರಿತು ಸ್ವತಃ ಬಸವಣ್ಣನವರೇ-“ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸಿದಿರಯ್ಯ-ಕಕ್ಕಯ್ಯನೊಕ್ಕುದನಿಕ್ಕೆ ನೋಡಯ್ಯ” ಎಂದು ಮುಂತಾಗಿ ಪರಿತಪಿಸಿ ಶಿವನಲ್ಲಿ ಮೊರೆಯಿಟ್ಟಿರುವರು (ನೋಡಿ-ವಚನ 345).
ಮತ್ತು ಶ್ರೇಷ್ಠ(ಬ್ರಾಹ್ಮಣ) ಕುಲದಲ್ಲಿ ಹುಟ್ಟಿದ ತಮ್ಮ ಆ ಸ್ಥಿತಿಯನ್ನು ತಾಳೆಯ ಮರದ ಕೆಳಗಿರುವ ಹಾಲಿನ ಗಡಿಗೆಗೆ ಹೋಲಿಸಿಕೊಂಡಿರುವರು, ಹೆಂಡವನ್ನು ಇಳಿಸುವ ತಾಳೆಯಮರದಡಿಯಲ್ಲಿರುವ ಹಾಲಿನ ಗಡಿಗೆಯನ್ನೂ ಹೆಂಡದ ಗಡಿಗೆಯಿರಬಹುದೆಂದು ಸಂಶಯಿಸುವರು ಜನ. ಹಾಗಾಗಿತ್ತು ಬ್ರಾಹ್ಮಣರಾಗಿ ಹುಟ್ಟಿದ್ದ ಬಸವಣ್ಣನವರಿಗೆ-ಶೈವಮತಕ್ಕೆ ಸೇರಿದ ಮೇಲೆಯೂ. ಆದ್ದರಿಂದಲೇ-ಮೇಲುಕೀಳಿನ ವ್ಯವಸ್ಥೆಯಿರುವ ಧರ್ಮವೊಂದರಿಂದ ಸರ್ವಸಮಾನತೆಯ ಶಿವಧರ್ಮಕ್ಕೆ ಬಂದ ಮೇಲೆ-ಆ ಭಕ್ತರು ತಮ್ಮ ಪೂರ್ವಜಾತೀಯ ಸೋಂಕಿನಿಂದ ಸಂಪೂರ್ಣವಾಗಿ ಹೊರ ಬರಬೇಕು-ಮತ್ತು ಅದನ್ನು ತಮ್ಮ ನಡೆನುಡಿಯಿಂದ ಸಮರ್ಥಿಸುವಂತೆಯೂ ವರ್ತಿಸಬೇಕು. ಇಲ್ಲದಿದ್ದರೆ ಶಿವಧರ್ಮಕ್ಕೆ ಕೆಳಜಾತಿಯಿಂದಬಂದು ಸೇರಿಕೊಂಡವರಿಗೆ ನೈಚ್ಯಾನುಸಂಧಾನವೂ, ಮೇಲುಜಾತಿಯಿಂದ ಬಂದು ಸೇರಿಕೊಂಡವರಿಗೆ ಕುಲಮದಾಂಧತೆಯೂ ತಲೆದೋರಿ ಸಮಾಜದಲ್ಲಿ ಸಮರಸತೆ ಕದಡೀತು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು