•  
  •  
  •  
  •  
Index   ವಚನ - 91    Search  
 
ತಾಮಸನಿರಸನಸ್ಥಲ - ನಯವಂಚನೆ
ಸುಪಥ ಮಂತ್ರದುಪದೇಶವ ಕಲಿತು, ಯುಕ್ತಿಗೆಟ್ಟು ನಡೆವಿರಯ್ಯಾ, ʼತತ್ತ್ವಮಸಿʼ ಎಂಬುದನರಿದು ಕತ್ತಲೆದೊಡೆವಿರಯ್ಯಾ. ವೇದವಿಪ್ರರ ವಿಚಾರಿಸಿ ನೋಡಲು, ʼಉಪದೇಶ ಪರೀಕ್ಷೆ ನಾಯಕನರಕʼ ಎಂದುದು ಕೂಡಲಸಂಗನ ವಚನದ ಸೂಚನೆ.
Transliteration Supathamantradupadēśava kalitu, yuktigeṭṭu naḍevirayyā, ʼtattvamasiʼ embudanaridu kattaledoḍevirayyā. Vēdaviprara vicārisi nōḍalu, ʼupadēśaparīkṣe nāyakanarakaʼ endudu kūḍalasaṅgana vacanada sūcane.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 You learn the lesson of the righteous path, And yet you act With all decorum set aside ; And when you have the light to know 'Thou art That', you Repose in darkness none the less ! If you consider carefully, Kūḍala Saṅga's vachana suggests- The lessons and the tests of those Who gloss the Scriptures, is arch-hell ! Translated by: L M A Menezes, S M Angadi
Hindi Translation सुपथमंत्र का उपदेश सीखकर- युक्तिशून्य व्यवहार करते हो, तत्वमसि जानकर अंधकार से आवृत रहते हो वेद- विप्रों से विचारकर देखनेपर उपदेश परीक्षा कूडलसंगमदेव के वचनानुसार नायक नरक है ॥ Translated by: Banakara K Gowdappa
Telugu Translation చక్కని మంత్రోపదేశమంది యుక్తిచెడి నడచిరయ్యా : ‘తత్వమసి’ అన్నది తెలిసియూ తమసంబులో బడిపోయిరయ్య, వేదవిపుల విచారించి చూడ; ఉపదేశ పరీక్ష మహానరక మనుచుండె కూడల సంగయ్య వచనము. Translated by: Dr. Badala Ramaiah
Tamil Translation நல்மந்திர அறிவுரையினைக்கற்று, அறிவற்று நடப்பீரையனே, “தத்துவமஸி” என்பதையறிந்து அஞ்ஞானத்திற் கூடுவீரையனே வேதியரைக் கேட்டுத் தெளிவது அறிவுரை பெருமாராய்வு கீழ்நரகம் என கூடல சங்கனின் பொன்மொழி இயம்புகிறதன்றோ. Translated by: Smt. Kalyani Venkataraman, Chennai
Marathi Translation सुपंथाचा मंत्र, उपदेश घेता अविवेकी का होता, आचरणी तत्वमसि जाणणे, कासया त्याचे नेणे अंधारी भटकणे, नको नको वेद विप्रा विचारा, उपदेशाची परीक्षा घोर नरक शिक्षा, सर्वालागी कूडलसंगमदेवा ! वचनाची सूचना घेता परीक्षा जाणा, घोर नर्क अर्थ - सुमार्गाचा, शिवानंद प्राप्तीच्या मंत्राचा उपदेश घेऊन विवेकहीन आचरण केल्यास काय उपयोग? त्याचप्रमाणे तत्वमसी जाणून काय उपयोग? अशाने जीवनभर अंधारात चाचपडत राहावे लागेल म्हणून आचरण अतिशय महत्वाचे आहे. प्रकांड पंडीत असून, श्रेष्ठ ज्ञानी असून त्या श्रेष्ठ ज्ञानाचा उपयोग आपल्या आचरणात आणित नसेल तर त्याचा काय उपयोग? अशाचा उपदेश लोकांना तारण ठरू शकणार नाही ? लोका सांगे ब्रम्हज्ञान आपण कोरडे पाषाण अशीच त्यांची गत होईल. उपदेशाचे निरीक्षण न होता परीक्षण होत असेल व त्याची उपेक्षा होत असेल तर स्वतःचेही कल्याण होणार नाही वा इतरांनाही तारू शकणार नाही, हाच माझ्या कूडलसंगमदेवाचा उपदेश आहे. हेच त्यांच्या उपदेशाचे सार आहे. असे महात्मा बसवेश्वर वरील वचनात म्हणतात. त्यांनी आपली सर्व वचने कूडलसंगमदेवाच्या (परमेश्वराच्या) चरणी समर्पण करण्यासाठी त्यांच्या नावे मुद्रांकित केली. परमेश्वराच्या प्रेरणेनेच वचने उद्घोषित केल्यामुळे आपली सर्व वचने परमेश्वराचीच आहेत. अशी त्यांची धारणा होती. Translated by Rajendra Jirobe, Published by V B Patil, Hirabaug, Chembur, Mumbai, 1983 सुपथ मंत्राचा उपदेश घेऊन, विवेकहीन आचरण करतासे `तत्त्वमसि` जाणून घेऊन, अंधारात भटकता वेदविप्रांचाही हा विचार आहे. उपदेशाची परिक्षा करणे घोर नरक, असे कूडलसंगमदेवाचे वचन आहे. Translated by Shalini Sreeshaila Doddamani
ಶಬ್ದಾರ್ಥಗಳು ತತ್ತ್ವಮಸಿ = ಅದು ನೀನೆ ಆಗಿದ್ದಿಯಾ; ವಿಪ್ರ = ಬ್ರಾಹ್ಮಣ; ಸುಪಥ = ಒಳ್ಳಯ ದಾರಿ;
ಕನ್ನಡ ವ್ಯಾಖ್ಯಾನ ಓಂಕಾರಪ್ರಣವದಲ್ಲಿ ಅಕಾರ-ಉಕಾರ-ಮಕಾರವೆಂಬ ಮೂರಂಶಗಳಿವೆ, ಅಕಾರವು ಲಿಂಗ(ಶಿವ)ವಾಚಿ, ಉಕಾರವು ಅಂಗ(ಜೀವ) ವಾಚಿ-ಇವೆರಡರ ಸಾಮರಸ್ಯವಾಚಕವೇ ಮಕಾರ,ಮತ್ತು ನಮಶ್ಯಿವಾಯದಲ್ಲಿರುವ ನಮಃ ಎಂಬುದು ಅಂಗವಾಚಿ,ಶಿವ ಎಂಬುದು ಲಿಂಗವಾಚಿ-ಈ ಅಂಗಲಿಂಗವೆರಡರ ಸಂಯೋಗವಾಚಿಯಾಗಿದೆ ಅಯ. ಹೀಗೆ ಓಂ ನಮಶ್ಯಿವಾಯವೆಂಬ ಶಿವಮಂತ್ರವು ಶಿವಜೀವಸಾಮರಸ್ಯವನ್ನೇ ಒತ್ತಿ ಹೇಳುತ್ತಿದೆ. ಹಾಗೆಯೇ ತತ್ತ್ವಮಸಿ ಎಂಬಲ್ಲಿಯೂ ತತ್ ಎಂದರೆ ಶಿವನು,ತ್ವಂ ಎಂದರೆ ಜೀವನು-ಅಸಿ ಎಂದರೆ ಉಭಯಸಮರಸ,ಇದನ್ನೆಲ್ಲ ಗುರು ದೀಕ್ಷಾಕಾಲದಲ್ಲಿ ಶಿಷ್ಯನಿಗೆ ಉಪದೇಶ ಮಾಡಿರುವನು.ಅದನ್ನು ನಂಬದೆ ವೇದವಿಪ್ರರ ಬಳಿ ಹೋಗಿ ತನಗೆ ಗುರು ಉಪದೇಶ ಮಾಡಿರುವುದು ಸರಿಯೋ ತಪ್ಪೋ ಎಂದು ಪರೀಕ್ಷಿಸಿ ಕೊಳ್ಳುವುದು ಅಸಂಗತ. (ಓಂ ನಮಶ್ಯಿವಾಯ) ಮಂತ್ರ ಮತ್ತು (ತತ್ತ್ವಮಸಿ) ಮಹಾವಾಕ್ಯಗಳು ವೈದಿಕರಿಗೂ ಶಿವಶರಣ ಸಂಪ್ರದಾಯದವರಿಗೂ ಒಂದೇ ಆದರೂ ಅರ್ಥೈಸಿರುವ ರೀತಿ ಬೇರೆಬೇರೆಯಾಗಿರುವುದು. ವಿಪ್ರರು ವೇದಪಂಡಿತರು-ಅವರು ಹೇಳಿದ್ದೇ ಸರಿ ಎಂಬುದೊಂದು ಮೂಢನಂಬಿಕೆ. ಅದನ್ನು ಅಲ್ಲಗಳೆಯುತ್ತಿರುವರು ಬಸವಣ್ಣನವರು. ಜೀವನು ಶಿವನ ಅಂಶ-ಅವನು ಪಂಚಭೂತಗಳ ಪಂಚೀಕರಣದಿಂದ ನಿಷ್ಟನ್ನವಾದ ದೇಹವಲ್ಲ,ಪಂಚೇದ್ರಿಯಗಳ ಸಮೂಹವಲ್ಲ, ಅಂತಃಕರಣಚತುಷ್ಟಯಗಳ ಸಂಘಾತವೂ ಅಲ್ಲ, ಇವೆಲ್ಲದರ ಉಪಾಧಿಯಿಂದ ಜೀವನು ಶಿವಾಂಶವಲ್ಲವೆಂಬಂತೆ ತೋರುವನು, ಶರಣಸಿದ್ಧಾಂತದನುಸಾರ ಸಾಧನೆ ಮಾಡಿದ್ದೇ ಆದರೆ ಈ ಜೀವನು ಶಿವನೊಡನೆ ಸಂಯೋಗಗೊಂಡು ಸಮರಸವಾಗುವನು, ಇದು ಬಸವಣ್ಣನವರ ಸೈದ್ದಾಂತಿಕ ನಿಲವು. ಆ ಬಗ್ಗೆ ನಂಬಲು ಕರೆಯಿತ್ತಿದೆ ಜನರಿಗೆ ಈ ವಚನ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು