•  
  •  
  •  
  •  
Index   ವಚನ - 92    Search  
 
ತಾಮಸನಿರಸನಸ್ಥಲ - ಅಳಿಮನಸ್ಸು
ಕುಂಬಳಕಾಯಿಗೆ ಕಬ್ಬುನದ ಕಟ್ಟ ಕೊಟ್ಟರೆ ಕೊಳೆವುದಲ್ಲದೆ ಬಲುಹಾಗಬಲ್ಲುದೆ? ಅಳಿಮನದವಂಗೆ ಶಿವದೀಕ್ಷೆಯ ಕೊಟ್ಟರೆ ಭಕ್ತಿ ಎಂತಹುದೊ? ಮುನ್ನಿನಂತೆ. ಕೂಡಲಸಂಗಯ್ಯಾ, ಮನಹೀನನ ಮೀಸಲ ಕಾಯ್ದಿರಿಸಿದಂತೆ!
Transliteration Kumbaḷakāyige kabbunada kaṭṭa koṭṭare koḷevudallade baluhāgaballude? Aḷimanadavaṅge śivadīkṣeya koṭṭare bhakti entahudo? Munninante. Kūḍalasaṅgayyā, manahīnana mīsala kāydirisidante!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 You put an iron ring about A pumpkin, it must rot : Would it grow fresh ! You take a creature, mean of mind, And give it Śiva-initiation : well, Does he turn holy?... Same as ever was ! O Kūḍala Saṅgama Lord, it would be like Setting a wretch apart, to be A dedicated soul ! Translated by: L M A Menezes, S M Angadi
Hindi Translation कुम्हडे पर लोहे का छल्ला बिठाने से वह सडता नहीं तो पुष्ट होगा? हीन मनुज को शिव-दीक्षा देने से भक्ति कैसे होगी? वह पूर्ववत् रहेगा । कूडलसंगमदेव, हीन मनवाले की मनौती की रक्षा करने की भाँती है ॥ Translated by: Banakara K Gowdappa
Telugu Translation గుమ్మిడికాయకు లోహపుకట్ట కట్టిన క్రుళ్ళక అది పెరుగ నేర్చునే: ఇచ్చలేనివానికి శివదీక్షనిచ్చిన భక్తి యలవడునే తొల్లింటివలెగాక! రక్షింప మతిలేనివానికి ముడుపు నిచ్చినటయె కూడల సంగమ దేవ! Translated by: Dr. Badala Ramaiah
Tamil Translation பூசணிக்காய்க்கு இருப்புப்பூண் கட்டின், அழுகுமேயன்றிக் கெட்டியாமோ? உள்ளஉரனிலிக்குச் சிவதீட்சை யீயின் பக்தி எங்ஙனமரும்பும்? முந்தை போன்றேயாம், கூடல சங்கம தேவனே, உள்ள உரனிலியை, திருவமுதிற்குக் காலம் தாழ்த்தல் போன்றதாம். Translated by: Smt. Kalyani Venkataraman, Chennai
Marathi Translation लोखंडी कवचात, बांधियला भोपळा सडेल हो तात्काळ, उरे काय ? अस्थिर मनास, शिवदिक्षा दिल्यास भक्ति हो तयास, घडे काय ? कूडलसंगमदेवा ! चंचल मन ऐशा समर्पणाची आशा, तेथे काय ? अर्थ - कठिण वस्तु समजल्या जाणाऱ्या लोखंडी कवचामध्ये भोपळ्याला सुरक्षित बंद करून ठेवले तरी ते तेथे सडून शेण होईल. त्याचप्रमाणं अस्थिर मनोभावाच्या चंचल मनाच्या लोकांना शिवदिक्षा देऊन काय उपयोग ? ते स्वतःचेही भले करून घेणार नाहीत. कारण अशा लोकाकडून भक्ती होणे असंभव. भक्तीत स्थिरता लागते. धरसोड वृत्ती चालणार नाही. म्हणून चंचल मनोवृत्तीची माणसे भक्तीमार्गात जिथल्या तिथेही राहू शकत नाहीत. उलट स्वतःची पायरी घसरूऊन घेतात आणि शेवटी स्वतःचाच सर्वनाश करून घेतात. म्हणून अशा लोकाकडून भक्ती व देवाला संपूर्ण समर्पण होण्याची आशा करून काही उपयोग नाही. Translated by Rajendra Jirobe, Published by V B Patil, Hirabaug, Chembur, Mumbai, 1983 भोपळा लोखंडाच्या कवचात ठेवता कुजणारच ! चांगला कसा राहिल? अस्थिर मनाला लिंगदीक्षा दिली तर भक्ती होईल ? तो आहे तसाच राहील. कूडलसंगमदेवा चंचल मनाकडून भक्तीची अपेक्षा करण्याप्रमाणे आहे. Translated by Shalini Sreeshaila Doddamani
ಶಬ್ದಾರ್ಥಗಳು ಅಳಿಮನ = ಅತಿ ಆಸೆ; ಕಬ್ಬುನ = ಕಬ್ಬಿಣ; ಬಲುಹಾಗ = ; ಮೀಸಲು = ;
ಕನ್ನಡ ವ್ಯಾಖ್ಯಾನ ಜುಜುಬಿ ಮನಸ್ಸಿನವನಿಗೆ ದೀಕ್ಷೆ ಕೊಡಬಾರದು-ಕೊಟ್ಟರೂ ಅವನು ಮೊದಲಿನಂತೆ ಜುಜುಬಿಯಾಗಿಯೇ ಉಳಿಯುವನು-ಅಥವಾ ಮತ್ತಷ್ಟು ಹಂಡಾವರಣವಾಗುವನು, ಏಕೆಂದರೆ ಅವನಿಗೆ ಆತ್ಮ ವಿಮರ್ಶೆಯಿರುವುದಿಲ್ಲ-ಉದ್ಧಾರವಾಗಬೇಕೆಂಬ ಸಂಕಲ್ಪವಿರುವುದಿಲ್ಲ. ಸ್ಥಿರಚಿತ್ತವಿಲ್ಲದವನು ದೇವರ ಹೆಸರಲ್ಲಿ ಕಟ್ಟಿದ ಮೀಸಲನ್ನು ಮರುಘಳಿಗೆಯಲ್ಲೇ ಬಿಚ್ಚಿ ವೆಚ್ಚ ಮಾಡವನು. ದೀಕ್ಷೆಯ ಆವರಣದಿಂದ ಒದಗುವ ಗಾಂಭೀರ್ಯ ಅವನಲ್ಲಿ ಬಹಳ ಕಾಲ ಬಾಳುವುದಿಲ್ಲ. ದೀಕ್ಷೆ ಮುಗಿಯಿತೆನ್ನುತಿದ್ದಂತೆಯೇ ಲಿಂಗವನ್ನು ಎದೆಯ ಮೇಲಿರಿಸಿಕೊಂಡೇ ಅದನ್ನು ಮರೆಯುವನು. ಹೀಗೆ ತತ್ತ್ವಕ್ಕೆ ಕಟ್ಟುಬೀಳಲಾರದವನಿಗೆ ಲಿಂಗ ಕಟ್ಟಿದರೆ ಅವನಿನ್ನೂ ಜಾಗ್ರತೆ ಅಧಃಪತಿತನಾಗುವನೆನ್ನುವರು ಬಸವಣ್ಣನವರು, ಬೆಲೆಯಿಲ್ಲದ ಕುಂಬಳಕಾಯನ್ನು ಬಿದ್ದಲ್ಲಿಯೇ ಬಿಡಬೇಕೇ ಹೊರತು-ಭದ್ರ ಪಡಿಸುವೆನೆಂದು ಕಬ್ಬಿಣದ ಪೆಟ್ಟಿಯಲ್ಲಿ ಮುಚ್ಚಿಟ್ಟರೆ ಇನ್ನೂ ಜಾಗ್ರತೆ ಕೊಳೆತು ನಾರುತ್ತದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು