•  
  •  
  •  
  •  
Index   ವಚನ - 94    Search  
 
ತಾಮಸನಿರಸನಸ್ಥಲ - ಡಾಂಭಿಕತೆ
ಕಬ್ಬುನದ ಕೋಡಗವ ಪರುಷ ಮುಟ್ಟಲು, ಹೊನ್ನಾದರೇನು ಮತ್ತೇನಾದರೇನು, ತನ್ನ ಮುನ್ನಿನ ರೂಹ ಬಿಡದನ್ನಕ್ಕ? ಕೂಡಲಸಂಗಮದೇವಾ, ನಿಮ್ಮ ನಂಬಿಯೂ ನಂಬದ ಡಂಭಕರಿಗಯ್ಯಾ?
Transliteration Kūsuḷḷa sūḷe dhanadāsege otteya koṇḍare kūsiṅgalla, bojagaṅgalla! Kūsanom'me santaisuvaḷu; bojagananom'me nerevaḷu: Dhanadāse biḍadu, kūḍalasaṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If the philosopher's stone Touches an iron ape, What if it turns to gold Or any other thing, So long as its former form remains ? O Kūḍala Saṅgama Lord, What an impostor I- Believing with little faith! Translated by: L M A Menezes, S M Angadi
Hindi Translation लोहे का बंदर पारस स्पर्श से स्वर्ण हो या और कुछ जब तक उसका पूर्व रूप नहीं छूटता कूडलसंगमदेव तुम पर अपूर्ण विश्वास रखनेवाले दंभियों को ॥ Translated by: Banakara K Gowdappa
Telugu Translation ఇనుప కోతికి శ్చర్శవేది తగుల బంగార మైననేమి? ఏమైననేమి తన తొంటిరూపము విడనంతదాక ? కూడల సంగమదేవయ్యా; నిన్ను నమ్మి యూ నమ్మని డాంబికులకయ్యా! Translated by: Dr. Badala Ramaiah
Tamil Translation இரும்புக் குரங்கைப் பரிசவேதி தீண்டின் பொன்னாயினென்? மற்றென் னாயினென்? தன் இயல்பான உருவினை விடாதவரை? கூடல சங்கம தேவனே. உம்மை நம்பியும் நம்பாத பகட்டினர்க்கு ஐயனே. Translated by: Smt. Kalyani Venkataraman, Chennai
Marathi Translation लोखंडाच्या माकडाला परीसस्पर्श झाला तर तो सोने झाला काय ? आणखी काय झाला? इष्टलिंग दीक्षा घेऊनही सदाचार न करणारा पाखंडीप्रमाणे आहे कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಕಬ್ಬುನ = ಕಬ್ಬಿಣ; ಕೋಡಗ = ಮಂಗ; ಡಂಭಕ = ; ಪರುಷ = ಪರುಷ ಮಣಿ; ರೂಹು = ರೂಪ;
ಕನ್ನಡ ವ್ಯಾಖ್ಯಾನ ಡಾಂಬಿಕನು ಲಿಂಗಧರಿಸಿದ ಮಾತ್ರದಿಂದ-ಸತ್ಪರಿಣಾಮವೇನೂ ಇಲ್ಲವೆಂದು ಮುಂದಿನ ವಚನಗಳಲ್ಲಿ ಕೆಲವು ನಿದರ್ಶನಗಳನ್ನು ಕೊಟ್ಟು ವಿವರಿಸಲಾಗಿದೆ : ಸಗಣಿಯಿಂದ ಮಾಡಿದ ಬೆನಕ(ವಿನಾಯಕ)ನಿಗೆ ಸಂಪಿಗೆ ಹೂವಿಂದ ಪೂಜೆ ಮಾಡಿದರೆ ಅಲಂಕಾರವಾಗಿ ಕಾಣುವುದಾದರೂ-ಆ ಸಗಣಿಯ ದುರ್ನಾತ ತಪ್ಪಿದ್ದಲ್ಲ. ಮತ್ತು ಹಸಿಯ ಮಣ್ಣಿನ ಗೊಂಬೆ (ಕ್ಷುದ್ರದೇವತೆ) ಯನ್ನು ಬೆಳಗಿ ಝಳಝಳ ಮಾಡುತ್ತೇನೆಂದು ಅಭಿಷೇಕಿಸಿ ತೊಳೆದರೆ-ಅದು ತೊಳೆದಷ್ಟೂ ಕೆಸರೇಳುವುದೇ ಹೊರತು ಹೊಳಪಾಗುವುದಿಲ್ಲ. ಮತ್ತು ಕಬ್ಬಣದ ಕೋತಿ (ಪ್ರತಿಮೆ) ಯನ್ನು ಸ್ಪರ್ಶಮಣಿ ಸೋಕಿದರೆ-ಅದು ಚಿನ್ನದ ಕೋತಿಯಾದೀತೇ ಹೊರತು-ಅದು ತನ್ನ ಹಾಸ್ಯಾಸ್ಪದ ರೂಪವನ್ನು ಕಳೆದುಕೊಳ್ಳುವುದಿಲ್ಲ. ಹಾಗೆಯೇ ಬೇರೆ ಧರ್ಮದಲ್ಲಿದ್ದ ದುಷ್ಟನೊಬ್ಬನು ಶಿವಮತಕ್ಕೆ ಮತಾಂತರಗೊಂಡರೆ-ಅವನು ಶೈವಮತದ ದುಷ್ಟನೆನಿಸುವನೇ ಹೊರತು-ಶಿಷ್ಟನೆನಿಸುವುದಿಲ್ಲ-ಅವನ ಮೂಲಧಾತುವೇ ಅದು. ತನ್ನ ದುರ್ವಾಸನೆಯನ್ನೂ ದುರ್ಲಕ್ಷಣವನ್ನೂ ಬಂಡವಾಳವಿಲ್ಲದ ಬಡಾಯನ್ನೂ ನೀಗಿಕೊಂಡ ಹೊರತು ಯಾವನೂ ಕೇವಲ ಲಿಂಗಧಾರಣೆಯಿಂದ ಭಕ್ತನಾಗುವುದಿಲ್ಲವೆಂಬುದಭಿಪ್ರಾಯ. *ವಿ.ಸೂ: ಒಂದು ಕೋಮಿನ ಸಂಖ್ಯಾಬಾಹುಳ್ಯವನ್ನು ಹೆಚ್ಚಿಸಲಿಕ್ಕಾಗಿ ಬಸವಣ್ಣನವರೆಂದಿಗೂ ಲಿಂಗ(ಧಾರಣ)ವನ್ನು ಬೀದಿಗಿಟ್ಟು ಮಾರಲಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು