•  
  •  
  •  
  •  
Index   ವಚನ - 95    Search  
 
ತಾಮಸನಿರಸನಸ್ಥಲ - ನಡೆ-ನುಡಿ
ತನುವಿನಲ್ಲೊಂದಿಟ್ಟು, ಮನದಲ್ಲೆರಡಿಟ್ಟಡೆ, ಬಲ್ಲನೊಲ್ಲನಯ್ಯಾ, ಲಿಂಗವು; ಬಲ್ಲನೊಲ್ಲನಯ್ಯಾ; ಪರಚಿಂತೆಯನೊಲ್ಲನೊಲ್ಲ ಕೂಡಲಸಂಗಮದೇವ!
Transliteration Tanuvinallondiṭṭu, manadalleraḍiṭṭaḍe, ballanollanayyā, liṅgavu; ballanollanayyā; paracinteyanollanolla kūḍalasaṅgamadēva!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If all you have Is one way in the face, Another in the heart, Liṅga says No, For He can understand ! Lord Kūḍala Saṅgama will Have nought to do With thoughts behind a thought ! Translated by: L M A Menezes, S M Angadi
Hindi Translation तन में एक, मन में दो हो, तो, लिंगदेव जानता है, अतः, नहीं चाहते, नहीं चाहते । परचिंता नहीं चाहते, नहीं चाहते कूडलसंगमदेव ॥ Translated by: Banakara K Gowdappa
Telugu Translation తనువునందొకటి గొని మనసున రెండుగొన సర్వజ్ఞుడొల్లడయ్యా సర్వజ్ఞుడొల్లడయ్యా: పరచింత నొల్లడు మా కూడల సంగమదేవుడు Translated by: Dr. Badala Ramaiah
Tamil Translation உடலிலே ஒன்றிட்டு உள்ளத்திலே பிறிதொன் றிடின், அறிவான், இசையானையனே! சிவனறிவா னிசையா னையனே வேற்றெண்ணத்தை ஏலான், ஏலான் கூடல சங்கம தேவன். Translated by: Smt. Kalyani Venkataraman, Chennai
Marathi Translation देहात एक आणि मनात दुसरेच ठेवले तर, हे सर्वज्ञ लिंगदेव जाणतात, म्हणून त्यांना मानत नाहीत. परचिंता नको नको कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಸ್ವ ಇಚ್ಛೆ-ಪ್ರೇಯೋಭೀಪ್ಸೆಯಿಂದಲ್ಲದೆ-ಲಿಂಗದೀಕ್ಷೆಯನ್ನು ಯಾರೂ ಕೈಗೊಳ್ಳಬಾರದೆಂಬುದು ಬಸವಣ್ಣನವರ ನಿಬಂಧನೆ. ಯಾರಾದಾದರೂ ಒತ್ತಾಯದಿಂದಲೋ, ವಿಶೇಷ ಸವಲತ್ತು ಸಿಗಬಹುದೆಂದೋ, ಆಗರ್ಭ ದಾರಿದ್ರ್ಯ ನೀಗೀತೆಂದೋ, ಆಜನ್ಮರೋಗ ವಾಸಿಯಾಗುವುದೆಂದೋ, ವ್ಯಾಪಾರವಹಿವಾಟು ಕುದುರುವುದೆಂದೋ, ಸಿಕ್ಕಿಬಿದ್ದಿರುವ ದುರ್ವ್ಯವಹಾರದ ವಿರುದ್ಧ ರಕ್ಷಣೆ ದಕ್ಕಿ ಏನಾದರೊಂದು ಪವಾಡ ನಡೆಯುವುದೆಂದೋ ಕುತ್ಸಿತದಿಂದ ಶಿವಧರ್ಮಕ್ಕೆ ಸೇರಬಾರದು. ಇಂಥ ಯಾವುದಾದರೊಂದು ಆಶೆದುರಾಶೆಗಳಿಂದ ಲಿಂಗವನ್ನು ಧರಿಸಿಯೂ ಧರ್ಮನಪುಂಸಕರಾದವರು ಶಿವಭಕ್ತರಾದೆವೆಂದು ಸಡಗರಿಸಿದರೆ-ಜನ ಮರುಳಾಗಬಹುದು-ಆದರೆ ಅದೊಂದು ದೊಡ್ಡ ಬಯಲಾಟವೆಂಬುದು ಶಿವನಿಗೆ ತಿಳಿಯದೆ ? ಯಾರು ತನ್ನನ್ನೇ ಚಿಂತಿಸುವರೋ ಅವರ ಯೋಗಕ್ಷೇಮವನ್ನು ಮಾತ್ರ ಅವನು ವಹಿಸಿಕೊಳ್ಳುವನೇ ಹೊರತು-ಆ ಶಿವಕ್ಕೇ ಹುಬ್ಬು ಕುಣಿಸುವ ಅನ್ಯರ ಜಘನ್ಯರ ಕಡೆ ಕಣ್ಣೆತ್ತಿಯೂ ಅವನು ನೋಡುವುದಿಲ್ಲಾ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು