•  
  •  
  •  
  •  
Index   ವಚನ - 97    Search  
 
ತಾಮಸನಿರಸನಸ್ಥಲ - ವಿಷಯವಾಸನೆ
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ, ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ, ಮನೆಯೊಳಗೆ ಮನೆಯೊಡೆಯನಿಲ್ಲಾ ಕೂಡಲಸಂಗಮದೇವಾ!
Transliteration Maneyoḷage maneyoḍeyaniddānō illavō? Hostilalli hullu huṭṭi, maneyoḷage raja tumbi, maneyoḷage maneyoḍeyaniddānō illavō? Tanuvinoḷage husi tumbi, manadoḷage viṣaya tumbi, maneyoḷage maneyoḍeyanillā kūḍalasaṅgamadēvā!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Album : Nudidante Nadeve, Singer : Sri M Thottappa Uthanghi, Music : Sri M Thottappa Uthanghi, M.S Maruthi Label : Ashwini Audio
English Translation 2 The master of the house, is he at home, or isn't he? Grass on the threshold, dirt in the house: The master of the house, is he at home, or isn't he? Lies in the body, lust in the heart: no, the master of the house is not at home, our Lord of the Meeting Rivers.

Translated by: A K Ramanujan
Book Name: Speaking Of Siva
Publisher: Penguin Books
----------------------------------
Is the master of the house gone out, Or is he in ? Upon the threshold grasses sprout ; The house is just A bowl of dust : Is the master of the house gone out, Or is he in ? When falsehood does infect your flesh And your heart is a sensuous mesh, The master of the house Cannot be in, cannot be in, Kūḍala Saṅgama Lord ! Translated by: L M A Menezes, S M Angadi

Hindi Translation गृह में गृहस्वामी है या नहीं-? द्वार पर घास उगी है, गृह में धूल भरी है, गृहु में गृहस्वामी है या नहीं-? तन में असत्य, मन में विषय भरे हों, तो गृह में गृह – स्वामी नहीं है, कूडलसंगमदेव॥ Translated by: Banakara K Gowdappa
Telugu Translation గృహమందు గృహభర్త యున్నాడో! లేడో? కడపల కసువు మొలచె; గృహంబున రజంబు నిండె; గృహమందు గృహభర్త యున్నాడో; లేడో;? తనువున పొలునిండె మనసున విషయముబికె గృహమందు గృహభర్త లేడు కూడల సంగమదేవా! Translated by: Dr. Badala Ramaiah
Tamil Translation இல்லினுள்ளே இல்லினுடைய னுள்ளானோ, அல்லவோ? நிலையிலே புல்முளைத்து, அகத்திலே தூள் நிறைந்து இல்லினுள்ளே இல்லினுடைய னுள்ளானோ, அல்லவோ? உடலிலே பொக்கம் நிறைந்து, மனத்திலே இன்பம் நிறைந்து மனத்தினுள்ளே மனத்துடைய னுள்ளானோ, அல்லவோ? இல்லை, கூடல சங்கம தேவனே. Translated by: Smt. Kalyani Venkataraman, Chennai
Marathi Translation घरात घरधनी, आहे किंवा नाही दारी ओटयावरही, गवत ते घरात घरधनी, आहे किंवा नाही केर कचराही, पाहू जाता देहा मध्ये देव आहे किंवा नाही दोष विकारही दिसे त्यात देहा मध्ये देव, आहे किंवा नाही विषय वासनाही दिसे मनी कूडलसंगमदेवा ! तुझ्या वाचुनि ते देह गेह होते, ओसाडचि अर्थ - घरात घरमालक वास करीत आहे की नाही हे पडताळून पहाण्याची मुळीच गरज नाही. ते सहज कळून येईल. घरात घरमालक वास करीत नसल्यास उंबरठ्यावर वाढलेले गवत आणि घरात चोहाकडे केरकचरा भरलेला दिसून येईल. त्याचप्रमाणे देहरुपी देवालयात (अंतरात्म्यात ) परमेश्वर वास करीत नसल्यास देहातील विकृत भावना, मोह, दुर्विचार, विषय वासना त्यांच्या तोंडातून निघणाऱ्या शब्दा शब्दातून व कृतीवरुन सहज कळून येतील. त्यासाठी वेगळे प्रयत्न किंवा वेळ खर्ची घालण्याची मुळीच गरज नाही. "दिसते तसे नसते व असते तसे दिसत नाही" अशी मानवातील विचित्र गोष्ट देखील महात्मा बसवेश्वरांच्या दृष्टीतून सुटली नाही हे त्यांच्या वरील वचनात दिलेल्या सोप्या उदाहरणावरून दिसून येईल. म्हणून देवरुपी देवालय भक्तिविना ओसाड दिसते. Translated by Rajendra Jirobe, Published by V B Patil, Hirabaug, Chembur, Mumbai, 1983 घरात घराचा मालक आहे कि नाही? उंबऱ्यात गवत उगवले, घरात धूळ-जाळी पसरली. घरात घराचा मालक आहे कि नाही ? देहात असत्य आणि मनात विषयविकार भरले आहे. मनात मनाचा मालक आहे कि नाही? नाही म्हणे कूडलसंगमदेव ? Translated by Shalini Sreeshaila Doddamani
Urdu Translation مکاں میں صاحبِ خانہ بھی کوئی ہےکہ نہیں دکھائی دیتے ہیں دہلیز پر خس و خاشاک ہےچھت پہ بام پہ دیوار و درپہ دھول ہی دھول مکاں میں صاحبِ خانہ بھی کوئی ہےکہ نہیں ہمارے ظاہر و باطن کا ہے یہ آئینہ ہوس کی گرد ہے دل میں بدن پہ جھوٹ کی دھول نہیں،نہیں ہے یہاں کوئی صاحبِ خانہ نہیں،نہیں ہے یہاں کوئی،کوڈلا سنگم Translated by: Hameed Almas
ಶಬ್ದಾರ್ಥಗಳು ಒಡೆಯ = ಯಜಮಾನ; ತನು = ಶರೀರ; ರಜ = ಧೂಳು; ವಿಷಯ = ಪಂಚೇಂದ್ರಿಯ; ಹುಸಿ = ಸುಳ್ಳು;
ಕನ್ನಡ ವ್ಯಾಖ್ಯಾನ ಗೆಳೆಯನೊಬ್ಬನು ಬಹಳ ದಿನಗಳಾದ ಮೇಲೆ ತನ್ನ ಗೆಳೆಯನನ್ನು ನೆನೆದು ಅವನನ್ನು ಸಂದರ್ಶಿಸಬೇಕೆಂದು ಅವನ ಮನೆಯ ಕಡೆ ಹೊರಟ.ತಲೆಬಾಗಿಲ ಹೊಸ್ತಿಲಲ್ಲೇ ಹುಲ್ಲು ಬೆಳೆದು ನಿಂತುದನ್ನು ಕಂಡ –ಮುಂದೆ ನಡೆದು ಕದವಿಲ್ಲದ ಬಾಗಿಲ್ವಾಡವನ್ನು ಕಂಡ, ಪ್ರವೇಶಿಸಿ ನೆಲದ ಮೇಲೆಲ್ಲ ಕಸ ಕುಪ್ಪೆಕುಪ್ಪೆಯಾಗಿ ತುಂಬಿರುವುದನ್ನು ಕಂಡ. ಮತ್ತೆಯೂ ಮುಂದುವರಿದಾಗ ಕತ್ತಲೆಕವಿದ ಮೂಲೆ ಜಂತೆಗಳಲ್ಲಿ ಜೇಡಬಲೆ ಕಟ್ಟಿರುವುದನ್ನು ಕಂಡ-ಯಾರಿದೀರಿ ಎಂದು ಕೂಗಿ ಕರೆಯಲಿಲ್ಲ-ಅಲ್ಲಿ ಯಾರೂ ಇರಲಿಲ್ಲ. ಅದೊಂದು ಬಿಟ್ಟ ಮನೆ, ಹಾಳುಮನೆ, ಭೂತದ ಮನೆಯೆಂಬುದು ಅವನಿಗೆ ಹೊಳೆಯಿತು. ನಿರಾಶೆಯಿಂದ ಭಯದಿಂದ ಹೊರಕ್ಕೆ ಬಂದ-ಹಿಂತಿರುಗಿಯೂ ನೋಡದೆ ಓಡಿದ. ಇನ್ನೊಂದು ಚಿತ್ರ : ಲಿಂಗಧಾರಿಯಾದ ಭಕ್ತನೊಬ್ಬನನ್ನು ಇನ್ನೊಬ್ಬ ಭಕ್ತನು ದಾಸೋಹಂಭಾವದಿಂದ ಕಾಣಲು ಹೋದ. ಎಲ್ಲೋ ದೂರದಲ್ಲಿ ಅವನು ಕಂಡಂತಾಯಿತು-ಹಿಂಬಾಲಿಸಿದ : ಅವನು ಎಲ್ಲಿಗೆ ಹೋಗುತ್ತಾನೆ, ಏನು ಮಾಡುತ್ತಾನೆ, ಏನು ಮಾತನಾಡುತ್ತಾನೆ, ಎಲ್ಲಿ ತಳ ಊರಿ ಕುಳ್ಳಿರುತ್ತಾನೆ, ಏತಕ್ಕಾಗಿ ಶ್ರಮಿಸುತ್ತಾನೆ ಎಂಬುದು ಕಂಡಿತು. ಇನ್ನೂ ಹಿಂಬಾಲಿಸಿದ : ಅವನು ಏನನ್ನು ಕಾಣಲು ತವಕಿಸುತ್ತಾನೆ, ಕೇಳಲು ಹಂಬಲಿಸುತ್ತಾನೆ, ಮೂಸಿ ಮೂಗರಳಿಸುತ್ತಾನೆ, ತಿಂದು ತೇಗುತ್ತಾನೆ, ಮುಟ್ಟಿ ಪುಳಕಿಸುತ್ತಾನೆ ಎಂಬುದೂ ಸ್ಪಷ್ಟವಾಯಿತು. ಮತ್ತೆಯೂ ಹಿಂಬಾಲಿಸಿದ ಅವನ ಬುದ್ಧಿ ಏನನ್ನು ನಿಶ್ಚಯಿಸುತ್ತದೆ, ಅವನ ಚಿತ್ತ ಏನನ್ನು ಬಿಗಿ ಹಿಡಿಯುತ್ತದೆ, ಅವನ ಅಹಂಕಾರ ಏನನ್ನು ಅಭಿಮಾನಿಸುತ್ತದೆ ಎಂಬುದೂ ಮನದಟ್ಟಾಯಿತು. ಕ್ರಮವಾಗಿ ಅವನ ಕರ್ಮೇಂದ್ರಿಯಗಳೂ ಜ್ಞಾನೇಂದ್ರಿಯಗಳೂ ಅಂತಃಕರಣಗಳೂ ದುರ್ವಿಷಯ ಪರಾಯಣವಾಗಿರುವುದು ಸಾಬೀತಾಯಿತು. ಅಲ್ಲಿಂದಾಚೆಗೆ ಅವನ, ಮೇಲಿದ್ದ ಗೆಳೆಯನ ಆಸಕ್ತಿಯೂ ಭಕ್ತಿಯೂ ಚೆಲ್ಲಿಹೋಯಿತು. ಅವನ ಮೈಮೇಲೆ ಲಿಂಗವಿರಬಹುದು-ಆದರೆ ಅವನು ಲಿಂಗಭಕ್ತನಲ್ಲವೆಂದೂ-ಆದರೆ ತಾನು ಬಹುಕಾಲ ಈ ತೋರಿಕೆಯೇ ನಿಜವೆಂದು ಮೋಸಹೋದುದು ತನ್ನ ವಿಚಾರಹೀನತೆಯ ಪರಿಣಾಮವೆಂದೂ ನಾಚಿದ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-407 

  Tue 05 Dec 2023  

 ಉತ್ತಮ ವಚನ ವಿಶ್ಲೇಷಣೆ ತಮಗೆ ಶರಣಾರ್ಥಿ ಗಳು ??????
  ಶಿದ್ದಲಿಂಗೇಶ. ನಾಶಿ. ಶಿರಸಿ
INDIA

C-406 

  Tue 05 Dec 2023  

 ಉತ್ತಮ ವಚನ ವಿಶ್ಲೇಷಣೆ ತಮಗೆ ಶರಣಾರ್ಥಿ ಗಳು ??????
  ಶಿದ್ದಲಿಂಗೇಶ. ನಾಶಿ. ಶಿರಸಿ
INDIA

C-400 

  Fri 24 Nov 2023  

 ??
  GP manju