•  
  •  
  •  
  •  
Index   ವಚನ - 98    Search  
 
ತಾಮಸನಿರಸನಸ್ಥಲ - ದುರ್ಜನ
ಓಡೆತ್ತ ಬಲ್ಲುದು ಅವಲಕ್ಕಿಯ ಸವಿಯ? ಕೋಡಗ ಬಲ್ಲುದೆ ಸೆಳೆಮಂಚದ ಸುಖವ? ಕಾಗೆ ನಂದನ ಬನದೊಳಗಿರ್ದರೇನು, ಕೋಗಿಲೆಯಾಗಬಲ್ಲುದೆ? ಹೇಳಾ, ಕೊಳನ ತಡಿಯಲೊಂದು ಹೊರಸು ಕುಳ್ಳಿರ್ದರೇನು, ಗಳಹಂಸಿಯಾಗಬಲ್ಲುದೆ? ಕೂಡಲಸಂಗಮದೇವಾ!
Transliteration Ōḍetta balludu avalakkiya saviya? Kōḍaga ballude seḷeman̄cada sukhava? Kāge nandana banadoḷagirdarēnu, kōgileyāgaballude? Hēḷā, koḷana taḍiyalondu horasu kuḷḷirdarēnu, gaḷahansiyāgaballude? Kūḍalasaṅgamadēvā!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Album: Vachana Sudhamrutha Dhaare, Singer: Kasturi Shankar, Music Director: Kumar Eshwar, Music Label : Lahari Music
English Translation 2 Can the pan taste the pounded rice, The monkey enjoy the swinging couch ? Can a crow perched on Indra's bower Become a cuckoo? Answer me ! Can a crane sitting on a water's edge Become a royal swan, O Lord Kūḍala Saṅgama ? Translated by: L M A Menezes, S M Angadi
Hindi Translation तवा क्या जानता है, चिउडे का स्वाद? बंदर क्या जानता है, झूले का सुख? कहो, काक नंदनवन में रहे, तो वह कोयल बन सकता है? तटाक तट पर बक पक्षी रहे, तो वह कल – हँस बन सकता है? कूडलसंगमदेव॥ Translated by: Banakara K Gowdappa
Telugu Translation పెంచుకు తెలియునే అటుకుల సారము;? కోతికి తెలియునే సెజ్జ మంచపు సుఖము? కాకి నందన వనములోనున్న నేమి? కోకిలకా నేర్చునే కొలనుగట్టున ఒక కొంగ కూర్చున్న నేమి కలహంస కానేర్చునే? కూడల సంగమదేవా! Translated by: Dr. Badala Ramaiah
Tamil Translation ஓடெங்கறியும் அவலின் சுவையினை? குரங்கறியுமோ நற்கட்டிலி னருமையினை? காக்கை பூம்பொழிலிலே இருப்பிலென்? குயிலாக வியலுமோ, சொல்லாய் குளக்கரையிலொரு நாரை அமர்ந்தாலென்? நல்லன்னமாக வியலுமோ, கூடல சங்கம தேவனே? Translated by: Smt. Kalyani Venkataraman, Chennai
Marathi Translation तव्याला कशी समजणार पोह्याची चव? माकडाला कसे समजणार बाजल्याचे सुख? नंदनवनात कावळा राहिला तर कोकीळा बनेल? सरोवरा काठी बगळा राहिला तर राजहंस होईल का? कूडलसंगमदेवाच्या Translated by Shalini Sreeshaila Doddamani
ಶಬ್ದಾರ್ಥಗಳು ಓಡೆತ್ತ = ಅಂಚು; ಕಳಹಂಸಿ = ; ಕೋಡಗ = ಮಂಗ; ತಡಿ = ದಡಿ; ನಂದನವನ = ಉದ್ಯಾನ ವನ; ಸೆಳೆಮಂಚ = ತೂಗು ತೊಟ್ಟಿಲು; ಹೊರಸು = ಪಾರಿವಾಳ;
ಕನ್ನಡ ವ್ಯಾಖ್ಯಾನ ಸೆಳೆಮಂಚಕ್ಕೆ ಸುಖವನ್ನು ಕೊಡಬಲ್ಲ ಜೀಕಿದೆ-ಆದರೆ ಅಲ್ಲೊಂದು ಕೋತಿ ಕುಳಿತರೆ ಅದಕ್ಕೆ ಅನುಭವಿಸಬಲ್ಲ ಅನುರಕ್ತಿಯಿರುವುದಿಲ್ಲ-ಇದು ಆಧೇಯದ ದೌರ್ಬಲ್ಯದ ಮಾತಾಯಿತು. ಇನ್ನು ಆಧಾರದ ದೌರ್ಬಲ್ಯದ ಮಾತು : ಅವಲಕ್ಕಿಗೆ ಸವಿಯನ್ನು ಕೊಡಬಲ್ಲ ಸತ್ವವಿದೆ-ಆದರೆ ಆ ಅವಲಕ್ಕಿಯನ್ನು ಒಳಗೊಂಡಿರುವ ಓಡಿಗೆ ಅದನ್ನು ಸವಿಯಬಲ್ಲ ರಸನೆಯಿಲ್ಲ. ಇಂತು ಭಕ್ತಿಯ ಮನಸ್ಸು, ಎದೆಯ ಮೇಲಣ ಲಿಂಗ ಪರಸ್ಪರ ಸ್ಫಂದಿಸದಿದ್ದರೇನು ಪ್ರಯೋಜನ? ಹೀಗೆ ಲಿಂಗಧಾರಣೆ ಅಯೋಗ್ಯರಿಗೆ ನಿಷ್ಫಲವೆಂದು ಹೇಳಿಯಾದ ಮೇಲೆ-ಲಿಂಗಧಾರಣೆಯಾದ ಆ ಅಯೋಗ್ಯರು ಮುಗ್ಧರ ಕಣ್ಣಿಗೆ ಭಕ್ತರಂತೆ ಕಾಣಿಸುವರಷ್ಟೆ. ಕಾಗೆಯು ನಂದನವನದಲ್ಲೇ ಅಲೆಯುತ್ತಿದ್ದರೂ ಅದು ಕೋಗಿಲೆಯಾಗುವುದಿಲ್ಲವೆಂದೂ, ಸರೋವರದ ತಡಿಯಲ್ಲಿ ಕುಳಿತ ಮಾತ್ರಕ್ಕೆ ಕೊಕ್ಕರೆ ಕಳಹಂಸವಾಗುವುದಿಲ್ಲವೆಂದೂ ವೇಷಧಾರೀ ಭಕ್ತರನ್ನು ಬಸವಣ್ನನವರು ತಿರಸ್ಕರಿಸಿರುವರು. ವಿ.ಸೂ : ಈ ವಚನದಲ್ಲಿರುವ ನಾಲ್ಕು ಉಕ್ತಿಗಳೂ ಉಪಮಾನವೇ ಆಗಿ-ಉಪಮೇಯವಿಲ್ಲವಾದರೂ ಸ್ಥಲಬಲದಿಂದ ಲಿಂಗ-ದೀಕ್ಷೆಯ ಹಿನ್ನೆಲೆಯಲ್ಲಿ ಈ ವಚನವನ್ನು ವ್ಯಾಖ್ಯಾನಿಸಲಾಗಿದೆ. ಈ ವಚನಕ್ಕೆ ಸೋಮಶೇಖರ ಶಿವಯೋಗಿಯು ಬರೆದಿರುವ ವ್ಯಾಖ್ಯಾನದ ಸಾರವನ್ನು ಈ ಮುಂದೆ ನೋಡಿ : ಜಡವಾದವನಿಗೆ ಗುರುಭಕ್ತಿಯೂ ಅಳವಡದು, ಪ್ರಸಾದಭಕ್ತಿಯ ನಿಲುತಡೆಯ ನರಿಯದವನು ಪ್ರಸಾದಿಸ್ಥಲದಲ್ಲಿದ್ದೂ ಆ ಪ್ರಸಾದವನ್ನು ಸ್ವೀಕರಿಸಿ ಪರಮಾತ್ಮನಾಗಲಾರ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು