•  
  •  
  •  
  •  
Index   ವಚನ - 99    Search  
 
ತಾಮಸನಿರಸನಸ್ಥಲ - ಲಿಂಗನಿಷ್ಠೆ
ಎನಿಸು ಕಾಲ ಕಲ್ಲು ನೀರೊಳಗಿರ್ದರೇನು, ನೆನೆದು ಮೃದುವಾಗಬಲ್ಲುದೆ? ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ, ಮನದಲ್ಲಿ ದೃಢವಿಲ್ಲದನ್ನಕ್ಕ? ನಿಧಾನವ ಕಾಯ್ದಿರ್ದ ಬೆಂತರನಂತೆ! ಅದರ ವಿಧಿಯೆನಗಾಯಿತ್ತು, ಕೂಡಲಸಂಗಮದೇವಾ.
Transliteration Enisu kāla kallu nīroḷagirdarēnu, nenedu mr̥duvāgaballude? Enisu kāla nim'ma pūjisi ēvenayyā, manadalli dr̥ḍhavilladannakka? Nidhānava kāydirda bentaranante! Adara vidhiyenagāyittu, kūḍalasaṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Album Name: Vachana Mandaara Song Name: Enisu Kaala Kallu Singers: Ambaiya Nuli Lyricist: Traditional Music: D. Srinivas Label: Jhankar Music
English Translation 2 Does it matter how long a rock soaks in the water: will it ever grow soft? Does it matter how long I've spent in worship, when the heart is fickle? Futile as a ghost I stand guard over hidden gold, O lord of the meeting rivers.

Translated by: A K Ramanujan
Book Name: Speaking Of Siva
Publisher: Penguin Books
----------------------------------
How long so ever a stone May lie in water, can it By soaking turn soft ? However long I worship thee, What boots it, if I lack A resolute mind ? My plight is like a spirit's Guarding a treasure trove, O Lord Kūḍala Saṅgama ! Translated by: L M A Menezes, S M Angadi

Hindi Translation अनंत काल जल में क्यों न रहे? शिला उपल भीगकर कोमल बन सकता है? अनंत काल तुम्हें पूजकर क्या करूँ? जब कि मन में दृढ़ता नहीं है? निधी की रक्षा करनेवाले पिशाच की सी मेरी विधि है, कूडलसंगमदेव ॥ Translated by: Banakara K Gowdappa
Telugu Translation ఎంతకాలము నీటిలోనున్న ఫలమేమి శిలనాని మెత్తబడునే? ఎంతకాలము నిన్ను పూజించి ఫలమేమి మనసు దృఢము లేనంతదాక? అయ్యయో! పెన్నిధి కాచుపిశాచి jైుపోయెనే నా బ్రతుకు కూడల సంగమదేవా! Translated by: Dr. Badala Ramaiah
Tamil Translation எத்துணைக்காலம் கல் நீரிலே கிடந்தாலென் நனைந்து மென்மையாக வியலுமோ? எத்துணைக்கால முமை வணங்கி என் செய்வேனையனே மனத்திலே திட்ப மற்றவரையிலே? புதையலைக் காத்திருந்த பூதம்போல அதன்நிலை எனக் காயிற்றையனே. Translated by: Smt. Kalyani Venkataraman, Chennai
Marathi Translation सतत जलात राहिलेला दगड मिजून मऊ होईल ? मनात दृढनिश्चय नसता सतत तुमची पूजा केली तरी काय उपयोग ? संपत्तीची रक्षा करणाऱ्या भूताप्रमाणे माझी स्थिती झाली कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ನಿಧಾನ = ಉದಿಗಿಟ್ಟ ಹಣ; ಬೆಂತರ = ದೆವ್ವ ಭೂತ ಒಂದು ಬಗೆಯ ಪಿಶಾಚಿ; ವಿಧಿ = ಹಣೆ ಬರಹ;
ಕನ್ನಡ ವ್ಯಾಖ್ಯಾನ ದೃಢವಿಲ್ಲದ ಪೂಜೆ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಒಂದು ದೃಢ ನಿರ್ಧಾರ ಅವಶ್ಯಕ. ಅಂತಹ ದೃಢನಿರ್ಧಾರವಿಲ್ಲದ ಚಂಚಲ ಮನಸ್ಸಿನ ವ್ಯಕ್ತಿಯು ಏನೂ ಸಾಧಿಸಲಾರ. ಇದರಂತೆಯೇ ದೇವರ ಒಲುಮೆಗೆ ಪಾತ್ರರಾಗಬೇಕಾದರೆ ನಾವು ಮಾಡುವ ಪೂಜೆಯ ಹಿಂದೆ ನಮ್ಮ ಮನಸ್ಸಿನಲ್ಲಿ ಆ ಪೂಜೆಯಿಂದ ದೇವರ ಒಲುಮೆಯನ್ನು ಗಳಿಸಿಯೇ ಗಳಿಸುತ್ತೇವೆಂಬ ಒಂದು ದೃಢತೆ ಇರಬೇಕು. ಇದನ್ನು ಬಿಟ್ಟು ಈ ಪೂಜೆಯಿಂದ ದೇವರ ಒಲುಮೆ ಆಗುವುದೋ ಇಲ್ಲವೋ ಎಂಬ ಸಂಶಯಕ್ಕೊಳಗಾಗಿ ನಿರಂತರ ಸಂಶಯಗ್ರಸ್ಥರಾಗಿಯೇ ಪೂಜಿಸುತ್ತಾ ಕುಳಿತರೆ ಅದರಿಂದ ಏನೂ ಫಲವಲ್ಲ. ಕಲ್ಲು ಎಷ್ಟೇ ಕಾಲ ನೀರಿನಲ್ಲಿದ್ದರೂ ನೆನೆದು ಮೃದುವಾಗಲು ಸಾಧ್ಯವೆ? ಏಕೆಂದರೆ ನೀರಿನಲ್ಲಿ ಮೃದುಗೊಳಿಸುವ ಶಕ್ತಿಯಿದ್ದರೂ ಕಲ್ಲಿನಲ್ಲಿರುವ ಕಾಠಿಣ್ಯದಲ್ಲಿ ಮೃದುವಾಗಬಲ್ಲ ಗುಣವೇ ಇಲ್ಲ. ಇದರಂತೆಯೇ ದೇವರ ಒಲುಮೆಯನ್ನು ದೊರಕಿಸಿಕೊಡುವ ಶಕ್ತಿಯು ಪೂಜೆಯಲ್ಲಿದ್ದರೂ ಮನದಲ್ಲಿ ದೃಢವಿಲ್ಲದ ಕಾರಣ ‘........... ನಿಧಾನವ ಕಾಯ್ದಿರ್ದ ಬೆಂತರನಂತೆ ಅದರ ವಿಧಿಯೆನಗಾಯಿತ್ತು ಕೂಡಲಸಂಗಮದೇವಾ’ ಎಂದು ಪರಿತಪಿಸುತ್ತಿದ್ದಾರೆ, ಬಸವಣ್ಣನವರು. ಭೂಮಿಯಲ್ಲಿ ಹೂತಿಟ್ಟ ಹಣವನ್ನು ಭೂತ ಯಾವಾಗಲೂ ಕಾಯುತ್ತಿರುತ್ತದೆಯೆಂದು ನಂಬಿಕೆ. ಭೂತಕ್ಕೆ ಆ ಹಣದಿಂದ ಪ್ರಯೋಜನವೂ ಇಲ್ಲ. ಹೀಗೆಂದ ಮಾತ್ರಕ್ಕೆ ಆ ಹಣವೇ ಯಾವ ಪ್ರಯೋಜನಕ್ಕೂ ಬಾರದೆಂದರ್ಥವಲ್ಲ. ಏಕೆಂದರೆ ಭೂತಕ್ಕೆ ಬದಲಾಗಿ ಯಾರಾದರೂ ಒಬ್ಬ ಮನಷ್ಯನಿಗೆ ಆ ಭೂಮಿಯಲ್ಲಿ ಹಣ ಹುದುಗಿರುವುದು ತಿಳಿದಿದ್ದರೆ ಅವನು ಅದನ್ನು ಅಗಿದು ಬಳಸಿಕೊಳ್ಳುತಿದ್ದ. ಆದ್ದರಿಂದ ಹಣದಿಂದ ಪ್ರಯೋಜನವಿದ್ದರೂ ಆಪ್ರಯೋಜನ ಒಬ್ಬ ಬುದ್ಧಿವಂತನಿಗೆ ಆಗುವುದೇ ಹೊರತು ಭೂತಕ್ಕಲ್ಲ. ಹಣವನ್ನು ಬಳಸಿಕೊಳ್ಳಲರಿಯದು ಆದರೂ ಅದನ್ನು ಕಾಯ್ದುಕೊಂಡಿರುವ ಭೂತದ ಕಾವಲು ವ್ಯರ್ಥವೇ ಸರಿ. ಹೀಗೆಯೇ ದೃಢ ಮನಸ್ಸಿನಿಂದ ಕೂಡಿದ ಪೂಜೆಯಲ್ಲಿ ದೇವರ ಒಲುಮೆಯ ಫಲವಿದೆ. ಆದರೆ ಅದಿಲ್ಲದ ಪೂಜೆ ಮಾತ್ರ ಭೂತದ ಕಾವಲಿನಂತೆ ವ್ಯರ್ಥವೇ ಆಗುವುದು. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.