ಸಂತವಿದ್ದ ಮನೆಗೆ ಕೊಂತವ ತಂದಂತೆ
ಇದನೆಂತು ಸಂತೈಸುವೆನು?
ಸಂತೆಯ ಗುಡಿಲ ಸೂಳೆಗೆ ಕೊಂತವಳವಡುವುದೆ?
ಕೂಡಲಸಂಗಮದೇವರ ಮಹತ್ತ್ವ ಆರಿಗೆಯೂ ಅಳವಡದು.
Transliteration Santavidda manege kontava tandante
idanentu santaisuvenu?
Santeya guḍila sūḷege kontavaḷavaḍuvude?
Kūḍalasaṅgamadēvara mahattva ārigeyū aḷavaḍadu.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 By bringing a weapon to a peaceful house
How can you bring it peace ?
A harlot from a market stall
Can wield a weapon, pray ?
Not all can claim to know
The glory of Lord
Kūḍala Saṅgama.
Translated by: L M A Menezes, S M Angadi
Hindi Translation शांत निलय में शस्त्र लाकर
उसे कैसे शांति दूँ?
बाजार वेश्या के लिए शस्त्र
साध्या हो सकता है?
कूडलसंगमदेव का महत्व
सब के लिए साद्य नहीं
हो सकता ॥
Translated by: Banakara K Gowdappa
Telugu Translation శాంతిగల యింటికి శస్త్రము తెచ్చినట్ల య్యె
ఏగతి సుఖియింపనేరు?
సంత గుడిసేటి లంజకు శస్త్రమలవడునే!
కూడల సంగమదేవుని మహిమ
లెంతవారికో! తెలియుట.
Translated by: Dr. Badala Ramaiah
Tamil Translation அமைதி நிறைந்த இல்லிலே ஈட்டி வந்தது போல
இதனை எங்ஙனம் பொறுப்பேன்?
சந்தையிலே குடிலிலுள்ள விலைமகளுக்கு ஈட்டி சரியாமோ?
கூடல சங்கம தேவனின் சீர்மை
யாராலும் அளவிடவியலுமோ!!
Translated by: Smt. Kalyani Venkataraman, Chennai
Marathi Translation
शांत घरात आयुधांना घेऊन जाऊन काय उपयोग?
बाजारात झोपडी असलेल्या वेश्येला एकांत मिळेल का?
कूडलसंगमदेवाचा महिमा कोण जाणून घेईल ?
Translated by Shalini Sreeshaila Doddamani
ಶಬ್ದಾರ್ಥಗಳು ಅಳವಡದು = ಹೊಂದಿಕೊಳ್ಳು, ಸರಿಯಾಗು; ಕೊಂತ = ಒಂದು ಆಯುಧ; ಮಹತ್ತು = ; ಸಂತ = ಮುನಿ;
ಕನ್ನಡ ವ್ಯಾಖ್ಯಾನ ಇರಬಾರದವರ ಎದೆಯ ಮೇಲೆ ಲಿಂಗವಿದ್ದರೆ-ಅದು ಅನರ್ಥಕಾರಿಯಾಗುವುದೆಂಬುದನ್ನು ಸುಂದರವಾದೊಂದು ಉಪಮಾನದಿಂದ-ಬಿಡಿಸಿ ಹೇಳಬಹುದಾದುದಕ್ಕಿಂತ ವ್ಯಾಪಕವಾಗಿ-ಧ್ವನಿಸಲಾಗಿದೆ ಈ ವಚನದಲ್ಲಿ.
ಕುಂತಾಯುಧವೊಂದು ಮಹಾಯುಧ, ಅದನ್ನು ಮಹಾವೀರರು ಮಾತ್ರ ಬಳಸಬಲ್ಲರು ರಣರಂಗದಲ್ಲಿ ಶತ್ರು ಸಂಹಾರಕ್ಕೆ. ಅಂಥ ಕುಂತಮಹಾಯುಧ ಸೂಳೆಯ ಮನೆಯೊಂದರಲ್ಲಿ ಇರುವುದಾದರೆ-ಅಥವಾ ಯಾರಾದರೂ ಅಲ್ಲಿಗೆ ತಂದಿಡುವುದಾದರೆ-ಅದು ಆ ಸೂಳೆಯ ಮನೆಗೆ ಬರುವ ಲಫಂಗರ ಲಂಪಟರ ಪರಸ್ಪರ ಹೊಡೆದಾಟಕ್ಕೆ ಬಳಕೆಯಾಗಿ-ಆ ಸೂಳೆಯ ಬಗ್ಗೆ ಭಯಭೀತಿಯುಂಟಾಗಿ-ಅವಳಲ್ಲಿಗೆ ಗಿರಾಕಿಗಳೇ ಬರದಂತಾಗಿ ಅವಳಿಗೆ ನಷ್ಟವೇ ಆಗುವುದು.
ಹಾಗೆಯೇ ಲಿಂಗವು ನಿಷ್ಠಾವಂತರಿಗೆ ಇಂದ್ರಿಯಜಯವನ್ನೂ ಮೋಕ್ಷಶ್ರೀಯನ್ನೂ ಗೆದ್ದುಕೊಡುವುದು-ಅಯೋಗ್ಯರಿಗೆ ಅನಾಹುತವನ್ನುಂಟುಮಾಡುವುದೆಂಬುದು ಈ ವಚನದ ತಾತ್ಪರ್ಯ.
ವೇಶ್ಯಾಶ್ರೇಣಿಯಲ್ಲಿ ಅತ್ಯಂತ ನಿಕೃಷ್ಟದರ್ಜೆಯವಳು ಗುಡಿಸಿಲ ಸೂಳೆ. ಇಂಥ ಕ್ಷುದ್ರಳ ಮನೆಯ ಕುಂತಾಯುಧದಂತೆ-ಏಕಾಗ್ರವಿಲ್ಲದ ನಾಮಧಾರೀ ಕ್ಷುದ್ರಲಿಂಗಾಯತನ ಎದೆಯ ಮೇಲಣ ಲಿಂಗವು-ಸ್ವಾರ್ಥಕ್ಕಾಗಿ ಕಡಿದಾಡಲು ಬಳಸುವ ಒಂದು ಅಸ್ತ್ರವಾಗುವುದೆಂಬುದನ್ನು ಕಂಡಿದ್ದೇವೆ. ಈ ಬಗೆಯಾದ ಸ್ವಾರ್ಥ ಸಾಧನೆಗೆ ಹಿಂಸೆಗೆ ಜಾತೀಯತೆಗೆ ಸಾಧನವಲ್ಲ ಬಸವಣ್ಣನವರು ಕಟ್ಟಬೇಕೆಂದು ಕಲ್ಪಸಿಕೊಂಡ ಲಿಂಗ.
ಈ ಮೇಲಣ ವಿವರಣೆ ವಚನದ ಎರಡನೇ ಮತ್ತು ಮೂರನೇ ವಾಕ್ಯಗಳಿಗೆ ಸಲ್ಲುವುದು, ಇನ್ನು ವಚನದ ಮೊದಲನೇ ವಾಕ್ಯಕ್ಕೆ ವಿವರಣೆ ಈ ಮುಂದಿನಂತಿದೆ : ಲಿಂಗಧಾರಣೆಯು ನಿಷ್ಠೆ-ಸಾಧನೆಗಳ ಸಜ್ಜಿಲ್ಲದೆ ಉದ್ದೇಶಾಂತರಗಳಿಂದಾಗಿಯೋ, ಬಲತ್ಕಾರಕ್ಕೆ ಒಳಗಾಗಿಯೋ, ಆಕಸ್ಮಿಕವಾಗಿಯೋ ಆದುದಾದರೆ ಅದರಿಂದ ಲಿಂಗಧರಿಸಿದವನು ಹಿಂದಿದ್ದ ಧರ್ಮದ ಯತ್ ಕಿಂಚಿತ್ ನೆಮ್ಮದಿಯಿಂದಲೂ ವಂಚಿತನಾಗಿ, ಹೊಸ ಧರ್ಮದಲ್ಲಿಯೂ ನೆಲೆಗಾಣದೆ ಹಾಳಾಗುವನೆಂಬ ಒಂದು ಗಂಭೀರ ವಿವೇಚನೆಯಿದೆ-ಈ ಮೊದಲ ವಾಕ್ಯದಲ್ಲಿ,
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು