ಕೂಸುಳ್ಳ ಸೂಳೆ ಧನದಾಸೆಗೆ ಒತ್ತೆಯ ಕೊಂಡರೆ
ಕೂಸಿಂಗಲ್ಲ, ಬೊಜಗಂಗಲ್ಲ!
ಕೂಸನೊಮ್ಮೆ ಸಂತೈಸುವಳು; ಬೊಜಗನನೊಮ್ಮೆ ನೆರೆವಳು:
ಧನದಾಸೆ ಬಿಡದು, ಕೂಡಲಸಂಗಮದೇವಾ.
Transliteration Kūsuḷḷa sūḷe dhanadāsege otteya koṇḍare
kūsiṅgalla, bojagaṅgalla!
Kūsanom'me santaisuvaḷu; bojagananom'me nerevaḷu:
Dhanadāse biḍadu, kūḍalasaṅgamadēvā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 When a whore with a child
takes on a customer for money,
neither child nor lecher
will get enough of her.
She'll go pat the child once,
then go lie with the man once,
neither here nor there.
Love of money is relentless,
my lord of the meeting rivers.
Translated by: A K Ramanujan
Book Name: Speaking Of Siva
Publisher: Penguin Books
----------------------------------
If a harlot with a child
Should take, from lust for gold, her lover's fee,
She's neither for the lover nor the child !
One moment she will sooth her child ;
Another, go to bed with him :
The lust for gold persists,
O Lord Kūḍala Saṅgama !
Translated by: L M A Menezes, S M Angadi
Hindi Translation शिशुवाली वेश्या धनाशा से धन ले,
तो, वह न शिशु के लिए है, न विट के लिए ,
एक बार शिशु को सांत्वना देती है,
एक बार विट से मिलती है,
धनाशा नहीं छूटती कूडलसंगमदेव ॥
Translated by: Banakara K Gowdappa
Telugu Translation బిడ్డ గల వేశ్య కాసు కై విటునికొడబడ
బిడ్డకూ గాదు విటునికీ కాదు; .
బిడ్డ నోకసారి జోకొట్టు; విటునితో
కొంత క్రీడిరచు విడదీ ధనాశ కూడల సంగమదేవా!
Translated by: Dr. Badala Ramaiah
Tamil Translation மகவுள்ள விலைமகள் பொருளையவாவிப் பணம் பெறுவது,
மகவுக்குமன்று, வந்தோனுக்குமன்று,
மகவினை ஒருமுறை தேற்றுவாள், வந்தவனுடன் கூடுவாள்,
செல்வத்தாசை விடுமோ, கூடல சங்கம தேவனே.
Translated by: Smt. Kalyani Venkataraman, Chennai
Marathi Translation
लेकूरवाळी वेश्या विटपुरुषाकडे जाण्यास तयार झाली तर,
मुलाला संतुष्ट करत नाही, विट्पुरुषाला संतुष्ट करीत नाही.
एकदा मुलाचे समाधान करते एकदा विटपुरुषाला कुरवाळते.
धनाची आशा सुटत नाही कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಒತ್ತೆ = ಸೂಳೆತನಕ್ಕಾಗಿ ವಿಟರಿಂದ ಸ್ವೀಕರಿಸುವ ಧನ; ಬೊಜಗ = ವಿಟ ಪುರುಷ;
ಕನ್ನಡ ವ್ಯಾಖ್ಯಾನ ಮಗುವಿಗೆ ಮೊಲೆಯೂಡಬೇಕಾದ ಜವಾಬ್ದಾರಿಯಿರುವ ಹೆಣ್ಣೊಬ್ಬಳು ಸೂಳೆಯಾಗಿ ದುಡ್ಡಿನಾಶೆಯಿಂದ ಸಿತಗನ ಪಕ್ಕದಲ್ಲಿ ಮಲಗಿದರೆ-ಮಗು ಅತ್ತಾಗ ಆ ಕಡೆ ತಿರುಗಬೇಕು-ಈ ಕಡೆ ಪ್ರಿಯಕರನಿಗೆ ಸುಖವಿಲ್ಲ, ಈ ಕಡೆ ಪ್ರಿಯಕರ ಬಿಗಿಯಪ್ಪಿದಾಗ ಆ ಕಡೆ ಮಗುವಿಗೆ ಸುಖವಿಲ್ಲ. ಹೀಗೆ ಇಮ್ಮುಖವಾಗಿ ಪರದಾಡಬೇಕಾದ ಸೂಳೆಗೆ ಸುಖವಿಲ್ಲ. ಸೌಭಾಗ್ಯವಿಲ್ಲ.
ದುಡ್ಡಿನ ದುರಾಶೆಯಿಂದ ವ್ಯವಹಾರಗಳಲ್ಲಿ ತೊಡಗಿರುವ ಪ್ರಾಪಂಚಿಕನೊಬ್ಬನು ಲಿಂಗವನ್ನು ಧರಿಸಿದರೆ ಅವನಿಗೆ ದೇವರಿಲ್ಲ ಧರ್ಮವಿಲ್ಲ.
ಧನದಾಶೆಗಾಗಿ ಹಾಲೆದೆಯನ್ನೂ ಮಾರಿಕೊಳ್ಳುವುದಾದರೆ ಧನವೇ ದೇವರಾಗಿ-ಜನಗಳು ನಿರ್ಲಜ್ಜ ದೆವ್ವಗಳಾದಾರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು