ಎರದೆಲೆಯಂತೆ ಒಳಗೊಂದು ಹೊರಗೊಂದಾದರೆ ಮೆಚ್ಚುವನೆ?
ಬಾರದ ಭವಂಗಳ ಬರಿಸುವನಲ್ಲದೆ ಮೆಚ್ಚುವನೆ?
ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ ?
ಉಡುವಿನ ನಾಲಗೆಯಂತೆ ಎರಡಾದರೆ
ಕೂಡಲಸಂಗಯ್ಯ ಮೆಚ್ಚುವನೆ?
Transliteration Eradeleyante oḷagondu horagondādare meccuvane?
Bārada bhavaṅgaḷa barisuvanallade meccuvane?
Aghōra narakavanuṇisuvanallade meccuvane?
Uḍuvina nālageyante eraḍādare
kūḍalasaṅgayya meccuvane?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If like a jujube leaf
You are one thing within,
Another thing without,
Does He approve ?
He'll make you come to births
That never should have been :
Does He approve ?
He'll make you taste the horrors of hell :
Does He approve ?
If like the iguana's tongue
You are two things in one,
Does lord Kūḍala Saṅgama
Approve ?
Translated by: L M A Menezes, S M Angadi
Hindi Translation बेर के पत्ते की भाँती भीतर कुछ,
बाहर कुछ हो, तो होंगे?
अनुचित भवों में आने न देंगे
तो क्या प्रसन्न होंगे?
घोर नरक भोजन न देंगे, तो क्या प्रसन्न होंगे?
गोधे की भाँति जीभ दो हो, तो क्या कूडलसंगमदेव प्रसन्न होंगे?
Translated by: Banakara K Gowdappa
Telugu Translation వంగాకు వలె లోనొకటి పై నొకటి jైున వచ్చునే
రారానిజన్మల రప్పించుగాక మెచ్చునే?
ఘోరాతి ఘోర నరకమున కూల్చుగాక మెచ్చునే?
ఉడుము నాలుకవలె రెండైనచో
మెచ్చడయ్యా సంగమదేవుడు
Translated by: Dr. Badala Ramaiah
Tamil Translation இலந்தையிலைபோல உள்ளொன்று
புறமொன்றெனின் ஏற்பனோ?
வாராத பிறவிகளிலே வருவிப்பனல்லது ஏற்பனோ?
தீய நரகத்திலே தள்ளுவனல்லது ஏற்பனோ?
உடும்பின் நாவினைப் போலப் பிளவுறின்
கூடல சங்கையன் ஏற்பனோ?
Translated by: Smt. Kalyani Venkataraman, Chennai
Marathi Translation
बोरीच्या पानापरी, दुरंगी होता भाव
कैसा तया पाव, शिव माझा
भव बंधनात, ठेवी तया गुंतून
कैसा होई पावन, शिव माझा
दिसता दोन जिव्हा, सरड जैसा देख
देई घोर नरक, शिव माझा
कूडलसंगमदेवा! नच होई पावन
दुजा भाव जाण, घोर नर्क
अर्थ - बोरीच्या झाडाची पाने दोन रंगाची असतात. आतला भाग एक रंगाचा तर बाहेरील भाग दुसऱ्या रंगाचा असतो. अशा तऱ्हेच्या दुटप्पी स्वभावाच्या लोकांना परमेश्वर प्रसन्न तर होणार नाहीच उलटअशांना भवचक्रात अडकवून ठेवतो. अर्थात जन्म मरणाचे फेरे पूर्ण करत राहावे लागते नाहीतर तो घोर नरकात सडवीत ठेवतो. तसेच सरड्याप्रमाणे दोन जिभेच्या लोकांनाही परमेश्वर प्रसन्न होणार नाही. म्हणून बोलावे तसे चालावे आणि चालावे तसे बोलावे, तरच परमेश्वर प्राप्त होईल. अशी व्यक्तीच मुक्त होऊ शकेल हे निश्चित जाणावे.
Translated by Rajendra Jirobe, Published by V B Patil, Hirabaug, Chembur, Mumbai, 1983
बोराच्या द्विरंगी पानाप्रमाणे एक
नसणाऱ्यांवर लिंगदेव प्रसन्न कसे होतील?
भवबंधनात अडकवतील पण प्रसन्न होतील का?
अघोर नरकात घालतील पण प्रसन्न होतील का?
दोन जिभेच्या घोरपडीप्रमाणे असणाऱ्यावर
कूडलसंगमदेव प्रसन्न होईल का?
Translated by Shalini Sreeshaila Doddamani
ಶಬ್ದಾರ್ಥಗಳು ಉಡ = ; ಎರದೆಲೆ = ಬೂದುಗದ ಮರ; ಭವ = ಜೀವನ;
ಕನ್ನಡ ವ್ಯಾಖ್ಯಾನ ಎಳಚಿ(ಬೋರೆ)ಯ ಮರದ ಎಲೆಯಲ್ಲ ಹೊರಗೆ ಬೆಳ್ಳಗೆ ಕಾಣುವುದು-ಬಾಗಿಸಿ ನೋಡಿದರೆ ಹಸಿರು ಬೆರೆತ ಕಪ್ಪು ಬಣ್ಣವಾಗಿರುವುದು. ಹೊರಮೈಗೆಲ್ಲ ಭಸ್ಮೋದ್ಧೂಳಿನ ಮಾಡಿಕೊಂಡು ವಿರಕ್ತನಂತೆ ಕಾಣಿಸಿಕೊಂಡು-ಒಳಗೆಲ್ಲ ಅಚ್ಚಹಸೀ ಪಾಪ ಬೆರೆತಿರುವ ವಂಚಕರನ್ನು ಇಲ್ಲಿ ಕುರಿತಿರುವರು ಬಸವಣ್ಣನವರು. ಅಂಥವರನ್ನು ಶಿವನು ಸುಮ್ಮನೆ ಬಿಡುವುದಿಲ್ಲ-ಬರಬಾರದ ಜನ್ಮಗಳಲ್ಲಿ ಮರಳಿ ಮರಳಿ ಹುಟ್ಟಿಸುವನು ಸಾಯಿಸುವನು-ಕೊನೆಗೆ ಘೋರವಾದ ನರಕಕ್ಕೆ ತಳ್ಳಿ ಕೈತೊಳೆದುಕೊಳ್ಳುವನು.
ತನ್ನ ಹೆಸರಿನಲ್ಲಿ ಲೋಕವನ್ನು ವಂಚಿಸುವ ಯಾರನ್ನೂ ಶಿವನು ಮೆಚ್ಚುವುದಿಲ್ಲ. ಆಡುವುದೊಂದಾಗಿ ಮಾಡುವುದಿನ್ನೊಂದಾಗಿ, ತೋರುವುದೊಂದಾಗಿ ಇರುವುದಿನ್ನೊಂದಾಗಿ-ಉಡುವಿನ ನಾಲಗೆಯಂತೆ ಇಬ್ಬಗೆ ಯಾದವರನ್ನೆಂದಿಗೂ ಶಿವನು ಮೆಚ್ಚುವುದಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು