•  
  •  
  •  
  •  
Index   ವಚನ - 104    Search  
 
ತಾಮಸನಿರಸನಸ್ಥಲ - ಆತ್ಮಶುದ್ಧಿ
ಗಂಡ ಶಿವಲಿಂಗದೇವರ ಭಕ್ತ: ಹೆಂಡತಿ ಮಾರಿ ಮಸಣಿಯ ಭಕ್ತೆ! ಗಂಡ ಕೊಂಬುದು ಪಾದೋದಕ-ಪ್ರಸಾದ: ಹೆಂಡತಿ ಕೊಂಬುದು ಸುರೆ-ಮಾಂಸ! ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ ಹೆಂಡದ ಮಡಿಕೆಯ ಹೊರಗೆ ತೊಳೆದಂತೆ, ಕೂಡಲಸಂಗಮದೇವಾ!
Transliteration Gaṇḍa śivaliṅgadēvara bhakta: Heṇḍati māri masaṇiya bhakte! Gaṇḍa kombudu pādōdaka-prasāda: Heṇḍati kombudu sure-mānsa! Bhāṇḍa-bhājana śud'dhavilladavara bhakti heṇḍada maḍikeya horage toḷedante, kūḍalasaṅgamadēvā!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 The husband venerates Śivaliṅga divine ; The wife's devotion is For the goddess of graves ! The husband takes the Grace From washing of the feet ; The wife takes meat and wine ! The piety of those Whose pots and pans are not kept clean Is like the washing of a toddy-vat But on the outer side, O Kūḍala Saṅgama Lord ! Translated by: L M A Menezes, S M Angadi
Hindi Translation पति शिवलिंग देव का भक्त है; पत्नी क्षुद्र देवियों की भक्ता है पति पाता है पादोदकप्रसाद-; पत्नी पाती है माँसमदिरा- जिनके भाँडभाजन शुद्ध नहीं- उनकी भक्ती सुरा पात्र को बाहर से धोने के समान है, कूडलसंगमदेव ॥ Translated by: Banakara K Gowdappa
Telugu Translation భర్త శివలింగ దేవుని భక్తుడు: భార్య మారికి భక్తురాలు! భర్త గైకొను పాదోదక ప్రసాదము భార్యలో గొను సురమాంసము బాండభాజన శుద్ధి లేని వారల భక్తి కల్లుముంతను పై పై కడిగినట్లగు కూడల సంగమ దేవా! Translated by: Dr. Badala Ramaiah
Tamil Translation கணவன் சிவலிங்கபிரானின் பக்தன், மனைவி மாரிதேவதையின் பக்தை கணவன் பெறுவது திருவடித் திருநீர் திருவமுது மனைவி கொள்வது கள், ஊன் திருவமுது அடுகலன், உண்கலன் தூய்மையற்றோர் தம் பக்தி கள்ளுப் பானையினைப் புறத்தே மண்ணுதற்போல கூடல சங்கம தேவனே. Translated by: Smt. Kalyani Venkataraman, Chennai
Marathi Translation पतीदेव करी , शिवलिंग भक्ती मरी म्हसोबा भक्ति, करी पत्नी पादोदक प्रसाद, पति करी सेवन मद्य मांस भक्षण, करी पत्नी सुरापात्र बाहेर, स्वच्छ केल्यापरी जैसे भांडी घरी, शुद्ध नाही कूडलसंगमदेवा! नसे एकोभाव देव कैसा पाव, एैशा भक्ता अर्थ - शिवलिंग देवाची किंवा इष्टलिंगाची मनोभावे भक्ति करणाराच सात्विक भक्त ! कारण प्रसाद रुपाने मिळालेले पदार्थ सेवन करून दररोज सात्विक जीवन जगत असतो. गुरु, लिंग, जंगम, पादपूजा सेवन केल्यावरच त्याची दिनचर्या चालू होते. आणि दुर्गम्मा, म्हसोबा व पोचम्मा सारख्या देवीची पूजा व भक्ती करणारे मद्य मांस भक्षण करीत असतात. अशा देवी-देवतांना अभक्षण चालते. देवी-देवतांचे भक्तगण तीर्थ म्हणून मद्य पितात. तिच्यापुढे बोकड कापतात व प्रसाद म्हणून खातात. अशा हिंसाचारी भक्ताकरवी शुद्ध मनोभावे परमेश्वराची भक्ती व पूजा होणे असंभव. अशा देवी-देवतांची भक्ती म्हणजे बहिरंग भक्ती ! आतून घाण जाणावी म्हणून शिवभक्ती म्हणजे सात्विक आहार, सात्विक, जीवन जगणे अर्थात अंतरंग बहिरंग शुद्ध होणे होय. पती शिवलिंग भक्त व पत्नी मरीअम्मा-पोचम्मानी भक्ती करणारी असल्यास काय उपयोग? जसे सुरापात्राला बाहेरुन घासून पुसून स्वच्छ केले तरी काय उपयोग? कारण आतून दुर्गंधी नाहीशी होईल काय ? त्याप्रमाणे पती पत्नीची एकोभाव व एकोदेव भक्ति असावी लागते. Translated by Rajendra Jirobe, Published by V B Patil, Hirabaug, Chembur, Mumbai, 1983 पती लिंगदेवाचा भक्त, पत्नी मारी-मसणीची भक्त. पती पादोदक-प्रसाद सेवतो, पत्नी सुरा-मांस सेवती. शुध्द तन मन भावाविना केलेली भक्ती म्हणजे मदिरापात्र बाहेरुन धुतल्याप्रमाणे होईल कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಭಾಂಡ = ಪಾತ್ರೆ; ಭಾಜನ = ಅಡುಗೆ ಮಾಡುವ ಪಾತ್ರೆ, ಯೋಗ್ಯ; ಮಸಣಿ = ದುರ್ಗ ದೇವಿ ರೂಪ; ಮಾರಿ = ಕ್ಷುರ್ಧ ದೇವತೆ;
ಕನ್ನಡ ವ್ಯಾಖ್ಯಾನ ಬಸವಣ್ಣನವರ ಕಾಲಕ್ಕೆ ಒಂದೇ ಮನೆಯಲ್ಲಿ ಗಂಡ ಶಿವಧರ್ಮದವನಾದರೆ-ಹೆಂಡತಿ ಹಳೆಯ ಧರ್ಮದಲ್ಲಿ ಉಳಿಯುವ ಪ್ರಸಂಗವಿತ್ತು. ದಾಂಪತ್ಯವನ್ನು ಒಳಹೊರಗೊಂದಾದ ಒಂದು ಗಡಿಗೆಗೆ ಹೋಲಿಸುವುದಾದರೆ ಹೆಂಡತಿ ಆ ಗಡಿಗೆಯ ಒಳಮೈ, ಗಂಡನು ಹೊರಮೈ. ಹೀಗೆ ಗಂಡಹೆಂಡಿರಿಬ್ಬರೂ ಒಂದೇ ವಸ್ತುವಿನ ಎರಡು ಮಗ್ಗುಲು ಈ ಪರಿಸ್ಥಿತಿಯಲ್ಲಿ ಹೆಂಡತಿಯಾದವಳು ಗಂಡನ ಭಕ್ತಿ ಜೀವನದಲ್ಲಿ ಸಹಭಾಗಿನಿಯಾಗಿರಬೇಕು. ಹಾಗಲ್ಲದೆ ಗಂಡನೊಬ್ಬನೇ ಶಿವಭಕ್ತನಾಗಿ, ಹೆಂಡತಿ ಮಾರಿಮಸಣಿಯ ಭಕ್ತೆಯಾಗಿ ಹಳೆಯ ಕೊಳಕು ಧರ್ಮದಲ್ಲೇ ಉಳಿದರೆ ಅದು ಹೆಂಡದ ಮಡಕೆಯಾಗಿ-ಅದರ ಹೊರಮೈಯನ್ನು ಮಾತ್ರ ತೊಳೆದಂತಾಗಿ ನಾರುತ್ತಲೇ ಇರುವುದು. ತಂದೆಯೊಂದು ಧರ್ಮ, ತಾಯೊಂದು ಧರ್ಮವಾಗಿ ಉಂಟಾಗುವ ಕಸಿವಿಸಿಯಿಂದ ಹುಟ್ಟುವ ಮಕ್ಕಳು ದಿಕ್ಕುತಪ್ಪುವರು. ಈ ಸಂದರ್ಭದಲ್ಲಿ-“ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ, ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರಸಿದಂತೆ ಕಾಣಾ ರಾಮನಾಥ” ಎಂಬ ದೇವರ ದಾಸಿಮಯ್ಯನವರ ವಚನವನ್ನು ಉಲ್ಲೇಖಿಸಬಹುದು. ಸತಿಪತಿಗಳೊಂದು ಧರ್ಮದವರಾಗುವುದು ಬಲಾತ್ಕಾರದ ಮಾತಲ್ಲ-ಅದು ಒಂದು ಒಪ್ಪಂದ. ಅಕ್ಕಮಹಾದೇವಿಯು ಶಿವಭಕ್ತನಾಗಲೊಲ್ಲದ ಕೌಶಿಕನನ್ನು-ಗಂಡನೇ ಆದರೂ (?) ತ್ಯಜಿಸಿ ಹೋದುದನ್ನಿಲ್ಲಿ ಸ್ಮರಿಸಬೇಕು. ದೇವರದಾಸಿಮಯ್ಯನವರಿಗೂ ಪೂರ್ವದವಳಾದ ವೈಜಕ್ಕವ್ವೆಯೆಂಬ ಮಾಹಾಶಿವಭಕ್ತಳು ಜೈನನೊಬ್ಬನನ್ನು ಮದುವೆಯಾಗಿ ಸಂಸಾರದಲ್ಲಿ ಸಾಮರಸ್ಯವಿಲ್ಲದೆ ಬಹಳ ಭಂಗಪಡಬೇಕಾಯಿತು. ಒಂದು ಧರ್ಮದಲ್ಲಿ ಹಲವು ಜಾತಿಗಳನ್ನು ಬಗೆಯುವುದಾಗಲಿ, ಧರ್ಮಾಚರಣೆಯೇ ಇಲ್ಲದ ಜೀವನ ಅಥವಾ ಸಂಸಾರವನ್ನು ನಡೆಸುವುದೇ ಆಗಲಿ-ಬಸವಣ್ಣನವರಿಗೆ ಒಪ್ಪಿಗೆಯಿಲ್ಲವೆಂಬುದನ್ನೂ ಈ ವಚನ ಸಂದರ್ಭದಲ್ಲಿ ಮರೆಯಬಾರದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು