•  
  •  
  •  
  •  
Index   ವಚನ - 105    Search  
 
ತಾಮಸನಿರಸನಸ್ಥಲ - ಮೂಢನಂಬಿಕೆ
ಹಾವಾಡಿಗನು ಮೂಕೊರತಿಯು; ತನ್ನ ಕೈಯಲ್ಲಿ ಹಾವು, ಮಗನ ಮದುವೆಗೆ ಶಕುನವ ನೋಡ ಹೋಹಾಗ, ಇದಿರಲೊಬ್ಬ ಮೂಕೊರತಿಯ ಹಾವಾಡಿಗನ ಕಂಡು, ʼಶಕುನ ಹೊಲ್ಲೆಂಬʼ ಚದುರನ ನೋಡಾ! ತನ್ನ ಸತಿ ಮೂಕೊರತಿ! ತನ್ನ ಕೈಯಲ್ಲಿ ಹಾವು! ತಾನೂ ಮೂಕೊರೆಯ! ತನ್ನ ಭಿನ್ನವನರಿಯದೆ ಅನ್ಯರನೆಂಬ ಕುನ್ನಿಯನೇನೆಂಬೆ ಕೂಡಲಸಂಗಮದೇವಾ?
Transliteration Hāvāḍiganu mūkoratiyu; tanna kaiyalli hāvu, magana maduvege śakunava nōḍa hōhāga, idiralobba mūkoratiya hāvāḍigana kaṇḍu, ʼśakuna hollembaʼ cadurana nōḍā! Tanna sati mūkorati! Tanna kaiyalli hāvu! Tānū mūkoreya! Tanna bhinnavanariyade an'yaranemba kunniyanēnembe kūḍalasaṅgamadēvā?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 A snake-charmer and his noseless wife, snake in hand, walk carefully trying to read omens for a son's wedding, but they meet head-on a noseless woman and her snake-charming husband, and cry 'The omens are bad!' His own wife has no nose; there's a snake in his hand. What shall I call such fools who do not know themselves and see only the others, O lord of the meeting rivers!

Translated by: A K Ramanujan
Book Name: Speaking Of Siva
Publisher: Penguin Books
----------------------------------
A snake-charmer with his noseless wife -A snake in his hand- Going to find good omens for The marriage of their son, Meets another snake-charmer with his noseless wife And cries, 'The omens are bad !' Mark what a clever chap ! His own wife is noseless In his own hand a snake, Himeself with a cut nose ! O Lord Kūḍala Saṅgama, What shall I say of the cur Who, heedless of his own defect, Points to another's fault ? Translated by: L M A Menezes, S M Angadi

Hindi Translation सँपेरा नकटी पत्नी के साथ अपने हाथ में साँप लिए पुत्र के विवाहार्थ शकुन देखेने चला, सामने अन्य संपेरे को अपनी नकटी पत्नी के साथ, आते देख शकुन नहीं हुआ, कहनेवाले चतुर को देखो- उसकी पत्नी नकटी है, हाथ में साँप है, स्वयं नकटा है, निज दोष न जान परनिंद करनेवाले कुत्ते को क्या कहूँ, कूडलसंगमदेव ॥ Translated by: Banakara K Gowdappa
Telugu Translation పాములవాడు; ముక్కిడితి తనచేతిలో పాము కొడుకు పెండ్లికి శకునము చూడపోవుచు; ఎదురైన ముక్కిడితిని; పాములవాని జూచి శకునము కాలేదను చతురత చూడుమ! తనకాంత ముక్కిడితి! ు తన చేతిలో పాము తాను ముక్కిడి! అయ్యా తన లోపము తా తెలియక, పరులదిట్టు కుక్కల నేమందు కూడల సంగమదేవా! Translated by: Dr. Badala Ramaiah
Tamil Translation பாம்பாட்டி மூக்கற்றவள், தன்கையிற் பாம்பு, மகனின் திருமணத்திற்கு நாள் நோக்கப் போகுங்காலை எதிரிலொரு மூக்கற்றவளும் பாம்பாட்டியும் வரக்கண்டு “நற்சமயமன்று” என மொழியும் திறமையினைக் காணாய்! தன் மனைவி மூக்கற்றவள், தன் கையிற் பாம்பு தானும் மூக்கற்றவள், தன் குறையினையறியாது பிறரை எள்ளும் புன்மையினை என்னென்பேன் கூடல சங்கம தேவனே. Translated by: Smt. Kalyani Venkataraman, Chennai
Marathi Translation गारुडी नकट्या पत्नीला घेऊन, सापाला हाती धरुन मुलाच्या लग्नाला मुहूर्त पाहण्यास निघाला. समोर दुसऱ्या गारुड्याला नकट्या पत्नीसह पाहून अपशकून झाला म्हणतो. अशा बुध्दीवंताला पहा. आपली पत्नी नकटी, आपल्या हाती साप, आपणही नकटा. आपले दोष न जाणता दुसऱ्यांचे दोष शोधणाऱ्या अल्पमतीना काय म्हणू कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಕುನ್ನಿ = ನಾಯಿ; ಚದುರನ = ಚತುರ; ಮೂಕೊರಲೆ = ಮೂಗು ಇಲ್ಲದವ; ಶಕುನ = ಶುಭ;
ಕನ್ನಡ ವ್ಯಾಖ್ಯಾನ ಶಕುನಾಪಶಕುನಗಳು ಇಲ್ಲ ಇಲ್ಲಿ ಬಸವಣ್ಣನವರು ಒಂದು ಸುಂದರ ಚಿತ್ರಣವನ್ನು ನಮ್ಮ ಮುಂದಿಟ್ಟು ಶಕುನಗಳಲ್ಲಿ ವಿಶ್ವಾಸವಿಡುವುದನ್ನು ಹಾಗೂ ತನ್ನ ದೌರ್ಬಲ್ಯವನ್ನರಿಯದೆ ಮತ್ತೊಬ್ಬರ ದೌರ್ಬಲ್ಯದ ಕಡೆ ಬೆರಳು ಮಾಡಿ ತೋರಿಸುವ ಮಾನವ ಸಹಜ ದೌರ್ಬಲ್ಯವನ್ನೂ ಖಂಡಿಸಿದ್ದಾರೆ. ಒಬ್ಬ ಹಾವಾಡಿಗ ಮತ್ತು ಅವನ ಮೂಗಿಲ್ಲದ ಹೆಂಡತಿ ಕೈಯಲ್ಲಿ ಹಾವನ್ನು ಹಿಡಿದುಕೊಂಡು ತಮ್ಮ ಮಗನ ಮದುವೆಗೆ ಶಕುನವನ್ನು ನೋಡಲು ಹೊರಟರು. ಹೊರಟ ಸ್ವಲ್ಪ ಹೊತ್ತಿನಲ್ಲೇ ಎದುರಿಗೆ ಮತ್ತೊಬ್ಬ ಹಾವಾಡಿಗ ಮತ್ತು ಅವನ ಹೆಂಡತಿ ಬಂದರು. ಅವಳಿಗೂ ಮೂಗಿರಲಿಲ್ಲ; ಅವರ ಕೈಯಲ್ಲೂ ಹಾವು ಇತ್ತು. ಇದನ್ನು ನೋಡಿದ ಮೊದಲನೆಯ ಹಾವಾಡಿಗ 'ಅಯ್ಯೋ, ಹಾವಾಡಿಗ ಹಾಗೂ ಅವನ ಮೂಗಿಲ್ಲದ ಹೆಂಡತಿ ಎದುರಿಗೆ ಬಂದರು, ಶಕುನ ಒಳ್ಳೆಯದಾಗಲಿಲ್ಲಾ' ಎಂದು ಶೋಕಿಸುತ್ತಾನೆ. ತನ್ನ ಹೆಂಡತಿಯೇ ಮೂಗಿಲ್ಲದವಳು, ತನ್ನ ಕೈಯಲ್ಲೇ ಹಾವಿದೆ, ತಾನೂ ಮೂಗಿಲ್ಲದವನು. ಹೀಗಿರುವಾಗ ತನಗೆ ತಾನೇ ಅಪಶಕುನವಲ್ಲದೇ ಬೇರೊಬ್ಬರಿಂದ ತನಗೆ ಅಪಶಕುನವಾಯಿತೆನ್ನುವ ಚತುರನಿಗೆ ಏನೆಂದು ಹೇಳಬೇಕು? ತನ್ನ ವಕ್ರತೆಯನ್ನೇ ಅರಿತುಕೊಳ್ಳದೆ ಮತ್ತೊಬ್ಬರ ವಕ್ರತೆಯ ಕಡೆ ಬೆರಳು ಮಾಡಿ ತೋರಿಸುವವನನ್ನು ಕುನ್ನಿ ಎಂದು ಕರೆಯದೆ ವಿಧಿಯಿಲ್ಲ. ಕೆಲವು ವೇಳೆ ಈ ಶಕುನಗಳು ನಿಜವೆನಿಸಬಹುದು; ಆದರೆ ಆ ರೀತಿ ಆಗುವುದು ಅತಿ ವಿರಳ. ಒಂದು ಪಕ್ಷ ಆದರೂ ಒಂದಕ್ಕೊಂದಕ್ಕೆ ಸಂಬಂಧವೇನೂ ಇಲ್ಲ. ಏಕೆಂದರೆ, ಕಾಗೆಯೂ ಬಂದು ಕುಳಿತುಕೊಂಡಿತು. ಕೊಂಬೆಯೂ ಬಿತ್ತು. ಎಂದರೆ ಕಾಗೆಯ ಕಾರಣದಿಂದಲೇ ಕೊಂಬೆ ಮುರಿದು ಬಿತ್ತೆಂದು ತಿಳಿಯುವುದು, ಕಾಗೆ ಕೂತಲ್ಲೆಲ್ಲಾ ಕೊಂಬೆಗಳು ಮುರಿದು ಬೀಳುವುವು ಎನ್ನುವುದು ಮೂರ್ಖತನವಲ್ಲವೇ? ಕೊಂಬೆ ಮುರಿದು ಬೀಳುವ ಸಮಯಕ್ಕೆ ಸರಿಯಾಗಿ ಕಾಗೆ ಬಂದು ಕೂತು ಕಾಗೆಯಿಂದಲೇ ಕೊಂಬೆ ಮುರಿದು ಬಿತ್ತು ಎಂಬ ಕಲ್ಪನೆಗೆ ಅವಕಾಶವಾಯಿತೆಂದು ತಿಳಿಯಬೇಕೇ ವಿನಾ ಅನ್ಯಥಾ ಅಲ್ಲ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.