•  
  •  
  •  
  •  
Index   ವಚನ - 108    Search  
 
ತಾಮಸನಿರಸನಸ್ಥಲ - ಇಷ್ಟಲಿಂಗ
ಅರ್ಥರೇಖೆಯಿದ್ದು ಫಲವೇನು, ಆಯುಷ್ಯರೇಖೆ ಇಲ್ಲದನ್ನಕ್ಕ? ಹಂದೆಯ ಕೈಯಲ್ಲಿ ಚಂದ್ರಾಯುಧವಿರ್ದು ಫಲವೇನು? ಅಂಧಕನ ಕೈಯಲ್ಲಿ ದರ್ಪಣವಿರ್ದು ಫಲವೇನು? ಮರ್ಕಟನ ಕೈಯಲ್ಲಿ ಮಾಣಿಕ್ಯವಿರ್ದು ಫಲವೇನು? ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ ಲಿಂಗವಿರ್ದು ಫಲವೇನು ! ಶಿವಪಥವನರಿಯದನ್ನಕ್ಕ?
Transliteration Artharēkheyiddu phalavēnu, āyuṣyarēkhe illadannakka? Handeya kaiyalli candrāyudhavirdu phalavēnu? Andhakana kaiyalli darpaṇavirdu phalavēnu? Markaṭana kaiyalli māṇikavirdu phalavēnu? Nam'ma kūḍalasaṅgana śaraṇaranariyadavara kaiyalli liṅgavirdu phalavēnu! Śivapathavanariyadannakka?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Of what avail the fortune-line Without the line of life ? Of what avail the weapon crescent shaped In a coward's hands ? Of what avail the looking-glass In a blind man's hands ? Of what avail the ruby-stone In a monkey's hands Of what avail the Liṅga In the hands of those who know not Kūḍala Saṅga's Śaraṇās Unless they know the Śiva path ? Translated by: L M A Menezes, S M Angadi
Hindi Translation अर्थ रेखा से क्या लाभ, यदि आयुष्य रेखा न हो? भीरू के हाथ में चंद्रायुध हो तो क्या लाभ? अंधे के हाथ में दर्पण हो, तो क्या लाभ? मर्कट के हाथ में माणिक्य हो, तो क्या लाभ? मम कूडलसंगमदेव शरणों को न जाननेवालों के हाथ लिंग हो, तो क्या लाभ? जब तक वे शिवपथ नहीं जानते ॥ Translated by: Banakara K Gowdappa
Telugu Translation అర్ధరేఖ యున్నంత ఫలమేమి ఆయుష్య రేఖ లేకుండెనేని? పందచేతిలో చంద్రాయుధంబుండ ఫలమేమి? అంధుని చేతిలో అద్దమున్న ఫలమేమి! మర్కటముచేత మాణిక్యమున్న ఫలమేమి? కూడల సంగని శరణుల తెలియనివారి చేత లింగమున్న ఫలమేమి? శివపథము తెలియనంతదాక! Translated by: Dr. Badala Ramaiah
Tamil Translation செல்வ இரேகையினால் பயனென்? ஆயுள் இரேகையற்ற பொழுது பேடியின் கையிலே சந்திராயுதத்தினால் பயனென்னை? குருடனின் கையிலே ஆடியினால் பயனென்ன? குரங்கின் கையிலே மாணிக்கத்தால் பயனென்ன? நம் கூடல சங்கன் அடியாரை அறியார் கையிலே இலிங்கத்தினால் பயனென்ன? சிவபதத்தையறியாவரை. Translated by: Smt. Kalyani Venkataraman, Chennai
Marathi Translation धनरेषा हाती आयुर्रेषेविण उपभोगावे कोण? धन त्याचे ? भित्राच्या हाती, चंद्रायुद्ध असुनि लढावे कोणी? चंद्रायुद्ध अंधाच्या हाती, आरसा असूनि पाहावे कोणी? दर्पण ते माकडाच्या हाती, माणिक असुनि राही समाधानी, जन्मभर ? इष्टलिंग हाती, परी तो अजाण शिवपथ शरण, मार्ग व्यर्थ कूडलसंगमदेवा ! शिवशरण पथा जाणीव होता, थोर तेचि अर्थ - आपल्या हातावर धनरेषा कितीही असल्या तरी ते ऐश्वर्य उपभोगण्यासाठी आयुष्यरेषा नसेल तर काय उपयोग ? षंढाच्या हातात अतिशय टोकदार चंद्रायुद्ध असून काय उपयोग? त्याने लढण्यासाठी धैर्य व सामर्थ्य असावे लागते. अंधाच्या हातात आरसा असून काय उपयोग? त्यास स्वतःचेच प्रतिबिंबसुद्धा पहाता येत नाही. माकडाच्या हातात हिरे माणिक, मोती असून काय उपयोग ? त्याची किंमत त्याला कधी कळेल का ? त्याचप्रमाणे शिवशरणांनी गळ्यात इष्टलिंग धारण करुन काय उपयोग ? त्यास शुद्धाचार, शरण-मार्ग इत्यादिची जाणीव नसल्यास अशा वेषधारी शिवशरणांच्या हातात असलेले इष्टलिंग दगड जाणावे. याचा अर्थ इष्टलिंगधाऱ्यानी शरणत्व व शिवपथ व कायकप्राप्ती निष्ठ याची जाणीव ठेवावी लागते तरच मोक्ष प्राप्ती. Translated by Rajendra Jirobe, Published by V B Patil, Hirabaug, Chembur, Mumbai, 1983 धन खूप असून काय उपयोग आयुष्य नसेल तर? भित्र्याच्या हाती चंद्रायुध असून काय उपयोग ? आंधळ्याच्या हाती आरसा असून काय उपयोग ? माकडाच्या हाती माणिक असून काय उपयोग ? आमच्या कूडलसंगमदेवाचा पथ न जाणलेल्यांच्या हाती इष्टलिंग असून काय उपयोग? Translated by Shalini Sreeshaila Doddamani
Urdu Translation کیافائدہ جوہاتھ میں دولت کی ہولکیر ہم کوعطا ہوئی ہے بہت مختصرحیات ایسے ہی یہ لکیر ہے اپنے لئے فضول جیسے کوئی چمکتا ہوا پائدارتیر بیکار یا پھنسار ہے بزدل کے ہاتھ میں جیسےکہ کورچشم کوشفّاف آئینہ جیسے گہرہوہاتھ میں بندرکے تابدار ایسےہی جانولِنگ کارکھنا فضول ہے جب تک نہ قلب وچشم میں شرنوں کا نورہو جب تک کہ راہِ حق کا نہ راہی ہے کوئی اے میرے دیوا کوڈلا سنگم ، مرے حضور Translated by: Hameed Almas
ಶಬ್ದಾರ್ಥಗಳು ಅಂಧಕ = ಕುರುಡ; ಅರ್ಥ = ಹಣ; ದರ್ಪಣ = ಕನ್ನಡಿ; ಪಥ = ದಾರಿ; ಮಾಣಿಕ್ಯ = ನವರತ್ನಗಳಲ್ಲಿ ಒಂದು; ಹಂದೆ = ಹೇಡಿ;
ಕನ್ನಡ ವ್ಯಾಖ್ಯಾನ ತನ್ನಂತೆ ಪರರನ್ನು ಕಾಣುವುದೇ ಶಿವಪಥ ಅಂಗೈಯಲ್ಲಿ ಧನರೇಖೆ, ಆಯುಷ್ಯ ರೇಖೆ ಇತ್ಯಾದಿ ರೇಖೆಗಳು ಇವೆಯೆಂದು ಹಸ್ತ ಸಾಮುದ್ರಿಕಾ ತಜ್ಞರು ಹೇಳುತ್ತಾರೆ. ಒಬ್ಬನಿಗೆ ಅರ್ಥರೇಖೆ ಅಂದರೆ ಧನರೇಖೆ ಇದೆ ಎಂದಿಟ್ಟುಕೊಳ್ಳೋಣ. ಅದರಿಂದ ಅವನು ಮುಂದೆ ಕೆಲವು ಕಾಲದಲ್ಲಿಯೇ ದೊಡ್ಡ ಶ್ರೀಮಂತನಾಗಬಹುದು ನಿಜ. ಆದರೆ ಅವನಿಗೆ ಆಯುಷ್ಯ ರೇಖೆಯೇ ಇಲ್ಲದೆ ಮರಣ ಸಮೀಪಿಸಿದರೆ ಆ ಐಶ್ವರ್ಯವನ್ನು ಅನುಭವಿಸುವುದೆಂತು? ಧನರೇಖೆ ಇದ್ದೂ ಏನು ಪ್ರಯೋಜನವಾಯಿತು? ಇದರಂತೆಯೇ ಒಬ್ಬ ಹೇಡಿಯ ಕೈಯಲ್ಲಿ ಪ್ರಸಿದ್ಧವಾದ ಚಂದ್ರಾಯುಧವಿದ್ದರೂ ಪ್ರಯೋಜನವೇನು? ಅವನು ಅದನ್ನೇನು ಶತ್ರುಗಳ ಮೇಲೆ ಪ್ರಯೋಗಿಸಬಲ್ಲನೆ? ಅದರಿಂದ ಶತ್ರುಗಳನ್ನು ನಾಶಗೊಳಿಸಬಲ್ಲನೆ? ಅಂತೆಯೇ ಕುರುಡನ ಕೈಯಲ್ಲಿ ಕನ್ನಡಿ ಇದ್ದರೆ ಪ್ರಯೋಜನವೇನು? ಅವನೇನು ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬಲ್ಲನೇ? ಅದರಂತೆಯೇ ಮಂಗನ ಕೈಯಲ್ಲಿ ಮಾಣಿಕ್ಯವಿದ್ದರೆ ಆದ ಲಾಭವೇನು? ಅದೇನು ಮಾಣಿಕ್ಯದ ಬೆಲೆಯನ್ನು ತಿಳಿದುಕೊಳ್ಳಬಲ್ಲುದೆ? ಅದರಿಂದ ತನ್ನ ಶರೀರವನ್ನು ಶೃಂಗರಿಸಿಕೊಳ್ಳಬಲ್ಲುದೆ? ಇದೇ ರೀತಿ ಕೂಡಲ ಸಂಗನ ಶರಣರನ್ನೂ ಶಿವಪಥವನ್ನೂ ಸರಿಯಾಗಿ ಅರ್ಥಮಾಡಿಕೊಳ್ಳದೇ ಇರುವವರ ಕೈಯಲ್ಲಿ ಲಿಂಗವಿದ್ದರೂ ಪ್ರಯೋಜನವಿಲ್ಲ. ಅದು ನಿಷ್ಫಲವೇ ಸರಿ. ಹೀಗೆಂದ ಮಾತ್ರಕ್ಕೆ ಇದರಿಂದ ಲಿಂಗಕ್ಕೇನೂ ಕುಂದಿಲ್ಲ. ಚಂದ್ರಾಯುಧಕ್ಕೆ ಶತ್ರುವನ್ನು ಕತ್ತರಿಸುವ, ಕನ್ನಡಿಗೆ ಮುಖವನ್ನು ಪ್ರತಿಬಿಂಬಿಸುವ, ಮಾಣಿಕ್ಯಕ್ಕೆ ಶೋಭೆಯನ್ನುಂಟು ಮಾಡುವ ಶಕ್ತಿ ಹೇಗೆ ಇದೆಯೋ ಅದೇ ರೀತಿ ಲಿಂಗಕ್ಕೆ ಮಾನವನನ್ನು ದೇವನನ್ನಾಗಿಸುವ ಶಕ್ತಿ ಇದೆ. ಆದ್ದರಿಂದ ಚಂದ್ರಾಯುಧ, ಕನ್ನಡಿ, ಮಾಣಿಕ್ಯ, ಲಿಂಗ ಇವುಗಳಲ್ಲಿ ನಾವು ದೋಷವನ್ನು ಕಾಣದೆ, ಅವುಗಳನ್ನು ಬಳಸುವ ವ್ಯಕ್ತಿಗಳಲ್ಲಿ ಆ ದುರ್ಬಲತೆಯೆನ್ನು ಕಾಣುತ್ತೇವೆ. ಪ್ರಕೃತದಲ್ಲಿ ಕೂಡಲಸಂಗನ ಶರಣರನ್ನು ಅರಿಯದಿರುವುದೇ ಆ ದೌರ್ಬಲ್ಯ. ಕೂಡಲಸಂಗನ ಶರಣರೆಂದರೆ ದೇವರಲ್ಲಿ ನಂಬಿಕೆಯುಳ್ಳ ದೇವಮಾನವರು. ಅಂಥವರ ಸಂಗದಿಂದ ಶಿವಪಥವನ್ನು ತಿಳಿದು ಮಾನವ ದೇವಮಾನವನಾಗಬೇಕು. ಹೀಗಾಗದಿದ್ದಲ್ಲಿ ದೇವಮಾನವನನ್ನಾಗಿಸುವ ಲಿಂಗ ಕರಸ್ಥಲದಲ್ಲಿದ್ದರೂ ಅದು ಅವನಿಗೆ ಅಪ್ರಯೋಜಕ ವಸ್ತುವೇ ಆಗುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-593 

  Thu 30 Jan 2025  

 https://savithru.blogspot.com/2025/01/blog-post_30.html
  ಸವಿತೃ