ಅವಳ ವಚನ ಬೆಲ್ಲದಂತೆ:
ಹೃದಯದಲ್ಲಿಪ್ಪುದು ನಂಜು, ಕಂಡಯ್ಯಾ!
ಕಂಗಳಲ್ಲೊಬ್ಬನ ಕರೆವಳು,
ಮನದಲ್ಲೊಬ್ಬನ ನೆರೆವಳು!
ಕೂಡಲಸಂಗಮದೇವ, ಕೇಳಯ್ಯಾ:
ಮಾನಿಸಗಳ್ಳಿಯ ನಂಬದಿರಯ್ಯಾ.
Transliteration Avaḷa vacana belladante:
Hr̥dayadallippudu nan̄ju, kaṇḍayyā!
Kaṅgaḷallobbana karevaḷu,
manadallobbana nerevaḷu!
Kūḍalasaṅgamadēva, kēḷayyā:
Mānisagaḷḷiya nambadirayyā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Her words are sweet as sweet,
But lo ! there's poision in her heart !
She invites one person with her eye,
She takes another to her heart !
Hearken, O Kūḍala Saṅgama Lord,
Trust not the wanton who
Beguiles man-kind !
Translated by: L M A Menezes, S M Angadi
Hindi Translation उसका वचन गुड सा है, हृदय में विष है,
एक को आंखों के इशारे बुलाती है;
मन में दूसरे का स्मरण करती है;
कूडलसंगमदेव सुनो
ऐसी पुरुषवंचिका पर विश्वास न करो ॥
Translated by: Banakara K Gowdappa
Telugu Translation దాని పలుకు బెల్లము మనసేమో
విషముకదయ్యా! కను సైగ నొకని పిలుచు;
మనసార మఱియొకని గూడు; కూడల సంగా
యెద దొంగనే గతి నమ్మదగునయ్యా!
Translated by: Dr. Badala Ramaiah
Tamil Translation அவள்மொழி வெல்லம்போல, இதயத்திலுளது நஞ்சு காண் ஐயனே,
கண்களினாலே ஒருவனை யழைப்பாள்;
மனத்திலே ஒருவனை நினைப்பாள்;
கூடல சங்கம தேவனே, கேளீ ரையனே.
மனத்திலே கள்ளியை நம்பாதீ ரையனே.
Translated by: Smt. Kalyani Venkataraman, Chennai
Marathi Translation
वाणीत तिच्या गुळाची गोडी
नच विषय सांडी, आंतरीचा
खुनवितो डोळ्यानी, एकासि पाहूनि
आठविती मनी, दुजासंगे
कूडलसंगमदेवा ! ऐशा चोरट्यावरी
कैसा विश्वास करो, सांगा तुम्ही !
अर्थ - बोलतांना गोड बोलावे आणि अंतरंगात विषाप्रमाणे विषय वासना साठलेली, डोळे एकावर स्थिर झालेले आणि मन दुसऱ्याच्या गोड आठवणीत किंवा इतर गोष्टीत गुंतलेले असल्यास परमेश्वर अशा लोकांना कसा पावेल? तोंडून नेहमी सत्कार्याची भाषा व मुखी परमेश्वराचे नामस्मरण आणि पोटात काळे, अशा व्यक्तींनी इष्टलिंगावर एकाग्रता साधण्याचा आव आणतात. आणि मन अनेक वाईट गोष्टीच्या आठवणीत रमलेले असते. अशा तऱ्हेच्या भक्तावर परमेश्वर कसा विश्वास करील? प्राप्तीच्या मार्गात निर्मळ मन असावे लागते, मनात दुजाभाव असता कामा नये.
Translated by Rajendra Jirobe, Published by V B Patil, Hirabaug, Chembur, Mumbai, 1983
तिचे बोलणे गोड आणि मनात विष,
नजर एकावर आणि मन दुसऱ्यावर,
कूडलसंगमदेवा ऐका,
विश्वासघातकीला आपले समजून विश्वास ठेवणाऱ्या
मेंढ्यासम मानवाला काय करू?
Translated by Shalini Sreeshaila Doddamani
ಶಬ್ದಾರ್ಥಗಳು ಕಂಗಳು = ಕಣ್ಣು; ನಂಜು = ವಿಷ; ನೆರೆ = ಸೆರು;
ಕನ್ನಡ ವ್ಯಾಖ್ಯಾನ ಕಪಟಭಕ್ತರು ಶಿವಮಂತ್ರ ಹೇಳುವುದು, ಶಿವಪೂಜೆ ಮಾಡುವುದು, ಶಿವಧ್ಯಾನಮಾಡುವುದು-ಆ ಶಿವಪಥವನ್ನೇ ಹಾಳುಗೆಡವುದರಲ್ಲಿ ಪರಿಣಮಿಸುವುದು. ಕಾಪಟ್ಯವು ಉದ್ದೇಶಪೂರ್ವಕವಾದಾಗ ದುಷ್ಪರಿಣಾಮವು ವ್ಯವಸ್ಥಿತವಾಗಿ ತಲೆದೋರುವುದು.
ಉದಾಹರಣೆಗೆ-ರಾಜಕೀಯವಾಗಿ ಪ್ರಬಲನಾದೊಬ್ಬನನ್ನು ಯುದ್ಧದಲ್ಲಿ ಗೆಲ್ಲಲಾರದೆ-ಅನ್ಯೋಪಾಯದಿಂದ ಹಾಳುಮಾಡಲು-ವಿಷಕನ್ಯೆಯರನ್ನು ಅವನ ಕೊಲೆಗೆ ನಿಯೋಜಿಸುವುದು ರೂಢಿಯಲ್ಲಿತ್ತು. ಆಗ ಅವಳು ಮಧುರವಾಗಿ ಮಾತಾಡುವಳು-ಅಷ್ಟರಿಂದಲೇ ಸ್ನೇಹಪರಳೆಂದು ಅವಳನ್ನೇನಾದರೂ ಮುಟ್ಟಿದನೋ ಮುತ್ತಿಟ್ಟನೋ-ಅವನು ಸತ್ತ.
ಹೀಗೆಯೇ ಶರಣರು ಪ್ರವರ್ತಿಸಿದ ಪ್ರಬಲ ಶಿವಧರ್ಮವನ್ನು ಅನ್ಯಧರ್ಮೀಯರು ವಾದದಿಂದ ಗೆಲಲಾರದೆ-ಕಪಟಿಗಳನ್ನು ಆ ಧರ್ಮಕ್ಕೆ ಸೇರುವಂತೆ ಮಾಡಿ-ಅವರ ಮೂಲಕ ಅದಕ್ಕೆ ಅಪಖ್ಯಾತಿ ತರಲು ಪ್ರಯತ್ನಿಸಿದ ಹಲವು ಪ್ರಕರಣಗಳು ಬಸವಣ್ಣನವರ ಗಮನಕ್ಕೆ ಬಂದಿದ್ದವು.
ಇಂಥ ಶಿವಧರ್ಮಘಾತುಕರ ಬಗ್ಗೆ ಎಚ್ಚರ ಕೊಡುತ್ತ-ಇಡಿಯಾಗಿ ಕಪಟಭಕ್ತರನ್ನು ನಂಬಬಾರದೆಂದೂ ಮತ್ತು ಅವರ ಬಗ್ಗೆ ಉಪೇಕ್ಷೆಯಿಂದಾಗಲಿ ಇರಬಾರದೆಂದೂ ಆದೇಶಿಸುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು