ತಾಮಸನಿರಸನಸ್ಥಲ - ದೃಢಸಂಕಲ್ಪ
ಗರಿ ತೋರೆ ಗಂಡರೆಂಬವರ ಕಾಣೆ:
ನಿರಿ ಸೋಂಕಲು ಮುನಿಯಿಲ್ಲ, ನೋಡಯ್ಯಾ.
ನಂಟುತನವೇನವನ? ಬಂಟತನವೇನವನ?
ಹುಲ್ಲಕಿಚ್ಚು, ಹೊಲೆಯನ ಮೇಳಾಪ:
ಅಲ್ಲಿ ಹುರುಳಿಲ್ಲ, ಕೂಡಲಸಂಗಮದೇವಾ!
Transliteration Gari tōre gaṇḍarembavara kāṇe:
Niri sōṅkalu muniyilla, nōḍayyā.
Naṇṭutanavēnavana? Baṇṭatanavēnavana?
Hullakiccu, holeyana mēḷāpa:
Alli huruḷilla, kūḍalasaṅgamadēvā!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 I see none so brave
When an arrow appears.
At the touch of a pleat
There's no more monk!
What is it worth,
The bravery of one,
The other's reverence?
It's but hay-fire,
Or commerce with a low-born man
There's no good there,
Kūḍala Saṅgama Lord !
Translated by: L M A Menezes, S M Angadi
Hindi Translation बाण समक्ष वीर कहनेवाला मुझे नहीं दीखता
साडी की चुनन के लावण्य स्पर्श से मुनित्व नहीं ठहरता
उसकी बंधुत क्या? उसकी शूरता क्या?
वह घास की आग है – चांडाल का मिलाप!-
उसके सार नहीं, कूडलसंगमदेव ॥
Translated by: Banakara K Gowdappa
Telugu Translation దాకడ విందు శస్త్ర మెదురైన శూరుడగు వాని కాన ;
సతికొంగు సోక సన్యాసియగు వాని కాననయ్యా!
ఆ చుట్టడిక మెటులో!
ఆ బంటుతన మెటులో, ఆ గడ్డి నిప్పు కడజాతి మేళము చూడ
సుఖము లేదురా కూడల సంగమదేవా!
Translated by: Dr. Badala Ramaiah
Tamil Translation அம்பினை உருவித் தொலைதூர -- மெய்பவனைக் காணேன்,
மாயைத் தொடர்புள விடத்துத் துறவியில்லைக் காணாய்,
அவன் தொடர்பென்ன, தொண்டென்ன
புல்லின் நெருப்பு, கீழோன் நட்பு
ஆங்குப் பயனிலை, கூடல சங்கம தேவனே.
Translated by: Smt. Kalyani Venkataraman, Chennai
Marathi Translation
समोरच्या शत्रूच्या बाणाचा पंख पाहून
शौर्य दाखविणारा वीर कोणी नाही,
पदराच्या स्पर्शाने संयम ठेवणारा मुनी दिसत नाही.
हा कसला पराक्रम ? हे कसले वैराग्य?
गवताची ज्वाला आणि अवगुणीचा संग व्यर्थ आहे
कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಕಿಚ್ಚು = ಬೆಂಕಿ; ನಿರಿ = ; ಬಂಟ = ಸೇವಕ; ಮೇಳಾಪ = ;
ಕನ್ನಡ ವ್ಯಾಖ್ಯಾನ ಯುದ್ಧವೀರನಾದರೆ ಶತ್ರುಗಳನ್ನು ಜಯಿಸಬೇಕು. ಧರ್ಮವೀರನಾದರೆ ಇಂದ್ರಿಯಗಳನ್ನು ಜಯಿಸಬೇಕು. ಹಾಗಲ್ಲದೆ ಶತ್ರುವಿನ ಬೆನ್ನಿಗೆ ಬಿಗಿದ ಬತ್ತಳಿಕೆಯ ಬಾಣದ ಹಿಂಬದಿಯ ಗರಿ ಕಂಡರೆ ಸಾಕು ಹೆದರುವ ಯೋಧನು ಯಾವ ಯುದ್ಧದಲ್ಲಿ ಕಾದಿಯಾನು ? ಯಾವುದೇ ಹೆಣ್ಣಿನ ಸೀರೆಯ ನಿರಿ ಸೋಕಿದರು ಸಾಕು ವಿಚಲಿತನಾಗುವ ಮುನಿ ಯಾರಿಗೆ ತಾನೆ ಧರ್ಮಬಂಧುವಾಗಿ ದಿಗ್ದರ್ಶನ ಮಾಡಿಯಾನು !
ಹೇಡಿಯ ವೀರಾಲಾಪವೆಲ್ಲ ಹುಲ್ಲಿನ ಕಿಚ್ಚಿನಂತೆ ಕ್ಷಣಿಕ. ಲಂಪಟನ ಒಡನಾಟ ಹೊಲೆಯನ ಸಹವಾಸದಂತೆ ಅಪಕರ್ಷಕ.
ಧಾರ್ಮಿಕ ಧುರೀಣರು ಜಿತೇಂದ್ರಿಯರಾಗಿರಬೇಕು-ಇಲ್ಲವಾದರೆ ಧರ್ಮಕ್ಷೇತ್ರವೆಲ್ಲ ಹೊಲೆಗಲಸುವುದೆಂಬುದು ತಾತ್ಪರ್ಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು