•  
  •  
  •  
  •  
Index   ವಚನ - 113    Search  
 
ತಾಮಸನಿರಸನಸ್ಥಲ - ಇಷ್ಟಲಿಂಗ
ಅಳೆಯುತ್ತ ಅಳೆಯುತ್ತ ಬಳಲುವರಲ್ಲದೆ, ಕೊಳಗ ಬಳಲುವುದೆ? ನಡೆಯುತ್ತ ನಡೆಯುತ್ತ ಬಳಲುವರಲ್ಲದೆ, ಬಟ್ಟೆ ಬಳಲುವುದೆ? ಶ್ರವವ ಮಾಡುತ್ತ ಮಾಡುತ್ತ ಬಳಲುವರಲ್ಲದೆ, ಕೋಲು ಬಳಲುವುದೆ? ನಿಜವನರಿಯದ ಭಕ್ತ ಬಳಲುವನಲ್ಲದೆ, ಲಿಂಗ ಬಳಲುವುದೆ? ಕೂಡಲಸಂಗಮದೇವಾ, ಅರಸರಿಯದ ಬಿಟ್ಟಿಯೋ!
Transliteration Aḷeyutta aḷeyutta baḷaluvarallade, koḷaga baḷaluvude? Naḍeyutta naḍeyutta baḷaluvarallade, baṭṭe baḷaluvude? Śravava māḍutta māḍutta baḷaluvarallade, kōlu baḷaluvude? Nijavanariyada bhakta baḷaluvanallade, liṅga baḷaluvude? Kūḍalasaṅgamadēvā, arasariyada biṭṭiyō!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Measuring and measuring, they tire : But does the measure tire ? Walking and walking, they tire : But does the roadway tire ? Drilling and drilling, they tire ! But does the stave too tire ? The bhakta, ignorant of Truth, Tires: but does Liṅga tire ? It's work without wages, not known to the King, Kūḍala Saṅgama Lord ! Translated by: L M A Menezes, S M Angadi
Hindi Translation मापते मापते लोग थकते हैं, माप थकता है? चलते चलते लोग थकते हैं, मार्ग थकता है? व्यायाम करते करते लोग थकते हैं, मुदगर थकता है? सत्य से अनभिज्ञ भक्त थकते हैं, लिंगदेव थकता है? कूडलसंगमदेव, यह राजा से अविदित बेगार है ॥ Translated by: Banakara K Gowdappa
Telugu Translation కొలచుచు కొలచుచు బడలిపోదు రేగాని బళ్ళ బడలిపోవునే? నడచుచు నడచుచు డస్సిపోదు రేగాని దారి డస్సిపోవునే? సాము సేయుచు సేయుచు శ్రమపడుదు రేగాని కర్ర శ్రమపడునే? నిజమెఱుగని భక్తుడాయాసపడుగాని దేవుడాయాసపడునే? సంగమదేవా! విభుడెఱుగని వెట్టిచాకిరి అయ్యా! Translated by: Dr. Badala Ramaiah
Tamil Translation அளக்க அளக்க வழுவுதன்றி குளகம் வழுவுமோ? நடக்க நடக்க வழுவுதன்றி வழி வழுவுமோ? உடற்பயிற்சி செய்யச் செய்ய வழுவுதன்றி கோல் வழுவுமோ? உண்மையறியா பக்தன் வழுவுவானன்றி இலிங்கம் வழுவுமோ? கூடல சங்கம தேவனே, அரசனறியா ஊதியமற்ற ஊழியமோ? Translated by: Smt. Kalyani Venkataraman, Chennai
Marathi Translation मोजून मोजून मापाड्या थकेल माप का थकेल, कदा काळी ? चालून चालून, वाटसरु थकेल वाट का थकेल, कदा काळी मारुन मारून मारणारा थकेल काठी का थकेल, कदा काळी निज न जाणता, पुजणारा थकेल लिंग का थकेल, कदा काळी कूडलसंगमदेवा! राजा तू जगाचा जाण अंतरीचा, सदा काळी अर्थ - जसे मोजणारा मोजून मोजून थकतो. पण मात्र वजने थकणार नाहीत. चालून चालून चालणाराच थकेल. पण रस्ता थकणार नाही. मारून मारून मारणारच थकेल. पण ज्या काठीने मारतो ती काठी थकणार नाही त्याचप्रमाणे भक्ती करणाऱ्याने भक्तीचा निजमार्ग न जाणता, आचरण न जाणता आयुष्यभरही भक्ती केली, तरी काही उपयोग नाही. शेवटी भक्ती करणाराच थकून जाईल. पण लिंगदेव पावणार नाही. पूजणारा मुक्त होणार नाही. म्हणून भक्ती समजून-उमजून करावी. भक्ती मार्गातील आचार विचार जाणावे. दुसऱ्यांचे पाहून नक्कल करू नये. दिखाऊ भक्ती नको. समाजात प्रतिष्ठा धन इत्यादी मिळावे या उद्देशाने भक्ती करु नये. भक्ती मार्गात खोटेपणा अजिबात चालणार नाही. याची सदैव जाणीव ठेवावी. कारण तुमचे अंतरंग व तुमचे प्रत्येक कृत्य राजाचा राजा महाराजा परमेश्वर जाणत आहे. त्याला साक्ष पुराव्याची गरज नाही तो अंतर्यामी आहे. तो योग्य-अयोग्य हे पाहूनच निर्णय घेत असतो. Translated by Rajendra Jirobe, Published by V B Patil, Hirabaug, Chembur, Mumbai, 1983 मापून-मापून माप घेणारा थकेल, माप थकेल का ? चालून-चालून वाटसरु थकेल, वाट थकेल का ? दंडा चालवून चालवून चालवणारा थकेल, दंडा थकेल का? सत्य न जाणणारा भक्त थकेल, लिंगदेव थकेल का? कूडलसंगमदेवा, राजाला जाणल्याविना केलेली मजूरी आहे. Translated by Shalini Sreeshaila Doddamani
ಶಬ್ದಾರ್ಥಗಳು ಕೊಳಗ = ದವಸಗಳನ್ನು ಅಳೆಯುವ ಸಾಧನ; ಬಟ್ಟೆ = ದಾರಿ; ಶ್ರವ = ಸನ್ಯಾಸಿ;
ಕನ್ನಡ ವ್ಯಾಖ್ಯಾನ ನಿಜಾರ್ಥವನ್ನರಿದು ಪೂಜಿಸು ಕೊಳಗವು ಧಾನ್ಯವನ್ನು ಅಳೆಯಲು ಉಪಯೋಗಿಸುವ ಒಂದು ಉಪಕರಣ. ಧಾನ್ಯವನ್ನು ಅಳೆಯುತ್ತಾ ಹೋದ ಹಾಗೆಲ್ಲಾ ಅಳೆಯುವ ವ್ಯಕ್ತಿ ಬಳಲುತ್ತಾನೆಯೇ ವಿನಾ ನಿರ್ಜೀವಿಯಾದ ಕೊಳಗ ಬಳಲುವುದಿಲ್ಲ. ಅದರಂತೆಯೇ ದಾರಿಯಲ್ಲಿ ನಡೆಯುತ್ತಾ ಹೋಗುವ ವ್ಯಕ್ತಿ ಆಯಾಸಗೊಳ್ಳುವನೇ ವಿನಾ ದಾರಿಯಲ್ಲ. ಅದೇ ಪ್ರಕಾರ ಗರಡಿಮನೆಯಲ್ಲಿ ಸಾಧನೆ ಮಾಡುವ ಸಾಧಕ ಆಯಾಸಗೊಳ್ಳುವನೇ ವಿನಾ ಸಾಧನೆಗೆ ಅವನು ಬಳಸಿಕೊಳ್ಳುವ ಕೋಲಲ್ಲ. ಅಂತೆಯೇ ಲಿಂಗತತ್ತ್ವ ದನಿಜಾರ್ಥವನ್ನರಿಯದೆ ಲಿಂಗ ಪೂಜೆಯನ್ನು ಮಾಡುವ ಭಕ್ತ ಪೂಜೆಯ ಫಲವನ್ನು ಪಡೆಯದೇ ಬಳಲುವನಲ್ಲದೆ ಲಿಂಗಕ್ಕೆನೂ ಅದರಿಂದ ಕುಂದಿಲ್ಲ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.

C-372 

  Thu 28 Sep 2023  

 ಅರಸರಿಯದ ಬಿಟ್ಟಿಯೋ ಇದರ ಅರ್ಥ ತಿಳಿಯಲಿಲ್ಲ ಸಾಧ್ಯ ಆದರೆ ತಿಳಿಸಿ
  Shantalingappa Patil

C-371 

  Thu 28 Sep 2023  

 ಅರಸರಿಯದ ಬಿಟ್ಟಿಯೋ
  Shantalingappa Patil