•  
  •  
  •  
  •  
Index   ವಚನ - 114    Search  
 
ಭಕ್ತನ ಜ್ಞಾನಿಸ್ಥಲ - ವಿಭೂತಿ
ಒಲೆಯ ಬೂದಿಯ ಬಿಲಿಯಲು ಬೇಡ, ಒಲಿದಂತೆ ಹೂಸಿಕೊಂಡಿಪ್ಪುದು. ಹೂಸಿ ಏನು ಫಲ, ಮನದಲ್ಲಿ ಲೇಸಿಲ್ಲದನ್ನಕ್ಕ? ಒಂದನಾಡಹೋಗಿ ಒಂಬತ್ತನಾಡುವ ಡಂಭಕರ ಮೆಚ್ಚ ನಮ್ಮ ಕೂಡಲಸಂಗಮದೇವ.
Transliteration Oleya būdiya biliyalu bēḍa, olidante hūsikoṇḍippudu. Hūsi ēnu phala, manadalli lēsilladannakka? Ondanāḍahōgi ombattanāḍuva ḍambakara mecca nam'ma kūḍalasaṅgamadēva.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 You need not buy the ash That's found in the hearth : You smear it as you please ! But what price smearing unless There is good in your heart ? Lord Kūḍala Saṅgama Approves not the braggarts who Protest too much ! Translated by: L M A Menezes, S M Angadi
Hindi Translation चूल्हे की राख खरीदते तो नहीं इच्छानुसार लगा सकते हैं लगाने से क्या लाभ, यदि मन शुद्धता न हो? एक की जगह बकनेवाले दंभियों पर प्रसन्न नहीं होते, मम कूडलसंगमदेव ॥ Translated by: Banakara K Gowdappa
Telugu Translation పొయ్యినిబడు బూది కొనబోకుర ; పూసికొనవచ్చు వలచినట్లు పూసి ఫలమేమి మనసున మంచి లేనంతదాక? ఒకటికి పది వాగెడి డాంభికుల మెచ్చడు కూడల సంగమ దేవుడు. Translated by: Dr. Badala Ramaiah
Tamil Translation உலையின் நீற்றை விலையீந்து கொள்ளற்க அன்பிருப்பதைப் போல பூசுவது பூசிஎன்ன பயன், மனத்திலே நன்மையற்ற வரை? ஒன்றாடவந்து ஒன்பதாடும் பகட்டினரை நயவான் கூடல சங்கம தேவன். Translated by: Smt. Kalyani Venkataraman, Chennai
Marathi Translation चुलीतील राखेला, नलगे दाम फासिले बेफाम, संतुष्टाया एका गावा जाई, नऊ गोष्टी करी अन्याय तो ठरी, शिवा लागी कूडलसंगमदेवा ! मनी नाही भाव म्हणे देवा पाव, दांभिकाला अर्थ - चुलीतील राख खूप मिळते व त्यास विशेष श्रम व पैसे मोजावे लागत नाहीत म्हणून ती वाटेल तेवढी शरीराला फासून उपयोग काय ? त्याचप्रमाणे मनात भाव नाही, परमेश्वरावर श्रद्धा नाही. सदाचार माहीत नाही व विभूती भस्म स्वस्तात मिळते म्हणून कपाळाला, शरीराला मनाला येईल तितके फासून उपयोग नाही. परमेश्वराने निर्माण केलेल्या जगात येऊन परमेश्वरावर निष्ठा नाही. मीच श्रेष्ठ आहे. मी जे बोलतो ते श्रेष्ठ तत्वज्ञान समजावे वगैरे अशा वल्गना माझ्या परमेश्वराला मान्य नाहीत. तो अत्यंत गुंतागुंताची बुद्धी अगदी व्यवस्थित तयार करून, त्याला सर्व इंद्रीये जोडून, लहान आकार करुन (Transistersed) मानवाच्या डोक्यात बसवतो तो एकमेव परमेश्वर! आणि हे सर्व विनासायास मिळाल्यानंतर त्याचे ॠण न मानता त्याच बुद्धीने, विचाराने वा तर्काने परमेश्वराचे अस्तीत्वच नष्ट करू इच्छिणाऱ्या मानवास काय म्हणावे? फुकटात बुद्धी, वाणी मिळाली याचा विचार न करता वाटेल त्या वल्गना करणे हे परमेश्वराला मान्य होणार नाही. Translated by Rajendra Jirobe, Published by V B Patil, Hirabaug, Chembur, Mumbai, 1983 चुलीतल्या राखेला किंमत मोजावी लागत नाही. पाहिजे तेवढी लावून घे. लावून काय उपयोग मनात सच्चाई नसेल तर? एकाच्या जागी नऊ म्हणणाऱ्या ढोंगीला मानत नाही कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಡಂಬಕ = ವಂಚಕ; ಲೇಸು = ಒಳ್ಳೆಯ; ಹೂಸಿ = ಲೇಪಿಸು, ಪಡೆದುಕೊಳ್ಳು;
ಕನ್ನಡ ವ್ಯಾಖ್ಯಾನ ಬ್ರಾಹ್ಮಣನ ಅಡುಗೇಮನೆಯ ಒಲೆಯ ಬೂದಿಯನ್ನು ಶೂದ್ರಾದಿಗಳು ಧರಿಸಬೇಕೆಂದು ಆ ಶಿಷ್ಟರು ನಿಗದಿಮಾಡಿದ್ದರು. ಅದನ್ನು ಬಸವಣ್ಣನವರು ಪ್ರತಿಭಟಿಸಿ-ಲಿಂಗದೀಕ್ಷೆಯಿಂದ ಶಿವಧರ್ಮಕ್ಕೆ ಸೇರಿದವರಿಗೆ-ಆ “ಒಲೆಯ ಬೂದಿಯ ಬಲಿಯಲು ಬೇಡ” ಎಂದು ನಿಷೇದಿಸಿರುವರು. ಮತ್ತು ಶಿಷ್ಟರು ಧರಿಸುವ ಭೂತಿ-ಭಸಿತ-ಭಸ್ಮ-ಕ್ಷಾರ-ರಕ್ಷಾ ಎಂಬ ಈ ಐದೂ ಬಗೆಯ ವಿಭೂತಿಯನ್ನು ಸಮಯೋಚಿತವಾಗಿ ಧರಿಸಲು ಶೂದ್ರಾದಿಗಳೂ ಅರ್ಹರೆನ್ನಲು “ಒಲಿದಂತೆ ಪೂಸಿಕೊಂಡಿಪ್ಪುದು” ಎಂದು ವಿಧಿಸಿರುವರು. ಪಾಪ ಮಾಡಿದವರು ಏನನ್ನು ತಾನೇ ಧರಿಸಿ ಪ್ರಯೋಜನವೇನು ? ಶಿವಧರ್ಮಕ್ಕೆ ಸೇರಿದ ಶೂದ್ರಾತಿ ಶೂದ್ರರೂ ಶುಭಾಶಯವುಳ್ಳವರಾದುದರಿಂದ-ನಮಶ್ಶಿವಾಯ ಮಂತ್ರಪುರಸ್ಸರವಾಗಿ ಭೂತಿಭಸ್ಮಾದಿಗಳನ್ನು ಧರಿಸಲು ಹಿಂತೆಗೆಯಬೇಕಾಗಿಲ್ಲವೆಂದು ಅವರಿಗೆ ಧೈರ್ಯ ತುಂಬುತ್ತಿರುವರು. ಒಂದಕ್ಕೆ ಒಂಬತ್ತಾಡುವ-ಆ ಮೂಲಕ ಸತ್ಯವನ್ನು ಮರೆಮಾಚುವ ತಾರತಮ್ಯ ಬುದ್ಧಿಯ ಸಂಪ್ರದಾಯಸ್ಥರು ಶಿವನಿಗೆ ಪ್ರಿಯರಲ್ಲ ಎಂಬುದನ್ನು ಈ ವಚನದಲ್ಲಿ ಬಸವಣ್ಣನವರು ಒತ್ತಿ ಹೇಳುತ್ತಿರುವರು. ವಿ ; ಈಶ್ವರನ “ಭೂತಿ”(ಇರುವಿಕೆ)ಯನ್ನು ವಿಶೇಷವಾಗಿ ಪಡೆದಿರುವಂಥದು ವಿಭೂತಿ, ಶಿವನ ತೇಜಸ್ಸನ್ನು ಪ್ರತಿಫಲನಗೊಳಿಸುವುದು ಭಸಿತ. ಪಾಪಗಳನ್ನು ದಹಿಸುವುದು ಭಸ್ಮ, ಮಾಯಾಮಲವನ್ನು ತೊಳೆಯುವುದು ಕ್ಷಾರ, ಭೂತಪ್ರೇತಾದಿ ದುಷ್ಟಶಕ್ತಿಗಳನ್ನು ಉಚ್ಚಾಟಿಸುವುದು ರಕ್ಷೆ. ಇವನ್ನು ಕ್ರಮವಾಗಿ ಕಪಿಲವರ್ಣದ ನಂದೆಯೆಂಬ, ಕೃಷ್ಣವರ್ಣದ ಭದ್ರೆಯೆಂಬ, ಧವಲ ವರ್ಣದ ಸುರಭಿಯೆಂಬ, ಧೂಮ್ರವರ್ಣದ ಸುಶೀಲೆಯೆಂಬ, ರಕ್ತವರ್ಣದ ಸುಮನೆಯೆಂಬ ಬೇರೆ ಬೇರೆ ಬಣ್ಣದ ಹಸುಗಳ ಸಗಣಿಯಿಂದ ವಿಧಿಯುಕ್ತವಾಗಿ ತಯಾರಿಸುವರು. ಸಗಣಿಯನ್ನು ಉಂಡೆಕಟ್ಟುವುದು, ಒಣಗಿಸುವುದು, ಸುಡುವುದು, ಶೋಧಿಸುವುದು ಮುಂತಾದ ಕ್ರಿಯೆಗಳು ವಿಭೂತಿಯನ್ನು ತಯಾರಿಸುವ ಕೆಲವು ಹಂತಗಳು. ಇದನ್ನು ನೆತ್ತಿ (1) ಹಣೆ (2) ಕಿವಿ (3-4) ಕೊರಳು (5) ಭುಜ (6-7) ಎದೆ (8) ನಾಭಿ (9) ಬೆನ್ನು (10) ತೋಳು (11-12) ಕುಕುದ್ (ಹೆಕ್ಕತ್ತು 13) ಮಣಿಕಟ್ಟು (14-15) ಎಂಬ ಹದಿನೈದು ಸ್ಥಾನಗಳಲ್ಲಿ ತ್ರಿಪುಂಡ್ರವಾಗಿ ಧರಿಸುವುದು. ಬಸವಣ್ಣನವರ ಪ್ರಕಾರವಾಗಿಯಾದರೋ ಹಣೆಯಲ್ಲಿ ಮೂರೆಳೆ ವಿಭೂತಿಯಿರುವುದು ಮುಖ್ಯ. ವಿಭೂತಿಯನ್ನು ಬಲಗೈಯ ಮಧ್ಯದ ಮೂರು ಬೆರಳಿಂದ ಹಣೆಯ ಮೇಲೆ ಹುಬ್ಬಿಂದ ಹುಬ್ಬಿನವರೆಗೆ ಆರಂಗುಲ ಉದ್ದವಾಗಿ ಧರಿಸಬೇಕು-ಎಡದಿಂದ ಬಲಕ್ಕೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು