•  
  •  
  •  
  •  
Index   ವಚನ - 115    Search  
 
ಭಕ್ತನ ಜ್ಞಾನಿಸ್ಥಲ - ದೇವರು
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ, ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ. ಒಮ್ಮನವಾದಡೆ ಒಡನೆ ನುಡಿವನು; ಇಮ್ಮನವಾದಡೆ ನುಡಿಯನು. ಕಾಣಿಯ ಸೋಲ: ಅದ್ದಗಾಣಿಯ ಗೆಲ್ಲ! ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ!
Transliteration Dharaṇiya mēlondu hiridappa aṅgaḍiyanikki, harada kuḷḷirda nam'ma mahādēvaseṭṭi. Om'manavādaḍe oḍane nuḍivanu; im'manavādaḍe nuḍiyanu. Kāṇiya sōla: Addagāṇiya gella! Jāṇa nōḍavvā, nam'ma kūḍalasaṅgamadēva!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Album Name - Vachana Dhare Vol -2 Singer : B.S.Mallikarjuna, B.R.Chaya, Raj Srinath, Raagini Music : M.S. Maruthi Label : Ashwini audio
English Translation 2 Setting up a large shop on the earth, Our Mahadãvasetti, the merchant, sits. He speaks at once if your mind is one; He doesn't at all if your mind is in two. He does not lose a single pie, Nor earns, too, even half a pie... Behold, O Mother, how wise he is, Our Lord Kūḍala Saṅgama ! Translated by: L M A Menezes, S M Angadi
Hindi Translation धरती पर एक बडी दुकान खोल, हमारे व्यापारी महादेव सेठ बैठे हैं मन एक हो, तो झट बोलते हैं, मन दो हो तो नहीं बोलते। वे न एक पैसे का नष्ट उठाते न आधा पैसा कमाते देखो माँ बडे निपुण है, मम कूडलसंगमदेव॥ Translated by: Banakara K Gowdappa
Telugu Translation ధరిత్రియం దొక బిరుదైన యంగడిని వెట్టి బచ్చు కూర్చుండె మహాదేవ సెట్టి, ఒమ్మనంబై న వెంటనే పల్కును: ఇమ్మనంబైన పల్కడు కాసు నోడడు: ు అరకాసు గెల్వడు! జాణ చూడమ్మ! మా కూడల సంగమ దేవుడు. Translated by: Dr. Badala Ramaiah
Tamil Translation அவனியிலே ஒரு பெருங் கடையினையிட்டு வணிகனாயமர்ந்தான் நம் மகாதேவன் செட்டி ஒரு மனமெனின் உடனே பகர்வான் இருமனமெனின் பகரான் காணிதோலா னரைக்காணி வெல்லான் திறவோன் காணாயம்மா, நம் கூடல சங்கம தேவன். Translated by: Smt. Kalyani Venkataraman, Chennai
Marathi Translation धरतीवर एक मोठे दुकान थाटले. व्यापार मांडून बसले आमचे महादेवशेट्टी. मनी एक भाव येता सत्त्वर बोले. दुजा भाव मनी येता अबोल होतो. एका दमडीचा तोटाही सहन करीत नाही. अर्ध्या दमडीचा नफाही घेत नाही. असा आहे शहाणा आमचा कूडलसंगमदेव Translated by Shalini Sreeshaila Doddamani
Urdu Translation جہاں میں حق وصداقت کوبیچنے کے لیے سجی سجائی سی موزوں دوکان کھولے ہوئے زمیں پہ آکے مہادیو شیٹی بیٹھے ہیں ملےجوان کوکوئی ایک ہمنوا گاہک بہ التفاتِ خصوصی وہ بات کرتے ہیں مگرجولوگ کم وبیش میں اُلجھ جائیں توپھر وہ کچھ نہ کہیں گے ، نہ بات طے ہوگی کبھی وہ تول میں کوتاہیاں نہیں کرتے نہ ان کوسود و زیاں کا خیال رہتا ہے بڑے ہی زیرک ودانا ہیں کوڈلا سنگم Translated by: Hameed Almas
ಶಬ್ದಾರ್ಥಗಳು ಅದ್ದಗಾಣಿ = ಕಾಣೆಯ ಅರ್ಧ; ಕಾಣಿ = ಒಂದು(ಅಲ್ಪ ಬೆಲೆಯ) ನಾಣ್ಯ; ಧರಣಿ = ಭೂಮಿ; ಹರದ = ವರ್ತಕ ವ್ಯಾಪಾರಿ;
ಕನ್ನಡ ವ್ಯಾಖ್ಯಾನ ಸರ್ವಶ್ರೇಷ್ಠ ನ್ಯಾಯದಾನಿ ಇಲ್ಲಿ ಬಸವಣ್ಣನವರು ನಾವು ನಮ್ಮ ಭಕ್ತಿಗೆ ತಕ್ಕ ಫಲವನ್ನು ಪಡೆಯುತ್ತೇವೆಂಬುದನ್ನು ಒಂದು ಸುಂದರ ಚಿತ್ರಣದ ಮೂಲಕ ತೋರಿಸಿದ್ದಾರೆ. ಈ ವಿಸ್ತಾರವಾದ ಪ್ರಪಂಚವೇ ಒಂದು ದೊಡ್ಡ ಅಂಗಡಿ. ಇಲ್ಲಿರುವ ಭೋಗ ಭಾಗ್ಯಗಳೇ ಆ ಅಂಗಡಿಯಲ್ಲಿರುವ ಸರಕು ಸಾಮಾನುಗಳು. ದೇವರೇ ಆ ಅಂಗಡಿಯಲ್ಲಿ ವ್ಯಾಪಾರ ಮಾಡುವ ಶೆಟ್ಟಿ. ನಾವೆಲ್ಲಾ ಆ ಅಂಗಡಿಗೆ ಬರುವ ಗಿರಾಕಿಗಳು. ಹಣ ಗಳಿಸುವುದನ್ನೇ ಪ್ರಧಾನವಾಗಿಟ್ಟುಕೊಂಡು ಬಂದ ಗಿರಾಕಿಗಳನ್ನೆಲ್ಲಾ ಮಾತನಾಡಿಸುವವನಲ್ಲ ಈ ಮಹಾದೇವಶೆಟ್ಟಿ. ಬಹು ಗಂಭೀರ ಸ್ವಭಾವ ಅವನದು. ಒಮ್ಮನಸ್ಸಿನಿಂದ ಹೋದರೇನೇ ಈ ಮಹಾದೇವ ಶೆಟ್ಟಿ ಮಾತನಾಡುವುದು; ಇಲ್ಲದಿದ್ದರೆ ಮಾತೇ ಆಡುವುದಿಲ್ಲ. ತೂಕ ಮಾಡುವುದರಲ್ಲಂತೂ ತುಂಬಾ ಜಾಣ. ಒಂದು ಕಾಣಿ ಕಡಿಮೆ ಮಾಡುವುದಾಗಲೀ ಅಥವಾ ಅರ್ಧ ಕಾಣಿ ಜಾಸ್ತಿ ಕೊಡುವುದಾಗಲೀ ಇಲ್ಲ. ಅವನು ಕೊಡುವ ಭಕ್ತಿಯೆಂಬ ನಾಣ್ಯವನ್ನು, ಭಕ್ತಿ ಯಾವ ಮಟ್ಟದ್ದೋ ಅವನು ಕೊಡುವ ಫಲವೂ ಅದೇ ಮಟ್ಟದ್ದೇ. ಇದನ್ನರಿಯದ ಮೂಢ ಜನರು ನಾಲ್ಕಾಣೆಯ ಹಣ್ಣು ಹಂಪಲಿನ ಭಕ್ತಿಯನ್ನು ಮುಂದಿಟ್ಟು ಮೇರೆ ಮೀರಿದ ಫಲವನ್ನು ಬಯಸಿದರೆ ಇಷ್ಟೊಂದು ಪರಿಣಿತನಾದ ಮಹಾದೇವಶೆಟ್ಟಿಯು ಅವರಿಗೆ ಅಷ್ಟೊಂದು ಫಲವನ್ನು ಕೊಡಲು ಅವನೇನು ದಡ್ಡನೇ? ನಾಲ್ಕಾಣೆಯ ಭಕ್ತಿಗೆ ಅವನು ನೀಡುವುದು ನಾಲ್ಕಾಣೆ ಬೆಲೆಯ ಫಲವನ್ನೇ. ನಾಲ್ಕಾಣೆಗಿಂತ ಕಮ್ಮಿ ಫಲವನ್ನೂ ನೀಡ. ಅದಕ್ಕಿಂತ ಅಧಿಕ ಫಲವನ್ನೂ ಕೊಡ. ‘ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ'. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.