•  
  •  
  •  
  •  
Index   ವಚನ - 116    Search  
 
ಭಕ್ತನ ಜ್ಞಾನಿಸ್ಥಲ - ನಂಬಿಕೆ
ನಂಬರು ನೆಚ್ಚರು, ಬರಿದೆ ಕರೆವರು; ನಂಬಲರಿಯರೀ ಲೋಕದ ಮನುಜರು! ನಂಬಿ ಕರೆದೊಡೆ ʼಓʼ ಎನ್ನನೆ ಶಿವನು? ನಂಬದೆ ನೆಚ್ಚದೆ ಬರಿದೆ ಕರೆವರ ಕೊಂಬ ಮೆಟ್ಟಿ ಕೂಗೆಂದ ನಮ್ಮ ಕೂಡಲಸಂಗಮದೇವ.
Transliteration Nambaru neccaru, baride karevaru; nambalariyarī lōkada manujaru! Nambi karedoḍe ʼōʼ ennane śivanu? Nambade neccade baride karevara komba meṭṭi kūgenda nam'ma kūḍalasaṅgamadēva.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Provided to YouTube by [Simca] Sangeeth Sagar Nambaru Nechcharu · Ambayya Nuli Vachana Vaani ℗ 1998 Sagar Music Released on: 1998-06-23
English Translation 2 They neither believe nor love, Yet invoke him in vain- These men of the world Who know no faith ! If they invoke him with faith Does he not respond ? So says our Lord Kūḍala Saṅgama To those who call on Him in vain, Without faith or love : "Blow, blast you horn Till your lungs burst !" Translated by: L M A Menezes, S M Angadi
Hindi Translation न विश्वास रखते, न श्रद्धा, यों ही बुलाते हैं, विश्वास करना नहीं जानते लोक मानव । विश्वास से बुलाने पर शिव उत्तर नहीं देता? बिना श्रद्धाविश्वास यों ही बुलानेवालों से कूडलसंगमदेव कहते हैं; ‘शक्ती भर श्रृंग बजाओ’॥ Translated by: Banakara K Gowdappa
Telugu Translation నమ్మరు మెచ్చ రూరక బిలుతురు; నమ్ము చెరుగరీ లోకపు మనుజులు; నంబి పిలిచిన ఓ యనడే శివుడు? నమ్మక మెచ్చక పిలుచువారల కొమ్మెత్తి కూయుడనె కూడల సంగమ దేవుడు. Translated by: Dr. Badala Ramaiah
Tamil Translation நயவார், விரும்பார் வரிதேயழைப்பர், நயத்தலறியர் உலகமாந்தர், நம்பித்துதிப்பின் “ஓ” என்னானோ சிவன் நயவாது, விரும்பாது வரிதேயழைப்போர்தம் செருக்கினை மிதித்துக் கலுழவைப்பான் கூடல சங்கம தேவன். Translated by: Smt. Kalyani Venkataraman, Chennai
Marathi Translation नच तुला आवड, न करी विश्वास हाक मारी शिवास, वरपांगी भुलोकी मानव, विश्वासाचे लेणे कधी जाणून घेणं, नाही नाही विश्वासाचि हाक ऐकू जाई सत्वर देई शिवा होकार, तुजलागी कूडलसंगमदेवा ! जेथे नाही विश्वास तेथे शिवा खास, मौन राही अर्थ - परमेश्वरावर विश्वास करून, श्रद्धा ठेऊन, अंतर मनातून हाक मारल्यास तो तुमच्या हाकेला साद दिल्याशिवाय राहणार नाही मनी नाही भाव, देवा मला पाव हे परमेश्वरास मान्य नाही. कसलाही उद्देश वा स्वार्थ ठेऊन हाक मारू नये. त्याला धनाची, ऐश्वर्याची जपतपाची, देह दंडाची, उपास- तापासाची गरज नाही. तो फक्त तुमच्या भक्तीचा भोक्ता आहे. परमेश्वरावर विश्वास ठेवा, श्रद्धा ठेवा, प्रेम करा. असे इहलोकी मानवास कितीही आवर्जून कळवळीने सांगितले. तरी यावर विश्वास ठेवत नाही. म्हणून अशा प्रवृत्ती बद्दल आश्चर्य वाटते आहे. महात्मा बसवेश्वरांनी परमेश्वरावर विश्वास करण्याबद्दल वरील वचनात आपली मनोव्यथा व्यक्त केली आहे; Translated by Rajendra Jirobe, Published by V B Patil, Hirabaug, Chembur, Mumbai, 1983 विश्वास नाही, प्रेम नाही. व्यर्थच बोलवितात ! विश्वास ठेवायचा या मानवाला माहित नाही! विश्वासाने बोलविले तर ओ म्हणणार नाही का शिवा? पाखंडी ढोंगी माणसांना `ओ` म्हणणार नाही कूडलसंगमदेव. Translated by Shalini Sreeshaila Doddamani
Urdu Translation یقیں کا نُور، نہ ایمان کی حرارت ہے نہ اعتقاد کی شمعیں دلوں میں روشن ہیں وہ جانتے نہیں کم کم بھی قیمت سجدہ مجھے بتائے کوئی یہ بھی کیاعبادت ہے بڑےخلوص سے بھرپوراعتماد کے ساتھ جوہم پکاریں سدا شیوکوتویہ جانو کبھی نہ لو ٹ کے آئے گی آسماں سے صَدا وہ لوگ جن کی عبادت میں کچھ خلوص نہ ہو وہ لوگ جن کےسروں پرہوفخرو نازکےسینگ کچل دوان کو،یہ کہتےہیں کوڈلا سنگم Translated by: Hameed Almas
ಕನ್ನಡ ವ್ಯಾಖ್ಯಾನ ಆಪತ್ತು ಬಂದಾಗ ರಕ್ಷಿಸೆಂದು ಯಾರನ್ನಾದರೂ ಕೂಗಿಕೊಂಡರೆ-ಬಂದು ರಕ್ಷಿಸುವುದು ಅವರ ಹೊಣೆಯಾಗುತ್ತದೆ. ಅಂದ ಮೇಲೆ ಸರ್ವಶಕ್ತನಾದ ದೇವರಿಗೇ ಸಂತ್ರಸ್ತಜೀವನು ಮೊರೆಯಿಟ್ಟರೆ ಆ ದೇವರು ಆ ವಿಪತ್ಪರಿಸ್ಥಿತಿಯನ್ನೇ ಬದಲಿಸಿ ಸಹಾಯವನ್ನೂ ಒದಗಿಸಿ-ಆ ಸಂತ್ರಸ್ತಭಕ್ತನು ಆ ಅವಗಡದಿಂದ ಪಾರಾದುದು ಕೇವಲ ಆಕಸ್ಮಿಕವೆಂಬಂತೆನಿಸಿ ತಾನು (ದೇವರು) ಮಾತ್ರ ಅಪ್ರಕಟವಾಗಿಯೇ ಉಳಿಯುವನು. ದೈವಸಹಾಯದ ಪರಿಯೇ ಈ ಪರಿ : ಅದು ಎಷ್ಟು ಆಕಸ್ಮಿಕವೋ ಅಷ್ಟೂ ವ್ಯವಸ್ಥಿತ. ಈ ಬಗೆಯ ದೈವಸಹಾಯದಿಂದ ಮಾನವನು ದೈನ್ಯಕ್ಕೆ ಸಲ್ಲದೆ ಆತ್ಮಶಕ್ತಿಯನ್ನೇ ವರ್ಧಿಸಿಕೊಳ್ಳುವನು. ಇದೆಲ್ಲಾ ಭಕ್ತನು ದೈವದಲ್ಲಿಟ್ಟ ಅನನ್ಯವಿಶ್ವಾಸದ ಫಲವೇ ಆಗಿದೆ. ಹೀಗಲ್ಲದೆ ಭಕ್ತನು ಒಮ್ಮೆ ದೇವನ ಕಡೆ. ಇನ್ನೊಮ್ಮೆ ದೆವ್ವದ ಕಡೆ ಕೈ ಚಾಚಿದರೆ-ಅಂಥ ಭಕ್ತನು ದೇವರಿಂದ ಪರಿತ್ಯಕ್ತನಾಗಿ ದೆವ್ವದ ಹಿಡಿತಕ್ಕೆ ಸಿಕ್ಕಿ ಅನಾಥಭಾವದಲ್ಲಿ ತೊಳಲುವನು. ಆಗ ಅವನು ಎಷ್ಟೇ ಕೂಗಿ ಕರೆದರೂ ದೇವರು ಮನಕರಗನು. ಮೇಲಾಗಿ ಅವನ ಚಂಚಲ ವಿಶ್ವಾಸಕ್ಕೆ ಹೇಸಿ-ಅವನ ಎತ್ತರಿಸಿದ ಸ್ವರಕ್ಕೆ ಬೇಸತ್ತು-ನೀನು ಮರದ ಮೇಲೆ ನಿಂತು ಕೂಗಿಕೋ-ನನಗೆ ಕೇಳಿಸುವುದಿಲ್ಲವೆಂದು ಗೇಲಿಮಾಡುವನು. ಜನ ಭಕ್ತಿಯಿಲ್ಲದೆ ಗತಾನುಗತಿಕವಾಗಿ ಶಿವಮಂತ್ರೋಚ್ಚಾರಣೆ ಮಾಡುವರು. ತಾರಸ್ವರದಲ್ಲಿ ಕೂಗಿ ಪ್ರಾರ್ಥನೆ ಮಾಡುವರು-ಇದೊಂದೂ ದೇವರನ್ನು ಮುಟ್ಟುವುದಿಲ್ಲ-ಮುಟ್ಟಬೇಕಾದರೆ ನಂಬಿಯಣ್ಣನೆಂಬ ನಾಯನಾರನಂತೆ ಶಿವನಿಗೆ ಅರ್ಪಣಮನೋಭಾವದಿಂದ ಪ್ರಾರ್ಥಿಸಬೇಕೆಂಬುದೇ ಬಸವಣ್ಣನವರ ಅಭಿಪ್ರಾಯ. ರಾಜನ ಮಗನಲ್ಲದಿದ್ದರೂ ರಾಜಕುಮಾರನೆನಿಸಿದ್ದ ನಂಬಿಯಣ್ಣನು ಮದುವೆಮಂಟಪದ ಹಸೆಯ ಮಣೆಯ ಮೇಲಿದ್ದಾಗ ಶಿವನು ಒಬ್ಬ ವೃದ್ಧಭಕ್ತನ ವೇಷದಲ್ಲಿ ಅಲ್ಲಿಗೆ ಹೋಗಿ-ಅವನನ್ನು ತನ್ನ ಗುಲಾಮನೆಂದರೆ-ಆ ನಂಬಿಯಣ್ಣನು ಆ ವೃದ್ಧನನ್ನು ಹುಚ್ಚನೆಂದು ಹೀಯಾಳಿಸುತ್ತಾನೆ. ಮುಂದೆ ಆ ವೃದ್ಧನು ಶಿವನೆಂದು ತಿಳಿದಾಗ-ತಾನವನ ಗುಲಾಮನೆಂಬುದು ಗೌರವಾಸ್ಪದವೆನ್ನುತ್ತ-ಹಿಂದಣ ತನ್ನ ಸೊಕ್ಕಿಗಾಗಿ ಪರಿತಪಿಸಿ-ಶಿವನಲ್ಲಿ ಕ್ಷಮೆಯನ್ನು ಯಾಚಿಸುತ್ತಾನೆ. ಶಿವನಾದರೋ ತನ್ನನ್ನು ಮತ್ತೊಮ್ಮೆ ಹುಚ್ಚನೆಂದು ಕರೆಯೆನ್ನುತ್ತ ಮುದ್ದಿನಿಂದ ನಿಜರೂಪದಲ್ಲಿ ಪ್ರಸನ್ನನಾಗಿ ಆ ನಂಬಿಯಣ್ಣನಿಗೆ ಇಹದಲ್ಲಿ ಭೋಗಭಾಗ್ಯವನ್ನೂ ಕೊಟ್ಟು ಪರದಲ್ಲಿ ಕೈವಲ್ಯ ಪಟ್ಟವನ್ನೂ ಕಟ್ಟುತ್ತಾನೆ. ಹೀಗೆ ನಂಬಿ(ಕೆಯಿಂದ) ಕೂಗಿದ ನಂಬಿಗೆ ಶಿವನು ತನ್ನೆದೆಯಲ್ಲಿ ಇಂಬುಕೊಟ್ಟುದನ್ನು ಬಸವಣ್ಣನವರು ತಮ್ಮ ಈ ವಚನದಲ್ಲಿ “ನಂಬಿ” ಎಂಬ ಪದದ ಸ್ವರಶ್ಲೇಷೆಯಿಂದ ಧ್ವನಿಸಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು