•  
  •  
  •  
  •  
Index   ವಚನ - 117    Search  
 
ಭಕ್ತನ ಜ್ಞಾನಿಸ್ಥಲ - ಆತ್ಮಶುದ್ಧಿ
ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೆ, ಅಯ್ಯಾ? ಅಘೋರ ತಪವ ಮಾಡಿದೊಡೇನು? ಅಂತರಂಗ-ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯಾ ಕೂಡಲಸಂಗಮದೇವ?
Transliteration Huttava baḍidoḍe hāvu sāyaballude, ayyā? Aghōra tapava māḍidoḍēnu? Antaraṅga-ātmaśud'dhiyilladavaranentu nambuvanayyā kūḍalasaṅgamadēva?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If you strike the anthill Will the snake die ? What if you perform The severest penance, Will Lord Kūḍala Saṅgama Have trust in those Whose heart is not pure ? Translated by: L M A Menezes, S M Angadi
Hindi Translation वल्मीक को पीटने से साँप मरता है? घोर तप करने से क्या अंतरंग आत्मशुद्धि हीन लोगों पर कैसे विश्वास करते हैं कूडलसंगमदेव ॥ Translated by: Banakara K Gowdappa
Telugu Translation పుట్టను కొట్టిన పాముచచ్చునే అయ్యా! ఘోరతపము చేసిననేమి? అంతరంగమాత్మశుద్ధి లేనివారల నెట్లు నమ్మెదనయ్యా; కూడల సంగమ దేవా! Translated by: Dr. Badala Ramaiah
Tamil Translation புற்றினையடிப்பின் பாம்பு மடியுமோவையனே? கடுந்தவத்தைச் செய்யிலென்? அக மான்மத் தூய்மை யற்றோரை எங்ஙனமேற்பான் கூடல சங்கம தேவன்? Translated by: Smt. Kalyani Venkataraman, Chennai
Marathi Translation वारुळा मारिता, मरेल का साप ? अघोर ते तप, जाणा तैसे आत्मशुद्धीसाठी कोटी, नेमाचार देहदंड निराहार, व्यर्थ जाणा कूडलसंगमदेवा ! आत्मशुद्धीविण कैसा होई जाण, पावन तो अर्थ - वारूळाला मारल्याने त्यात दडलेला साप मरेल का? याच अर्थाने अंतरंगात दडलेली व संधी मिळताच फणा बाहेर काढणारी मनाची विकृत भावना, विषय-वासना मारण्यासाठी अघोर व कठिण तपश्चर्या, देहदंड, निराहार, एकादशी सारख्या काठीने शरीराला (वारुळाला) मारून काय उपयोग? अशाने आत्मशुद्धी होत नाही व अवगुणही नष्ट होत नाहीत. संधीसाधू, ढोंगी व देवाच्या नावावर देहाला कष्ट देणाऱ्यांना येथे थारा नाही. आत्मशुध्दी झाल्याखेरीज माझा कूडलसंगमदेव (परमेश्वर ) प्रसन्न होणार नाही. Translated by Rajendra Jirobe, Published by V B Patil, Hirabaug, Chembur, Mumbai, 1983 वारुळाला मारले तर साप मरेल ? अघोर तप करुन काय उपयोग ? अंतरंग-आत्मशुध्दीविना असलेल्यांना कूडलसंगमदेव प्रसन्न होईल? Translated by Shalini Sreeshaila Doddamani
Urdu Translation بانْبی کوپیٹنےسےکہیںمرسکےگا سانپ بےفائدہ تپس ہے،جوہوآتما میں روگ رکھیوبچائےظاہر و باطن کومَیل سے ہرایک شےسےکوڈلا سنگا ہیں باخبر Translated by: Hameed Almas
ಶಬ್ದಾರ್ಥಗಳು ಅಂತರಂಗ = ಮನಸ್ಸು;
ಕನ್ನಡ ವ್ಯಾಖ್ಯಾನ ಅಂತರಂಗ ಶುದ್ಧಿ ಬೇಕು ಅಂತರಂಗ ಶುದ್ಧಿಗೆ ಬಾಹ್ಯ ಶುದ್ಧಿಯು ಒಂದು ಸಾಧನ ಮಾತ್ರ. ಇಂತಿರುವಾಗ ಬಾಹ್ಯ ಶುದ್ಧಿಯ ಕಡೆಗೇ ಮನಹರಿಸಿ ಅಂತರಂಗ ಶುದ್ಧಿಯನ್ನು ಕಡೆಗಣಿಸಿದರೆ 'ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾ'ಗುತ್ತದೆ. ಮಠವು ಧರ್ಮ ಮತ್ತು ಪಾವಿತ್ರ್ಯದ ಆಗರವೆಂದು ತಿಳಿದು ಮಠದೊಳಗಿರುವ ಬೆಕ್ಕೂ ಸಂನ್ಯಾಸ ತೆಗೆದುಕೊಂಡಿದೆಯೆಂದರೆ ಅದರ ಸಂನ್ಯಾಸ ಇಲಿಯ ಕಾಣುವತನಕ. ಇಲಿ ಕಂಡಾಕ್ಷಣ ಅದರ ಮೇಲೆ ಪುಟನೆಗೆದೇ ಬಿಡುತ್ತದೆ. ಇಲ್ಲಿ ಬೆಕ್ಕಿನ ಬಾಹ್ಯ ಪರಿಸರವು ಪರಿಶುದ್ಧವಾಗಿದ್ದರೂ, ಬೆಕ್ಕಿನ ಅಂತರಂಗ ಶುದ್ಧಿಯಿಲ್ಲ. ಇದರಿಂದ ಬಾಹ್ಯ ಶುದ್ಧಿಯು ಬೇಡವೆಂದೇನೂ ಅಲ್ಲ. ಆದರೆ ಅದರಿಂದ ಉಂಟಾಗಬೇಕಾದ ಶುದ್ಧಿ ಮತ್ತೊಂದಿದೆ. ಅದೇ ಅಂತರಂಗ ಶುದ್ಧಿ. ಹುತ್ತದಲ್ಲಿ ಹಾವಿರುವಾಗ ಹುತ್ತವನ್ನು ಹೊಡೆಯದೆ ಹಾವನ್ನು ಹೊಡೆಯಲು ಸಾಧ್ಯವಿಲ್ಲ. ಆದರೆ ನಮ್ಮ ಗುರಿ ಹಾವನ್ನು ಕೊಲ್ಲುವುದೇ ಹೊರತು ಹುತ್ತವನ್ನು ಬಡಿಯುತ್ತಲೇ ಇರುವುದಲ್ಲ. ಅಂತರಂಗ ಶುದ್ಧಿಯಿಲ್ಲದ ಬಾಹ್ಯ ಶುದ್ಧಿಯು ಹಾವ ಕೊಲ್ಲದೆ ಹುತ್ತವಬಡಿದಂತೆ ವ್ಯರ್ಥ. ಅಂತರಂಗ ಶುದ್ಧಿಯನ್ನು ಹೊಂದದೆ ಮಾಡುವ ಘೋರ ತಪಸ್ಸು ಅರ್ಥವಿಲ್ಲದ್ದು, ಅಂತೆಯೇ ಪ್ರಯೋಜನವಿಲ್ಲದ್ದು. ಅದು ವೃಥಾ ದೇಹ ದಂಡನೆಯೆನಿಸಿಕೊಳ್ಳುವುದು. ಅಂಥವರನ್ನು ದೇವರು ಮೆಚ್ಚುವುದಿಲ್ಲ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.