•  
  •  
  •  
  •  
Index   ವಚನ - 120    Search  
 
ಭಕ್ತನ ಜ್ಞಾನಿಸ್ಥಲ - ದುರ್ಜನ
ಹಸಿದು ಎಕ್ಕೆಯ ಕಾಯ ಮೆಲಬಹುದೆ? ನೀರಡಿಸಿ ವಿಷವನೀಂಟಬಹುದೆ? ಸುಣ್ಣದ, ತುಯ್ಯಲ ಬಣ್ಣವೊಂದೆ ಎಂದರೆ ನಂಟುತನಕ್ಕೆ ಉಣ್ಣಬಹುದೆ? ಲಿಂಗಸಾರಾಯ ಸಜ್ಜನರಲ್ಲದವರ ಕೂಡಲಸಂಗಮದೇವರೆಂತೊಲಿವನು?
Transliteration Hasidu ekkeya kāya melabahude? Nīraḍisi viṣavanīṇṭabahude? Suṇṇada, tuyyala baṇṇavonde endare naṇṭutanakke uṇṇabahude? Liṅgasārāya sajjanaralladavara kūḍalasaṅgamadēvarentolivanu?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 When hungry, will you suck A poisonous nut ? When thirsty, will you sip A poisonous drink ? Because quicklime has The same colour as rice, Are you mad to eat Because they look alike ? And could Lord Kūḍala Saṅgama Love the unrighteous ones Who never tasted of The quintessence of Liṅga ? Translated by: L M A Menezes, S M Angadi
Hindi Translation क्षुधित होकर अर्क फल खा सकते हैं? तृषित होकर विष पी सकते हैं? चूने और क्षीर का वर्ण एक है तो साम्य वश खा सकते हैं? लिंगतत्व से अनभिज्ञ असज्जन लोगों पर कूडलसंगमदेव की कृपा कैसे होगी? Translated by: Banakara K Gowdappa
Telugu Translation ఆకలియని జిల్లేడుకాయ తినవచ్చునే? నోరెండెనని విషము త్రాగవచ్చునే! సున్నము పరమాన్నము లొక టే వన్నెయని చుట్టరికమునకై జుట్టదగునే వజ్ఞానమున సజ్జనులు గానివారల కూడల సంగమదేవుడెట్లు వలచునయ్యా? Translated by: Dr. Badala Ramaiah
Tamil Translation பசித்தால் எருக்கங்காயை மெல்லலாமோ? வேட்கையென நஞ்சினை அருந்தலாமோ? சுண்ணமும், பாயசமும் நிறம் ஒன்றேயெனின் தொடர்புடைத்தென உண்ணலாமோ? நிலைத்த மெய்ப்பொருளை உணரா மாந்தருக்குக் கூடல சங்கம தேவன் எங்ஙனம் அருள்வான்? Translated by: Smt. Kalyani Venkataraman, Chennai
Marathi Translation भूक शमविण्या, कन्हेरी चघळेल कोण विष पिईल ? तहानेला दूध नाही म्हणुनि, पाण्यात चुना घालुनि वाढती का कोणी ? पाहुण्याला ना लिंगपथ जाण, ना तो सज्जन नच तोंड पाहीन, करंटाला कूडलसंगमदेवा ! कोणी नाही म्हणून भक्त कैसा म्हणेन, दुर्जनाला अर्थ - भूक लागली आहे म्हणून का कोणी कन्हेरीची फळे चघळतील काय ? तहान लागली आहे म्हणून व विषाचा पेला जवळ आहे म्हणून काय विष कोणी पितील? प्रेमाने नातेवाईकाना जेवण्यास बोलविले आहे व जेवण्यास बसले असता दूध वाढताना कमी पडले म्हणून काय कोणी दूधासारखे दिसणारे चुन्याचे पाणी ताटात वाढतील का ? त्याचप्रमाणे जो सज्जन नाही किंवा संधी दिल्यास सज्जन होण्याची ज्याची लायकी नाही असा व्यक्ती नको आहे. जो लिंगपथ जाणत नाही अर्थात गुरु-लिंग-जंगमाची सेवा व दासोहं याची ज्याला नाही तो मला करंटा वाटतो. मला या जगात एकटाच राहण्याची वेळ आल्यास राहीन पण दुर्जन व लिंगपथ न जाणणाऱ्याचे तोंड सुद्धा पाहु नये असे वाटते. Translated by Rajendra Jirobe, Published by V B Patil, Hirabaug, Chembur, Mumbai, 1983 भूक मिटविण्यासाठी रुईचे फळ खाता येईल? तहान मिटविण्यासाठी विष पिता येईल? चुण्याचे पाणी दूध खीरीसारखे दिसते म्हणून बांधवांच्या घरी खाता येईल ? कूडलसंगमदेव, लिंगतत्त्व न जाणणाऱ्या दुर्जनांना प्रसन्न होईल ? Translated by Shalini Sreeshaila Doddamani
ಶಬ್ದಾರ್ಥಗಳು ತುಯ್ಯಲು = ಪಾಯಸ; ಸಾರಾಂಕು = ;
ಕನ್ನಡ ವ್ಯಾಖ್ಯಾನ ಮಾಡಬೇಕಾದ್ದು ಸಜ್ಜನ ಶಿವಭಕ್ತರ ಸ್ನೇಹವೇ ಹೊರತು ದುರ್ಜನರ ಸ್ನೇಹವಲ್ಲವೇ ಅಲ್ಲವೆನ್ನುತ್ತ ಬಸವಣ್ಣನವರು ಸಜ್ಜನಶಿವಭಕ್ತರಂತೆಯೇ ಕಾಣುವ ಛದ್ಮವೇಷಧಾರಿಗಳ ಬಗ್ಗೆಯೂ ಎಚ್ಚರಿಕೆ ನೀಡುತ್ತಿರುವರು. ಇವನು ಸಜ್ಜನ ಶಿವಭಕ್ತ, ಇವನು ದುರ್ಜನ ಶಿವಭಕ್ತ ಎಂದು ಗುರುತಿಸುವುದು ಹೇಗೆ ? ಇಬ್ಬರೂ ವಿಭೂತಿ ರುದ್ರಾಕ್ಷಿ ಧರಿಸಿರುವರು. ಇಬ್ಬರೂ ಲಿಂಗವನ್ನು ಧರಿಸಿರುವರು ! ಯಾವನಾಗಲಿ ಲಿಂಗಲಾಂಛನಧಾರಿಯಾದ ಮಾತ್ರಕ್ಕೆ ಸಜ್ಜನ ಶಿವಭಕ್ತನಾಗುವುದಿಲ್ಲ. ಅವನಲ್ಲಿ “ಲಿಂಗಸಾರಾಯಸಜ್ಜನ”ವಿದೆಯೇ ಎಂಬುದನ್ನು ಗಮನಿಸಬೇಕು. ದುರ್ಜನನೂ ವಿಭೂತಿ ಮುಂತಾದ ಬಹಿರ್ಲಾಂಛನಗಳಿಂದ ಶಿವಭಕ್ತನಂತೆ ತೊರಬಹುದಾದರೂ ಗುಣಾತ್ಮಕವಾಗಿ-ಅವನಿಗೂ ಸಾಚಾ ಶಿವಭಕ್ತನಿಗೂ ಎಕ್ಕೆಕಾಯಿ-ಮಾವಿನಕಾಯಿಗಳಿಗಿರುವ ಅಂತರವಿದೆ. ವಿಷಕ್ಕೆ ಮತ್ತು ನೀರಿಗೆ ಇರುವ ಅಂತರವಿದೆ ಮತ್ತು ಸುಣ್ಣದ ನೀರಿಗೆ ಮತ್ತು ಹಾಲುಕೀರಿಗೆ ಇರುವ ಅಂತರವಿದೆ. ಮಾವಿನ ಕಾಯೆಂದು ತಿಳಿದು ಎಕ್ಕೆಯ ಕಾಯನ್ನೂ, ನೀರೆಂದು ತಿಳಿದು ವಿಷವನ್ನೂ, ಹಾಲುಕೀರೆಂದು ತಿಳಿದು ಸುಣ್ಣದ ನೀರನ್ನೂ ಸೇವಿಸಿದರೇನಾಗುವುದೆಂಬುದು ತಿಳಿದ ವಿಷಯವೇ ಆಗಿದೆ. ಶಿವಭಕ್ತವೇ಼ಷಧಾರೀ ದುರ್ಜನನನ್ನು ನಮ್ಮವನೆಂದು ಮನ್ನಿಸಲಾಗದು-ನಂಟರ ಮನೆಯಲ್ಲಿ ಸುಣ್ಣದ ನೀರನ್ನು ಹಾಲುಕೀರೆಂದು ಬಡಿಸಿದ ಮಾತ್ರಕ್ಕೆ-ಬಣ್ಣ ಒಂದೇ ಎನ್ನುತ್ತ-ವಿವೇಕವಂತರಾರೂ ಉಣ್ಣುವುದಿಲ್ಲ. ವಿ: ಲಿಂಗಸಾರಾಯವೆಂದರೆ ಲಿಂಗತತ್ತ್ವ-ಆ ತತ್ತ್ವಕ್ಕಾಗಿ ತನ್ನ ಪ್ರಾಣವನ್ನಾದರೂ ತೆತ್ತುಕೊಳ್ಳಬಲ್ಲವನೇ ಲಿಂಗಸಾರಾಯಸಜ್ಜನ. ಸಜ್ಜನವೆಂದರೆ ಪತಿವ್ರತೆಯೆಂಬ ಅರ್ಥವೂ ಇರುವುದಾಗಿ-ಈ ಸಂದರ್ಭದಲ್ಲಿ “ಲಿಂಗಪತಿ ಶರಣಸತಿ” ಎಂಬ ಸೂತ್ರವನ್ನೂ ಅನ್ವಯಿಸಿ ಪರಿಭಾವಿಸಬಹುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು