•  
  •  
  •  
  •  
Index   ವಚನ - 124    Search  
 
ಭಕ್ತನ ಜ್ಞಾನಿಸ್ಥಲ - ಅವಗುಣಿ
ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ.
Transliteration Lōkada ḍoṅka nīvēke tidduviri? Nim'ma nim'ma tanuva santaisikoḷḷi; nim'ma nim'ma manava santaisikoḷḷi. Neremaneya duḥkhakke aḷuvavara mecca kūḍalasaṅgamadēva.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: BHAKTHI MUSIC, BASAVANNA VACHANAGALU, Singer : Ananthakumar and Suma, Music : Music : Ananthakumar
English Translation Why try to correct The crooked ways of others? First, correct yourself— Your own deceitful thoughts and actions. Our Lord Kūḍala Saṅgama is not pleased With those who shed crocodile tears For their neighbor’s grief!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 Why should you try to mend The failings of the world? Assuage your bodies first, Each one of you! Assuage your minds, each one! Lord Kūḍala Saṅgama Does not approve Those who bemoan The neighbour's grief. Translated by: L M A Menezes, S M Angadi
Russian Translation Зачем исправлять полный омрачений мир? О теле своем заботься, Душу свою береги. Стенаний о бедах соседей не оценит Бог Кудаласангама. Translated by: Prof Harishankar, Mysore and Mrs. Galina Kopeliovich, Russia
Hindi Translation लोक-वक्रता तुम क्यों सुधारते हो? अपने अपने तन शांत कर लो अपने अपने मन शांत कर लो पडोसियों के दुःख से रोनेवालों पर कूडलसंगमदेव प्रसन्न नहीं होते ॥ Translated by: Banakara K Gowdappa
Telugu Translation చిలుక చదువ ఫలమేమి? పిల్లి రాక చెప్పజాలదు, జగమెల్ల చూచు కన్ను తను జంపు కత్తిని కనజాలదు! ఎదిరి గుణము తెలిసితిమందురేగాని తమ గుణము తామే తెలియలేరు కూడల సంగమదేవా! Translated by: Dr. Badala Ramaiah
Tamil Translation உலகத்துக் கோணலை நீரெதற்குத் திருத்துவீர்? தம்தம் உடலைச் செம்மை செய்வீர். தம்தம் உள்ளத்தைச் செம்மை செய்வீர். அயல்வீட்டுத் துன்பத்திற்கு அழுவோரை விரும்பான் கூடல சங்கம தேவன். Translated by: Smt. Kalyani Venkataraman, Chennai
Marathi Translation कासया पाहता, दुजियांचे दोष स्वतः निर्दोष, व्हावे आधी आपलेचि तन, आपलेचि मन सर्वे सुधारून, घ्यावे आधी वक्रता आपुली, मुळीच न पाहता दुजास्तव वाहता, अश्रु व्यर्थ शेजऱ्यासाठी, अश्रु तो वाही नको तुमची घाई, काळजी ते कूडलसंगमदेवा! प्रयत्न न पावे सुधारून घ्यावे, आपणचि अर्थ - लोकांची वक्रता किंवा त्यांच्यातील दोष सुधारण्यापेक्षा प्रथम आपापले तन व आपापले मन सुधारुन घ्यावेत. लोकांचे दोष शोधण्यात वेळ वाया घालवू नये. त्याऐवजी आपल्या शरीरातील व आपल्या मनातील दोष काढून टाकण्यात सदैव प्रयत्नशील राहावे. हेच तुमची सर्वश्रेष्ठ साधना ठरेल. शेजाऱ्यांच्या दुःखात अश्रू ढाळण्यात अर्थ नाही. त्यासाठी माझा कूडलसंगमदेव ( परमेश्वर) समर्थ आहे तो कर्तव्यदक्ष आहे. म्हणून त्यांची काळजी वाहण्याची गरज नाही. Translated by Rajendra Jirobe, Published by V B Patil, Hirabaug, Chembur, Mumbai, 1983 लोकांचे दोष तुम्ही का दुरुस्त करता ? तुमच्या तुमच्या तनला समाधानी करा. तुमच्या तुमच्या मनाला समाधानी करा. कूडलसंगमदेवाला शेजाऱ्यांच्या दुःखाने रडणारे आवडत नाहीत. Translated by Shalini Sreeshaila Doddamani
Urdu Translation خطائے شخص دگرکی گرفت سے پہلے تم اپنےجسم کو،دل کوسنبھال کررکھّو جواپنا دامنِ د ل ہی اگرہوآلودہ کسی پہ اشک بہانےسے فائدہ کیا ہے نہ ہوں گےشاد کبھی اس سےکوڈلا سنگم Translated by: Hameed Almas
ಶಬ್ದಾರ್ಥಗಳು ತನು = ಶರೀರ; ತಿದ್ದು = ಸರಿ ಪಡಿಸು; ಸಂತೈಸು = ಸಮಧಾನ ಪಡಿಸು;
ಕನ್ನಡ ವ್ಯಾಖ್ಯಾನ ಪರೋಪದೇಶಕರು ಪರಿಶುದ್ಧರಾಗಿರಬೇಕು ಪರರಿಗೆ ಉಪದೇಶ ಮಾಡುವವರು ಮೊದಲು ತಾವು ಪರಿಶುದ್ಧರಾಗಿರಬೇಕು. ಇಲ್ಲದಿದ್ದರೆ ಅವರು ಬೇರೆಯವರಿಗೆ ಉಪದೇಶಿಸಲು ಯಾವ ಹಕ್ಕೂ ಇಲ್ಲ. ಆದ್ದರಿಂದಲೇ ಅಣ್ಣನವರು “ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.......” ಎಂದು ಇತರರ ಡೊಂಕನ್ನು (ಲೋಪ ದೋಷಗಳನ್ನು) ತಿದ್ದಲು ಹೊರಡುವ ಮೊದಲು ತಮ್ಮಲ್ಲೇ ಇರುವ ಡೊಂಕನ್ನು ತಿದ್ದಿಕೊಳ್ಳಲು ಕರೆ ನೀಡಿದ್ದಾರೆ. ಇದನ್ನೇ ಕ್ರೈಸ್ತರು ಒಂದೆಡೆ ಹೀಗೆ ಹೇಳುತ್ತಾರೆ. “Why do look at the speak of sawdust in your brother’s eye, with never a thought for the great plank in your own?...... you hypocrite! First take the plank out of your own eye, and then you will see clearly to take the speek out of your brothers” ಅಂದರೆ ನಿನ್ನ ಕಣ್ಣಿನಲ್ಲಿಯೇ ಧೂಳು ಒಂದು ದೊಣ್ಣೆಯಷ್ಟು ಬಿದ್ದಿರುವಾಗ ಪರರ ಕಣ್ಣಿನಲ್ಲಿ ಕಣದಷ್ಟು ಬಿದ್ದಿರುವುದನ್ನು ನೋಡುವೆಯೇಕೆ? ಆದ್ದರಿಂದ ಕಪಟಿಯೇ ಮೊದಲು ನಿನ್ನ ಕಣ್ಣಿನ ಧೂಳನ್ನು ಒರೆಸಿಕೋ, ಆ ನಂತರ ಪರರ ಕಣ್ಣಿನ ಧೂಳನ್ನೊರೆಸಲು ಸರಿಯಾಗಿ ಕಾಣುವುದು ಎಂದರ್ಥ. ಹೀಗೆ ಇನ್ನೊಬ್ಬರನ್ನು ಸುಧಾರಿಸುವುದಕ್ಕೆ ಮೊದಲು ತನ್ನನ್ನೇ ಸುಧಾರಿಸಿಕೊಳ್ಳಬೇಕೆಂದು ಹೇಳುವುದರಲ್ಲಿ ಒಂದು ಔಚಿತ್ಯವಿದೆ. ಅದೇನೆಂದರೆ ಅಂತಹ ಸುಧಾರಣಾ ಕ್ರಮವೇ ಬೇರೆಯವರ ಮನಸ್ಸಿನ ಮೇಲೆ ಪರಿಣಾಮಕಾರಿಯಾಗಲು ಸಾಧ್ಯ. ಉಳಿದವರಿಂದ ಆಗುವ ಪ್ರಯೋಜನ ಕಡಿಮೆ. ಉದಾಹರಣೆಗೆ ಸಿಗರೇಟನ್ನು ಸೇದುವ ಉಪಾಧ್ಯಾಯರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಸಿಗರೇಟನ್ನು ಸೇದಬಾರದೆಂದು ಆದೇಶಿಸಿದೆ, ಸಿಗರೇಟು ಆರೋಗ್ಯಕ್ಕೆ ಹಾನಿಕಾರವೆಂಬ ಅವರ ಅನುಭವ ಎಷ್ಟೇ ನಿಜವಾಗಿದ್ದರೂ ವಿದ್ಯಾರ್ಥಿಗಳು ‘ಓಹೋ! ಇವರಾದರೆ ಸೇದಬಹುದೇನೋ’ ಎಂದು ಗೊಣಗುಟ್ಟಿ ಕದ್ದು ಸೇದುವುದನ್ನು ಮಾತ್ರ ಬಿಡುವುದಿಲ್ಲ. ಆದ್ದರಿಂದ ತಮ್ಮ ಆಚರಣೆಯಲ್ಲಿ ಇಲ್ಲದುದನ್ನು ಅನ್ಯರಿಗೆ ಬೋಧಿಸ ಹೊರಟರೆ ಅದು ಅಷ್ಟೊಂದು ಪರಿಣಾಮಕಾರಿಯಾಗುವುದಿಲ್ಲ. ಈ ರೀತಿ ಪರೋಪದೇಶಕರ ಡೊಂಕನ್ನೇ ತಿದ್ದಲು ಹೊರಟು ಅಣ್ಣನವರು ‘ಲೋಕದ ಡೊಂಕ ನೀವೇಕೆ ತಿದ್ದುವಿರಿ’ ಎಂಬ ತಮ್ಮ ಮಾತಿನ ಸುಳಿಯಲ್ಲಿ ತಾವೇ ಸಿಕ್ಕಿಬಿದ್ದಿದ್ದಾರಲ್ಲವೇ ಎಂದು ಆಪಾತತಃ ತೋರಬಹುದು. ಇದು ಸರಿಯಲ್ಲ. ಏಕೆಂದರೆ ಅವರು ಪರರಿಗೆ ಉಪದೇಶ ಮಾಡಲೇಬಾರದೆಂದೇನೂ ಹೇಳಲಿಲ್ಲ; ತನ್ನ ಉಪದೇಶದಂತೆ ತಾನೇ ನಡೆಯದಿದ್ದರೆ ಬೇರೆಯವರಿಗೆ ಉಪದೇಶಿಸುವ ಅರ್ಹತೆಯನ್ನು ಕಳೆದುಕೊಳ್ಳುವೆಯೆಂದಷ್ಟೇ ಎಚ್ಚರಿಸಿದ್ದಾರೆ. ಹಾಗೆ ಎಚ್ಚರಿಸುವ ಅಧಿಕಾರವನ್ನು ಅವರು ಈ ಹಿಂದೆ ಅನೇಕ ವಚನಗಳಲ್ಲಿ ನೋಡಿರುವಂತೆ ತಮ್ಮಲ್ಲಿರುವ ನಡೆನುಡಿಗಳ ಹೊಂದಾಣಿಕೆಯಿಂದಲೇ ಪಡೆದುಕೊಂಡಿದ್ದಾರೆ. ಹೀಗೆ ಅಣ್ಣನವರಂತೆ ನುಡಿದಂತೆಯೇ ನಡೆಯುವ ವ್ಯಕ್ತಿಗಳು ಅತಿ ವಿರಳ. ಆದುದರಿಂದಲೇ ತುಳಸೀದಾಸರು ತಮ್ಮ ರಾಮಚರಿತ ಮಾನಸ ಎಂಬ ಗ್ರಂಥದಲ್ಲಿ ಈ ರೀತಿ ಉದ್ಗರಿಸಿದ್ದಾರೆ; “ಪರ ಉಪದೇಸ್ ಕುಸಲ್ ಬಹುತೇರೇ! ಜೆ ಆಚರಹಿ ತೇ ನರ್ ಘನೇರೇ!” ಅಂದರೆ ಪರರಿಗೆ ಉಪದೇಶವನ್ನು ನೀಡುವ ಜಾಣರು ಅನೇಕರಿದ್ದಾರೆ. ಆದರೆ ಅದನ್ನೇ ಆಚರಣೆಯಲ್ಲಿ ತಂದಿರುವ ಜನರು ಬಹಳವಿಲ್ಲ. ತಾವು ಆಚರಣೆಯಲ್ಲಿ ತರದಿದ್ದರೂ ಇತರರ ಹಿತದೃಷ್ಟಿಯಿಂದ ಬೋಧಿಸುತ್ತೇವೆಂದರೆ ಅಂತಹ ಪರೋಪದೇಶದ ಹಿಂದೆ ಇರುವ ಕಳಕಳಿಯು ಅತ್ಯಂತ ಸಂದೇಹಾಸ್ಪದವಾದುದು. ‘ನೆರಮನೆಯವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವಾ.........’ ತನ್ನ ಸ್ಥಿತಿಯೇ ಚಿಂತಾಜನಕವಾಗಿರುವಾಗ ಅಳುವುದನ್ನು ಬಿಟ್ಟು, ಪರರ ದುಃಖಕ್ಕೆ ಅಳುವುದಾಗಿ ಹೇಳಿದರೆ ಅದರಲ್ಲಿ ಎಷ್ಟರಮಟ್ಟಿಗೆ ಸಹಜತೆ ಇರುವುದೆಂದು ನಂಬಲು ಸಾಧ್ಯ? ಅದು ಮೊಸಳೆಯ ಕಣ್ಣಿರಿನಂತೆ (Crocodile tears) ಕೃತ್ರಿಮವಾದುದು, ದುರುದ್ದೇಶಪೂರಿತವಾದುದು ಎನ್ನದೆ ಗತ್ಯಂತರವಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು