•  
  •  
  •  
  •  
Index   ವಚನ - 130    Search  
 
ಭಕ್ತನ ಜ್ಞಾನಿಸ್ಥಲ - ಜೀವನ
ಹಾವಿನ ಬಾಯ ಕಪ್ಪೆ ಹಸಿದು ಹಾರುವ ನೊಣಕ್ಕೆ ಆಸೆ ಮಾಡುವಂತೆ, ಶೂಲವನೇರುವ ಕಳ್ಳನು ಹಾಲು ತುಪ್ಪವ ಕುಡಿದು ಮೇಲೇಸುಕಾಲ ಬದುಕುವನೊ? ಕೆಡುವೊಡಲ ನಚ್ಚಿ, ಕಡುಹುಸಿಯನೆ ಹುಸಿದು, ಒಡಲ ಹೊರೆವರ ಕೂಡಲಸಂಗಮದೇವನವರನೊಲ್ಲ, ಕಾಣಿರಣ್ಣಾ.
Transliteration Hāvina bāya kappe hasidu hāruva noṇakke āse māḍuvante, śūlavanēruva kaḷḷanu hālu tuppava kuḍidu mēlēsu kāla badukuvano? Keḍuvoḍala nacci, kaḍ'̔uhusiyane husidu, oḍala horevara kūḍalasaṅgamadēvanavaranolla, kāṇiraṇṇā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If, like a frog caught in a serpent's mouth Who, hungry, pines for a flitting fly, A thief already on the gallows drinks Milk and melted butter, how long Will he live after? Look you, my brothers, Lord Kūḍala Saṅgama has nought to do With those who cram their appetite, Relying on the perishable flesh And lying their great big lies. Translated by: L M A Menezes, S M Angadi
Hindi Translation सर्प मुखस्थ क्षुधित मंडूक के उडती मक्खी की आशा की भाँति शूल पर चढ़नेवाला चोर दूध-घी पीकर और कितने दिन जीयेगा? नश्वर शरीर के भरोसे असत्य ही असत्य कहकर उदर पोषण करनेवाले को देखो, भाई कूडलसंगमदेव नहीं चाहते ॥ Translated by: Banakara K Gowdappa
Telugu Translation పాము నోటి కప్ప ఆకలిగొని పారు ఈగ కాస పడినట్లే; శూలము కెక్కిన చోరుడు, పాలు, నేయి, త్రాగుచు నిక యెంతకాలము బ్రతుకునో? చెడెడి ఒడల నమ్మి బొంకుల బొంకి కడుపు నింపుకొనువారల మెచ్చడన్నా కూడల సంగమ దేవుడు Translated by: Dr. Badala Ramaiah
Tamil Translation பாம்பின் வாயின் தவளை பசித்துப் பறக்கும் ஈயை நயந்ததனைய, கழுவிலேறும் கள்ளன் பாலும் நெய்யுமருந்தி மேலெத்துணைக்காலம் வாழ்வானோ? அழியுமுடலை நச்சி, பல பொய்செப்பி, உடல் பேணுநர்க்கு கூடல சங்கம தேவன் அருளான் காணாய். Translated by: Smt. Kalyani Venkataraman, Chennai
Marathi Translation सापाचिया तोंडी, भुकेले बेडूक उडती माशी देख, चाटू पाहे सुळावरी चढे तो, दूध तूप खाय, जिवित तो राहाय, कोठवरी ? पोसावयासाठी, नश्वर शरीर खोटा तो व्यवहार, मिथ्याचार पापाचा डोंगर, भार डोईवर करीता कोठवर, कोणासाठी कूडलसंगमदेवा ! तसा उणा जाण तयावरी प्रसन्न, कैसा होशी ? अर्थ - सापाच्या तोंडात सापडलेला बेडूक, आपले लक्ष आपल्या तोंडावर उडणाऱ्या माशीला खाण्यासाठी चालविलेली धडपडयाप्रमाणें व सुळावर चढणारा चोर, त्याला दूध- तूप खाऊन किती काळ सुखाणे जगता येईल ? म्हणून नाशवंत देहावर विश्वास ठेऊन त्यांच्या संरक्षणार्थ पोटाची खळगी भरण्यासाठी विविध प्रकारचे खोटे-नाटे बोलून लबाडी - खोटपण करणारा, पापाचा डोंगर रचित त्याला डोक्यावर वाहून नेणाऱ्यांना माझा कूडलसंगमदेव कधीही पावणार नाही. Translated by Rajendra Jirobe, Published by V B Patil, Hirabaug, Chembur, Mumbai, 1983 सापाच्या तोंडातील बेडूक भूकेने उडणाऱ्या माशीसाठी धडपडतो. सुळावर चढणारा चोर दूध-तूप खाल्यावर किती काळपर्यंत जगणार आहे? नश्वर शरीरावर भरवसा ठेवून, पूरा खोटे बोलून, पोट भरणारे आवडत नाहीत कूडलसंगमदेवाला Translated by Shalini Sreeshaila Doddamani
Urdu Translation اک سانپ کےدَہان میں پھنسنے کے باوجود اڑتی ہوئی مگس کی طرح محوِالتفات اک نیم جان گرس زدہ غوک کی طرح کچھ ساعتوں میں ہوگا جومصلوب وہ اگر پی لےجودودھ گھی بھی توزندہ رہےگا کب بس یہ جہاںبھی دامِ فنا کا اسیر ہے اس نابکار پیٹ پہ جوکرکےاعتماد دو روزہ زندگی میں کوئی جھوٹ بول کر اقبال مندیوں کےلیےسرگراں رہے ہوگا ذلیل کوڈلا سنگا کے روبرو Translated by: Hameed Almas
ಶಬ್ದಾರ್ಥಗಳು ಒಡಲು = ಶರೀರ; ಶೂಲ = ನೇಣು; ಹುಸಿ = ಸುಳ್ಳು; ಹೊರೆ = ಪೊಶಿಸು;
ಕನ್ನಡ ವ್ಯಾಖ್ಯಾನ ವಿಷಯಕ್ಕೊಳಗಾಗಬೇಡ ಹಾವು ತನ್ನ ಬಾಯಲ್ಲಿ ಕಪ್ಪೆಯನ್ನು ಹಿಡಿದು ಇನ್ನೇನು ತಿನ್ನುವಷ್ಟರಲ್ಲಿದೆ. ಆದರೆ ಕಪ್ಪೆಗೆ ಅದರ ಅರಿವೇ ಇಲ್ಲ; ಹೊಟ್ಟೆ ಹಸಿದು ತನ್ನ ಮುಂದೆ ಹಾರಾಡುತ್ತಿರುವ ನೊಣವನ್ನು ನೋಡಿ ಆಸೆಯಿಂದ ಅದನ್ನು ಹಿಡಿಯುವ ಸಂಚು ಮಾಡುತ್ತಲಿದೆ. ಆದರೆ ಅದರ ಮಂದ ಬುದ್ದಿಗೆ ತಾನೇ ಹಾವಿನ ಆಹಾರವಾಗುತ್ತಿರುವುದು. ತಿಳಿಯದಾಯಿತು. ಆದ್ದರಿಂದ ಹೇಗೆ ಪಾರಾಗಬೇಕೆಂದು ಅದು ಯೋಚಿಸದಾಯಿತು. ಕಳ್ಳನನ್ನು ಶೂಲಕ್ಕೇರಿಸಿ ಸಾಯಿಸುವ ಮುನ್ನ ಅವನ ಅಂತಿಮ ಇಚ್ಛೆ ಏನಿದೆಯೆಂಬುದನ್ನು ಕೇಳಿ ಅದನ್ನು ಪೂರೈಸಿ ಕೊಡುವುದು ಒಂದು ಪದ್ಧತಿಯಾಗಿದೆ. ಕಳ್ಳ ಶೂಲವನ್ನೇರಿ ಇನ್ನೇನು ಸಾಯಲಿರುವಾಗ ಹಾಲು ತುಪ್ಪವನ್ನು ಕೇಳಿ ಕುಡಿದರೆ ಅವನೆಷ್ಟು ಕಾಲ ಬದುಕಿರಲು ಸಾಧ್ಯ? ಅಂತೆಯೇ ನಮದು ‘ಕೆಡುವೊಡಲು', ನಾಶಗೊಳ್ಳತಕ್ಕಂಥ ಶರೀರ. ಅದು ಮೃತ್ಯುವಿನ ಬಾಯ ತುತ್ತಾಗಲಿದೆ. ಅಂತಹ ಶರೀರವನ್ನು ಆಡಬಾರದ ಸುಳ್ಳನ್ನು ಆಡಿ, ಮಾಡಬಾರದ ಕೃತ್ಯವನ್ನು ಮಾಡಿ ಪೋಷಿಸ ಹೊರಟರೆ ಮೇಲೆ ಹೇಳಿರುವಂತೆ ಹಾವಿನ ಬಾಯ ಕಪ್ಪೆಯು ಹಸಿವನ್ನಿಂಗಿಸಿಕೊಳ್ಳಲು ಹಾರುವ ನೊಣವ ಬಯಸಿದಂತೆ; ಶೂಲವನ್ನೇರಿದ ಕಳ್ಳ ಹಾಲು ತುಪ್ಪವಕುಡಿದಂತೆ ಇಲ್ಲದ ಸುಳ್ಳನ್ನು ಆಡಿ ಉದರ ಪೋಷಣೆ ಮಾಡಿಕೊಳ್ಳುವವರನ್ನು ದೇವರು ಒಲ್ಲ ಎಂದು ಅಣ್ಣನವರು ಎಚ್ಚರಿಸಿದ್ದಾರೆ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.