•  
  •  
  •  
  •  
Index   ವಚನ - 131    Search  
 
ಭಕ್ತನ ಜ್ಞಾನಿಸ್ಥಲ - ಅಳಿಮನಸ್ಸು
ಆರತವಡಗದು; ಕ್ರೋಧ ತೊಲಗದು; ಕ್ರೂರ ಕುಭಾಷೆ, ಕುಹಕ ಬಿಡದನ್ನಕ್ಕ ನೀನೆತ್ತಲು ಶಿವನೆತ್ತಲು? ಹೋಗಯ್ಯಾ, ಮರುಳೇ! ಭವರೋಗವೆಂಬ ತಿಮಿರ ತಿಳಿಯದನ್ನಕ್ಕ ಕೂಡಲಸಂಗಯ್ಯನೆತ್ತ, ನೀನೆತ್ತ? ಮರುಳೇ!
Transliteration Āratavaḍagadu; krōdha tolagadu; krūra kubhāṣe, kuhaka biḍadannakka nīnettalu śivanettalu? Hōgayyā, maruḷē! Bhavarōgavemba timira tiḷiyadannakka kūḍalasaṅgayyanetta, nīnetta? Maruḷē!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Unless your greed abates, your anger cools, Unless foul words and cruelty and fraud Depart, what is the chance to meet Between God and you? Avaunt, you fool! Unless the darkness of this world's malady Clears up, where is the chance to meet Between Lord Kūḍala Saṅgama and you, you fool? Translated by: L M A Menezes, S M Angadi
Hindi Translation आशा नहीं मिटती, क्रोध नहीं हटता, क्रूरता, कुभाषा, कपट न छूटने तक तू कहाँ? शिव कहाँ? ह्ट जा पगले भवरोग-तिमिर न फटने तक कूडलसंगमदेव कहाँ? तू कहाँ? पगले ॥ Translated by: Banakara K Gowdappa
Telugu Translation ఆర్తి నణగదు; క్రోధముడుగదు క్రూరకుభాషా కుహకము విడనంతదాక నీ వెక్కడ? శివు డెక్కడ? పొమ్మాకడకో వెడగా? భవరోగమను తిమిరము తెలియనందాక కూడల సంగయ్య యెక్కడ నీ వెక్కడ? వెడగా! Translated by: Dr. Badala Ramaiah
Tamil Translation விருப்பமடங்காது, சினம் நீங்காது, ஆகாவசைமொழியும், கயமையும் நீங்காவரை, நீ எங்கே, சிவனெங்கே, அடைவாயோ, மருளே, பிறவிப்பிணியெனு மிருளை யறியாவரை, கூடலசங்கைய னெங்கே -- நீ -- எங்கே மருளே. Translated by: Smt. Kalyani Venkataraman, Chennai
Marathi Translation कपटता अहंपणा, क्रोध निंदा आशा क्रूरता कुभाषा, गेल्याविणा! हेचि ते भवरोग, हेचि ते तिमिर होईना ते दूर, लोकालागी ऐसा भाव जोवरी, तुजिया मनी साठे अरे वेडया तू कोठे शिव कोठे ? कूडलसंगमदेवा ! जोवरी भाव खोटे तोवरी तू कोठे शिव कोठे ? अर्थ - कोणते चांगले आणि कोणते वाईट यातील फरक कळल्याशिवाय त्यातील मर्म व मूळ अर्थ कळेपर्यंत मानवाची आंधारात भटकंती चालू असते. आणि समजा कळालेच तर त्यावर वितंडवाद व तर्क-वितर्क करीत मानव वरचेवर दु:खी कष्टी होत चाललेला आहे. आणि आपला अमूल्य वेळ व जीवन वाया घालवीत आहे. मानवातील अहंभाव, क्रोध, इतरांबद्दल असूया, टोचून बोलणे, कपट भाव इत्यादि नष्ट झाल्याशिवाय परमेश्वर प्राप्ती असंभव आहे. कारण ह्याच गोष्टी परमेश्वर प्राप्तीकडे किंवा जन्म-मरणाच्या फेऱ्यातून मुक्त होण्याकडे नेणारे नव्हेत हे सर्व शरीर धर्माचे रोग आहेत आणि हे रोग मानव लावून घेतो आहे. म्हणजेच प्रकाशाकडे धाव न घेता नेमके त्याविरूद्ध काळोखात त्याची भटकंती चालू आहे. म्हणून ह्या रोगापासून अलीप्त राहिल्याशिवाय व नर्करुपी काळोखातून बाहेर पडल्याशिवाय तुम्ही कोठे भटकत आहात आणि परमेश्वर प्राप्तीचा मार्ग कोठे ? दोन्ही टोक एकमेकापासून दूर जात आहेत. Translated by Rajendra Jirobe, Published by V B Patil, Hirabaug, Chembur, Mumbai, 1983 व्याकुलता नाही गेली, क्रोध नाही गेला. क्रूर, कुभाषा, कुचकेपणा जाईपर्यंत, तू कोठे, शिव कोठे ? दूर जा मुर्खा. भवरोगाचा अंधकार दूर होईपर्यंत कूडलसंगमदेव कोठे? तू कोठे मुर्खा ? Translated by Shalini Sreeshaila Doddamani
ಶಬ್ದಾರ್ಥಗಳು ಆರತ = ಆಶೆ, ತೃಷ್ನೆ, ಬಾಯಾರಿಕೆ; ಕುಭಾಷೆ = ಕೆಟ್ಟ ಭಾಷೆ; ತಿಮರ = ಕತ್ತಲು; ಮರುಳೆ = ದಡ್ಡತನ;
ಕನ್ನಡ ವ್ಯಾಖ್ಯಾನ ಬೀದಿಯ ಹುಚ್ಚನನ್ನು ನೋಡಿರಬಹುದು. ಬಿದ್ದ ಚಿಂದಿಬಟ್ಟೆಯನ್ನು ಹರಿದ ಕಾಗದವನ್ನು ಹಾಳು ಮೂಳನ್ನು ಅವನು ಆಯುವನು. ಕಂತೆ ಬೊಂತೆ ಕಟ್ಟುವನು. ಕಂಕುಳಲ್ಲಿ ಹೆಗಲ ಮೇಲೆ ಹೊರುವನು-ಉಳಿದುದನ್ನು ಕೈಯಿಕಾಲುಕುತ್ತಿಗೆಗೆ ಸುತ್ತಿ ಸಿಂಗರಿಸಿಕೊಂಡೆನೆಂದು ಬೀಗುವನು. ಒಮ್ಮೆ ರೇಗುವನು, ಒಮ್ಮೆ ಕೊಳಕು ಮಾತಾಡಿ ಕೂಗುವನು. ಒಮ್ಮೆ ರಹಸ್ಯವಾಗಿ ಸಂಧಾನ ನಡೆಸುತ್ತಿರವವನಂತೆ ತನ್ನಲ್ಲಿ ತಾನೇ ಪಿಸುಗುಟ್ಟುವನು-ನೋಡಿದವರಿಗೆ ಕಗ್ಗಂಟಾಗಿ ಕಾಣುವನು-ಇವನು ಮಾನಸಿಕ ರೋಗಿ. ಹೀಗೆ ಭವರೋಗಸಂಸಾರಿಯನ್ನು ಯಾರೂ ಗುರುತಿಸಲರಿಯರು-ಎಲ್ಲರೂ ಅವನಂತೆಯೇ ಆಗಿ-ಯಾರಿಗೂ ಅವನು ಅಸ್ವಸ್ಥನೆನಿಸುವುದಿಲ್ಲ ಕೂಡ. ಆದರೂ ಮೇಲೆ ಹೇಳಿದ ಮಾನಸಿಕ ರೋಗದ ಆ ಹುಚ್ಚನಿಗಿಂತ ಭವರೋಗದ ಈ ಸಂಸಾರಿ ತೀರ ಭಿನ್ನವೇನೂ ಅಲ್ಲ. ಇವನೂ ಈ ಸಂಸಾರ ಮಾರ್ಗದಲ್ಲಿ ಹೇಯವಾದುದನ್ನೆಲ್ಲ ಎತ್ತಿಕೊಂಡು ಎದೆಗವಚಿಕೊಳ್ಳುತ್ತಾನೆ. ಕರುಣಿಸುವೆಡೆ ಕ್ರೌರ್ಯ ತೋರಿಸುತ್ತಾನೆ. ಪ್ರೀತಿಸುವೆಡೆ ಕ್ರೋಧಿಸುತ್ತಾನೆ. ಸರಸಸಲ್ಲಾಪದೆಡೆ ಕುಹಕವಾಡುತ್ತಾನೆ-ಈ ವೈಪರೀತ್ಯದ ಹುಚ್ಚು ಬಿಡುವವರೆಗೆ-ಅವನಿಗೆ ಮತ್ತು ಶಿವನಿಗೆ ಸಮರಸಸಂಬಂಧವೇರ್ಪಡುವುದಿಲ್ಲವೆನ್ನುವರು ಬಸವಣ್ಣನವರು. ವಿ : ಆರತವೆಂದರೆ ಕಾಮ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-734 

  Sun 16 Mar 2025  

 ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು;
ಕೊಂದಹರೆಂಬುದನರಿಯದೆ
ಬೆಂದೊಡಲ ಹೊರೆಯ ಹೋಯಿತ್ತಲ್ಲದೆ!
ಅದಂದೇ ಹುಟ್ಟಿತ್ತು, ಅದಂದೇ ಹೊಂದಿತ್ತು;
ಕೊಂದವರುಳಿದರೇ ,ಕೂಡಲಸಂಗ
  Sharmila S
Mysore