•  
  •  
  •  
  •  
Index   ವಚನ - 132    Search  
 
ಭಕ್ತನ ಜ್ಞಾನಿಸ್ಥಲ - ಸಿರಿ-ಸಂಪತ್ತು
ಹಾವು ತಿಂದವರ ನುಡಿಸಬಹುದು; ಗರ ಹೊಡೆದವರ ನುಡಿಸಬಹುದು; ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ! ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರು, ಕೂಡಲಸಂಗಮದೇವಾ.
Transliteration Hāvu tindavara nuḍisabahudu; gara hoḍedavara nuḍisabahudu; sirigara hoḍedavara nuḍisalu bāradu nōḍayyā! Baḍatanavemba mantravādi hogalu oḍane nuḍivaru, kūḍalasaṅgamadēvā.
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy:
Art
English Translation You can easily speak to those bitten by a snake, You can easily speak to those possessed by an evil spirit, But you cannot so easily speak to the rich possessed by the evil spirit of wealth, Yet, when the magician Poverty strikes and leaves them bankrupt, Their tongues loosen at once, O Lord Kūḍala Saṅgama!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 You can make them talk if the serpent has stung them. You can make them talk if they're struck by an evil planet. But you can't make them talk if they're struck dumb by riches. Yet when Poverty the magician enters, they'll speak at once, O lord of the meeting rivers.

Translated by: A K Ramanujan
Book Name: Speaking Of Siva
Publisher: Penguin Books
----------------------------------
Question you may one bitten by a snake; Question you may one ghost-possessed: You cannot question one possessed By the ghost of wealth.... But if The exorcist called poverty Draw near, he speaks at once, O Kūḍala Saṅgama Lord! Translated by: L M A Menezes, S M Angadi

Russian Translation Проще говорить с тем, кто змеиным ядом отравлен , С тем, кто злым духом одержим, Чем с тем, кто духом богатства порабощен! Лишь нищета-колдунья его освободит, и он заговорит. О Бог мой, Кудаласангама. Translated by: Prof Harishankar, Mysore and Mrs. Galina Kopeliovich, Russia
Hindi Translation सर्प-दंशित व्यक्तियों से बातें कर सकते हैं भूत-ग्रस्त व्यक्तियों से बातें कर सकते हैं; धन-पिशाच ग्रस्त व्यक्तियों से बातें नहीं कर सकते; निर्धनता रूपी मांत्रिक के आते ही बोलते हैं, कूडलसंगमदेव॥ Translated by: Banakara K Gowdappa
Telugu Translation పాము కఱచిన వారిని పలికింప నగు? గాలి సోకిన వారిని పలికింపనగు సిరి సోకు వారల పలికింపరాదు సుమీ! పేదఱికమను మంత్రవాది రాగ తక్షణమే పల్కెదరయ్యా కూడల సంగమదేవా! Translated by: Dr. Badala Ramaiah
Tamil Translation பாம்பு தீண்டியோரைப் பேச வைக்கலாம், பேய் பிடித்தோரைப் பேச வைக்கலாம். செல்வப்பேய் பிடித்தோரைப் பேசவைக்க வியலுமோ? காணாய் “வறுமை” எனும் மந்திரவாதி வரின் உடனே பேசுவரையனே, கூடல சங்கம தேவனே. Translated by: Smt. Kalyani Venkataraman, Chennai
Marathi Translation नागाने डसता, तयासी वदवू पिशाच्य पळवू, मंत्रोद्वारे धनाचे पिशाच्य, जाईना मंत्राने "दारिद्र्य" गारुडयाने, जाईल ते कूडलसंगमदेवा । “दारिद्र्य” गारुड होताचि आरुढ, पळ काढी अर्थ - साप चावलेल्यांना उपचार करुन वदविता येईल. भूताटकीने किंवा धक्का ( शॉक) बसलेल्यांना चेतन करता येईल. त्याना मानसात आणता येईल. पण संपत्तीचे, ऐश्वर्यांचे भूत झोंबले असल्यास अशांना तळ्यावर आणणें जमणार नाही. पण दारिद्रयरुपी मांत्रिकाकडून त्याची श्रींमती नष्ट केल्यास त्यांच्यातील गर्व व उन्मतपणा क्षणार्धात नाहीसा होईल. त्यांचा अहंभाव मेणाप्रमाणे वितळेल व ते नम्रतेने वागतील अन् बोलतीलही. म्हणून श्रीमंतीत असो किवा दारिद्रयात असो सदासर्वदा समभावे वागावे. Translated by Rajendra Jirobe, Published by V B Patil, Hirabaug, Chembur, Mumbai, 1983 साप चावलेल्यानां बोलविता येईल. भूत लागलेल्यांना बोलविता येईल. धनपिशाच लागलेल्यांना बोलविता येणार नाही. दारिद्र्यरुपी मांत्रिकाच्या प्रवेशाने लगेच बोलू लागेल कूडलसंगमदेवा. Translated by Shalini Sreeshaila Doddamani
Urdu Translation سانپ نگلےہوئےلوگوں کی زباں کھل جائے اورشیطان گزیدوں کی زباں کھل جائے لیکن اس شخص کےہونٹوں پہ نہ جنبش ہوگی جس پہ قابض ہوفقط سیم کا زرکا شیطاں صرف اُس و قت ہی شخص کرے گا باتیں جبکہ افلاس کا سایہ ہومسلّط اس پر اے مری جان مرے کوڈلا سنگم دیوا Translated by: Hameed Almas
ಶಬ್ದಾರ್ಥಗಳು ಗರ = ದೆವ್ವ; ಸಿರಿ = ಸಂಪತ್ತು;
ಕನ್ನಡ ವ್ಯಾಖ್ಯಾನ ಸಿರಿಯಿಂದ ಮೆರೆಯಬಾರದು ಐಶ್ವರ್ಯದಿಂದ ಮದೋನ್ಮತ್ತರಾದ ಜನರ ಸ್ಥಿತಿಯನ್ನು ಇಲ್ಲಿ ಅಣ್ಣನವರು ಬಣ್ಣಿಸಿದ್ದಾರೆ. ಒಬ್ಬ ಮನುಷ್ಯನಿಗೆ ಹಾವು ಕಚ್ಚಿದಾಗ ಮೈಯಲ್ಲೆಲ್ಲಾ ವಿಷವೇರಿ ಮೂರ್ಛೆಕೊಂಡುದುದರ ಪರಿಣಾಮವಾಗಿ ಮಾತೇ ನಿಂತುಹೋಗುತ್ತದೆ. ಆದರೆ ಅವನಿಗೆ ಒಳ್ಳೆಯ ಔಷಧವನ್ನು ಕೊಟ್ಟು ಸುಸ್ಥಿತಿಗೆ ತಂದು ಮಾತನಾಡುವಂತೆ ಮಾಡಬಹುದು. ಇದೇ ರೀತಿ ಭೂತ ಒಬ್ಬ ವ್ಯಕ್ತಿಯ ಶರೀರವನ್ನು ಹೊಕ್ಕಾಗ ಅವನು ಸಹಜ ರೀತಿಯಲ್ಲಿ ಮಾತನಾಡಲಾರ. ಆದರೆ ಮಂತ್ರವಾದಿಯೊಬ್ಬ ಅಂಥವನನ್ನೂ ತನ್ನ ಮಂತ್ರ ಶಕ್ತಿಯಿಂದ ಸಹಜ ಸ್ಥಿತಿಗೆ ಬರುವಂತೆ ಮಾಡಿ ಸರಿಯಾದ ರೀತಿಯಲ್ಲಿ ಮಾತನಾಡುವಂತೆ ಮಾಡಬಹುದು. ಆದರೆ ಐಶ್ವರ್ಯವೆಂಬ ಭೂತ ಹಿಡಿದುಕೊಂಡಿರುವ ಸಿರಿವಂತನನ್ನು ಮಾತ್ರ ಮಾತನಾಡುವಂತೆ ಮಾಡಲು, ಅವನ ಸಂಗಡ ಮಾತನಾಡಲು ಎರಡೂ ಸಾಧ್ಯವಿಲ್ಲ. ಏಕೆಂದರೆ ಐಶ್ವರ್ಯ ಬಲದಿಂದ ಅಹಂಕಾರ ಅವನ ತಲೆಗೇರಿರುತ್ತದೆ. ಆದ್ದರಿಂದ ಅವನು ಲೋಕಕಂಠಕನಾಗುತ್ತಾನೆ. ಹಿಂದಿನ ಸಮಾಜದಲ್ಲಿ ಯಾರೇ ಆಗಲಿ ಲೋಕಸೇವಕನಾಗದಿದ್ದರೂ ಚಿಂತೆಯಿಲ್ಲ ಲೋಕಕಂಠಕನಾಗದಿದ್ದರೆ ಅಷ್ಟೇ ಸಾಕು. ಈ ಲೋಕಕಂಠಕತನನಿವಾರಣೆಯಾಗಬೇಕಾದರೆ ಮೊದಲು ಆ ವ್ಯಕ್ತಿಯ ಅಹಂಕಾರ ದೂರವಾಗಬೇಕು. ಹಾಗಾದರೆ ಆ ಅಹಂಕಾರವನ್ನು ಹೊಡೆದೋಡಿಸುವ ಮಂತ್ರವಾದಿ ಯಾರು? ಆ ಮಂತ್ರವಾದಿಯೇ ಬಡತನ. ಅವನು ಮಾತನಾಡುವುದು ಯಾವಾಗ? ಆ ಬಡತನವೆಂಬ ಮಂತ್ರವಾದಿ ಬಂದ ತಕ್ಷಣವೇ ಎಂದರೆ ಬಡತನ ಪ್ರಾಪ್ತವಾದಕೂಡಲೇ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.