ಭಕ್ತನ ಜ್ಞಾನಿಸ್ಥಲ - ಡಾಂಭಿಕತೆ
ಅರೆಭಕ್ತರಾದವರ ನೆರೆ ಬೇಡ, ಹೊರೆ ಬೇಡ;
ದಾರಿ ಸಂಗಡ ಬೇಡ, ದೂರ ನುಡಿಯಲು ಬೇಡ!
ಕೂಡಲಸಂಗನ ಶರಣರಲ್ಲಿ ಅಚ್ಚ ಲಿಂಗೈಕ್ಯಂಗೆ
ತೊತ್ತಾಗಿಹುದಯ್ಯಾ.
Transliteration Arebhaktarādavara nere bēḍa, hore bēḍa;
dāri saṅgaḍa bēḍa, dūra nuḍiyalu bēḍa!
Kūḍalasaṅgana śaraṇaralli accaliṅgaikyaṅge
tottāgihudayyā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Avoid the neighbourhood,
Avoid the campany, of those
Who are pious half and half.
Do not walk far with them;
Do not talk long to them.
But those who are perfectly one
With Kūḍala Saṅga's Śaraṇās-
Be you their servant's servant, Sir!
Translated by: L M A Menezes, S M Angadi
Hindi Translation अपूर्ण भक्तों के आसपास न रहो
मार्ग का साथी न बनो अधिक मत बोलो
कूडलसंगमदेव के शरणों में
लिंगैक्यों के भृत्य बने रहो ॥
Translated by: Banakara K Gowdappa
Telugu Translation ఆరభ క్తి కలవారి ఇరుగు వలదు పొరుగు వలదు;
దారి తోడు తగదు, దవ్వు బలుక తగదు;
సంగని శరణులందు స్వచ్చలింగై క్యు డగువానికి
తొ తై బ్రతికెద నయ్యా
Translated by: Dr. Badala Ramaiah
Tamil Translation முழு பக்தியற்றோரிடம் கூடாய், சேராய்;
வழி நடக்காதே, சேட்புலத்தும் உரையாடாதே,
கூடல சங்கனின் அடியாருள்ளே
நல்லிங்க ஐக்கியனுக்கு தொண்டு புரிவா யையனே.
Translated by: Smt. Kalyani Venkataraman, Chennai
Marathi Translation
भक्ति नि विश्वास, पूर्ण ज्यांचा नाही
ऐसा तो संदेही, नको नको
त्यांचा तो शेजार, ना करी व्यवहार
तयाची तक्रार, नको नको
चालावे ना संगे, संगे ना बोलावे
शब्द का ऐकावे ? नको नको
शरणांची चाकरी, आवडीने करीन
खाऊन राहिन, उचिष्टचि
कूडलसंगमदेव! तुझे शरण कोणी
लिंगैक्याचे धनी, निःसंशय
अर्थ - मनात संदेह अर्धवट भक्ती करणाऱ्या बरोबर राहणे नको. त्यांच्याशी मैत्री करणे नको. त्यांच्याबरोबर चालणे, बोलणे व ऐकणे व त्यांचा शेजार नको. त्यांच्याशी कसलाही व्यवहार नको. कारण अर्धवट विश्वास करणारे लोक पूर्णतत्वाकडे जाऊ शकणार नाहीत. त्यांच्या मनात व त्यांच्या भक्तीत कृत्रिमता भेसळपणा, अहंमन्यता असते. शिवशरण होण्यासाठी शिवस्वरुपाचा पूर्ण विश्वास लागतो. ज्ञानी शिवशरणांचा सत्संग लाभल्यास त्यांच्यातून चांगलेच निष्पन्न होईल जस जशी त्यांची सेवा करण्याची, त्यांच्या सत्संगात राहण्याची संधी लाभत जाईल. तशी अमृताशी गोडी प्राप्त होईल. जशी उसाची गोडी प्रक्रियेने वाढते. रसापेक्षा गूळ अधिक गोड! तसे शरण सेवेत राहिल्याने व सत्संग मिळाल्याने स्वर्गानंद मिळत राहिल. म्हणूत शिवशरणांच्या. सेवेत सत्संग मिळावा म्हणून त्यांच्या घरात सडा सारवण करून पडेल ते काम करुन उरले मुरलेले अन्न खाऊन राहीन.
Translated by Rajendra Jirobe, Published by V B Patil, Hirabaug, Chembur, Mumbai, 1983
अर्धवट भक्ती करणाऱ्यांच्या आसपास राहणे नको.
त्यांच्या बरोबर वाट चालणे नको,
त्यांची निंदा करणे नको.
कूडलसंगमदेवाच्या खऱ्या शरणांचा सेवक व्हावे.
Translated by Shalini Sreeshaila Doddamani
ಶಬ್ದಾರ್ಥಗಳು ಅರೆ ಭಕ್ತ = ಅರೆ ಮನಸ್ಸಿನ ಭಕ್ತ; ತೊತ್ತು = ಸೇವೆ, ಊಳಿಗ;
ಕನ್ನಡ ವ್ಯಾಖ್ಯಾನ ಲಿಂಗೈಕ್ಯನೆಂದರೆ ಸತ್ತವನಲ್ಲ-ಅಂಗಗುಣಗಳನನ್ನೆಲ್ಲ ನೀಗಿಕೊಂಡು ಲಿಂಗಗುಣಗಳನ್ನು ರೂಢಿಸಿಕೊಂಡ ಜೀವನ್ಮುಕ್ತನು. ಈ ಜೀವನ್ಮುಕ್ತನಿಗೆ ಸತ್ಪುರುಷರ ಮೈತ್ರಿ, ದುಃಖಿಗಳ ಬಗ್ಗೆ ಕರುಣೆ, ಧರ್ಮಕಾರ್ಯಗಳಲ್ಲಿ ಮುದ, ವಿರೋಧಿಸುವರಲ್ಲಿ ಉಪೇಕ್ಷೆ ಎಂಬ ನಾಲ್ಕು ಸದ್ಗುಣಗಳಿರುವವು.
ಇಂಥ ಜೀವನ್ಮುಕ್ತ ಅಚ್ಚಲಿಂಗೈಕ್ಯನಿಗೆ ತೀರ ವಿರುದ್ಧ ಗುಣದವನು ಅರೆಭಕ್ತ. ಅರೆಭಕ್ತನೆಂದರೆ ಅರ್ಧ ಒಳ್ಳೆಯವನೆಂದು ತಿಳಿಯಬಾರದು. ನೈಜವಾಗಿ ಗುರುಲಿಂಗಜಂಗಮ ದಾಸೋಹ ಮಾಡದವನು, ಧರ್ಮಜೀವನದಲ್ಲಿ ದೃಢವಾದ ನಂಬಿಕೆಯಿಲ್ಲದವನು, ನೋಡುವರಿದ್ದರೆ ಭಕ್ತನಂತೆ ನಟಿಸಿ ಮಿಕ್ಕಂತೆ ಕರ್ಮಿಯಾಗಿರುವವನು ಅರೆಭಕ್ತ.
ಈ ಅರೆಭಕ್ತ-ಅಚ್ಚಲಿಂಗೈಕ್ಯರಿಬ್ಬರ ಮಧ್ಯೆ-ಸಾಧಕನಾದವನು ಸಹವಾಸಮಾಡಬೇಕಾದ್ದು ಅಚ್ಚ ಲಿಂಗೈಕ್ಯನೊಡನೆ, ಸರಸಸಲ್ಲಾಪ ಮಾಡಬೇಕಾದ್ದು ಅಚ್ಚಲಿಂಗೈಕ್ಯನೊಡನೆ-ಅರೆಭಕ್ತನೊಡನೆ ಅಲ್ಲವೇಅಲ್ಲ.
ಅಂಥವರ ಬಳಿ ವಾಸ ಮಾಡುವುದರಿಂದ-ಸದ್ಭಕ್ತರು ಅಲ್ಲಿಗೆ ಸುಳಿಯುವುದಿಲ್ಲ, ಅಂಥವರೊಡನೆ ಮಾತಾಡುತ್ತ ಕಾಲ ಕಳೆಯುವುದರಿಂದ-ಶಿವಾನುಭವಸತ್ಕಥಾಪ್ರಸಂಗ ಕಿವಿಗೆ ಬೀಳುವುದಿಲ್ಲ. ಮನಸ್ಸು ದುರ್ಬಲವಾಗಿ ಸಾಧನೆ ತತ್ತರಿಸುತ್ತದೆ. ಆಧ್ಯಾತ್ಮಿಕ ಜೀವನ ಸಾಯುತ್ತದೆ.
ಆದ್ದರಿಂದ ಅರೆಭಕ್ತರೊಡನೆ ಯಾವ ವಿಧದಲ್ಲಿಯೂ ಬೆರೆಯದೆ-ಅಚ್ಚಲಿಂಗೈಕ್ಯರಿಗೇ ಎಲ್ಲ ವಿಧದಲ್ಲಿಯೂ ಗುಲಾಮನಾಗಿರುವುದು ಶ್ರೇಯಸ್ಕರ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು