ಹೊಲೆಯ ಹೊಲಬಿಗನಾದೊಡೆ,
ಅವನ ಹೊರೆಯಲಿಪ್ಪುದು ಲೇಸು, ಕಂಡಯ್ಯಾ;
ಹೊಲಬುಗೆಡದೆ ಲಿಂಗ ಶರಣೆನ್ನಿರಯ್ಯಾ.
ಹೊಲಬುಗೆಡಬೇಡ: ಶಿವ ಶರಣೆನ್ನಿರಯ್ಯಾ.
ನಮ್ಮ ಕೂಡಲಸಂಗನ ಮಹಾಮನೆಯೊಳು
ಮಾದಾರ ಚೆನ್ನಯ್ಯ ಹೊಲಬಿಗನಯ್ಯಾ.
Transliteration Holeya holabiganādoḍe,
avana horeyalippudu lēsu, kaṇḍayyā;
holabugeḍade liṅga śaraṇennirayyā.
Holabugeḍabēḍa: Śiva śaraṇennirayyā.
Nam'ma kūḍalasaṅgana mahāmaneyoḷu
mādāra cennayya holabiganayyā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Observe, Sir, if a pariah behaves
The right way, it's good to court
His company.... Without offence,
Do you say Hail to Liṅga, Sir.
There's no offence: say Hail to Śiva
In the Great House
Of our Kūḍala Saṅgama,
Mādāra Cennayya is one
Who follows the straight path.
Translated by: L M A Menezes, S M Angadi
Hindi Translation श्वपच सन्मार्गी हो, तो
उसके पास रहना अच्छा है।
पथभ्रष्ट न होकर लिंगदेव की शरण लो,
सन्मार्ग से बिना भटके शिव की शरण लो,
मम कूडलसंगमेश के महागृह
श्वपच चन्नय्या सन्मार्गी है॥
Translated by: Banakara K Gowdappa
Telugu Translation కండు మార్గమెటిగిన మాదిగవాని
పంచబడి యుండుట భద్రమయ్యా!
మార్గము తప్పక ‘‘శివాళరణ ‘‘ నుమయ్యా;
మార్గము చెడపకురా ‘‘శివా శరణ’’నుమయ్యా.
మా కూడల సంగని మహామందిరమున
మాదార చెన్నయ్య మార్గఖుడయ్యా
Translated by: Dr. Badala Ramaiah
Tamil Translation இழிஞன் நல்வழி யறிந்தோனெனின்
அவனருகாமை மிக்கநன்றையனே.
நல்வழிபிறழாது “இலிங்கமே தஞ்சம்” என்னீரையனே.
நல்வழிபிறழாது “சிவனே தஞ்சம்” என்னீரையனே.
நம் கூடல சங்கனின் பெருமனையிலே
மாதாரச் சென்னையன் நல்வழிபிறழாதோனையனே.
Translated by: Smt. Kalyani Venkataraman, Chennai
Marathi Translation
कनिष्ठ जातीत जन्म जरी झाला
विचार चांगला, जरी त्याचा
अशाचा शेजार, असावा निश्चित
संशय न त्यात, असु द्यावा
सन्मार्गी जो चाले, शरण त्या म्हणा
शरणार्थी म्हणा, तयालागी
कूडलसंगमदेवा! मातंग चन्नय्या
हीन नाही तया, मानीले
अर्थ – हीन कुळात जन्मले म्हणून काय झाले ? ते सुशील विचारवंत असतील तर त्यांच्या शेजारी राहण्यास काही हरकत नाही. सन्मार्ग न सोडणाऱ्यांना लिंगदेवाचे शरण म्हटल्यास त्यात काही वावगे नाही. अर्थात सदैव सुपथावर असतील तर अशाना शिवशरण म्हणावे माझ्या कूडलसंगमदेवाच्या (परमेश्वरांच्या) नावाने बांधलेल्या अनुभव मंटपात मातंग चन्नया हे सुशिल म्हणून बोळखले जातात. कारण ते खरे शिवशरण होत. त्यांची जात कोठेही आडवी आली नाही. सर्वाना पूजनीय ठरले.
Translated by Rajendra Jirobe, Published by V B Patil, Hirabaug, Chembur, Mumbai, 1983
कुलहीन सत्पथावर असेल तर त्यांच्या शेजारी राहणे चांगले.
सत्पथ सोडल्या विना लिंगदेवाला शरण म्हणावे. सत्पथ
सोडल्याविना शरणाला शरण म्हणावे.
आमच्या कूडलसंगमदेवाच्या
विश्व निवासात मांग चन्नय्या सत्पथी आहे.
Translated by Shalini Sreeshaila Doddamani
ಶಬ್ದಾರ್ಥಗಳು ತೇಸು = ; ಹೊರೆ = ಪೋಶಿಸು; ಹೊಲಬು = ಸರಿಯಾದ ಕ್ರಮ ದಾರಿ;
ಕನ್ನಡ ವ್ಯಾಖ್ಯಾನ ಶಿವನಿಗೆ ಶರಣಾಗತರಾಗಿ ಲಿಂಗ ಧರಿಸಿದ ಮೇಲೆ-ಅವರಿಗೆ ಭಕ್ತಿಯೇ ಮಾರ್ಗ. ಶಿವಭಕ್ತನೇ ಮಾರ್ಗದರ್ಶಕ. ಆ ಶಿವಭಕ್ತನು ಕುಲದಲ್ಲಿ ಹೊಲೆಯನಾದರೂ-ಶಿವಮಾರ್ಗವನ್ನು ಬಲ್ಲವನಾದರೆ-ಅವನನ್ನು ಹಿಂಬಾಲಿಸುವುದು ಲೇಸು. ಮಡಿ ಮೈಲಿಗೆ ಮಾಡಿ ಅಹಂಕಾರ ಮಾಡಿ ದಾರಿ ತಪ್ಪುವುದಕ್ಕಿಂತ-ದಾರಿ ಬಲ್ಲವನಲ್ಲಿ ಗುರುತ್ವವನ್ನು ಕಾಣುವುದು ಬುದ್ಧಿವಂತಿಕೆ.
ಚೋಳರಾಜನಿಗೆ ಶೀವನೊಲವನ್ನು ಸಂಪಾದಿಸಲು ಸರಳವಾದ ಮಾರ್ಗವನ್ನು ತೋರಿಸಿದವನು ಜಾತಿಯಲ್ಲಿ ಮಾದಾರನಾದ ಚೆನ್ನಯನಲ್ಲವೆ ? ಆ ಚೋಳನ ಊಳಿಗ ಮಾಡಿಕೊಂಡಿದ್ದವನು ಚೆನ್ನಯ್ಯ. ಅವನ ಮನೆಯ ಅಂಬಲಿಯ ರುಚಿ ಕಂಡ ಶಿವನಿಗೆ ಚೋಳರಾಜನ ಅರಮನೆಯ ಭಕ್ಷ್ಯಭೋಜ್ಯಗಳೂ ಹಿಡಿಸಲಿಲ್ಲ. ಇದನ್ನು ಶಿವನಿಂದಲೇ ತಿಳಿದ ರಾಜನು ಚೆನ್ನಯ್ಯನ ಗುಡಿಸಿಲಿಗೆ ಹೋಗಿ ಅವನ ಕಾಲಿಗೆ ಬಿದ್ದು-ಸರಳದಲ್ಲಿ ಕೈಲಾಸಮಾರ್ಗವನ್ನು ಕಂಡು ಶಿವನ ಕೃಪೆಗೆ ಪಾತ್ರನಾದ. ಮಾದಿಗನೊಬ್ಬನು ಆತ್ಮಜ್ಞಾನಿಯಾದರೆ ಅವನನ್ನು ಗುರುವಾಗಿ ಸ್ವೀಕರಿಸಬೇಕಾದ್ದು ಶಿಷ್ಯರ ಕರ್ತವ್ಯವೆನ್ನುತ್ತಿರುವರು ಬಸವಣ್ಣನವರು.
ಅಥವಾ ಮಾರ್ಗದರ್ಶನ ಮಾಡುವವನಿಗೆ-ಮಾರ್ಗ ಗೊತ್ತಿರಬೇಕು. ಅದಿಲ್ಲದವನೊಬ್ಬನನ್ನು-ಉಚ್ಚಕುಲದಲ್ಲಿ ಹುಟ್ಟಿದವನೆಂಬ ಒಂದೇ ಕಾರಣಕ್ಕಾಗಿ-ಮಾರ್ಗದರ್ಶಕನನ್ನಾಗಿ ಸ್ವೀಕರಿಸುವುದರಿಂದ ಪಯಣಿಗನು ತಲುಪಬೇಕಾದ ಜಾಗವನ್ನು ತಲುಪದೆ ಕಷ್ಟನಷ್ಟಗಳಿಗೆ ಪಕ್ಕಾಗುವನು.
ಹಾಗೆಯೇ ಯಾವನಾದರೊಬ್ಬನು ಬ್ರಾಹ್ಮಣ ಅಥವಾ ಜಂಗಮಜಾತಿಯಲ್ಲಿ ಹುಟ್ಟಿದನೆಂಬ ಒಂದು ಕಾರಣಕ್ಕಾಗಿಯೇ ಅವನನ್ನು ಗುರುಗಳೆಂದು ಜಗದ್ಗುರುಗಳೆಂದು ನಂಬುವುದು ಯೋಗ್ಯವಲ್ಲ-ಎಂದು ಬಸವಣ್ಣನವರು ವೈದಿಕ ಮತ್ತು ವೀರಶೈವ ಎಂಬ ಎರಡೂ ಸಂಪ್ರದಾಯಗಳಲ್ಲಿ ಗುರುವಿನ ಬಗೆಗಿದ್ದ ಮೂಢನಂಬಿಕೆಗಳನ್ನು ಕುರಿತಂತೆ ಎಚ್ಚರಿಕೆ ಕೊಡುತ್ತಿರುವರು. (ತಮ್ಮ ಶಿವಧರ್ಮಕ್ಕೆ ಸೇರಿದ ದಲಿತರ ವರ್ಗಕ್ಕೆ ಬಸವಣ್ಣನವರು ಕೊಟ್ಟ ಗೌರವ ಸ್ಥಾನಮಾನವೇನೆಂಬುದನ್ನು ಈ ವಚನದಿಂದ ತಿಳಿಯಬಹುದು.)
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು