•  
  •  
  •  
  •  
Index   ವಚನ - 138    Search  
 
ಭಕ್ತನ ಜ್ಞಾನಿಸ್ಥಲ - ಲಿಂಗ
ಪಟ್ಟವ ಕಟ್ಟಿದ ಬಳಿಕ ಲಕ್ಷಣವನರಸುವರೆ, ಅಯ್ಯಾ? ಲಿಂಗದೇವನ ಪೂಜಿಸಿ ಕುಲವನರಸುವರೆ, ಅಯ್ಯಾ, ಕೂಡಲಸಂಗಮದೇವ 'ಭಕ್ತಕಾಯ ಮಮಕಾಯ' ವೆಂದನಾಗಿ?
Transliteration Paṭṭava kaṭṭida baḷika lakṣaṇavanarasuvare, ayyā? Liṅgadēvana pūjisi kulavanarasuvare, ayyā, kūḍalasaṅgamadēva'bhaktakāya mamakāya' vendanāgi?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 After the coronation, why Look for the royal marks? After the Liṅga worship, why Ask for a person's class? Since Lord Kūḍala Saṅgama has said: 'A bhakta's body is my own'. Translated by: L M A Menezes, S M Angadi
Hindi Translation राज्याभिषेक के पश्चात लक्षण खोंजेंगे? लिंगदेव को पूज कर जाति खोंजेंगे? कूडलसंगमदेव का कथन है भक्त काय मम काय॥ Translated by: Banakara K Gowdappa
Telugu Translation పట్టముకట్టిన వెనుక లక్షణము చూచెదరే? లింగదేవుని పూజించి కులము నెంతు రే; అయ్యా! కూడల సంగమదేవుడు ‘‘భ క్తకాయ మమకాయ’’ మనుచుండె. Translated by: Dr. Badala Ramaiah
Tamil Translation பட்டங்கட்டியபின் சிறப்பியல்பைத் தேடுவரோ? இலிங்கத்தை வணங்கிக் குலத்தைத் தேடுவரோ, ஐயனே கூடல சங்கம தேவன் பக்தருடல் தன்னுடலென்பானையனே. Translated by: Smt. Kalyani Venkataraman, Chennai
Marathi Translation पटाभिषेका नंतर, त्यांचे गुण दोष काढीशी कशास, बापुड्या तु लिंगदेव पूजा जो करी सर्वकाळ त्यांचे कूळ मूळ शोधू नये कूडलसंगमदेवा! भक्तीचे शरीर तेचि मज मंदीर, समजावे अर्थ - पट्टाभिषेक झाल्यानतर धर्म सिंहासनावर विराजमान झाल्यावर अशा जंगम गुरुचे वा धर्म गुरुचे लक्षण पारखण्याची गरज काय? नदीचे मूळ व धर्मगुरूचे कूळ व गुण-अवगुण पाहू नये. ते जसे आहेत तसा त्याचा स्विकार करावा. कारण त्यांच्यात परिवर्तन घडत असते. त्याच प्रमाणे लिंगदीक्षा झाल्यानंतर त्याची मूळ जात-धर्म शोधू नये. त्यांना शिवशरण म्हणूनच स्विकार करावा. कारण त्यांच्या मनरुपी मंदीरात परमात्मा विराजमान झालेला असतो. त्यांच्यात परीवर्तन निश्चित घडत असते. Translated by Rajendra Jirobe, Published by V B Patil, Hirabaug, Chembur, Mumbai, 1983 पट्टाभिषेका नंतर लक्षण पारखणार का? लिंगदेवाच्या पूजेनंतर कुळ पारखणार का? कारण, कूडलसंगमदेव भक्तकाया ममकाया म्हणतात. Translated by Shalini Sreeshaila Doddamani
ಶಬ್ದಾರ್ಥಗಳು ಅರಸು = ಹುಡುಕು; ಕಾಯ = ಶರೀರ; ಪಟ್ಟು = ಹಠ; ಮಮ = ನನ್ನ;
ಕನ್ನಡ ವ್ಯಾಖ್ಯಾನ ಯಾವನಾಗಲಿ ಪಟ್ಟ ಕಟ್ಟಿದರೆ ರಾಜನಾಗುತ್ತಾನೆ. ಕಟ್ಟಿದ ಪಟ್ಟದ ಜೊತೆಯಲ್ಲೇ ರಾಜ್ಯವೂ ಐಶ್ವರ್ಯವೂ ಚತುರಂಗಸೇನೆ ಪರಿವಾರ ಕೈವಾರವೂ ಅಧಿಕಾರವೂ ಒದಗುತ್ತವೆ. ಪಟ್ಟ ಕಟ್ಟುವುದಕ್ಕೆ ಮುನ್ನ ಅವನೇನಾಗಿದ್ದನೆಂಬುದು ಅಪ್ರಕೃತ. ಹಾಗೆಯೇ ಲಿಂಗದೀಕ್ಷಾಪಟ್ಟದ ಜೊತೆಯಲ್ಲೇ ಶಿವಭಕ್ತನಿಗೆ ಆತ್ಮೈಶ್ವರ್ಯವೂ ಅನುಗ್ರಹಸಾಮರ್ಥ್ಯವೂ ಸಂಕ್ರಮಿಸುವುದು. ಆಗ-ಅವನು ಹಿಂದೆ ಯಾವ ಜಾತಿಯವನಾಗಿದ್ದನೆಂದು ಎಣಿಸುವುದು ಅವಿವೇಕ ಮತ್ತು ಅಪರಾಧ. ಸಾಕ್ಷಾತ್ ಶಿವನೇ-“ನನಗೆ ಪ್ರತ್ಯೇಕವಾದೊಂದು ದೇಹವಿಲ್ಲ, ಶಿವಭಕ್ತರ ದೇಹವೇ ನನ್ನ ದೇಹ” ಎಂದಿರುವಾಗ ಅಂಥ ಭಕ್ತನ ದೇಹವನ್ನು ಆ ಜಾತಿಯದು ಈ ಜಾತಿಯದು ಎಂದು ಭಾವಿಸಿದರೆ-ಅದು ಶಿವನಿಗೇ ಮಾಡಿದ ಅವಮಾನ. ಬಸವಣ್ಣನವರ ಜಾತ್ಯತೀತವಾದ ಈ ಮಾತನ್ನು ಜಂಗಮರು ಶೆಟ್ಟರು ಗೌಡರು-ತಂತಮ್ಮ ಸರದಿಯಲ್ಲಿ ಸಂಪೂರ್ಣವಾಗಿ ಮರೆತು-ದಲಿತರನ್ನು ಧಿಕ್ಕರಿಸಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು