•  
  •  
  •  
  •  
Index   ವಚನ - 140    Search  
 
ಭಕ್ತನ ಜ್ಞಾನಿಸ್ಥಲ - ಶರಣರ ಸಂಗ
ಕಟ್ಟಿದಿರಿನಲ್ಲಿ ಶಿವಭಕ್ತನ ಕಂಡು, ದೃಷ್ಟಿಯಾರೆ ಶರಣೆಂದೊಡೆ, ಹುಟ್ಟೇಳು ಜನ್ಮದ ಪಾಪ ಬಿಟ್ಟು ಹಿಂಗುವುದು, ನೋಡಾ; ಮುಟ್ಟಿ ಚರಣಕ್ಕೆರಗಿದೊಡೆ ತನುವೊಪ್ಪದಂತೇ ಅಹುದು, ಪರುಷ ಮುಟ್ಟಿದಂತೆ! ಕರ್ತೃ ಕೂಡಲಸಂಗನ ಶರಣರ ಸಂಗವು ಮತ್ತೆ ಭವಮಾಲೆಗೆ ಹೊದ್ದಲೀಯದು, ನೋಡಾ.
Transliteration Kaṭṭidirinalli śivabhaktana kaṇḍu, dr̥ṣṭivāri śaraṇendoḍe, huṭṭēḷu janmada pāpa biṭṭu hiṅguvudu, nōḍā; muṭṭi caraṇakkeragidoḍe tanuvoppadantē ahudu, paruṣa muṭṭidante! Kartr̥ kūḍalasaṅgana śaraṇara saṅgavu matte bhavamālege hoddalīyadu, nōḍā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If, seeing a Śiva-bhakta just in front, You bow to him with open eyes, The sins of seven births Will be in flight. If, prostrate before him, you touch his feet It is as if Your body was offered all to him, As if transmuted by the alchemic stone. The fellow ship of the Śaraṇās Of Kūḍala Saṅgama, The Maker of this world, Will never let you wear The garland of rebirths again. Translated by: L M A Menezes, S M Angadi
Hindi Translation सामने शिवभक्त को देखकर श्रद्धा से प्रणाम कहने पर सात जन्मों का पाप दूर होता है चरण-स्पर्श कर प्रणाम करने पर तन प्रकाशित होता है पारस स्पर्श सा कर्ता कूडलसंगमदेव के शरणों का संग पुनः भवमाला में आने नहीं देता ॥ Translated by: Banakara K Gowdappa
Telugu Translation కట్టెదుట శివభక్తుని కనులార జూచి శరణుశరణని బలుక; ఏడు జన్మల బెరుగ పాపము పడిపోవు టరయుమా; చరణమంటి మొక్కు దే దేహముంటకు ఫలము పరుషమంటినట్లే! సంగని శరణుల సంగము మఱి భవమాలకు మఱలనీదు చూడుమ! Translated by: Dr. Badala Ramaiah
Tamil Translation தன்னெதிரே சிவனடியாரைக் கண்டு கண்ணாரக் கண்டு தஞ்சமெனின், ஏழேழு பிறவிகளின் தீவினை அகலுங் காணாய், தொட்டுத் தாள்பணியின் உடல் ஒளிரு மையனே. பரிசவேதி தொட்டது போலாம் உடையன் கூடல சங்கனின் அடியார் உறவு, மீண்டும் பிறவித் தொடருக்குக் கொண்டேகாது காணாய். Translated by: Smt. Kalyani Venkataraman, Chennai
Marathi Translation शिवभक्ता पाहता, शरण तू म्हणावे पाप ते धुवावे, जन्म सात धरिता चरण, शिवभक्ताचे जाण लोखंड सुवर्ण, परिसासंगे शरण संग घडता, चुके जन्म मरण जाईल तरुन, भवसागर कूडलसंगमदेवा! मुक्त होऊ आम्ही शरणसंग नेहमी, घडू द्यावा अर्थ - दिसता क्षणी तोंडातून बाहेर पडणारे शब्द अंतरमनातून येत असतात अशा वाणीत कृत्रिमता, भेसळपणा किंवा कसलेही विकार नसतात म्हणून शिवभक्त दिसताक्षणी ‘शरण असे तोंडून शब्द निघाल्यास ते अंतरमनातून निघाले आहेत असे समजावे. आणि अशा तऱ्हेने निघालेल्या शब्दामुळे त्यांचे सात जन्माचे पाप नष्ट होईल. शिवशरणाचे शिवभक्तीमुळे ते पुनीतपावन झालेले असतात व त्याचे शरीर तेजोमय व चैतन्यमन झालेले असते. त्यांच्या शरीराभोवती एक वलय निर्माण असते. जेथे ते आपले पाय ठेवतील ती जागा पुनीत पावन होत असते. त्या जागेत फुलांचा सुगंध दरवळत असतो. म्हणून ते पायात लाकडाची पादत्राणे घालून चालत असतात. अशा दिव्यत्व लाभलेल्या शरीरधारक शिवशरणांचे चरण त्यांच्यातील दिव्ये, सदाचार रूपी प्रवाह शरणागताच्या शरीरात वाहू लागतो. जसे परीसाच्या स्पर्शाचे लोखंडाचे सोने बनते तसे शिवशरणांचे चरण स्पर्शाने भक्ताचे जीवन पुनीत पावन होईल. शिवशरणांचा सत्संग लाभल्यास भक्ताचे जीवन सुफलाम तर होईलच शिवाय तो जन्म मरणाच्या फेऱ्यातून मुक्त होईल यात कसलाही संशय नाही. Translated by Rajendra Jirobe, Published by V B Patil, Hirabaug, Chembur, Mumbai, 1983 समोर आलेल्या सद्भक्ताला डोळेभर पाहून, शरणु शरणार्थी केले असता, सात जन्माचे पाप नष्ट होते. चरणस्पर्श केल्याने परिसस्पर्शाप्रमाणे देह पावन होईल. कर्ता कूडलसंगमदेवाच्या शरणांचा संग पुन्हा भवचक्रात येऊ देणार नाही. Translated by Shalini Sreeshaila Doddamani
ಶಬ್ದಾರ್ಥಗಳು ಎರಗು = ನಮಸ್ಕರಿಸು; ಕಟ್ಟಿದಿರು = ಕಟ್ಟದೆ ಇರುವುದು; ಜನ್ಮ = ಜನನ; ತನು = ಶರೀರ; ಪರುಷ = ಸ್ಪರ್ಶ ಮಣಿ; ಭವಮಾಲೆ = ಜೀವನ ಮಾಲೆ; ಹಿಂಗು = ಕಾಣದಾಗು, ಶಾಂತನಾಗು, ಬಿಡು, ತ್ಯಾಗ ಮಾಡು, ಹಿಂದಿರುಗು, ತೊಲಗು;
ಕನ್ನಡ ವ್ಯಾಖ್ಯಾನ ಶಿವಭಕ್ತನನ್ನು ಕಣ್ತುಂಬ ಕಂಡು-ನೀನೇ ಶಿವ. ನಿನಗೆ ನಮಸ್ಕಾರವೆಂದರೆ-ಅಲ್ಲಿಯವರೆಗಿನ ಜನ್ಮಾಂತರಗಳ ಪಾಪ ಪರಿಹಾರವಾಗುವುದು, ಅವನ ಪಾದಗಳನ್ನು ಮುಟ್ಟಿ ನಮಸ್ಕರಿಸಿದೆವೋ ನಮ್ಮ ದೇಹ ಪರುಷಮಯವಾಗುವುದು : ಅಂದರೆ-ಅವನನ್ನು ಸ್ಮರಿಸಿದ ನಮ್ಮ ಮನ ಪರುಷ, ಅವನಲ್ಲಿಗೆ ನಡೆದು ಹೋದ ನಮ್ಮ ಪಾದ ಪರುಷ, ಅವನನ್ನು ಕಂಡ ನಮ್ಮ ದೃಷ್ಟಿ ಪರುಷ. ಅವನ ಪಾದಗಳನ್ನು ಸ್ಪರ್ಶಿಸಿದ ನಮ್ಮ ಹಸ್ತ ಪರುಷ. ಅವನನ್ನು ಸ್ತುತಿಸಿದ ನಮ್ಮ ವಾಕ್ಕು ಪರುಷ ಆಗುವುದು. ಅದರಿಂದ ನಾವು ಮುಟ್ಟಿದ್ದೆಲ್ಲ ಶುದ್ಧ, ನಡೆದದ್ದೆಲ್ಲ ಸಚ್ಚಾರಿತ್ರ, ನೋಡಿದ್ದೆಲ್ಲ ದಿವ್ಯ, ಮಾತನಾಡಿದ್ದೆಲ್ಲ ಸತ್ಯ, ನೆನೆದದ್ದೆಲ್ಲ ಮಂಗಳವಾಗುವ ಘನತೆ ನಮ್ಮದಾಗುವುದು. ವಿ : ಪರುಷಗಳು ಪಾದಾದಿ ಐದು ವಿಧ. ಬಸವಣ್ಣನವರನ್ನು ಪುರಾಣಗಳಲ್ಲಿ ಪಂಚಪರುಷ ಮೂರ್ತಿಯೆಂದು ಬಣ್ಣಿಸಲಾಗಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು