ಎಂತಹವನಾದರೇನು, ಲಿಂಗವ ಮುಟ್ಟದವನೇ ಕೀಳುಜಾತಿ.
ಕುಲವಹುದು ತಪ್ಪದು ಲಿಂಗ ಮುಟ್ಟಲೊಡನೆ:
ಹೊನ್ನಹುದು ತಪ್ಪದು ಪರುಷ ಮುಟ್ಟಲೊಡನೆ.
ಕೂಡಲಸಂಗಮದೇವನೊಲ್ಲ ಸರ್ವಸಂದೇಹಿಗಳ!
Transliteration Entahavanādarēnu, liṅgava muṭṭadavanē kīḷujāti.
Kulavahudu tappadu liṅga muṭṭaloḍane:
Honnahudu tappadu paruṣa muṭṭaloḍane.
Kūḍalasaṅgamadēvanolla sarvasandēhigaḷa!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Whoever he be, without the Liṅga's touch
He is a man of base degree.
But with the touch of Liṅga , he
Must be a man of birth.
Whatever is touched
By the philosopher's stone
Must turn to gold.
Lord Kūḍala Saṅgama spurns
The over-scrupulous!
Translated by: L M A Menezes, S M Angadi
Hindi Translation कोई भी हो लिंग-धारी नहीं वह निम्न जात है
लिंग धारी होते ही कुलीन होना अनिवार्य है
पारस स्पर्श से स्वर्ण बनना अनिवार्य है
कूडलसंगमदेव सर्व संदेहियों को नहीं चाहते ॥
Translated by: Banakara K Gowdappa
Telugu Translation ఎంతటివారలైన నేమి? లింగములేనివాడే
కడజాతివాడు; కులమగుట తప్పడు లింగస్పర్శలో
బంగారమగుట తప్పదు స్పర్శవేది స్పృశింపగనే;
సంగమదేవు డొల్లడు సం దేహప్రాణుల.
Translated by: Dr. Badala Ramaiah
Tamil Translation எவ்வியல்பின னாயினென்? இலிங்க மறியாரே கீழோர்,
நற்குலமாவது தப்புமோ இலிங்கம் தீண்டுழி?
பொன்னாவது தப்புமோ பரிசவேதி தீண்டுழி?
கூடல சங்கம தேவன் ஐயமுற்றோரை நயவான்.
Translated by: Smt. Kalyani Venkataraman, Chennai
Marathi Translation
कोणीही असोत, जातीने कनिष्ठ
लिंगस्पर्शाने नष्ट होती कूळे
परीस स्पर्शाने, लोखंड होई सोने
येतो लिंगदीक्षेने, शिवकुळी
कूडलसंगमदेवा ! याची जाणीव नाही
नको ऐशा संदेही, शिवकुळी
अर्थ- कोणी का असेनात लिंगधारण केल्यास शुद्रता वा कुलहीनता नष्ट होते. तसेच पूर्वीचे पाप धुऊन जाते. म्हणजे लिंगधारण केल्याने शिवशरण होता येते. ज्या प्रमाणे परीसाचा लोखंडाला स्पर्श होताच पूर्वीचे गुणधर्मं नष्ट होतात व सुवर्ण होते. त्याप्रमाणे इष्टलिंग स्पर्शाने कुलहीनता, शुद्रता, दुराचार, दुराभिमान, दुर्विचार नष्ट होवून शिवभक्त बनतो. लिंगतत्व न जाणणाऱ्याना शिवतत्वानुसार आचार न करणाऱ्याना किंवा यावर संदेश करणाऱ्याना माझा कूडलसंगमदेव! ( परमेश्वर ) आपलेसे करून घेणार नाही. कारण संदेह करणारा शिवभक्त ठरणार नाही.
Translated by Rajendra Jirobe, Published by V B Patil, Hirabaug, Chembur, Mumbai, 1983
कोणीही असो, लिंगधारणा नसेल तर तोच कुलहीन.
लिंगधारणा केल्याने कुलीन होतो.
परिसस्पर्श झाल्याने सुवर्ण होते.
कूडलसंगमदेव आवडत नाही सर्व संदेहीना.
Translated by Shalini Sreeshaila Doddamani
ಶಬ್ದಾರ್ಥಗಳು ಕುಲ = ಜಾತಿ; ಪರುಷ = ಸ್ಪರ್ಶ ಮಣಿ; ಹೊನ್ನು = ಬಂಗಾರ;
ಕನ್ನಡ ವ್ಯಾಖ್ಯಾನ ಒಬ್ಬನು ಉತ್ತಮ ಕುಲದಲ್ಲಿ ಹುಟ್ಟಿದವನಿರಬಹುದು-ಅಷ್ಟರಿಂದಲೇ ಅವನು ಉತ್ತಮನೆಂದು ಗಣನೆಗೆ ಬರುವುದು ತಪ್ಪು. ಅವನು ಉತ್ತಮನಾಗುವುದು ಶಿವಲಿಂಗವನ್ನು ಮುಟ್ಟಿ ಪೂಜಿಸಿದಾಗಲೇ ಮತ್ತು ಹುಟ್ಟಿನೊಂದು ಕಾರಣದಿಂದಲೇ ಯಾವನೂ ಕೀಳಾಗುವುದೂ ಇಲ್ಲ. ಅವನು ಲಿಂಗವನ್ನು ಕೈಯಲ್ಲಿ ಹಿಡಿದು-ಕೀಳಾದಾನು ಹೇಗೆ ? ಕೀಳೆನಿಸಿದ ಕಬ್ಬಿಣವು ಸ್ಪರ್ಶಮಣಿಯನ್ನು ಸೋಕಿದರೆ ಸಾಕು ಚಿನ್ನವಾಯಿತು-ಇನ್ನದನ್ನು ಯಾರು ತಾನೇ ಕಬ್ಬಿಣವೆನ್ನಲಾದೀತು ? ಶಿವಭಕ್ತಿಯಿಂದ ಎಂಥವನೂ ಶ್ರೇಷ್ಠನಾಗುವನೆಂಬುದರಲ್ಲಿ ಸಂಶಯವಿಲ್ಲ-ಸಂಶಯಿಸಿದವರನ್ನು ದೇವರೊಲ್ಲ.
ಯಜ್ಞೋಪವೀತವು ಜನರನ್ನು ಹುಟ್ಟಿನಿಂದ ನೀಚಜಾತಿಯವರೆಂದು ಉಚ್ಚಜಾತಿಯವರೆಂದು ವಿಂಗಡಿಸಿದರೆ-ಲಿಂಗವು ದೀಕ್ಷೆಯಿಂದ ಜನರೆಲ್ಲರನ್ನೂ ಶ್ರೇಷ್ಠರೆಂದು ಒಂದುಗೂಡಿಸುವುದೆಂದು ಬಸವಣ್ಣನವರು ಸಾರುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು