ಭಕ್ತನ ಜ್ಞಾನಿಸ್ಥಲ - ಭಕ್ತಿಮಾರ್ಗ
ಓದಿದರೇನು,ಕೇಳಿದರೇನು, ಶಿವಪಥವನರಿಯದನ್ನಕ್ಕ?
ಓದಿತ್ತು ಕಾಣಿರೋ ಶುಕನು, ಶಿವಪಥವನರಿಯದನ್ನಕ್ಕ!
ಓದಿದ ಫಲವು ಮಾದಾರ ಚೆನ್ನಯ್ಯಂಗಾಯಿತ್ತು,
ಕೂಡಲಸಂಗಮದೇವಾ.
Transliteration Ōdidarēnu,kēḷidarēnu, śivapathavanariyadakka?
Ōdittu kāṇirō śukanu, śivajñānavanariyadannakka!
Ōdida phalavu mādara cennayyaṅgāyittu,
kūḍalasaṅgamadēvā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 What does it mean
To read and hear
Unless you know
The Śiva path?
Behold, a parrot read:
What was that worth
Unless he knew
The Śiva path?
Mādāra Cennayya
Has absorbed in himself
The fruit of what
One reads!
Translated by: L M A Menezes, S M Angadi
Hindi Translation पढ़ने से क्या? सुनने से क्या?
जब तक शिवपथ नहीं जानते,
शुक पढ़ता है,
शिवज्ञान बिना जाने;
पढने का फल मातंग चन्नय्या को मिला,
कूडलसंगमदेव ॥
Translated by: Banakara K Gowdappa
Telugu Translation చదివిన నేమి? విన్న నేమి?
శివపదము తెలియనందాక?
చదువదే చిలుక ఫలమేమి
శివపదము తెలియనందాక?
చదివిన ఫలము మాదార చెన్నయ్యకు కల్లె
కూడల సంగమ దేవా!
Translated by: Dr. Badala Ramaiah
Tamil Translation ஓதிலென்ன? கேட்பிலென்ன? சிவநிலையை யறியாவரை?
ஓதியது காணீரோ கிளி, சிவஞானமறியுமோ?
ஓதியபயன் மாதாரச் சென்னையனுக்காயிற்று
கூடல சங்கம தேவனே.
Translated by: Smt. Kalyani Venkataraman, Chennai
Marathi Translation
शिवपथ फळेना, वाचन कशास
ऐकून उपदेश, व्यर्थ आहे
शिवज्ञान समजेना, कशाला बोलणे
उगीच भुंकणे, श्वाना परी
मातंग चन्नया, शिवज्ञान जाणिले
फलदाई ठरले, वाचल्याने
कूडलसंगमदेवा! शिवज्ञानाची खुण
वाचन लिखाण, शुद्ध त्यांचे-
अर्थ - शिवपथ संबंधी व शिवज्ञान एक-चित्ताने न ऐकणे, एक चित्ताने न वाचणे काय कामाचे ? असले ऐकणे म्हणजे या कानाने ऐकणे व त्या मानाने सोडणे होय. असले वाचणे म्हणजे बडबडणे-ओरडणे होय. जसे कुत्रा भूंकत असतो तशातलाच हा प्रकार होय शिवशरण मातंग चन्नया यांनी ऐकण्याचे व वाचनाचे मर्म जाणलेले होते. म्हणून ते खरे ज्ञानी होवू शकले व शेवटी ते पूजनीय ठरले.
Translated by Rajendra Jirobe, Published by V B Patil, Hirabaug, Chembur, Mumbai, 1983
शिवपथ जाणल्याविना, श्रवण केले काय, पठण केले काय ?
पोपटपंची काय कामाची शिवज्ञानाविना?
पठणाचे फळ मिळे मांग चन्नय्याला कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಪಥ = ದಾರಿ; ಶುಕ = ಗಿಳಿ;
ಕನ್ನಡ ವ್ಯಾಖ್ಯಾನ ಸ್ವಂತವಾಗಿ ಓದಿಯೂ ವಾದಗಳನ್ನು ಕೇಳಿಯೂ ಪ್ರಯೋಜನವೇನು-ಕೀಳುಕುಲದವನೂ ಶಿವಭಕ್ತಿಯಿಂದ ಶ್ರೇಷ್ಠನಾಗುವನೆಂಬ ಶಿವಧರ್ಮಮರ್ಮವನ್ನು ಗ್ರಹಿಸದ ಮೇಲೆ ? ಇಂಥ ಓದೆಲ್ಲ ಗಿಳಿಯ ಬಾಯಿಪಾಠದಂತೆ ಕೇವಲ ಶಬ್ದಾಯಮಾನವಷ್ಟೆ ! ಓದಿದ ಶಿಷ್ಟರು ದಲಿತರನ್ನು ತಲೆಯೆತ್ತಲು ಬಿಡದಿದ್ದ ಕಾಲಕ್ಕೆ-ಮಾದಾರ ಚೆನ್ನಯ್ಯನು ಸ್ವಂತ ಪರಿಶ್ರಮದಿಂದ ಓದಿ ಆತ್ಮವಿಶ್ವಾಸವನ್ನೂ ಆತ್ಮಬಲವನ್ನೂ ವರ್ಧಿಸಿಕೊಂಡು ಆ ದಲಿತರೆಲ್ಲರ ಧುರೀಣನಾಗಿ ನಿಂತ. ಅವನನ್ನು ಬಸವಣ್ಣನವರು ಸ್ಮರಿಸಿ-ಶಿಷ್ಠರನ್ನು ಝಂಕಿಸುತ್ತಲೇ ದಲಿತಶಿವಭಕ್ತರನ್ನು ಹುರಿದುಂಬಿಸುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು