ಹಾವಿನ ಡೊಂಕು ಹುತ್ತಕ್ಕೆ ಸಸಿನ;
ನದಿಯ ಡೊಂಕು ಸಮುದ್ರಕ್ಕೆ ಸಸಿನ:
ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ!
Transliteration Hāvina ḍoṅku huttakke sasina;
nadiya ḍoṅku samudrakke sasina:
Nam'ma kūḍalasaṅgana śaraṇara ḍoṅku liṅgakke sasina!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 The crookedness of the serpent
is straight enough for the snake-hole.
The crookedness of the river
is straight enough for the sea.
And the crookedness of our Lord's men
is straight enough for our Lord!
Translated by: A K Ramanujan
Book Name: Speaking Of Siva
Publisher: Penguin Books
----------------------------------
The anthill needs
The bendings of the snake;
The ocean needs
The bendings of the stream;
Liṅga too needs
The bendings of Kūḍala
Saṅga's Śaraṇas !
Translated by: L M A Menezes, S M Angadi
Hindi Translation सर्प की वक्रता वल्मीक के लिए है उपयुक्त है
नदी की वक्रता समुद्र के लिए उपयुक्त है
कूडल संग के शरणों की वक्रता लिंग के लिए उपयुक्त है ॥
Translated by: Banakara K Gowdappa
Telugu Translation పాము వంకర పుట్టకు యోగ్యము
ఏటి వంకర సంద్రమునకు యోగ్యము
సంగని శరణుల వంకర లింగమునకు యోగ్యమైపోయెనయ్యా!
Translated by: Dr. Badala Ramaiah
Tamil Translation பாம்பின் வளைவு புற்றுக்குச் செவ்வை,
நதியின் வளைவு புணரிக்குச் செவ்வை,
நம் கூடல சங்கனடியார் வளைவு
இலிங்கத்திற்குச் செவ்வை.
Translated by: Smt. Kalyani Venkataraman, Chennai
Marathi Translation
सापाची वक्रता, उचित वारुळाला
उचित सागराला, वक्र नद्या
शरणांची वक्रता, लिंगदेवाला उचित
कूडलसंगमदेवात, ऐक्य होण्या
अर्थ - सर्पाची वक्रता वारुळाला उचित वाटते. म्हणून ते आपल्यात समावून घेऊन सुरक्षित ठेवते. नदीची वक्रता समुद्राला उचित वाटते. म्हणून तो तिला समावून घेतो. कारण नदीची वळणे कधी प्रसरण तर कधी आकुंचित होणे हे सर्व दृष्य पाहून समुद्राला वाटते की, माझ्याकडे धाव घेण्यासाठीच, शरण येण्यासाठीच तिची ही धडपड चालू आहे, म्हणून समुद्र नदीला आपल्यात समावून घेतो. त्याचप्रमाणे शरणाची धावपळ, त्यांचे आचार-विचार उठणे, बसणे, चालणे, बोलणे हे सर्व जगाच्या दृष्टीने वक्र किंबहुना आगळे-वेगळे असेल पण त्यांची एकूण वाटचाल अंतीम ध्येयाकडे चालू असते. म्हणून लिंगदेव त्यांना आपल्यात समावून घेतो. अर्थात आपल्यात एकरूप करून घेतो.
Translated by Rajendra Jirobe, Published by V B Patil, Hirabaug, Chembur, Mumbai, 1983
सापाची वक्रता वारुळाला युक्त होते.
नदीची वक्रता सागराल युक्त होते.
कूडलसंगमदेवाच्या शरणाची वक्रता
लिंगदेवाला युक्त होते.
Translated by Shalini Sreeshaila Doddamani
ಶಬ್ದಾರ್ಥಗಳು ಸಸಿನ = ಯೋಗ್ಯ, ಸರಿ;
ಕನ್ನಡ ವ್ಯಾಖ್ಯಾನ ಶರಣನ ರೀತಿ ಲೋಕದ ಜನಜಂಗುಳಿಯ ರೀತಿಗಿಂತ ಭಿನ್ನವಾಗಿರುವುದು, ಅವನು ಹರಕುಬಟ್ಟೆ ಧರಿಸಿ, ಮುರುಕಲು ಮನೆಯಲ್ಲಿದ್ದರೂ-ಅನ್ಯಾಯದೊಡನೆ ರಾಜಿಯಾಗದ ಅವನ ನಿರ್ದಾಕ್ಷಿಣ್ಯವು ಅಹಂಕಾರವಾಗಿ, ಅಧರ್ಮಿಷ್ಠರೊಡನೆ ಸಹಕರಿಸದ ಅವನ ಸತ್ಯಾಗ್ರಹವು ಮೊಂಡುತನವಾಗಿ, ತನಗಿಲ್ಲದಿದ್ದರೂ-ಇದ್ದುದನ್ನೇ ಇಲ್ಲದವರಿಗೆ ಕೊಟ್ಟುಬಿಡುವ ಅವನ ತ್ಯಾಗವು ಮೂರ್ಖತನವಾಗಿ, ಪೂಜೆಯೆಂದು ಧ್ಯಾನವೆಂದು ಧರ್ಮವೆಂದು ತಹತಹಿಸುವ ಅವನ ಶ್ರದ್ಧೆಯು ವ್ಯರ್ಥಕಾಲಕ್ಷೇಪವಾಗಿ-ಇಡಿಯಾಗಿ ಅವನ ದಿವ್ಯದ ಹಂಬಲವೇ ಹುಚ್ಚಾಗಿ ಕಾಣಬಹುದು. ಆದರೇನಂತೆ ಆ ಮಹನೀಯನ ಈ ನಡೆವಳಿಯೆಲ್ಲಾ ಶಿವನಿಗೆ ಪ್ರಿಯವಾಗಿರುವುದು.
ಹಾವು ಸೆಟೆದು ನುಗ್ಗಿದರೆ ಹುತ್ತವನ್ನು ಪ್ರವೇಶಿಸಲಾರದು, ನದಿ ನೆಟ್ಟಗೆ ಹರಿಯುವುದು ಪ್ರಕೃತಿ ವಿರುದ್ಧವೇ ಆಗಿರುವುದು. ತಲುಪಬೇಕಾದ ಗುರಿಗೆ ಅನುಗುಣವಾಗಿರುವುದಲ್ಲವೇ ಮಾರ್ಗ ?
ಅರ್ಧನಾರೀಶ್ವರನೂ ಕಾಮದಹನಭಯಂಕರನೂ, ಫಕೀರನೂ ಪ್ರಭುವೂ, ಸ್ಮಶಾನವಾಸಿಯೂ, ಮಂಗಳಮಯನೂ, ನೀಲಕಂಠನೂ, ಶ್ರೀಕಂಠನೂ, ಗಂಗಾಧರನೂ, ಉರಿಗಣ್ಣನೂ ಆದ ಶಿವನ ಭಕ್ತರು ಅಲೌಕಿಕರಾದರೂ ಲೋಕಹಿತರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು