ಭಕ್ತನ ಮುಖದರ್ಪಣದಲ್ಲಿ ಲಿಂಗವ ಕಾಣಬಹುದು,
ಭಕ್ತದೇಹಿಕದೇವ ಅನಿಮಿಷನಾಗಿ;
ಕೂಡಲಸಂಗಮದೇವ ಭಕ್ತನ ನುಡಿಯ ನಡುವೆ ರಾಶಿಯಾಗಿರ್ಪನು.
Transliteration Bhaktana mukhadarpaṇadalli liṅgava kāṇabahudu,
bhaktadēhikadēva animiṣanāgi;
kūḍalasaṅgamadēva bhaktana nuḍiya naḍuve rāśiyāgirpanu.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 The Liṅga can be seen
Mirrored in the bhakta's face,
Because the God
Embodied in the bhakta has
A winkless eye.
Lord Kūḍala Saṅgama
Dwells altogether in
The heart of the bhakta's words.
Translated by: L M A Menezes, S M Angadi
Hindi Translation भक्त मुख-दर्पण में लिंग देख सकते हैं
भक्तदेही देव अनिमिष जो है-
कूडलसंगमदेव
भक्त वचन-मध्य प्रचुरता से रहते हैं ॥
Translated by: Banakara K Gowdappa
Telugu Translation భక్తుని ముఖదర్పణమున లింగమును చూడవచ్చు;
భక్త దేహిక దేవు డనిమిషుడై
కూడల సంగమదేవుడు
భక్తుని నుడులనడుమ రాశిjైు యుండు.
Translated by: Dr. Badala Ramaiah
Tamil Translation பக்தனின் முகத்திலே இலிங்கத்தைக் காணலாம்!
பக்தனுடலிலே கடவுள் உறைகிறானன்றோ!
கூடல சங்கம தேவன்
பக்தனின் சொல்லிற்கு மகிழ்ந்திருப்பான்.
Translated by: Smt. Kalyani Venkataraman, Chennai
Marathi Translation
भक्तमुख दर्पणी, लिंगदेव दर्शन
भक्त शरीरी जाण, तूचि देवा
कूडलसंगमदेवा! भक्त वचनात
भरुनि ओतप्रोत, राही देवा
अर्थ- हे कूडलसंगमदेवा! (परशिवा) शिवभक्ताच्या क्रांतीयुक्त मुखदर्पणात लिंगदेवाचे दर्शन घडते आहे. म्हणून सदैव माझी दृष्टी शिवभक्ताच्या मुखाकडे पहावी अशी माझी प्रार्थना आहे. कारण शिवभक्ताच्या देहातच परमेश्वर वास करीत असतो. मठ मंदीरात किंवा अन्यत्र नाही.
म्हणून सदैव माझ्या हातून त्यांची सेवा घडावे. जेणे करून त्यांचे दर्शन घडावे. शिवभक्त तोंड उघडून बोलू लागताच त्यांच्या प्रत्येक शब्दाशब्दातून अमृताची विचार धारा वाहत असते. कारण त्यांच्या प्रत्येक शब्दात परमेश्वर व्यापून राहिला आहे. नव्हे भक्ताच्या प्रत्येक शब्दात ओतप्रोत भरला आहे. म्हणून सदैव त्यांची वाणी माझ्या कानी पडो. अशी प्रार्थना महात्मा बसवेश्वर येथे परमेश्वर चरणी करीत आहेत.
Translated by Rajendra Jirobe, Published by V B Patil, Hirabaug, Chembur, Mumbai, 1983
भक्ताच्या मुखदर्पणात लिंगदेवाला पाहता येते.
भक्त देहातच लिंगदेव अनिमिष आहे.
कूडलसंगमदेव भक्ताच्या वाणीत भरुन राहिला आहे
Translated by Shalini Sreeshaila Doddamani
ಶಬ್ದಾರ್ಥಗಳು ಅನಿಮಿಷ = ಯಾವಾಗಲು ಕಣ್ಣು ತೆರೆದಿರುವವ, ದೇವತೆ, ಒಬ್ಬ ಶಿವಶರಣ; ದರ್ಪಣ = ಕನ್ನಡಿ; ದೇಹಿಕ = ಬೇಡುವನು;
ಕನ್ನಡ ವ್ಯಾಖ್ಯಾನ ಬೆಳಗಾಗುತ್ತಲೇ ನಾಸ್ತಿಕನ ಮುಖ ನೋಡಬಾರದು. ಲೋಕಲಂಟನಾದ ಆ ನಾಸ್ತಿಕನ ಮುಖದಲ್ಲಿ ಹಮ್ಮುಬಿಮ್ಮುಗಳೇ ಅಡಕಿರುವವು, ಕಣ್ಣಲ್ಲಿ ಸಿಟ್ಟು ಸೇಡುಗಳೇ ತುಂಬಿರುವವು, ಮಾತಿನಲ್ಲಿ ರೂಕ್ಷತೆ ರಾಕ್ಷಸತೆಗಳೇ ಸೋಸಿರುವವು. ಇಂಥವನ ಮುಖವನ್ನು ಕಂಡವನ ಮನದಲ್ಲಿಯೂ ಆ ದುರ್ಭಾವಗಳು ಅಚ್ಚೊತ್ತದಿರುವುದಿಲ್ಲ.
ಬೆಳಗಾಗುತ್ತಲೇ ಆತ್ಮದರ್ಶನವಾಗಲೆಂದು ಕನ್ನಡಿಯನ್ನು ನೋಡಬೇಡಿ-ಶಿವಭಕ್ತನ ಮುಖವನ್ನು ನೋಡಿರಿ.
ಭಕ್ತನ ದೇಹವೇ ಶಿವನ ದೇಹವಾಗಿ-ಅಲ್ಲಿಯೇ ಶಿವನು ನಿಮಿಷವೂ ಎಡೆಬಿಡದೆ ಬೀಡುಬಿಟ್ಟರುವನಾಗಿ, ಅಂಥ ಶಿವಭಕ್ತನ ಮುಖವನ್ನು ಕಂಡವರಿಗೆ-ಅಲ್ಲಿ ಶಿವಮುಖವೇ ಮುಖಾಮುಖಿಯಾಗುವುದು. ಆ ಶಿವಭಕ್ತನ ಶಿವಧ್ಯಾನಸ್ತಿಮಿತವಾದ ಕಣ್ಣಲ್ಲಿ ಶಿವನ ಅನಿಮೇಷಕೃಪೆಯೇ ತುಂಬಿರುವುದು ಮತ್ತು ಅವನಾಡುವ ಮಾತಿನಲ್ಲಿ ಶಿವಶಕ್ತಿಯೇ ಧಾರೆಧಾರೆಯಾಗಿ ಸೂಸಿ ಶ್ರೇಣಿಶ್ರೇಣಿಯಾಗಿರುವುದು. ಆ ಭಕ್ತನಾಡುವ ಪ್ರತಿಯೊಂದು ಮಾತಿನಲ್ಲಿಯೂ ಶಿವಾನುಭೂತಿಯು ಸಾಂದ್ರವಾಗಿರುವುದು.
ಬೆಳಗ್ಗೆ ಎದ್ದವನು ನಿಜವಾಗಿಯೂ ಎಚ್ಚರವಾಗಿದ್ದರೆ ಶಿವಭಕ್ತನ ಮುಖವನ್ನು ದರ್ಶನ ಮಾಡುವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು