ಭಕ್ತನ ಜ್ಞಾನಿಸ್ಥಲ - ಭಕ್ತಿಮಾರ್ಗ
ಮುನ್ನಿನವರು ಹೋದ ದಾರಿ ಭಯ, ಕಾಣಿರಣ್ಣಾ!
ಬಲ್ಲಾಳನ ವಧುವಿನೊಡನೆ ಸರಸವಾಡಿದಂದಿಂದ ಭಯ, ಕಾಣಿರಣ್ಣಾ!
ಸಿರಿಯಾಳನ ಮಗನ ಬೇಡಿದಂದಿಂದ ಭಯ, ಕಾಣಿರಣ್ಣಾ!
ದಾಸನ ವಸ್ತ್ರವ ಸೀಳಿದಂದಿಂದ ಭಯ, ಕಾಣಿರಣ್ಣಾ!
ಅಘಟಿತಘಟಿಕರು, ವಿಪರೀತಚರಿತರು-
ಕೂಡಲಸಂಗನ ಶರಣರು ನಡೆದ ದಾರಿ ಭಯ, ಕಾಣಿರಣ್ಣಾ!!
Transliteration Munninavaru hōda dāri bhaya, kāṇiraṇṇā!
Ballāḷana vadhuvinoḍane sarasavāḍidandinda bhaya, kāṇiraṇṇā!
Siriyāḷana magana bēḍidandinda bhaya, kāṇiraṇṇā!
Dāsana vastrava sīḷidandinda bhaya, kāṇiraṇṇā!
Aghaṭitaghaṭitaru, viparītacaritaru-
kūḍalasaṅgana śaraṇaru naḍeda dāri bhaya, kāṇiraṇṇā!!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Behold, my brother's how fearful is
The path the ancients trod!
Behold, my brothers, how fearful is
When he made sport
With Ballāḷa's wife!
Behold, my brothers, how fearful is
When he made demand
Of Siriyāḷa's son!
Behold, my brothers, how fearful is
That time he tore up Dāsa's cloth!
Behold, my brothers, how fearful is
The path the KūḍalaSaṅga's
Śaraṇās trod-they who make
The impossible possible,
Whose ways are strange and wonderful!
Translated by: L M A Menezes, S M Angadi
Hindi Translation देखो भाई पूर्वजों का अवलंबित मार्ग अनुगत भयानक है
बल्लाळ की पत्नि से जब क्रीड़ाएँ की तब से भयानक है ।
सिरियाळ के पुत्र को जब माँगा तब से भयानक है ।
दास का वस्त्र जब फाडा तब से भयानक है
अधटित-घटना समर्थ विलक्षण चरितवाले
कूडलसंगमेश शरणों का अनुगत पथ भयानक है ॥
Translated by: Banakara K Gowdappa
Telugu Translation పురాతను లేగిన మార్గము భయంకరమయ్యా!
బళ్ళాళుని వధువుతో సరసమాడినప్పటినుండి భయంకరమయ్యా! - సిరియాళుని బిడ్డను వేడినప్పటినుండి భయంకరమయ్యా!
దాసుని వస్త్రము చించినప్పటినుండి భయంకరమయ్యా.
అఘటిత ఘటికులు విపరీత చరిత్రులు
సంగని శరణులు నడచు దారి భయము కదయ్యా!
Translated by: Dr. Badala Ramaiah
Tamil Translation முன்னோர் சென்றவழி அஞ்சும் தன்மைத்துக் காணீரோ!
வல்லாளன் கிழத்தியொடு இன்சொல்லாடியதனைய அச்சம், காணீரோ
சிறுத்தொண்டன் மகனை, வேண்டியதனைய அச்சம் காணீரோ
தாசனின் அறுவையைக் கிழித்தனைய அச்சம் காணீரோ
செயற்கரிய செய்தோர் மாறுபட்ட வரலாறுடையோர்
கூடல சங்கன் அடியார் சென்றவழி, அச்சமுடைத்து, காணீரோ.
Translated by: Smt. Kalyani Venkataraman, Chennai
Marathi Translation
पुरातनांचा पथ भयानक आहे पहा.
बल्लाळाच्या वधू बरोबर खेळणे भयानक आहे पहा.
सिरियाळाच्या मुलाला मागणे भयानक आहे पहा.
दासिमव्याला वस्त्र मागितल्यापासून भयानक आहे पहा.
अघटित घटित, विपरीतचरित्र
कूडलसंगमदेवाच्या
भक्तानी आचरण केलेला पथ भयानक आहे पहा.
Translated by Shalini Sreeshaila Doddamani
ಶಬ್ದಾರ್ಥಗಳು ಘಟಿತ = ; ಚರಿತ = ; ವಧು = ಮದುವೆಯಾಗುವ ಹೆಣ್ಣು; ವಸ್ತ್ರ = ಬಟ್ಟೆ; ಸರಸ = ಪ್ರೀತಿ;
ಕನ್ನಡ ವ್ಯಾಖ್ಯಾನ ತಮಗಿಂತ ಹಿಂದಿನವರು ಶಿವನನ್ನು ಉಪಾಸಿಸಿದ ಮಾರ್ಗ ಭಯಂಕರವೆನ್ನುವರು ಬಸವಣ್ಣನವರು. ಏಕೆಂದರೆ ಶಿವನು ಆ ಶರಣರಿಗೆ ಸುಲಭದಲ್ಲಿ ಒಲಿಯಲಿಲ್ಲ, ಒಲಿಯುವ ಮುನ್ನ ಅವರಿಗೆ ಕೊಟ್ಟ ಕಾಟಕ್ಕೆ ಮಿತಿಯಿರಲಿಲ್ಲ.
ಯಾವುದನ್ನು ಮನುಷ್ಯನು ತನ್ನ ರಕ್ತವನ್ನು ಚೆಲ್ಲಿ ಸಂರಕ್ಷಿಸಿಕೊಳ್ಳಲು ಹೋರುವನೋ-ಅದನ್ನೇ ತನಗೆ ಬಲಿಕೊಡೆಂದು ಶಿವನು ಆ ತನ್ನ ಭಕ್ತರ ಬೆಂಬತ್ತಿದ : ಅವನು ಬಲ್ಲಾಳನಿಗೆ ಒಲಿಯುವ ಮುನ್ನ ಅವನ ಹೆಂಡತಿಯೊಡನೆ ಸರಸವಾಡಬೇಕೆಂದ, ಸಿರಿಯಾಳನಿಗೆ ಒಲಿಯುವ ಮುನ್ನ ಅವನ ಮಗನನ್ನೇ ಕೊಯ್ದು ಅಡಿಗೆಮಾಡಿಡಲು ಕೇಳಿದ. ದಾಸಿಮಯ್ಯನಿಗೆ ಒಲಿಯುವ ಮುನ್ನ ಅವನುಟ್ಟ ಬಟ್ಟೆಯನ್ನೇ ಸೆಳೆದು ಸೀಳಿ ಬಿಸುಡಿದ. ಅದಕ್ಕೊಂದಕ್ಕೂ ಆ ಶರಣರು ಅಸಮ್ಮತಿ ಸೂಚಿಸಲಿಲ್ಲ. ಇಂಥ ಶಿವನ ಮತ್ತು ಅವನ ಶರಣರ ನಡೆವಳಿಯನ್ನು ವಿಪರೀತವಾಯಿತೆನ್ನುತ್ತ ಭಯಕಂಪಿತರಾಗುವರು ಬಸವಣ್ಣನವರು. ಅಂದರೆ ಭಕ್ತಿಯ ಹೆಸರಿನಲ್ಲಿ ಸಿರಿಯಾಳ ಮುಂತಾದವರು ನಡೆದುಕೊಂಡುದನ್ನು ಆದರ್ಶವಾಗಿ ಸ್ವೀಕರಿಸಲಾಗದೆಂದು ವಿನಯದಿಂದಲೇ ಅರಿಕೆಮಾಡಿಕೊಳ್ಳುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು