ಭಕ್ತನ ಜ್ಞಾನಿಸ್ಥಲ - ಸತ್ವಪರೀಕ್ಷೆ
ದೇವನೊಳ್ಳಿದನೆಂದು ಮುಯ್ಯಾನಲು ಬೇಡ!
ಕರಕಟ ಕಾಡಿದನೊಳ್ಳಿದನೆ?
ಅಳಿಸುವ ನಗಿಸುವನೊಳ್ಳಿದನೆ?
ಬೆಚ್ಚದೆ ಬೆದರದೆ ತೊತ್ತುತನವ ಮಾಡಲು,
ತನ್ನನೀವ ಕೂಡಲಸಂಗಮದೇವ.
Transliteration Dēvanoḷḷidanendu muyyānalu bēḍa!
karakaṭa kāḍidanoḷḷidane?
Aḷisuva nagisuvanoḷḷidane?
Beccade bedarade tottutanava māḍalu,
tannanīva kūḍalasaṅgamadēva.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Do not draw near to God
Presuming He is kind...
Can He be kind
Who broke you on the rack?
Can He be kind
Who makes you weep and laugh?...
But if you slave for Him
Unflinchingly,
Lord Kūḍala Saṅgama
Offers Himself to you!
Translated by: L M A Menezes, S M Angadi
Hindi Translation देव को दयालु जान सख्यता का व्यवहार न कर
निरंतर यंत्रणा देनेवाला दयालु है?
रुलाने हँसानेवाला दयालु है?
बिना भयभीत हुए सेवा करने पर
कूडलसंगमदेव अपने को अर्पित करेंगे ॥
Translated by: Banakara K Gowdappa
Telugu Translation దేవుడు మంచివాడని పొంగిబోకురా!
కటకట గారించువాడు మంచివాడే?
ఏడ్పించి నవ్వించువాడు మంచివాడే?
బెదరక చెదరక తొత్తుపని సేయ
తన్ను నిచ్చుకొనునయ్య సంగమ దేవుడు.
Translated by: Dr. Badala Ramaiah
Tamil Translation கடவுள் நல்லோனென உரிமை கொள்ளற்க.
ஆட்டுவிப்போன் நல்லனோ?
அழவிட்டு நகையாட வைப்போன் நல்லனோ?
அஞ்சாது, நடுங்காது தொண்டாற்றின்
தன்னையே ஈவன் கூடல சங்கம தேவன்.
Translated by: Smt. Kalyani Venkataraman, Chennai
Marathi Translation
करू नये सलगी , समजुनि तुजला
नोहे तो चांगला, पीडा देई
हसविणे छान का रडविणे चांगले
लक्षण हे कसले? देवा तुझे
घाबरू कशाला, कासया गांगरू
चाकरीत राहू, भक्ता दारी
कूडलसंगमदेवा! पाहताचि ऐशा
जानतो ! मी खासा, माझा होशी
अर्थ - देव सहृदयी आहे, तो वाईट चिंतीत नाही माझे भले करेल अशा समजुतीने त्याच्याशी सलगी करु नये. सदैव गुरूभक्ती, लिंगार्चना, जंगम-सेवा दासोह व कायकात (श्रम) मग्न राहावे. कार्यरत असतांना साक्षात परमेश्वर आपल्या समोर आल्यास त्याच्याकडे देखील लक्ष देण्याची गरज नाही. तो त्याच्या कामासाठी आला असेल असे समजून आपण आपले काम करीत राहावे. परमेश्वर आपल्या सर्वाच्या भावना जाणतो. देव आपले भले करणारा आहे. म्हणून इतर गोष्टींकड़े दुर्लक्ष करू नये. तो आपणास खूप कष्ट देईल. पीडा देईल. रडविणारा आहे. म्हणून कष्ट देणाऱ्यांना रडविणऱ्याना कोणी चांगले म्हणतील का? म्हणून घाबरू नका, गांगरून जाऊ नका सदाचार, भक्ती, लिंगार्चना, जंगमसेवा, दासोहात मग्न व कायकात (कष्टांत) कार्यरत राहिल्यास - परमेश्वर सदैव तुमचाच होतो. हे परमेश्वराला हेच मान्य आहे.
Translated by Rajendra Jirobe, Published by V B Patil, Hirabaug, Chembur, Mumbai, 1983
देव चांगला आहे म्हणून त्याच्याशी व्यवहार करू नको,
खूप त्रास देणारा कधी चांगला आहे?
रडविणारा, हसविणारा कधी चांगला आहे?
भिल्या, घाबरल्या विना भक्ती केल्याने
स्वतःच स्वतःला देतात कूडलसंगमदेव,
Translated by Shalini Sreeshaila Doddamani
ಶಬ್ದಾರ್ಥಗಳು ಕರಕಟ = ಅತ್ಯುರ್ಘವಾಗಿ; ತೊತ್ತುತನ = ಸೇವೆ, ಊಳಿಗ; ಬೆದರು = ಹೆದರುವುದು, ಭಯ ಪಡುವುದು; ಮುಯ್ಯಾನ = ಭುಜಕ್ಕೆ ಭುಜ ಹಚ್ಚು, ಸರಿಗಟ್ಟು, ಸರಸವಾರು, ಸಲುಗೆ ತೋರಿಸು;
ಕನ್ನಡ ವ್ಯಾಖ್ಯಾನ ದೇವರು ಒಳ್ಳೆಯವನೆಂದು ಅವನೊಡನೆ ತೀರ ಸಲಿಗೆಯಿಂದ ವರ್ತಿಸುವುದು ಬೇಡ. ಆ ದೇವರ ಒಳ್ಳೆಯತನ-ಮೈಯೆಲ್ಲಾ ಮುಳ್ಳಾದ ಮರದ ತುದಿಗೊಂಬೆಯ ಹೂವಿನಂತಿರುವುದು, ಅದನ್ನು ಪಡೆಯಬೇಕಾದವನು ಪಡಬೇಕಾದ ಕಷ್ಟ ಸ್ವಲ್ಪವಲ್ಲ. ಏಕೆಂದರೆ ಆ ಕ್ರಮದಲ್ಲಿ ಶಿವನು ಭಕ್ತನಲ್ಲಿರುವ ಮಾಯಾಮಲಿನಗುಣಗಳನ್ನು ಕತ್ತರಿಸಿ ತೆಗೆಯಲು ಕೈಗೊಳ್ಳುವ ನಿಶಿತಶಸ್ತ್ರಚಿಕಿತ್ಸೆ ಅಡಗಿದೆ. ಆದ್ದರಿಂದಲೆ ಆ ಅವಧಿಯಲ್ಲಿ ದೇವರು ಭಕ್ತನನ್ನು ಮಿತಿಮೀರಿ ಕಾಡುತ್ತಿರುವನೆನಿಸುವುದುಂಟು. ಐಹಿಕ ಅಭ್ಯುದಯಕ್ಕೇ ಸಹನೆ ಶಕ್ತಿ ಶೌರ್ಯ ಅವಶ್ಯವಾಗಿರುವಾಗ-ಆತ್ಮೋನ್ನತಿಯು-ದಾರಿಯಲ್ಲಿ ಬಿದ್ದಿರುವ ಒಂದು ಕಲ್ಲೆಂದು ಭಾವಿಸುವುದು ತಪ್ಪು. ಅದನ್ನು ಪಡೆಯಲು ತೊಡಗಿದಾಗ-ಎದುರಾಗುವ ಕಷ್ಟಕಾರ್ಪಣ್ಯಗಳನ್ನೆಲ್ಲ ಮೀರಿ ಮುಂದುವರಿದಾಗ ಮಾತ್ರ ಜಯ ತನ್ನದಾಗುವುದೆಂಬುದು ಈ ವಚನದ ತಾತ್ಪರ್ಯ.
ಒಡೆಯ ಮತ್ತು ಆಳಿನ ಪ್ರತಿಮೆಯ ರೂಪದಲ್ಲಿ ಈ ವಚನ ಅರಳಿದೆ : ತನ್ನ ಒಡೆಯನಿಗೆ ಯಾವನು-ಅವನು ಕೊಡುವ ಕಷ್ಟಗಳಿಂದಾಗಿ-ಅಂಜದೆ ಅಥವಾ ಎದುರುಬೀಳದೆ ಸಹನೆಯಿಂದ ಸೇವೆ ಮಾಡುವನೋ ಅವನಿಗೆ ಒಡೆಯನು ಒಲಿದು ವರದನಾಗುವನೆಂಬ ಮಾತನ್ನು-ದೇವರ ಮತ್ತು ಭಕ್ತನ ಸಂಬಂಧವಾಗಿಯೂ-ಸಮನ್ವಯಿಸಿಕೊಳ್ಳಬೇಕು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು