•  
  •  
  •  
  •  
Index   ವಚನ - 149    Search  
 
ಭಕ್ತನ ಜ್ಞಾನಿಸ್ಥಲ - ನಂಬಿಕೆ
ನೆರೆ ನಂಬೋ ನೆರೆ ನಂಬೋ, ಧರಧುರವಿಲ್ಲದೆ ಸಾಮವೇದಿಗಳಂತೆ; ನೆರೆ ನಂಬೋ ನೆರೆ ನಂಬೋ, ದಾಸ-ದುಗ್ಗಳೆಯಂತೆ; ನೆರೆ ನಂಬೋ ನೆರೆ ನಂಬೋ, ಸಿರಿಯಾಳ-ಚಂಗಳೆಯಂತೆ; ನೆರೆ ನಂಬೋ ನೆರೆ ನಂಬೋ,ಸಿಂಧು-ಬಲ್ಲಾಳನಂತೆ. ನಂಬಿದೆಯಾದಡೆ ತನ್ನನೀವ ಕೂಡಲಸಂಗಮದೇವ.
Transliteration Nere nambō nere nambō, dharadhuravillade sāmavēdigaḷante; nere nambō nere nambō, dāsa-duggaḷeyante; nere nambō nere nambō, siriyāḷa-caṅgaḷeyante; nere nambō nere nambō,sindhu-ballāḷanante. Nambideyādaḍe tannanīva kūḍalasaṅgamadēva.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Believe in Him with constancy, Without excess, As Samavedi did. Believe in Him with constancy, As Dāsa and Duggale did. Believe in Him with constancy Like Siriyāḷa and Ceṅgaḷē . Believe in Him with constancy As Sindhu Ballāḷa did. Lord Kūḍala Saṅgama Offers Himself to those Who will believe in Him. Translated by: L M A Menezes, S M Angadi
Hindi Translation पूर्ण विश्वास रखो, पूर्ण विश्वास रखो, आधिक्य के बिना सामवेदियों के समान पूर्ण विश्वास रखो, पूर्ण विश्वास रखो दास दुग्गळे के समान, पूर्ण विश्वास रखो, पूर्ण विश्वास रखो सिरियाळ चंगळे के समान पूर्ण विश्वास रखो, पूर्ण विश्वास रखो सिंधु बल्लाळ के समान- विश्वास करो तो कूडलसंगमदेव अपने को अर्पित करेंगे॥ Translated by: Banakara K Gowdappa
Telugu Translation నమ్మండోయ్ నమ్మండోయ్ అహంకారము లేని సామ వేదులవలె నమ్మండోయ్ నమ్మండోయ్ దాస దుగ్గవ్వలవలె నమ్మండోయ్ నమ్మండోయ్ సిరియాళ చెంగళులవలె నమ్మండోయ్ నమ్మండోయ్ సిందు బళ్లాళునివలె నమ్మితిరా తన్ను దానిచ్చు కూడల సంగమ దేవుడు. Translated by: Dr. Badala Ramaiah
Tamil Translation திறவதின் நயமின், திறவதின் நயமின், ஐயமிலாச்சாமவேதிகளனைய, நன்கனம்நயமின், நன்கனம்நயமின் தாசதுக்களையனைய, திறவதின் நயமின், திறவதின் நயமின் சிறுத்தொண்டர் உமையனைய நன்கனம் நயமின், நன்கனம் நயமின் சிந்துவல்லாளனைய திறவதின் நயப்பின் தன்னை ஈவன் கூடல சங்கம தேவன். Translated by: Smt. Kalyani Venkataraman, Chennai
Marathi Translation दृढ विश्वास असावा कैसा सामवेदी, जैसा देवावर दासय्या दुग्गळा, सिद्ध बल्लाळा चांगुणा - श्रीयाळा, केला जैसा कूडलसंगमदेवा! विश्वास जे केले पावन ते झाले, भुमंडळी अर्थ - महात्मा बसवेश्वर येथे विश्वास म्हणजे काय? आणि ते कसा ठेवला जातो आणि तो किती ठेवला तर परमेश्वर प्राप्ती संभवेल याचे उत्तम उदाहरणासह काही शिवशरणांची नांवे सांगून त्यांची परमेश्वरावरील श्रद्धा येथे दर्शवीत आहेत. परमेश्वरावर दृढ विश्वास कसा असावा तर सामवेदी लोकासारखा तसेच देवर दासय्या व त्यांची पत्नी दुग्गळा देवी यांनी जसा विश्वास ठेवला होता. श्रीयाळ शेठ आणि त्यांची पत्नी चांगुणादेवी यांनी ठेवला होता आणि राजा सिंधु बल्लाळ व त्यांची पत्नी यांनीही ठेवला होता ( या शिवशरणांच्या संबंधीची माहिती या पूर्वीच्या वचनात सविस्तर दिली आहे ) अशा तऱ्हेचा दृढ विश्वास व श्रद्धा ठेवणाऱ्यानाच परमेश्वर आपलेसे करून घेईल. अन्यांना शक्य नाही. Translated by Rajendra Jirobe, Published by V B Patil, Hirabaug, Chembur, Mumbai, 1983 दृढ विश्वास ठेव, दृढ विश्वास ठेव, संदेहरहित सामवेदिसम, दृढ विश्वास ठेव, दृढ विश्वास ठेव, दासिमय्य-दुग्गलेसम, दृढ विश्वास ठेव, दृढ विश्वस ठेव, सिरियाळ-चांगुणासम, दृढ विश्वास ठेव, दृढ विश्वस ठेव, सिंधू-बल्लाळ सारखा. विश्वास ठेवले तर स्वतःच स्वतःला देतात कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಧರಧುರ = ಶ್ರೇಷ್ಠ, ಹೆಚ್ಚಿನ; ನೆರೆ = ಸೇರು; ವೇದಿ = ಯಜ್ಞಕುಂಡ;
ಕನ್ನಡ ವ್ಯಾಖ್ಯಾನ ಜೀವನು ಶಿವನಾಗಿರುವುದಕ್ಕೆ ಕಾರಣವೆಂದರೆ-ಆ ಜೀವನಲ್ಲಿ ತಾನು ಶಿವನಾಗಬಲ್ಲೆನೆಂಬ ಆತ್ಮ ವಿಶ್ವಾಸವಿಲ್ಲದಿರವುದೇ ಆಗಿದೆ. ಶಿವನ ಒಂದು ಅಂಶವಾಗಿ ಅವತರಿಸಿರುವೆನಾಗಿ-ಮರಳಿ ನಾನು ಶಿವನಲ್ಲಿಯೇ ಒಂದಾಗಬಲ್ಲೆನೆಂಬ ಕಡುನಂಬಿಕೆ ಮುಮುಕ್ಷುಗೆ ಇರಬೇಕಾದ ಬಹಳ ಮುಖ್ಯವಾದ ಗುಣ. ಹೀಗೆ ನಂಬಿ ಉದ್ಧಾರವಾದ ಪೂರ್ವಕಾಲದ ಕೆಲವು ಶಿವಶರಣರ ಹೆಸರುಗಳನ್ನು ಬಸವಣ್ಣನವರು ಉಲ್ಲೇಖಿಸಿ ಅವರಂತೆ-ಯಾರೂ ನಂಬಿ ಉದ್ಧಾರವಾಗಬಹುದೆಂದು ಎಲ್ಲರಿಗೂ ಧೈರ್ಯ ಹೇಳುತ್ತಿರುವರು. ಸಾಮವೇದಿಯೆಂಬ ಒಬ್ಬ ಮಹಾಬ್ರಾಹ್ಮಣ ಯಜ್ಞಯಾಗಾದಿಗಳಲ್ಲಿ ಪರಿಣಿತನಾಗಿದ್ದ, ಆಕಾಶಗಮನಾದಿ ಸಿದ್ಧಿಗಳನ್ನೂ ಪಡೆದಿದ್ದ. ಅಂಥವನು-ತನ್ನ ಜೀವನದ ಒಂದು ಸುಮುಹೂರ್ತದಲ್ಲಿ-ಜಾತಿಯಿಂದ ಚಮ್ಮಾರನಾದರೂ ಮಹಾಶಿವಾನುಭಾವಿಯಾದ ಶ್ವಪಚಯ್ಯನೆಂಬವನನ್ನು ಗುರುವೆಂದು ನಂಬಿದ-ಪರಮ ಪದವಿಯನ್ನು ಪಡೆದ. ದೇವರ ದಾಸಿಮಯ್ಯ ಅವನ ಹೆಂಡತಿ ದುಗ್ಗಳೆ, ಸಿರಿಯಾಳ ಅವನ ಹೆಂಡತಿ ಚೆಂಗಳೆ, ಸಿಂಧುಬಲ್ಲಾಳ (ಅವನ ಹೆಂಡತಿ ಯಾರೆಂದು ತಿಳಿಯದು)-ಇವರೆಲ್ಲರೂ ಶಿವಭಕ್ತರನ್ನು ಶಿವನೆಂದೇ ನಂಬಿದರೂ-ಪರಮಪದವಿಯನ್ನು ಪಡೆದರು. ನಂಬಲರ್ಹವಾದ ಶಿವಭಕ್ತರನ್ನು ನಿಸ್ಸಂಶಯವಾಗಿ ನಂಬಿದರೆ ಶಿವನೊಲಿಯುವುದು ನಿಶ್ಚಯ. (ಧರಧುರವೆಂದರೆ ಹೇವರಿಕೆ, ಹಿಂಜರಿಕೆ). ಶಿವಧರ್ಮದ ಬಗ್ಗೆ ಮತ್ತು ಶಿವಶರಣರ ಬಗ್ಗೆ ಸಾಮವೇದಿಯಂತೆ ವಿಶ್ವಾಸ ತಳೆಯಲು ಬ್ರಾಹ್ಮಣರನ್ನೂ ಆಹ್ವಾನಿಸುತ್ತಿರುವಂತಿದೆ ಬಸವಣ್ಣನವರು-ಈ ವಚನದ ಮೂಲಕ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು