•  
  •  
  •  
  •  
Index   ವಚನ - 152    Search  
 
ಭಕ್ತನ ಜ್ಞಾನಿಸ್ಥಲ - ಶರಣರ ಸಂಗ
ಪರುಷದ ಹೊರೆಯಲ್ಲಿ ಕಬ್ಬುನವಿರ್ದು ಹೊನ್ನಾಯಿತ್ತು, ನೋಡಿರೆ: ಅವ್ವಾ ಚಂಗಳೇ, ನೀನಿದ್ದೇಳು ಕೇರಿಯವರು ಲಿಂಗದ ನೋಂಪಿಯ ನೋಂತರೆ? ಹೇಳಾ: ಕೂಡಲಸಂಗಮದೇವಂಗೆ ಚಿಲ್ಲಾಳನೆಂಬ ಬಾಯಿನವನಿಕ್ಕಿದರೆ? ಹೇಳಾ.
Transliteration Paruṣada horeyalli kabbunavirdu honnāyittu, nōḍire: Avvā caṅgaḷe, nīniddēḷu kēriyavaru liṅgada nōmpiya nōntare? Hēḷā: Kūḍalasaṅgamadēvaṅge cillāḷanemba bāyinavanikkidare? Hēḷā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Before the philosopher's stone, behold, Iron turns gold... O Mother Caṅgēle, Did people in the seven alleys where You lived, make vows to Liṅga ? say! Did they present Lord Kūḍala Saṅgama with A gift called Cīlāḷa ? Speak! Translated by: L M A Menezes, S M Angadi
Hindi Translation देखो, पारस की संगति से लोहा स्वर्ण बनता है कहो, चंगळे माँ, तुम्हारे निवास की सात गलियों के लोगों ने लिंग का व्रत रखा, कहो, कूडलसंगमदेव को चीलाळ नामक भोग चढाया? Translated by: Banakara K Gowdappa
Telugu Translation స్పర్శవేది నినుము బంగారమగు చూడుమ; అవ్వా చెంగళే నీవున్న ఏడువాడలవారు లింగవ్రతము నోచిరే దెల్పుమా? సంగమదేవునకు; చీలాళం (సిరియాళు) డను వాయనమిచ్చిరే చెప్పుమా? Translated by: Dr. Badala Ramaiah
Tamil Translation பரிசவேதியைச் சார்ந்த இரும்பும் பொன்னானது காணீர்! அம்மா, உமையே, நின்னைச் சார்ந்த ஏழு சேரியவர் இலிங்க நோன்பினை நூற்றனரோ, சொல்லாய், கூடல சங்கம தேவனுக்குச் சீராளனெனும் படையலை யிடவிலையோ சொல்வாய். Translated by: Smt. Kalyani Venkataraman, Chennai
Marathi Translation लिंगव्रत धरिले गल्ली बोळाचे लोक चांगुणादेवीची हाक ऐकुनिया परीस स्पर्शाने लोखंड होई सोने चांगुणा संगतीने, शुद्ध होई चिल्लाळ पुत्राला भोग चढविले तिने संगतीची नेणे, जाणिल्याने कूडलसंगमदेवा ! काय वर्णू महती परीसापरी संगती, मोक्षालागी अर्थ - लोखंड परिसाच्या संपर्कात आल्यास त्याचे सोन्यात रूपांतर होते. अगदी त्याचप्रमाणे शिवशरणाचा सत्संग लाभल्यास जो कोणी असेल तो सद्-मार्गाला लागतो व शेवटी आपले जीवन साफल्य करून घेतो. माता चांगुणादेवी (श्रीयाळ शेठची पत्नी) हिने लिंगव्रत धरले होते. तिचे नेमाचार व सदाचार व विचार पाहून तिच्या शेजारच्या गल्लीबोळातील लोकांनीही लिंगव्रत धरले होते. सर्व गावचे शिवाचार सुरुवात केले होते म्हणे हीच सत्संगाची महती होय. चांगुणादेवीने आपला बाळ (सात वर्षाचा एकुलता एक) चिल्लाळ याला चांगले संस्कार व सत्संग दिल्यामुळे तो आपल्या आई वडिलांच्या इच्छुनुसार स्वतःचा प्राण गुरु-जंगम चरणी अर्पण केला. Translated by Rajendra Jirobe, Published by V B Patil, Hirabaug, Chembur, Mumbai, 1983 परिसाच्या संगाने लोखंड सोने झाले पहा. माता चांगुणा, तुझ्या शेजारच्या सात गल्लीतील लोकांनी शिवभक्ती व्रताचे आचरण केले का सांग ? कूडलसंगमदेवाला चीलाळासारखा नैवेद्य कोणी अर्पण केला का सांग ? Translated by Shalini Sreeshaila Doddamani
ಶಬ್ದಾರ್ಥಗಳು ಕಬ್ಬುನ = ಕಭ್ಬಿಣ; ಕೇರಿ = ಬೀದಿ; ನೋಂತರೆ = ; ನೋಂಪಿ = ವೃತ, ನೇಮ; ಪರುಷ = ಸ್ಪರ್ಶ ಮಣಿ;
ಕನ್ನಡ ವ್ಯಾಖ್ಯಾನ 152ನೇ ವಚನಕ್ಕೆ ಕೊಟ್ಟಿರುವ ವಿವರಣೆ ಇದಕ್ಕೂ ಅನ್ವಯಿಸುವುದು-ಆದರೆ ಇಲ್ಲಿ ಕೊಟ್ಟಿರುವ ಉಪಮಾನ ನಿದರ್ಶನಗಳು ಬೇರೆಯಷ್ಟೆ. ಸ್ಪರ್ಶಮಣಿಯ ಆಸುಪಾಸಿನಲ್ಲಿದ್ದ ಕಬ್ಬಿಣ ಹೊನ್ನಾಗುವುದೆಂಬುದು ಉಪಮಾನ, ನಿದರ್ಶನ ಚೆಂಗಳೆಯ ತ್ಯಾಗಜೀವನ : ಕಾಂಚೀಪಟ್ಟಣದ ಈ ಚೆಂಗಳೆ ಮಾಡಿದ ಜಂಗಮ ಲಿಂಗದ ನೋಂಪಿ(ಜಂಗಮಾರಾಧನೆ)ಯ-ಅಂದರೆ ತನ್ನ ಪ್ರಿಯ ಕುಮಾರನನ್ನು ಜಂಗಮವೇಷದಲ್ಲಿ ಬಂದ ಶಿವನಿಗೆ ಅಟ್ಟಿಟ್ಟ ಅರ್ಪಣೆಯ ಫಲವಾಗಿ ಅವಳು ಮಾತ್ರವೇ ಅಲ್ಲ-ಆ ಕಾಂಚೀಪಟ್ಟಣದ ಏಳೂ ಕೇರಿಯ ಜನರೂ ಶಿವನ ಕೃಪೆಗೆ ಪಾತ್ರರಾದರು. ಹೀಗೆ ಶರಣರು ಭಕ್ತಿಯನ್ನು ಮಾಡಿ ಅದರ ಸತ್ಫಲಗಳನ್ನು ಇತರರೊಡನೆಯೂ ಹಂಚಿಕೊಳ್ಳುವರು. ಅವರು ಮುಕ್ತಿಯನ್ನೂ-ತೀರ ವೈಯಕ್ತಿಕವಾದರೆ-ಮಾನ್ಯ ಮಾಡರು. ಅದನ್ನೂ ಅವರು ಜನತೆಯೊಡನೆ ಹಂಚಿ ಅನುಭವಿಸುವರು. ಈ ಉದಾರನೀತಿಗೊಂದು ಉಜ್ವಲ ನಿದರ್ಶನ ಚೆಂಗಳೆಯ ಜೀವನ. ಚೆಂಗಳೆ ಸಿರಿಯಾಳನ ಹೆಂಡತಿ-ಚೀಲಾಳನು ಅವರಿಬ್ಬರ ಸುಕುಮಾರ. ಬಾಯಿನ>ಬಾಗಿನ. 148ನೇ ವಚನವನ್ನೂ ನೋಡಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು