ಭಕ್ತನ ಜ್ಞಾನಿಸ್ಥಲ - ಜ್ಞಾನಿ
ಗೀತವ ಬಲ್ಲಾತ ಜಾಣನಲ್ಲ; ಮಾತ ಬಲ್ಲಾತ ಜಾಣನಲ್ಲ:
ಜಾಣನು ಜಾಣನು, ಆತ ಜಾಣನು: ಲಿಂಗವ ನೆರೆ ನಂಬಿದಾತ
ಜಾಣನು ಜಂಗಮಕ್ಕೆ ಸವೆಸುವಾತ.
ಆತ ಜಾಣನು: ಜವನ ಬಾಯಲು ಬಾಲವ ಕೊಯ್ದು ಹೋದಾತ;
ಆತ ಜಾಣನು, ನಮ್ಮ ಕೂಡಲಸಂಗನ ಶರಣನು.
Transliteration Gītava ballāta jāṇanalla; māta ballāta jāṇanalla:
Jāṇanu jāṇanu, āta jāṇanu: Liṅgava nere nambidāta
jāṇanu jaṅgamakke savesuvāta.
Āta jāṇanu: Javana bāyalu bālava koydu hōdāta;
āta jāṇanu, nam'ma kūḍalasaṅgana śaraṇaranu.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Who knows the Gita is not wise;
The Master of words, too, is not wise.
He is wise only who has faith
In Liṅga. He is wise
Who wears himself for Jaṅgama
He, too, who clipped
Yama's tongue and tail
And he is wise who is a Śaraṇa
Of our Kūḍala Saṅgama.
Translated by: L M A Menezes, S M Angadi
Hindi Translation गीत-ज्ञाता ज्ञानी नहीं,
वचन - ज्ञाता ज्ञानी नहीं,
ज्ञानी वही जो लिंगदेव पर पूर्णविश्वास रखता है,
ज्ञानी वही जो जंगम पर धन व्यय करता है,
ज्ञानी वही जो यम की जीभ और पूँछ काट गया,
ज्ञानी वही जो मम कूडलसंगमदेव का शरण है॥
Translated by: Banakara K Gowdappa
Telugu Translation గీత మెలిగినవాడు జాణకాడు;
మాట నేర్పరి జాణకాడు;
జాణ జాణ జాణ శివుని నెఱనమ్మువాడు;
జాణ జంగమునకు సమియువాడు;
జాణవాడు జముని నోట
మట్టిగొట్టి పోయినవాడు.
జాణవా డెమా సంగని శరణుడు.
Translated by: Dr. Badala Ramaiah
Tamil Translation இசைவாணன் அறிஞனல்லன், சொல்லாடுவோ னறிஞனல்லன்;
அறிஞன், அறிஞன், அவன் அறிஞன்
இலிங்கத்தை முழுது நயந்தோ னறிஞன்
அடியார்க்குச் செல்வ மீவோ னறிஞன்,
மீண்டும் பிறவியை எய்யாத
நம் கூடல சங்கனின் அடியானே அறிஞன்.
Translated by: Smt. Kalyani Venkataraman, Chennai
Marathi Translation
नव्हे जाणकार, स्वरात गाणारे
पंडित म्हणविणारे, अजाण ते
जाणूनि विश्वासू लिंगदेवावर
खरा जाणकार, तोचि होय
जंगम सेवेत जो वेचितो धन
तोचि खरा जाण, जाणकार
यमावरी मात जगी केले कोण
एकचि ते शरण देवा तुझें
कूडलसंगमदेवा! दृढ विश्वासाने
जाणीव जाणल्याने, जाणकार
अर्थ – सुस्वरात गाणारे, गीत रचणारे, माझ्या कूडलसंगमदेवाच्या (परमेश्वराच्या ) भक्तापेक्षा श्रेष्ठ नाहीत. तसेच भाषेवर प्रभुत्व असणारही श्रेष्ठ नव्हेत. कारण लौकीक वेगळा व भक्तिमार्ग वेगळा. भक्तिमार्गात लोकावर छाप टाकून चालणार नाही आणि तेथे कसलाही दंभाचार वा श्रेष्ठत्व चालणार नाही. खरा जाणकार तोच जो परमेश्वरावर दृढ विश्वास ठेवतो व सेवाभाव जाणतो. तेथे कोणी श्रेष्ठ वा कनिष्ठ नाही. जो आपले धन जंगम सेवेत व दासोहात वेचतो तोच खरा जाणकार व तोच खरा शिवचरण होय. अशीच व्यक्ति यमावर मात करू शकतील व जन्मजन्मांतराच्या फेऱ्यातून मुक्त होऊ शकेल. याची पूर्ण जाणीव शिवशरणाना असते म्हणून तर ते मुक्त जीवी व खरे जाणकार होत.
Translated by Rajendra Jirobe, Published by V B Patil, Hirabaug, Chembur, Mumbai, 1983
गीत जाणणारा शहाणा नव्हे, बोलणे जाणणारा शहाणा नव्हे.
शहाणा, शहाणा-तोच शहाणा.
लिंगावर दृढ विश्वास ठेवणारा.
तोच शहणा जंगम सेवेत धन खर्चीणारा तोच शहाणाः
मृत्यूला जिंकणारा तोच शहाणाः
आमचे कूडलसंगमदेवाचे शरण.
Translated by Shalini Sreeshaila Doddamani
ಶಬ್ದಾರ್ಥಗಳು ಗೀತ = ಹಾಡು; ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ; ಜವ = ಯಮ; ನೆರೆ = ಸೇರು;
ಕನ್ನಡ ವ್ಯಾಖ್ಯಾನ ಸಾವು ಬೆನ್ನುಹತ್ತಿರುವಾಗ ಜೀವನ ಜಾಣತನವೇನು ? ಎಂದಿನಂತೆಯೇ ಚಾತುರ್ಯದ ಮಾತುಗಳನ್ನಾಡುತ್ತ ಸೋಮಾರಿಯ ಹಾಡುಗಳನ್ನು ಪಾಡುತ್ತ ಜನರನ್ನು ಮರುಳುಗೊಳಿಸುತ್ತ-ತನ್ನಂಥ ಧೀಮಂತನಿಲ್ಲವೆನಿಸಿಕೊಂಡು ಜನರ ಕಣ್ಣಲ್ಲಿ ಮೆರೆಯುತ್ತ ಮೈಮರೆತಿರುವುದೇನು? ಆತ್ಮಕ್ಕೆ-ಬಾಲದಂತೆ-ಜಂಟಿಯಾಗಿರುವ ಈ ದೇಹವನ್ನೇ ನೆಚ್ಚಿ ಬಿಗಿವಿಡಿದುಕೊಂಡು ಅವರ ಅದ್ಧೂರಿಗಾಗಿಯೇ ಆತ್ಮವನ್ನು ಬಲಿಕೊಟ್ಟು ಸರ್ವನಾಶವಾಗುವುದೇನು ?
ಮೃತ್ಯುವಿಂದ ಪಾರಾಗಿ ಅಮೃತತ್ವವನ್ನು ಪಡೆಯುವ ಉಪಾಯವೇನೆಂದು ಚಿಂತಿಸುವುದಲ್ಲವೇನು ? ಗೋಡೆಯ ಮೇಲಿರುವ ಒಂದು ಹಲ್ಲಿಯೊಡೆನೆ ಆಡಿದರೆ ಆ ಉಪಾಯವೇನೆಂಬುದೆಲ್ಲಾ ಹೊಳೆಯುವುದಲ್ಲಾ ! ಅದರ ಬಾಲವನ್ನು ಹಿಡಿದರೆ-ಆ ಬಾಲವನ್ನೇ ಹಿಡಿದ ನಮ್ಮ ಕೈಗೆ ಬಿಟ್ಟು ಮುನ್ನುಗ್ಗಿ ತನ್ನ ಆತ್ಮರಕ್ಷಣೆ ಮಾಡಿಕೊಳ್ಳುವುದು ಆ ಹಲ್ಲಿ, ಪ್ರಾಣಿವರ್ಗಕ್ಕೆಲ್ಲ ಅತಿ ಬುದ್ಧಿಶಾಲಿಯಾದ ಮಾನವನಿಗೆ ಇದು ಹೊಳೆಯಬೇಕು. ಆತ್ಮ ನಾಶವಾಗುವ ಸಂದರ್ಭ ಒದಗಿದಲ್ಲಿ-ದೇಹದ ಮೇಲಣ ಅಂಧವ್ಯಾಮೋಹವನ್ನು ತೊರೆದು ಆತ್ಮವನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿಯೇ ಲಿಂಗಧ್ಯಾನ ಮತ್ತು ಜಂಗಮಸೇವೆ ಮಾಡಬೇಕು. ಇದೇ ಜಾಣತನ-ಉಳಿದುದೆಲ್ಲಾ ಹೊಟ್ಟೆಪಾಡಿಗೆ ತೋರುವ ಡೊಂಬರಾಟ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು