•  
  •  
  •  
  •  
Index   ವಚನ - 155    Search  
 
ಭಕ್ತನ ಜ್ಞಾನಿಸ್ಥಲ - ಪ್ರಪಂಚ
ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ: ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ; ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ, ಕೂಡಲಸಂಗಮದೇವಾ.
Transliteration Martyalōkavembudu kartārana kam'maṭavayyā: Illi salluvaru alliyū salluvarayyā; illi salladavaru alliyū sallarayyā, kūḍalasaṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: MARTHYA LOKAVEMBUDHU • Jayapal • R Damodhar • Basavanna JAGAJYOTHI SRI BASAVESWARA VACHANAGALU ℗ MRT MUSIC Released on: 1997-01-01
English Translation 2 This mortal world is but the Maker's mint; Those who earn merit here, earn also there, And those who earn not here, earn neither there; O Kūḍala Saṅgama Lord! Translated by: L M A Menezes, S M Angadi
Hindi Translation मत्र्यलोक सृष्टा की टंकसाल है जो यहाँ मान्य हैं, वहाँ भी मान्य हैं जो यहाँ मान्य नहीं वहाँ भी मान्य नहीं कूडलसंगमदेव ॥ Translated by: Banakara K Gowdappa
Telugu Translation మర్త్యలోక మన్నది కర్తారుని కమ్మటమయ్యా, ఇట చెల్లెడివారటనూ చెల్లెదరయ్యా: ఇట చెల్లనివారటనూ చెల్లరు గదయ్యా, కూడల సంగమదేవా! Translated by: Dr. Badala Ramaiah
Tamil Translation பூவுலகமென்பது இறைவனின் கம்மாலை யையனே, இவண் செல்பவர் அவண் செல்வர் இவண் செல்லார் அவண் செல்லார் கூடல சங்கம தேவனே. Translated by: Smt. Kalyani Venkataraman, Chennai
Marathi Translation टाकसाळ कर्त्याची, मृत्युलोक जाण येथील ते चलन, चाले तेथे येथे होती मान्य, तोचि तिथे मान्य जे येथे अमान्य, तेचि तेथे कूडलसंगमदेवा ! येथे जो आवडे तेथेही आवडे तोचि एक अर्थ - मृत्यूलोक कर्त्याची ( परमेश्वराची ) टाकसाळ आहे. या टाकसाळमधील प्रत्येक नाणे व्यवस्थित पाडलेले असावे लागते. त्यावर डाग किंवा ते मिसप्रिंट असता कामा नये. अन्यथा ते नाणे किंवा नोट परत टाकसाळेत पाठविले जाते. याच अर्थाने प्रत्येकाचे चारित्र्य, हे निर्मळ असलेच पाहिजे. अशाच व्यक्ती येथील समाजास आवडतात. जो येथे आवडतो तोच तेथेही (परमेश्वराला ) आवडतो. नाहीतर तशा व्यक्तिला पुन्हा मृत्यूलोकात ( टाकसाळेत रिमोल्डसाठी ) जनमान्य होण्यासाठी पाठविले जाते. म्हणून परमेश्वर देखील अशा व्यक्तिला पुन्हा-पुन्हा मृत्युलोकात पाठवित असतो. आणि म्हणून प्रत्येकाने सदाचारी जीवन जगून लोकांना मान्य होईल असेच वर्तन करावे. नाहीतर जन्म मरणाच्या फेऱ्यातून त्याची सुटका होत नाही: इत्यर्थ : जो सर्वांना आवडतो तोच माझ्या कूडलसंगमदेवाला ( परमेश्वराला ) आवडतो. Translated by Rajendra Jirobe, Published by V B Patil, Hirabaug, Chembur, Mumbai, 1983 मर्त्यलोक हा कर्त्याची टांकसाळ आहे. इथे चालणारे नाणे तिथे चालते. इथे न चालणारे नाणे कोठेही चालत नाही कूडलसंगमदेवा. Translated by Shalini Sreeshaila Doddamani
Urdu Translation یہ جہاں میرے خالق کی ہے کارگاہ! زندگی میں جو ہوگا یہاں سرخُرو اُس جہاں میں ملے گی اُسے آبرو جوبھی رُسوا رہے گا ہمیشہ یہاں، ذلتیں اس کی قسمت میں ہوں گی وہاں گویا اعمال میں آئینہ کی طرح میرے دیوا مرے کوڈلا سنگما Translated by: Hameed Almas
ಶಬ್ದಾರ್ಥಗಳು ಕಮ್ಮಟ = ನಾಣ್ಯ ಮಾಡುವ ಸ್ಥಾನ; ಕರ್ತಾರ = ಸೃಷ್ಠಿಕರ್ತ; ಮರ್ತ್ಯಲೋಕ = ಭೂಲೋಕ;
ಕನ್ನಡ ವ್ಯಾಖ್ಯಾನ ಮರ್ತ್ಯಲೋಕದ ಮಹತ್ವ ಕೆಲವು ಧರ್ಮಗಳ ದೃಷ್ಟಿಯಿಂದ ಆಧ್ಯಾತ್ಮಿಕ ರಂಗದಲ್ಲಿ ಇಹಲೋಕಕ್ಕೆ ಬೆಲೆಯೇ ಇಲ್ಲ. ಐಹಿಕ ಜೀವನವು ಪಾರಮಾರ್ಥಿಕ ಜೀವನದಿಂದ ಬೇರೆಯಾದುದೆಂದೇ ಈ ಧರ್ಮಗಳ ನಂಬಿಕೆ. ಆದ್ದರಿಂದಲೇ ಐಹಿಕ ಜೀವನ ನಡೆಸುವವರು ನಾವು ಪಾರಮಾರ್ಥಿಕ ಜೀವನಕ್ಕೆ ಬಹುದೂರ ಅಂತೆಯೇ ಅನರ್ಹರು ಎಂದೂ ಪಾರಮಾರ್ಥಿಕ ಜೀವನವನ್ನು ನಡೆಸುವವರು ಐಹಿಕ ಜೀವನವನ್ನು ಒಂದು ಬಂಧನವೆಂದು ತುಚ್ಛೀಕರಿಸಿ ಐಹಿಕ ಜನರನ್ನು ಪಾಪಿಗಳ, ಪತಿತರು ಎಂದೂ ನಿಕೃಷ್ಟವಾಗಿ ಕಾಣತೊಡಗಿದರು. “ ಈ ............ ಪರಿಣಾಮವಾಗಿ ಸಮಾಜ ಜೀವನವು ಐಹಿಕ ಮತ್ತು ಆಮುಷ್ಮಿಕವೆಂದು ಎರಡು ಪಂಗಡವಾಗಿ ಹೋಗಿತ್ತು. ಐಹಿಕರಿಗೆ ಆಮುಷ್ಮಿಕ (ಧರ್ಮ) ದ ಸಂಪರ್ಕವಿಲ್ಲದೆ ಬರಡು ಜೀವನವನ್ನು ಸಾಗಿಸುವಂತಾಗಿತ್ತು. ಆಮುಷ್ಮಿಕರಿಗೆ (ಪಾರಲೌಕಿಕರಿಗೆ) ಐಹಿಕದ ಬಗ್ಗೆ ಆಸಕ್ತಿಯೇ ಇಲ್ಲದ ಕಾರಣ ತಮ್ಮಲ್ಲಿ ಒಂದು ವಿಧವಾದ ಆತ್ಮ ಪ್ರತಿಷ್ಠೆಯೂ ಪರಾವಲಂಬನವೂ ಬೆಳೆದು ಬಂದಿದ್ದವು. ಈ ಪರಿಣಾಮವಾಗಿ ಸಮಾಜ ಜೀವನದಲ್ಲಿ ದುಡಿಯುವವರಿಗೆ ಗೌರವವಿಲ್ಲದೆ ಹೋಗಿತ್ತಲ್ಲದೆ ದುಡಿಯುವವರು ತಾವು ದುಡಿದ ಫಲವನ್ನು ಬೇರೆಯವರಿಗೆ ನೀಡಿಯೇ ಸೋತುಹೋಗುತ್ತಿದ್ದರು ಈ ಆಮುಷ್ಮಿಕ (ಪಾರಲೌಕಿಕ) ರು ದುಡಿಯುವುದು ಮುಕ್ತಿ ಮಾರ್ಗಕ್ಕೆ ಆತಂಕವೆಂದು ಹೇಳಿಕೊಳ್ಳುತ್ತಿದ್ದರೇ ವಿನಾ ಉಣ್ಣುವುದನ್ನು ಬಿಡುತ್ತಿರಲಿಲ್ಲ. ದುಡಿಯದೆ ಉಣ್ಣುವುದಕ್ಕೆ ಎಲ್ಲಿಂದ ಒದಗಬೇಕೆಂಬುದನ್ನು ಯೋಚಿಸುತ್ತಿರಲೂ ಇಲ್ಲ. ಜನರ ಅಜ್ಞಾನವನ್ನು ದುರಪಯೋಗಪಡಿಸಿಕೊಂಡು ಭಿಕ್ಷೆಯನ್ನು ಪಡೆದು ಜೀವಿಸುತ್ತಿದ್ದರಲ್ಲದೆ ಭಿಕ್ಷೆ ನೀಡುವುದೇ ಧರ್ಮವೆಂಬ ಭಾವನೆಯನ್ನು ಜನರಲ್ಲಿ ತುಂಬಿದ್ದರು. ತತ್ಪರಿಣಾಮವಾಗಿ ಜೀವನಕ್ಕೂ ಧರ್ಮಕ್ಕೂ ಸಂಬಂಧವೇ ಇಲ್ಲವೆಂಬ ಭಾವನೆಯು ಬೇರೂರಿತ್ತು. ಜೀವನದ ಸಂಕಷ್ಟಗಳ ಬಗ್ಗೆ ಪರಿಹಾರ ಪಡೆಯಲು ಅಸಮರ್ಥರಾದ ಜನರೆಲ್ಲರೂ ಈ ಆಮುಷ್ಮಿಕ (ಪಾರಲೌಕಿಕ) ಮಾರ್ಗದಲ್ಲಿ ಪ್ರವೇಶಿಸುತ್ತಿದ್ದರು.........” ಎಂದು ಶ್ರೀ ತರಳಬಾಳು ಜಗದ್ಗುರುಗಳವರು ಅಪ್ಪಣೆ ಕೊಡಿಸಿರುವುದು ಇಲ್ಲಿ ಗಮನಾರ್ಹವಾಗಿದೆ. ಪಾರಲೌಕಿಕ ಜೀವನಕ್ಕೆ ಬೆಲೆಕೊಟ್ಟು ಐಹಿಕ ಜೀವನವನ್ನು ಕಡೆಗಣಿಸಿದ್ದ ಜನರನ್ನು ಕಂಡೇ ಬಸವಣ್ಣನವರು ‘ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ....’ ಎಂದಿದ್ದಾರೆ. ಈ ಮರ್ತ್ಯಲೋಕವು ಜಗನ್ನಿಯಾಮಕನಾದ ಭಗವಂತನ ಟಂಕಸಾಲೆ. ಈ ಟಂಕಸಾಲೆಯಲ್ಲಿ ಲೋಹಗಳ ಮೇಲೆ ಮುದ್ರೆಯೊತ್ತಿ ಬೆಲೆಯುಳ್ಳ ನಾಣ್ಯವಾಗಿ ಮಾಡುವವನೇ ಆ ದೇವರು. ನಾವೆಲ್ಲ ಮುದ್ರೆಯೊತ್ತಿಸಿಕೊಂಡು ನಾಣ್ಯವಾಗಬೇಕಾಗಿರುವ ಲೋಹದ ಚೂರುಗಳು. ಯಾವ ಬೆಲೆಯ ನಾಣ್ಯವಾಗಲಿರುವೆವೋ ತಿಳಿಯದು! ಆ ಮೌಲ್ಯದ ನಿಷ್ಕರ್ಷಣೆಯಾದರೋ ನಾವು ಐಹಿಕದಲ್ಲಿ ಹೇಗೆ ಬಾಳುತ್ತೇವೆಂಬುದರ ಮೇಲೆಯೇ ಅವಲಂಬಿಸಿದೆ. ಅದನ್ನು ಪರಿಶೀಲಿಸಿಯೇ ದೇವರು ಆಯಾಯ ಮೌಲ್ಯಕ್ಕನುಸಾರವಾಗಿಯೇ ಮುದ್ರೆಯನ್ನೊತ್ತಿ ಚಲಾವಣೆಗೆ ಬಿಡುತ್ತಾನೆ. ಹೀಗಿರುವಾಗ ಇಹಲೋಕವನ್ನು ಕಡೆಗಣಿಸಿ ಪರಲೋಕಕ್ಕಾಗಿಯೇ ಕಾದುಕುಳಿತರೆ ಮುದ್ರೆಯೇ ಇಲ್ಲದ ನಾಣ್ಯದಂತಾಗುವೆವು. ಈ ಕಾರಣದಿಂದ ಪರಲೋಕವೂ ಮನದ ಮಂಡಿಗೆಯೇ ಆಗುವುದು. ಏಕೆಂದರೆ ಉತ್ತದೆ, ಬಿತ್ತದೆ ಹೊಲದಲ್ಲಿ ಬತ್ತದ ಬೆಳೆ ಎದ್ದು ನಿಲ್ಲುವುದೇ? ಆದ್ದರಿಂದ ಪರಲೋಕವನ್ನು ಹೊಂದಲು ಕರ್ತಾರನ ಕಮ್ಮಟವಾದ ಈ ಮರ್ತ್ಯ ಲೋಕದ ಮುದ್ರೆ ಅತ್ಯಾವಶ್ಯಕ! ಇಲ್ಲಿ ನಾವು ಸಲ್ಲುವ ನಾಣ್ಯವೆಂದು ಪರಿಗಣಿತವಾದರೆ ಪರಲೋಕದಲ್ಲಿಯೂ ಸಲ್ಲುವ ನಾಣ್ಯವೆಂದು ಚಲಾವಣೆಯ ಯೋಗ್ಯತೆಯನ್ನು ಪಡೆಯುವುದು, ಇಲ್ಲಿ ಸಲ್ಲದ ನಾಣ್ಯವೆನಿಸಿಕೊಂಡರೆ ಅಲ್ಲಿಯೂ ಖೋಟಾ ನಾಣ್ಯವೆಂದು ತಿರಸ್ಕಾರಕ್ಕೆ ಗುರಿಯಾಗಿ ಚಲಾವಣೆಯನ್ನು ಕಳೆದುಕೊಳ್ಳಬೇಕಾಗುತ್ತದೆ. “ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ..........” ಆದ್ದರಿಂದ ಐಹಿಕ ಜೀವನವು ಪಾರಲೌಕಿಕ ಜೀವನಕ್ಕೆ ಒಂದು ಸಾಧನ. ಅಂತಹ ಸಾಧನವನ್ನೇ ಕಡೆಗಣಿಸಿ ಕುಳಿತರೆ ಪಾರಲೌಕಿಕದ ಸಿದ್ಧಿಯೇ ಆಗದು. ಆಕಾಶಕ್ಕೆ ಜಿಗಿಯುವ ವ್ಯಕ್ತಿಗೆ ಊರಲು ಭೂಮಿಯು ಹೇಗೆ ಅವಶ್ಯಕವೋ, ರಂಗಮಂದಿರದ ಮೇಲೆ ನೃತ್ಯವನ್ನು ಮಾಡುವ ನಟಿಗೆ ಪೂರ್ವಭಾವಿಯಾಗಿ ಹೇಗೆ ಅದರ ಅಭ್ಯಾಸ ಹಾಗೂ ತಾಲೀಮು (Rehersal) ಅವಶ್ಯಕವೋ ಹಾಗೆಯೇ ಮಾನವನು ದೇವತ್ವದ ಬಳಿಸಾರಲು, ದೇವನೇ ಆಗಲು ಐಹಿಕವು ಅಷ್ಟೇ ಅವಶ್ಯಕ. ಹೀಗೆ ಈ ವಚನವು ಒಂದು ದೃಷ್ಠಿಯಿಂದ ಐಹಿಕವನ್ನು ಕಡೆಗಣ್ಣಿನಿಂದ ನೋಡುವ ಜನರಿಗೆ ಒಂದು ಎಚ್ಚರಿಕೆಯನ್ನು ನೀಡುತ್ತದೆ. ಮತ್ತೊಂದು ದೃಷ್ಟಿಯಿಂದ ಆಮುಷ್ಮಿಕವನ್ನು ಇಚ್ಚಿಸುವ ಆದರೆ ತಾವು ಐಹಿಕರಾದ್ದರಿಂದ ಅದಕ್ಕೆ ದೂರವೆಂಬ ಭ್ರಾಂತಿಯಲ್ಲಿರುವ ಜನರನ್ನು ಕುರಿತು ಐಹಿಕವು ಬಂಧನವಲ್ಲವೆಂದೂ ಅದು ಪಾರಲೌಕಿಕದ ಸಿದ್ಧಿಗೆ ಒಂದು ಒರೆಗಲ್ಲೆಂದೂ ಹೇಳುತ್ತದೆ. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.