•  
  •  
  •  
  •  
Index   ವಚನ - 156    Search  
 
ಭಕ್ತನ ಜ್ಞಾನಿಸ್ಥಲ - ಶಿವಜ್ಙಾನ
ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು- ಸಗಣಕ್ಕೆ ಸಾಸಿರ ಹುಳು ಹುಟ್ಟವೇ, ದೇವಾ? ಕಾಡ ಮೃಗವೊಂದಾಗಿರಲಾಗದೆ, ದೇವಾ? ಊರ ಮೃಗವೊಂದಾಗಿರಲಾಗದೆ, ಹರನೆ? ನಮ್ಮ ಕೂಡಲಸಂಗನ ಶರಣರಿಲ್ಲದ ಊರು, ದೇಶ- ವನವಾಸ, ನರವಿಂಧ್ಯ ಕಾಣಿರಣ್ಣಾ.
Transliteration Śivacinte śivajñānavillada manujaru- sagaṇakke sāsira huḷu huṭṭavē, dēvā? Kāḍa mr̥gavondāgiralāgade, dēvā? Ūra mr̥gavondāgiralāgade, harane? Nam'ma kūḍalasaṅgana śaraṇarillada ūru, dēśa- vanavāsa, naravindhya kāṇiraṇṇā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Vachana Gaanamruta ℗ 2021 Pebble Productions Released on: 2017-11-09 Music Publisher: Pebble Productions Composer: Revayyaa Vasthramatha
English Translation 2 People who neither know nor think of God- Does not the dung, Sir, breed a thousand worms? Will not a creature of the woods, O Lord, Will not a creature of the countryside, Live a gregarious life? Look you, my brothers! A village, or a region, which has none Of our Kūḍala Saṅga's Śaraṇās Is even as living in a wood, a range Inhabited by savage men! Translated by: L M A Menezes, S M Angadi
Hindi Translation शिवचिंता, शिवज्ञान रहित मनुज गोबर में सहस्रों कीटाणु पैदा नहीं होते देव? वन्यपशु एकाकी नहीं रहता देव-? ग्रामपशु एकाकी नहीं रहता देव-? मम कूडलसंगमदेव के शरणों से शून्य ग्राम व देश देखो भाई, वनवास है, नरविंध्या है ॥ Translated by: Banakara K Gowdappa
Telugu Translation మర్త్యలోక మన్నది కర్తారుని కమ్మటమయ్యా, ఇట చెల్లెడివారటనూ చెల్లెదరయ్యా: ఇట చెల్లనివారటనూ చెల్లరు గదయ్యా, కూడల సంగమదేవా! Translated by: Dr. Badala Ramaiah
Tamil Translation சிவநினைவு சிவஞானமிலோர் சாணியிலே ஆயிரம்புழு பிறந்ததனைத்தோ இறைவனே? அடவிமாக்கள் ஒன்றுகூடி இரலாகாதோ இறைவனே? ஊர்மக்கள் ஒன்றுகூடி இரலாகாதோ இறைவனே? நம் கூடல சங்கனின் அடியாரற்ற ஊர், நாடு காட்டுவாழ்வு, நாரடவி, காணீரோ! Translated by: Smt. Kalyani Venkataraman, Chennai
Marathi Translation नाही केले ज्यांनी शिवाचे चिंतन तथा शिवज्ञान, होई कैसे सुज्ञान प्राप्तीची इच्छा नाही ज्यांची जाणा स्थिती त्यांची, शेण किडे येतात जन्माला, काही क्षणासाठी मरण उठा उठी, तयापुढे पुच्छहीन पशु, वनचर ते जाणा तयाना शहाणा, म्हणू नये असे जे ग्राम, शिवशरण निवासि तीच वाराणशी, तीर्थ क्षेत्र नाही शिवशरण, ओसाड तो गावे तिथे न राहावे, मानवानी कूडलसंगमदेवा ! सत्संग घडावे समजुन घ्यावे, उद्देशाला अर्थ - जे शिवचिंतन करीत नाहीत, शिवज्ञान प्राप्त करु इच्छित नाहीत. त्यांचे जीवन शेणातील किड्याप्रमाणे होय. पृथ्वीतलावर यावे, व काही तासात मरावे. एवढाच काय त्यांच्या जीवनाचा उद्देश होय. अथवा जंगली जनावराप्रमाणे किंवा शहरी जनावराप्रमाणे जीवन समजावे. हे प्रभो ! ज्या गावात शिवशरण राहतात ते गाव पुण्यक्षेत्र समजावे. आणि ज्या गावात शिवशरण राहत नाही ते गाव, अरण्य, जंगल होय ते मनुष्यास राहण्यास योग्य नाही असे महात्मा बसवेश्वर शिवचिंतन व शिवज्ञानाची महती सांगून पुढे शिवशरण जीवनाचा उद्देश जाणतात. म्हणून त्यांचा सत्संग सदैव लाभावा. Translated by Rajendra Jirobe, Published by V B Patil, Hirabaug, Chembur, Mumbai, 1983 शिवचिंतन, शिवज्ञान विना मानव. शेणातील हजारो किड्यांच्यासारखे नाही का सांगा? जंगलातील मृग एकत्र रहात नाही का सांगा? गावातील मृग एकत्र होऊन रहात नाही का सांगा? कूडलसंगमदेवांचे शरण नसलेले गाव, देश वनवास, नरविंध्य पहा. Translated by Shalini Sreeshaila Doddamani
ಶಬ್ದಾರ್ಥಗಳು ನರವಿಂದ್ಯ = ಪಶುಗಳಂತಹ ಜನನರು ವಾಸಿಸುವ (ಗುಡ್ಡಗಾಡಿನಂತಹ ವಾಸಕ್ಕೆ ಕಷ್ಟಕಾರವಾದ) ಸ್ಥಾನ; ಶಿವಜ್ಞಾನ = ಮಂಗಳಕರವಾದ ಜ್ಞಾನ; ಸಗಣ = ಸಗಣಿ; ಸಾಸಿರ = ಸಾವಿರ; ಹರ = ಶಿವ;
ಕನ್ನಡ ವ್ಯಾಖ್ಯಾನ ಮಂದಿ ಶಿವಚಿಂತೆ ಶಿವಜ್ಞಾನವಿಲ್ಲದೆ ಊರು ಪುರ ಪಟ್ಟಣಗಳಲ್ಲಿ ಮಂದೆಮಂದೆಯಾಗಿರುವುದನ್ನು ಕಂಡು ಬಸವಣ್ಣನವರು ವಿಷಣ್ಣವಾಗಿದ್ದಾರೆ. ದನ ಹಾಕಿದ ಒಂದು ತೊಪ್ಪೆ ಸಗಣಿಯಲ್ಲಿ ಸಾವಿರಾರು ಹುಳು ಹುಟ್ಟಿ, ಅಲ್ಲೇ ಬೆಳೆದು ಅಲ್ಲೇ ವಿಲಿ ವಿಲಿ ಒದ್ದಾಡುತ್ತಿರುವುದಿಲ್ಲವೆ? ಈ ಚಿತ್ರದ ಕಲ್ಪನೆಯಾಗುವುದು-ಮಾಯಾಮಲಿನದಲ್ಲಿ ಜನ ಒತ್ತೊತ್ತೆಯಾಗಿ ಮಾರ್ಮಲೆಯುತ್ತಿರುವುದನ್ನು ಕಂಡ ಬಸವಣ್ಣನವರಿಗೆ, ಸಗಣಿಯಲ್ಲಿ ಈ ಕಥೆಯಾದರೆ ಕಾಡಿನಲ್ಲಿ ಇನ್ನೊಂದು ಕಥೆ : ಒಂದೊಂದು ಜಾತಿಯ ಪ್ರಾಣಿಯು ಒಂದೊಂದು ಗುಂಪಾಗಿ ಒಂದೊಂದು ಕಡೆ ವಾಸಿಸುತ್ತ ಒಂದನ್ನೊಂದು ತಿನುತ್ತ ಹೊಟ್ಟೆ ಹೊರೆಯುತ್ತಿವೆ. ಇನ್ನು ಊರುಪ್ರಾಣಿಯಾದ ಮನುಷ್ಯನದು ಮತ್ತೊಂದು ಕಥೆ. ಇವನು ಊರೂರಲ್ಲಿ ಇದು ಹಾರುವಕೇರಿ ಇದು ಹೊಲೆಗೇರಿ ಇದು ಅಗಸರಕೇರಿ ಇದು ಬೆಸ್ತರಕೇರಿ ಎಂದು ಮುಂತಾಗಿ ಅಡ್ಡಗೋಡೆ ಕಟ್ಟಿಕೊಂಡು ಪರಸ್ಪರವನ್ನೇ ಅಲ್ಲ ಸಮಸ್ತವನ್ನೂ ಶೋಷಿಸುತ್ತ ಜೀವಿಸುತ್ತಿದ್ದಾನೆ. ವ್ಯರ್ಥಜೀವನದೃಷ್ಟಿಯಿಂದ ಪ್ರಾಣಿಜೀವನಕ್ಕೂ ಈ ಮಾನವಜೀವನಕ್ಕೂ ಏನೂ ವ್ಯತ್ಯಾಸವಿಲ್ಲ. ವ್ಯತ್ಯಾಸವೇರ್ಪಡಬೇಕಾದರೆ-ಮಾನವನು ಶಿವಚಿಂತನೆಯಿಂದ ಶಿವಜ್ಞಾನವನ್ನು ಮೈಗೂಡಿಸಿಕೊಂಡು ಮಧುರಭಾವದಿಂದ ಊರೊಟ್ಟಿಗೆ ಜೀವನ ನಡೆಸಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು