ವ್ಯಾಧನೊಂದು ಮೊಲನ ತಂದಡೆ ಸಲುವ ಹಾಗಕ್ಕೆ ಬಿಲಿವರಯ್ಯಾ.
ನೆಲನಾಳ್ದನ ಹೆಣನೆಂದರೆ ಒಂದಡಕೆಗೆ ಕೊಂಬವರಿಲ್ಲ, ನೋಡಯ್ಯಾ!
ಮೊಲನಿಂದ ಕರಕಷ್ಟ ನರನ ಬಾಳುವೆ!
ಸಲೆನಂಬೋ ನಮ್ಮ ಕೂಡಲಸಂಗಮದೇವನ.
Transliteration Vyādhanondu molana tandaḍe saluva hāgakke bilivarayyā.
Nelanāḷdana heṇanendare ondaḍakege kombavarilla, nōḍayyā!
Molaninda karakaṣṭa narana bāḷuve!
Salenambō nam'ma kūḍalasaṅgamadēvana.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 A rabbit that a huntsman brings,
They pay for it the proper price;
But none will give a betel-nut
For a dead ruler of the land!
A man's life is less worth
Than a rabbit's see!
Do you, then, put your trust
In Lord Kūḍala Saṅgama!
Translated by: L M A Menezes, S M Angadi
Hindi Translation व्याध के एक खरगोश लाने पर
उसे उचित मूल्य पर खरीदते हैं
देखो, भूपाल के शव को
एक कौडी में खरीदनेवाले नहीं है
खरगोश से भी निकृष्ट है मानव जीवन
मम कूडलसंगमदेव पर पूर्ण विश्वास रखो ॥
Translated by: Banakara K Gowdappa
Telugu Translation వ్యాధు డొక కుందేటిని తెచ్చిన
నాకు నాకని వెలనీయ ముసిరిరయ్యా!
ఏలిక పీనుగయన వక్క చూరునకు
గొనువారు లేరయ్యా!
శశంబుకన్న హీనము నరుని బ్రతుకు;
నెఱనమ్ము మా కూడల సంగమదేవుని.
Translated by: Dr. Badala Ramaiah
Tamil Translation வேடனொரு முயலைத் தரின்
பணமீந்து கொள்வரையனே.
நாடாள்வோன் மாண்டாலொரு
பாக்கிற்கும் கொள்வரோ, காண் ஐயனே.
முயலினு மிழிந்தது மனிதவாழ்வு
திறவதின் நயப்பாய் நம் கூடல சங்கம தேவனை.
Translated by: Smt. Kalyani Venkataraman, Chennai
Marathi Translation
शिकारी करून आणिला तो ससा
मिळवून देतो पैसा, मृतदेह
परि मानवाचा देह, मृत झाला
किंमत न त्याला कवडीचीही
म्हणून विश्वास, ईश्वरावर ठेवी
तरीच सार्थक होई, जीवनाचे
कूडलसंगमदेवा ! भक्ति आहे खरी
अवलंब जो करी, नित्य त्याचा
अर्थ - शिकार करून आणलेल्या सशाच्या शवाला बाजारात मूल्य असते. त्याला लोक पैसे देऊन विकत घेतात. परंतु मानव तो कितीही श्रेष्ठ असो मेल्यानंतर त्याच्या शवाला बाजारात कवडीचीही किंमत येत नाही. राजाधिराज म्हणून मिरवून घेणारे देखील मेल्यावर त्यांच्या शवाला काहीही किंमत येत नाही म्हणजे मानवी शरीर किती हीन आहे, हे महात्मा बसवेश्वर आपल्या वरील वचनाद्वारे सोदाहरण स्पष्ट करीत आहेत. पुढे ते म्हणतात की, जे परमेश्वरावर विश्वास करतात अशांचेच जीवन मौलिक ठरते. सार्थक होते. म्हणून जीवन कवडी मोलाचे ठरविण्याआधी भक्तिमार्गाचा अवलंब करावा. हीच एकमेव साधना होय.
Translated by Rajendra Jirobe, Published by V B Patil, Hirabaug, Chembur, Mumbai, 1983
शिकार करुन आणलेल्या सश्याचीही किंमत केली जाते.
राजाधिराजाच्या शवाला एक आण्याला ही कोणी घेत नाही.
सश्यापेक्षाही कनिष्ठ आहे मानवाचे जीवन !
दृढ श्रध्दा ठेवा कूडलसंगमदेवावर.
Translated by Shalini Sreeshaila Doddamani
Urdu Translation ایک خرگوش کو لائے کوئی صیّاد اگر
لوگ معقو ل سی قیمت پہ خریدیں گےاُسے
مگراک حاکم اعلٰی کی شہنشاہ کی لاش
پھوٹی کوڑی کےعوض بھی نہ خریدے گا کوئی
گویا خرگوش سےانسان گیا گزرا ہے
جب یہ عالم ہے ہمارا تو رہیں شام و سحر
کوڈلا سنگما دیوا کی عقیدت میں مگن
Translated by: Hameed Almas
ಶಬ್ದಾರ್ಥಗಳು ನರ = ಮನುಷ್ಯರು; ಬಿಲಿ = ಕ್ರಯ ಮಾಡಿಕೊಳ್ಳು, ಕೊಂಡುತರು; ವ್ಯಾಧ = ಬೇಡ; ಹಾಗ = ಒಂದು ನಾಣ್ಯ;
ಕನ್ನಡ ವ್ಯಾಖ್ಯಾನ ಶರೀರಕ್ಕೆ ಬೆಲೆ ಇಲ್ಲ
ಒಬ್ಬ ಬೇಡರವನು ಸತ್ತ ಮೊಲವನ್ನು ಹೊತ್ತು ತಂದರೆ ಸಾಕು, ಯೋಗ್ಯ ಬೆಲೆಗೆ ಕೊಂಡುಕೊಳ್ಳುವ ಜನರಿದ್ದಾರೆ. ಅದೇ ಒಬ್ಬ ಮನುಷ್ಯನ ಹೆಣವನ್ನು - ಅದು ಒಂದು ನಾಡನ್ನಾಳಿದ ರಾಜನದೇ ಆಗಿರಲೊಲ್ಲದೇಕೆ, ಒಂದು ಅಡಕೆಗೂ ಕೊಂಡುಕೊಳ್ಳುವ ಜನರಿಲ್ಲ. ಈ ಮಾನವ ದೇಹಕ್ಕೆ ಸತ್ತ ಮೇಲೆ ಒಂದು ಮೊಲದ ದೇಹಕ್ಕಿರುವ ಬೆಲೆಯೂ ಇಲ್ಲದಂತಾಯಿತು. ಮನುಷ್ಯನ ದೇಹವು ಮೊಲದ ದೇಹಕ್ಕಿಂತಲೂ ಕಡೆಯಾಯಿತೇಕೆ? ಏಕೆಂದರೆ ಮನುಷ್ಯನ ದೇಹಕ್ಕೆ ಸ್ವತಂತ್ರವಾದ ಬೆಲೆಯೇನೂ ಇಲ್ಲ. ಇರಬಹುದಾದ ಬೆಲೆಯೆಲ್ಲವೂ ಆ ದೇಹಾಂತರ್ಗತವಾದ ಚೈತನ್ಯಕ್ಕೆ. ಆದ್ದರಿಂದ ಆ ಚೈತನ್ಯಸ್ವರೂಪಿಯಾದ ದೇವರನ್ನು ನಂಬು ಎಂದು ಅಣ್ಣನವರು ಇಲ್ಲಿ ತಿಳಿಯ ಹೇಳಿದ್ದಾರೆ.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.