•  
  •  
  •  
  •  
Index   ವಚನ - 160    Search  
 
ಭಕ್ತನ ಜ್ಞಾನಿಸ್ಥಲ - ತನು-ಮನ
ಮನವೇ ಸರ್ಪ, ತನುವೇ ಹೇಳಿಗೆ: ಹಾವಿನೊಡತಣ ಹುದುವಾಳಿಗೆ ! ಇನ್ನಾವಾಗ ಕೊಂದಹುದೆಂದರಿಯೆ: ಇನ್ನಾವಾಗ ತಿಂದಹುದೆಂದರಿಯೆ! ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲೊಡೆ ಅದೇ ಗಾರುಡ, ಕೂಡಲಸಂಗಮದೇವಾ!
Transliteration Manavē sarpa, tanuvē hēḷige: Hāvinoḍataṇa huduvāḷige! Innāvāga kondahudendariye: Innāvāga tindahudendariye! Niccakke nim'ma pūjisaballoḍe adē gāruḍa, kūḍalasaṅgamadēvā!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 The body is basket, mind the snake. See, how they live together, The snake and basket! You have no notion when It may kill you, No notion when he bites! O Kūḍala Saṅgama Lord, If I can worship Thee Day after day, That the charm! Translated by: L M A Menezes, S M Angadi
Hindi Translation मन ही सर्प है, तन ही टोकरी सर्प के साथ सहजीवन मैं नहीं जानता वह कब मारेगा नहीं जानता वह कब काटेगा नित्य तव पूजा कर सकूँ तो वही गारुड है, कूडलसंगमदेव ॥ Translated by: Banakara K Gowdappa
Telugu Translation ఆగారు మనసే సర్పము తనువే బుట్ట; పాముతో బ్రతుకయ్యెనయ్యా; ఎప్పుడు చంపునో యెఱుగ నన్నిక ఎప్పుడు కఱచునో యెఱుగ దినదినము నిను పూజించు పెరిగిన గారుడమదే కూడల సంగమదేవా! Translated by: Dr. Badala Ramaiah
Tamil Translation மனமே பாம்பு, உடலே பெட்டி, பாம்புடன் கூடி வாழ்வதோ, எஞ்ஞான்று கொல்லுமென்றறியேன், எஞ்ஞான்று உண்ணுமென்றறியேன், நாடோறு மும்மை வணங்குவதே, அதே காரூடம் கூடல சங்கம தேவனே. Translated by: Smt. Kalyani Venkataraman, Chennai
Marathi Translation मन हा साप, तन ही टोपली. सापाशी खेळणे हे जीवन आहे ! न जाणे केव्हा हा डंख मारील ! न जाणे केव्हा हा जीव घेईल. प्रतिदिन आपली पूजा केलीतर हाच गारुडी आहे कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಗಾರುಡ = ಮಾಟಗಾರ; ತನು = ಶರೀರ; ಹುದುವಾಳಿ = ಕೂಡಿಕೊಂಡು ಬಾಳುವವ; ಹೇಳಿಗೆ = ನಾಗರ ಹಾವವನ್ನು ಇಡುವ ಹಾವುಗಾರನ ಬುಟ್ಟಿ;
ಕನ್ನಡ ವ್ಯಾಖ್ಯಾನ ಈ ಮನಸ್ಸು ಸದಾ ನಮ್ಮ ಅಧೀನದಲ್ಲಿರುವುದೆಂಬುದಕ್ಕೆ ಏನು ಖಾತ್ರಿಯಿದೆ ? ಅದೊಂದು ಸರ್ಪ-ಅದೂ ನಮ್ಮ ದೇಹದಲ್ಲೇ ಹುತ್ತ ಕಟ್ಟಿಕೊಂಡಿದೆ. ಸದಾಕಾಲ ಅಲ್ಲೇ ಬುಸುಗುಟ್ಟುತ್ತಿರುತ್ತದೆ. ಈ ವಿಷಸರ್ಪದೊಡನೆ ನಾವು ಬಾಳುವೆ ಮಾಡಬೇಕಾಗಿದೆ. ಅದು ಯಾವಾಗ ಸುರುಳಿ ಬಿಚ್ಚುವುದೋ ಕಚ್ಚುವುದೋ ಕೊಲ್ಲುವುದೋ ಒಂದೂ ಖಚಿತವಿಲ್ಲ. ಹೊರಗಡೆಯ ರೂಢಿಯ ಹಾವಾದರೆ-ಅದು ನಮ್ಮ ಮೇಲೆ ಹಲ್ಲೆಮಾಡದಂತೆ ಕಚ್ಚದಂತೆ ಎಚ್ಚರಿಕೆ ವಹಿಸಬಹುದಾಗಿತ್ತು. ಆದರೆ ಈ ಮನೋಸರ್ಪದ ಕಥೆಯೇ ಬೇರೆ-ಅದು ನಮ್ಮೊಳಗೇ ನಮ್ಮನ್ನು ಸುತ್ತಿಕೊಂಡಿದೆ-ಅಂದಮೇಲೆ ಎಚ್ಚರವಾಗಿರುವುದೆಂದರೆ ದೇವರ ಪೂಜೆ ದೇವರ ಧ್ಯಾನಮಾರ್ಗವಾಗಿ ಒಳಮುಳವಾಗುವುದು. ಅದಕ್ಕೆ ಅದೇ ಮದ್ದು ಮಂತ್ರ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು