ನೆರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ,
ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ,
ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ,
ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ-
ಪೂಜಿಸು ನಮ್ಮ ಕೂಡಲಸಂಗಮದೇವನ.
Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:Nerekennege Album/Movie: Vachana Gaanambudhi Singer: Ravindra Soragavi Music Director: Devendra Kumar Mudhol Lyricist: Basavanna Music Label : Lahari Music
English Translation 2Before
the grey reaches the cheek,
the wrinkle the rounded chin
and the body becomes a cage of bones:
before
with fallen teeth
and bent back
you are someone else's ward:
before
you drop your hand to the knee
and clutch a staff:
before
age corrodes
your form:
before
death touches you:
worship
our lord
of the meeting rivers!
Translated by: A K Ramanujan Book Name: Speaking Of Siva Publisher: Penguin Books ----------------------------------
Before the greyness touch your cheek,
Before the wrinkles plough your face,
Before your body dwindles to
A nest of bones;
Before, with teeth all gone,
The back all bowed,
You are a burden to your kin;
Before you prop your legs with hands
And lean heavily upon a staff;
Before the lustre of your manhood fades;
Before you feel the touch of death,
Adore our Lord
Kūḍala Saṅgama!
Translated by: L M A Menezes, S M Angadi
Hindi Translationगाल पर श्वेत बाल, मुख पर झुरियाँ होने के पूर्व
कंकल शरीर के अस्तिपंजर होने के पूर्व
दांत गिरकर, पीठ झुककर अन्याश्रित होने के पूर्व
टाँग पर हाथ टेककर लकड़ी पकड़ने के पूर्व
बुढापे से कांतिहीन होने के पूर्व
मृत्यु स्पर्श होने के पूर्व
कूडलसंगमदेव को पूजो ॥
Translated by: Banakara K Gowdappa
Telugu Translationచెంప నెరసి చిఋకమలలై మేను గూడుకాక
మున్నె; పల్లుడుల్లి వెన్ను వంగి పరుల నాశ్రయింపక మున్నె
కాళ్ళ పైన కేలనూది కోలు బట్టకమున్నె
ముప్పుచే నొప్పు తప్పక మున్నె
మా కూడల సంగమ దేవుని.
Translated by: Dr. Badala Ramaiah
Tamil Translationகன்னமயிர்நரை, தாடைச்சுருக்கம்
உடல் கூடாகிக் குன்றுமுன்,
பல்லின்றி, முதுகு வளைந்து
பிறரிட முடலைப் பேணுமுன்,
காலின்மீது கையூன்றி கோல்பிடியுமுன்,
முதுமை வந்து வடிவம் அழியும் முன்
சாக்காடு வரும் முன் வணங்குவாய்
நம் கூடல சங்கம தேவனை.
Translated by: Smt. Kalyani Venkataraman, Chennai
Marathi Translationकेस पिकण्यापूर्वी, गाल सुकण्यापूर्वी
कंबर वाकण्यापूर्वी, भक्ति घडो !
दात पडण्यापूर्वी, पराश्रयापूर्वी
क्षीण होण्यापूर्वी, भक्ति घडो !
वृद्धपणा पूर्वी, गुडघे टेकण्यापूर्वी
मृत्यु येण्यापूर्वी, भक्ति घड़ो !
शिवनाम मुखी, पश्चातापापूर्वी
क्षण हे जाण्यापूर्वी, भक्ति घडो !
कूडलसंगमदेवा ! पूजा घडावी,
समाधानी व्हावे, ऐसे वाटे !
अर्थ - भक्ति केंव्हा करावी. त्यासाठी योग्य वेळ कोणती ? आज करावी का उद्या करावी, का आता शुभ घटिका निश्चित करून भक्ति करण्यास सुरूवात करावी का? याबद्दल प्रतिपादन करतांना बसवेश्वर म्हणतात की, दाढी पिकलेली आहे, गालावरती सुरकुत्या पडल्या आहेत, दात पडलेले आहेत, कंबर वाकलेली, परावलंबी जीवन जगत आहोत, गुडघ्यावर हात टेकून, हातात काठीचा आधार, वृद्धपणात देह जर्जर झालेला, मान हालत आहे. मृत्यु अगदी जवळ आलेला व तोंडात शिवनामाचा जप व डोळ्यात पश्चातापाचे अश्रु ! अशी अवस्था झाल्यावर परमेश्वराची पुजा-प्रार्थना करून काय उपयोग ? अशा अवस्थेत भक्ति नाही. कारण किडके मन, कुचकामी बुद्धी, विकारी वृत्ती, जर्जर शरीर व चंचल मनाला परमेश्वर ऐक्य असंभव. लाथ मारीन तेथे पाणी काढीन अशी धमक असेतोवर मनबुध्दीला लागलेली भक्तीची गोडी श्रेष्ठ समजावी, म्हणून भक्ती हा पाचवा पुरुषार्थ समजला जातो. तो वरील कारणामुळेच असावा.
सर्व शक्तिमान परमेश्वरास निरोगी मन, शक्तिमान शरीर व आत्मविश्वास यानेच आपलेसे करता येते. म्हातारपणी ते शक्य नाही.
Translated by Rajendra Jirobe, Published by V B Patil, Hirabaug, Chembur, Mumbai, 1983पांढरे केस होण्यापूर्वी,
गालावर सुरकुत्या पडण्यापूर्वी,
शरीर म्हातारे होण्यापूर्वी, दात पडून,
पाठ वाकून, दुसऱ्यांच्यावर अवलंबून जगण्यापूर्वी,
गुडघ्यावर हात टेकवून, काठी घेऊन चालण्यापूर्वी,
वृध्दत्त्वाने निस्तेज होण्यापूर्वी,
मृत्यू येण्यापूर्वी पूजा कर कूडलसंगमदेवाची.
Translated by Shalini Sreeshaila Doddamani
Urdu Translationاس سےپہلےکہ ہو ڈاڑھی کا ہراک بال سفید
اس سےپہلےکہ بدل جائےیہ رخسارکا رنگ
اس سےپہلےکہ ہوں بےجان عصا کےمحتاج
اور پھرخستگی جسم سےمجبور و ملول
دست ِکمزورسے زانو کا سہارا ڈھونڈیں
اس سے پہلےکہ ضعیفی کی نوازش کے سبب
جگمگاتے ہوئے چہروں کی چمک کھوجائے
اس سے پہلےکہ تمھیں موت کا عفریت ملے
کوڈلا سنگما دیوا کی عبادت کرنا
Translated by: Hameed Almas
ಶಬ್ದಾರ್ಥಗಳುಒಪ್ಪ = ; ತೆರೆ = ಅಲೆಯ; ನರೆ = ಬಿಳಿ; ಮುಪ್ಪು = ಅವಸ್ಥೆಯ ಮೂರನೆ ವಿಧ, ಮುದಿತನ; ಹಂಗು = ಋಣ;
ಕನ್ನಡ ವ್ಯಾಖ್ಯಾನಎಲ್ಲಕ್ಕೂ ಮೊದಲು ದೇವರನ್ನು ಪೂಜಿಸು
ದೇವರು ಮತ್ತು ಧರ್ಮದ ಬಗ್ಗೆ ಚಿಂತನೆ ಮಾಡುವುದು ಇಳಿ ವಯಸ್ಸಿನಲ್ಲಿ ಎಂಬುದು ಸಾಮಾನ್ಯ ಜನರ ನಂಬಿಕೆ. ಆದರೆ ಇಳಿ ವಯಸ್ಸಿನಲ್ಲಿ ಇದು ಸಾಧ್ಯವಾಗಲಾರದೆಂಬುದೇ ಅಣ್ಣನವರ ಅಭಿಪ್ರಾಯ. ಏಕೆಂದರೆ ದಿನ ನಿತ್ಯದ ಸಾಮಾನ್ಯ ಕೆಲಸಗಳಾದ ಉಣ್ಣುವುದು, ಉಡುವುದು, ನಡೆವುದು ಇವುಗಳನ್ನೇ ಇಳಿವಯಸ್ಸಿನಲ್ಲಿ ಮಾಡುವುದು ಕಷ್ಟ. ಹೀಗಿರುವಾಗ ದೇವರ ಪೂಜೆ ಹಾಗೂ ಆ ಪೂಜೆಯ ಮೂಲಕ ಮಾಡಬೇಕಾದ ಸಾಧನೆ ಮೊದಲಾದವುಗಳು ಸಾಧ್ಯವೇ? 'ಶರೀರಮಾಧ್ಯಂಖಲು ಧರ್ಮ ಸಾಧನಂ', ಧರ್ಮ ಸಾಧನೆಗೆ ಶರೀರ ಒಂದು ಸಾಧನ. ಅಂತಹ ಸಾಧನ ಸದೃಢವಾಗಿರಬೇಕು. ಆದರೆ ಮುಪ್ಪು ಬಂದಾಗ ಶರೀರದ ಸ್ಥಿತಿಯೇನು? ಕೆನ್ನೆ ತುಂಬಾ ನೆರೆಗೂದಲು, ಗಲ್ಲವೆಲ್ಲಾ ಸುಕ್ಕು ಸುಕ್ಕು ತುಂಬಿದ್ದ ಶರೀರವಾಗಿ ಎಲುಬಿನ ಪಂಜರ, ಹಲ್ಲೆಲ್ಲಾ ಹೋಗಿ, ಬೆನ್ನು ಬಾಗಿ, ನಡೆಯಲಶಕ್ತರಾಗಿ ಇನ್ನೊಬ್ಬರ ಆಶ್ರಯ ಬೇಕಾಗಿ ಬರಬಹುದು. ಒಂದು ಕೈಯನ್ನು ಕಾಲಮೇಲೆ ಊರಿ, ಮತ್ತೊಂದು ಕೈಯಲ್ಲಿ ಕೋಲು ಹಿಡಿದು ಮಂದಗತಿಯಿಂದ ಸಾಗಬೇಕಾಗುವುದು. ಇಷ್ಟಲ್ಲದೆ ಶರೀರವನ್ನು ಹೊಕ್ಕು ಕಾಡುವ ರೋಗಗಳು ! ಅವುಗಳಿಂದ ಮಾನವ ಬಿಡುಗಡೆ ಹೊಂದಲು ಮಾಡುವ ಸೆಣಸಾಟ !! ಸಾವು-ಬದುಕುಗಳ ಹೋರಾಟ !!! ಇಂತು ಶರೀರದ ಚಿಂತೆಯಲ್ಲೇ ಕಾಲ ಕಳೆಯುವಾಗ ದೇವರ ಚಿಂತನೆ, ಪೂಜೆ, ಸಾಧನೆ ಇವುಗಳಿಗೆ ಅವಕಾಶವೆಲ್ಲಿ? ಕೊನೆಗೆ ಮುಪ್ಪಿನಿಂದ ಯೌವನದ ಚೆಲುವು ಮರೆಯಾಗಿ ಮಾನವ ಮೃತ್ಯವಿನ ಬಾಯ ತುತ್ತಾಗುವನು. ಆದ್ದರಿಂದ ಹೀಗಾಗುವ ಮುನ್ನವೇ ಶರೀರ ಸದೃಢವಾಗಿದ್ದಾಗಲೇ ದೇವರ ಪೂಜೆ, ಸಾಧನೆ ಮಾಡಬೇಕೆಂದು ಅಣ್ಣನವರು ಹೇಳುತ್ತಾ ದೇವರ ಮತ್ತು ಧರ್ಮದ ಅರಿವು ವಯಸ್ಸಾದವರಿಗೇ ಮೀಸಲು ಎಂಬ ಭಾವನೆಯನ್ನು ತೊಡೆದು ಹಾಕಿ ಬಾಲ್ಯದಿಂದಲೇ ಅದಕ್ಕೆ ಸಂಬಂಧಿಸಿದ ಜ್ಞಾನವು ಬೆಳೆದು ಬರಬೇಕೆಂದು ಸೂಚಿಸಿದ್ದಾರೆ. ಸಂಸ್ಕೃತದಲ್ಲಿ ಒಂದು ಸುಭಾಷಿತವಿದೆ.
ಅಹನ್ಯಹನಿ ಭೂತಾನಿ ಪ್ರವಿಶಂತಿ ಯಮಾಲಯಂ!
ಶೇಷಾಃ ಸ್ಥಾವರಮಿಚ್ಛಿಂತಿ ಕಿಮಶ್ಚರ್ಯಮತಃ ಪರಂ ||
ಈ ಭೂಮಿಯಲ್ಲಿ ಆಶ್ಚರ್ಯವಾದುದು ಏನಿದೆಯೆಂದು ಯಕ್ಷ ಕೇಳಿದ ಪ್ರಶ್ನೆಗೆ ಧರ್ಮರಾಯನು ನೀಡಿದ ಉತ್ತರವಿದು. ಪ್ರತಿ ದಿನವೂ ಒಂದಲ್ಲಾ ಒಂದು ಜೀವಿ ಸಾಯುತ್ತಲೇ ಇದೆ. ಆದರೆ ಜೀವಂತವಿರುವವರು ಸಾಯುವುದು ಪ್ರಕೃತಿ ನಿಯಮ. ಅಂತೆಯೇ ಅನಿವಾರ್ಯ ಎಂದು ತಿಳಿಯದೇ ತಾವು ಮಾತ್ರ ಸಾಯದಂತೆ ಸ್ಥಿರವಾಗಿರಲೆಂದೇ ಬಯಸುತ್ತಾರೆ. ಇದಕ್ಕಿಂತಲೂ ಆಶ್ಚರ್ಯವಾದುದೇನಿದೆ? ಇದು ನಮ್ಮ ವೈಚಾರಿಕ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ನಮ್ಮ ಮುಂದಿನ ಜೀವನವು ಇಂದು ಪ್ರಾಣ ಬಿಡುತ್ತಿರುವ ಪ್ರಾಣಿಗಳಂತೆಯೇ ಅಲ್ಲವೇ? ಎಂಬುದನ್ನು ಯೋಚನೆ ಮಾಡದಷ್ಟು ನಿಶ್ಯಕ್ತರು ನಾವು. ಆದರೆ ಬಸವಣ್ಣನವರು ಮುಪ್ಪಿನ ಕಾಲದ ಮನುಷ್ಯನ ಸ್ಥಿತಿಗತಿಗಳನ್ನು ಬಹು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಬಹು ಸುಂದರವಾಗಿ ಇಲ್ಲಿ ಅದನ್ನು ಚಿತ್ರಿಸಿದ್ದಾರೆ. ಮುಪ್ಪಿನಿಂದ, ಮೃತ್ಯುವಿನಿಂದ ಪಾರಾಗಬಯಸದೇ ಅವು ಬರುವ ಮುನ್ನವೇ ಮಾಡಬೇಕಾದ ಕರ್ತವ್ಯವೇನೆಂಬುದನ್ನು ತಿಳಿಯಪಡಿಸಿದ್ದಾರೆ.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.