•  
  •  
  •  
  •  
Index   ವಚನ - 162    Search  
 
ಭಕ್ತನ ಜ್ಞಾನಿಸ್ಥಲ - ಜೀವನ
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು ಸುರಕ್ಷಿತವ ಮಾಡುವ ಭರವ ನೋಡಾ! ಮಹಾದಾನಿ ಕೂಡಲಸಂಗಮದೇವನ ಪೂಜಿಸಿ ಬದುಕುವೋ, ಕಾಯವ ನಿಶ್ಚಯಿಸದೆ.
Transliteration Nīra bobbuḷikege kabbunada kaṭṭakoṭṭu surakṣitava māḍuva bharava nōḍā! Mahādāni kūḍalasaṅgamadēvana pūjisi badukuvō, kāyava niścayisade.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Look at them, busy, making an iron frame for a bubble on the water to make it safe! Worship the all-giving lord, and live without taking on trust the body's firmness.

Translated by: A K Ramanujan
Book Name: Speaking Of Siva
Publisher: Penguin Books
----------------------------------
Look at the zeal to make it safe By putting a band of iron round This bubble of water! Do not rely Upon the body, and live on Adoring our most bountiful Lord Kūḍala Saṅgama! Translated by: L M A Menezes, S M Angadi

Hindi Translation पानी के बुदबुद पर लोहे की पट्टी चढाकर सुरक्षित रखने का उत्साह देखो शरीर का भरोसा छोड़कर महादानी कूडलसंगमदेव की पूजा जीवित रहो ॥ Translated by: Banakara K Gowdappa
Telugu Translation నీటి బుడగల కినుముతో కట్టలు గట్టి పదిల మొనరించు సంభ్రమము చూడుమ; కాయమును నమ్మక దాత కూడల సంగా సంగమ దేవుని గొలిచి బ్రతుకుమా? Translated by: Dr. Badala Ramaiah
Tamil Translation நீர்க்குமிழிக்கு இருப்புப் பூண் கட்டிக் காக்கும் ஊக்கத்தைக் காணாய் பெருவள்ளல் கூடல சங்கம தேவனை வணங்குவாய் நிலையற்ற உடலினை, வாழ்வினை நயவாய். Translated by: Smt. Kalyani Venkataraman, Chennai
Marathi Translation पाण्याचा बुडबुडा, मानवी जीवन निष्फळ प्रयत्न, रक्षिण्याचे केले तरी त्याला, लोखंडी आवरण होईना रक्षण, कदापिही अवास्तव जे जे, धरिल मोह त्याचा काल जीवनाचा व्यर्थ गेला म्हणून सेवाभावी, राहा सदाचारी उपासना हो खरी, ईश्वराची कूडलसंगमदेवा! ऐक्य साधण्याचे मार्ग मानवाचे, हेचि जाण अर्थ - जीवन हे पाण्याचे बुडबुड्याप्रमाणे होय. मानव त्यास लोखंडाच्या आवरणात सुरक्षित ठेवण्याचा प्रयत्न करीत आहे. त्यासाठी त्यांची सतत धड़पड चालू आहे. अर्थात जे अशाश्वत आहे. त्याचाच मोह करीत आहे. त्याच्याच पाठीमागे लागून जीवन व्यर्थ घालवीत आहे. सदाचार, सेवाभाव आणि परमेश्वराची उपासना हे सर्व परमेश्वररूपाशी ऐक्य साधण्याचे मार्ग आहेत. ही परमानंद प्राप्तीचीही साधने होत म्हणून यांतच आपले जीवन घालवावे. Translated by Rajendra Jirobe, Published by V B Patil, Hirabaug, Chembur, Mumbai, 1983 पाण्याच्या बुडबुड्याला लोखंडाचे कवच घालून सुरक्षित ठेवण्याचा उत्साह पहा. महादानी कूडलसंगमदेवाची पूजा कर. या देहाचा काही भरोसा नाही. Translated by Shalini Sreeshaila Doddamani
ಶಬ್ದಾರ್ಥಗಳು ಕಬ್ಬುನ = ಕಭ್ಣಿಣ; ಕಾಯ = ಶರೀರ; ನಿಶ್ಚಯಿಸು = ತೀರ್ಮಾನಿಸು; ಬೊಬ್ಬುಳಿ = ನೀರಗುಳ್ಳಿ; ಭರವ = ;
ಕನ್ನಡ ವ್ಯಾಖ್ಯಾನ ರಕ್ಷಿಸಿದಷ್ಟೂ ರಭಸವಾಗಿ ಕೆಡುವ ಕೈಕೊಡುವ ಈ ದೇಹವನ್ನು ನೀರ ಮೇಲಣ ಗುಳ್ಳೆಗೆ ಹೋಲಿಸುವರು. ದುಂಡಾಗಿ ಬಣ್ಣಬಣ್ಣವಾಗಿ ಮಿರುಗುವ ಈ ನೀರ್ಗುಳ್ಳೆ ತನ್ನಷ್ಟಕ್ಕೆ ತಾನಿದ್ದರೆ ಕ್ಷಣವಾದರೂ ಕಂಗೊಳಿಸಿ ಅದೃಶ್ಯವಾಗುವುದು. ಅದನ್ನು ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟು ಹೆಚ್ಚು ಕಾಲ ರಕ್ಷಿಸೋಣವೆಂದು ಕೈಚಾಚಿದರೆ-ನವಿರುಗಾಳಿಗೂ ಬಿರಿಯುವ ಆ ನೀರ್ಗುಳ್ಳೆ-ಚಾಚಿದ ನಮ್ಮ ಆ ಕೈಯ ತಾಪಕ್ಕೇ ಸಿಡಿದು ಮತ್ತಷ್ಟು ಜಾಗ್ರತೆ ಅದೃಶ್ಯವಾಗುವುದು. ಹಾಗೆಯೇ ಕ್ಷಣಭಂಗುರವಾದ ಈ ನಮ್ಮ ದೇಹ ಕೂಡ. ಅದನ್ನು ದೈವಚಿತ್ತಕ್ಕೆ ಬಿಡದೆ-ಕಾಮದ ರಭಸಕ್ಕೆ ಸಿಲುಕಿಸಿ ಉದ್ವೇಗದ ತೆಕ್ಕೆಗೆ ಬೀಳಿಸಿದರೆ ಅದು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಈ ದೇಹವನ್ನು ಕುರಿತಂತೆ ಹಠಯೋಗಿಗಳೂ ತೀರ ಅವಾಸ್ತವವಾಗಿ ಪರಿಭಾವಿಸುತ್ತಿರುವರು. ಕ್ಷಣಭಂಗುರವಾದ ಈ ದೇಹವನ್ನು ಮೃತ್ಯುವಿಂದ ಪಾರುಮಾಡಲು ಸಾಧ್ಯವೇ ಇಲ್ಲ. ಈ ದೇಹವಿರುವಷ್ಟು ಕಾಲದಲ್ಲೇ ದೇವರನ್ನು ನಾವು ನಚ್ಚಿ ಪೂಜಿಸಿದ್ದೇ ಆದರೆ-ಈ ಬದುಕನ್ನಷ್ಟೇ ಅಲ್ಲ-ಈ ಬದುಕಿನಾಚೆಯ ಬದುಕನ್ನೂ ಬದುಕುತ್ತೇವೆ. ಅದೇ ಶಾಶ್ವತದ ಬದುಕು ಕೂಡ-ಎಂದು ಬಸವಣ್ಣನವರು ಬುದ್ಧಿ ಹೇಳುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು