•  
  •  
  •  
  •  
Index   ವಚನ - 163    Search  
 
ಭಕ್ತನ ಜ್ಞಾನಿಸ್ಥಲ - ಮಾಯೆ
ಹಂಜರ ಬಲ್ಲಿತ್ತೆಂದು, ಅಂಜದೆ ಓದುವ ಗಿಳಿಯೇ, ಎಂದೆಂದೂ ಅಳಿಯೆನೆಂದು ಗುಡಿಗಟ್ಟಿದೆಯಲ್ಲಾ- ನಿನ್ನ ಮನದಲ್ಲಿ- ಮಾಯಾಮಂಜರ ಕೊಲುವರೆ ನಿನ್ನ ಹಂಜರ ಕಾವುದೆ, ಕೂಡಲಸಂಗಮದೇವನಲ್ಲದೆ?
Transliteration Han̄jara ballittendu, an̄jade ōduva giḷiyē, endendū aḷiyenendu guḍigaṭṭideyallā- ninna manadalli- māyāman̄jara koluvare ninna han̄jara kāvude, kūḍalasaṅgamadēvanallade?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 You, parrot, reading fearlessly, Relying on your cage,s strength, Within your mind you hoist A flag, to brag You'll never, never die! If Māyā, the cat, should choose To kill you, will your cage Protect you, but for Lord Kūḍala Saṅgama? Translated by: L M A Menezes, S M Angadi
Hindi Translation पंजर को बलिष्ट जानकर निर्भयता से पढनेवाला हे शुक कभी मेरा नाश नहीं होगा समझ तूने अपने मन में पताका फहराई माया मार्जाल के मारने पर कूडलसंगमदेव नहीं तो क्या तेरा पंजर रक्षा करेगा ? Translated by: Banakara K Gowdappa
Telugu Translation పంజరమె బలమని భయపడక పాడు చిలుకా! ఏ నాటికీ చెడవని గుడి కట్టుకొంటివే మనసున: మాయామార్జాలము వచ్చి చంపువేళ ఈ పంజరము నిను గాచునే? కూడల సంగమదేవుడు తప్ప. Translated by: Dr. Badala Ramaiah
Tamil Translation கூடு உறுதியுடைத்தென அஞ்சாது ஓதுங்கிளியே, என்றென்று மழியே னென்று இறுமாந்தாயன்றோ உன் மனத்திலே மாயப்பூனை கொல்லுழி உன் கூடு காக்குமோ கூடல சங்கம தேவனல்லாமல்? Translated by: Smt. Kalyani Venkataraman, Chennai
Marathi Translation मजबूत पिंजरा, प्राप्त जरी तुला गर्व का जाहला, स्वबळाचा उरलीना भिती, आनंदी तू जाहला परी ना कळे तुजला, मरण तुझे नश्वर देहाचा, नको अभिमान जाईल विरुन, क्षणार्धात कूडलसंगमदेवा! मरण येता जवळ वाचवी केवळ, देव माझा अर्थ - मजबूत सापळा पाहून निडर झालास का पामरा ? म्हणून तुला कसलीच भिती उरली नाही का? तुझे शरीर हे तुझे नाही वा त्यातील मजबूत वाटणारा अस्थिपंजर तुझा नाही. जे तुझे नाही ते “माझेच” समजून आनंदीत होऊ नकोस. परमेश्वराची लिला अपरंपार आहे. त्याची माया अलौकिक आहे. मायारूपी मांजरी तुझ्यावर केव्हा झडप घालेल याची तुला पुसट देखील कल्पना नाही. तेंव्हा परमेश्वराशिवाय तुला वाचविणे कोणालाही शक्य होणार नाही. Translated by Rajendra Jirobe, Published by V B Patil, Hirabaug, Chembur, Mumbai, 1983 पिंजरा रक्षण करतो असे समजून न घाबरता बोलणारा पोपट, कधीही मरणार नाही असे समजून रोमांचित झालास ना तुझ्या मनात ! मायारुपी मांजर मृत्यू घेऊन आले तर तुझा पिंजरा रक्षण करेल का? कूडलसंगाशिवाय ! Translated by Shalini Sreeshaila Doddamani
ಶಬ್ದಾರ್ಥಗಳು ಕಾವು = ರಕ್ಷಿಸು; ಮಾಯಾ ಮಂಜರ = ಮಾಯಾ ಗೂಡು; ಹಂಜರ = ಪಂಜರ, ಗೂಡು;
ಕನ್ನಡ ವ್ಯಾಖ್ಯಾನ ಹಠಯೋಗವೆಂದು ಲಂಬಿಕೆಯೆಂದು ಆಕುಂಚನವೆಂದು ಅಮೃತವೆಂದು-ಅದನ್ನು ತಾವುಂಡೆವೆಂದು, ತಮ್ಮ ದೇಹ ವಜ್ರವಾಯಿತೆಂದು, ತಮಗಿನ್ನು ಸಾವಿಲ್ಲವೆಂದು ಭ್ರಮೆಗೊಂಡು ದೇಹಕ್ಕೇ ಅಂಟಿಕೊಂಡಿರುವರು ವಿಕಾರಿಸಿದ್ಧರು ಹಲವರು. ಅವರನ್ನು ಬಸವಣ್ಣನವರು ಘಟ್ಟಿಭದ್ರವಾದ ಪಂಜರದಲ್ಲಿರುವೊಂದು ಗಿಳಿಗೆ ಹೋಲಿಸುವರು. ಆ ಗಿಳಿ ತಾನಿರುವ ಪಂಜರ ಬಹಳ ಘಟ್ಟಿಭದ್ರವಿರುವುದರಿಂದ-ತಾನು ಬೆಕ್ಕಿನ ಬಾಧೆಯಿಲ್ಲದೆ ದೀರ್ಘಕಾಲ ಬದುಕುವೆನೆಂದು ಉಲ್ಲಾಸಗೊಂಡಿರುವುದು. ಆದರೆ ತನ್ನ ದೇಹವೇ ನಶ್ವರವೆಂಬುದನ್ನು ಅದು ಮರೆತಿರುವುದು. ವಿಕಾರಿಸಿದ್ಧನ ದೇಹ ವಜ್ರದೇಹವೇ ಆದರೂ ಆ ದೇಹದೊಳಗಿರುವ ಮನವೇ ಮಾಯೆಯಾಗಿ ಮೃತ್ಯುವಾಗಿ ತನ್ನನ್ನು ಕಾಡುವುದು ಕೊಲ್ಲುವುದೆಂಬುದನ್ನು ಅವನರಿಯ, ಒಳಗಿನಿಂದಲೇ ಉದ್ಭವಿಸಿ ನುಣ್ಣಗೆ ನೊಣೆಯುವ ಈ ಮಾಯಾಮೃತ್ಯುವನ್ನು ತಡೆಗಟ್ಟುವ ಮೃತ್ಯುಂಜಯರೆಲ್ಲಿದ್ದಾರೆ ? ಈ ಸಾವೆಂಬುದು ದೇಹದಾದಿಗಳಿಗೇ ಹೊರತು-ದೇಹ ನಾನಲ್ಲ, ಚೈತನ್ಯಸ್ವರೂಪಿಯಾದ ಆತ್ಮ ನಾನೆಂಬ ಆತ್ಮವಾದಿಗಳಿಗೆಲ್ಲಿಯದು ?

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು