ಭಕ್ತನ ಜ್ಞಾನಿಸ್ಥಲ - ಶಿವಜ್ಙಾನ
ಎಂತಕ್ಕೆ! ಎಂತಕ್ಕೆ! ಹಡೆದ ಕಾಯ ಬೀಯವಾಗದ ಮುನ್ನ ಅಟ್ಟುಣ್ಣುವೋ!
ಬೆರಣಿಯುಳ್ಳಲ್ಲಿ ಹೊತ್ತು ಹೋಗದ ಮುನ್ನ ಅಟ್ಟುಣ್ಣುವೋ!
ಮರಳಿ ಭವಕ್ಕೆ ಬಾಹೆ-ಬಾರದಿಹೆ:
ಕರ್ತೃ ಕೂಡಲಸಂಗಂಗೆ ಶರಣೆನ್ನುವೋ!
Transliteration Entakke! Entakke! Haḍeda kāya bīyavāgada munna aṭṭuṇṇavō!
Beraṇiyuḷḷalli hottu hōgada munna aṭṭuṇṇavō!
Maraḷi bhavakke bāhe-bāradihe:
Kartr̥ kūḍalasaṅgaṅge śaraṇennuvō!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 What way so ever it may be,
Before your hard-earned body is spent,
Come, cook and eat!
Before time flies away,
While you have cakes of dung,
Come, cook and eat!
You, may, or may not, come
Back to this world again:
Perform your salutations to
Kūḍala Saṅgama,
Creator of this world!
Translated by: L M A Menezes, S M Angadi
Hindi Translation किसी प्रकार हो, प्राप्त शरीर के नष्ट होने के पूर्व
पकाकर खाओ
उपले रहते समय के बीतने के पूर्व
पकाकर खाओ
पुनः भव में आओ या न आओ
कर्ता कूडलसंगमदेव की शरण में जाओ ॥
Translated by: Banakara K Gowdappa
Telugu Translation ఇక జన్మ వచ్చునో లేదో
మటి ఏమగునో! యెటులగునో! యీ
వచ్చిన కాయము రాలక మునుపే;
వండి తినుమా ప్రొద్దు వ్రాలకమునుపే;
పిడకలుండగనే వండి తినుమా!
ఇక జన్మ వచ్చునో, లేదో!
ఇపుడే శరణనుమా కూడల సంగయ్యకు.
Translated by: Dr. Badala Ramaiah
Tamil Translation எதற்கோ, எதற்கோ
பெற்றவுடல் அழியுமுன் அட்டுண்ணாய், ஓ!
வறட்டித் தீயிலே -- எரிந்து போகுமுன்னே -- அட்டுண்ணாய் ஓ!
மீண்டும் பிறவியை யெய்யாய், யெய்யாதிருக்க
உடையன் கூடலசங்கமனுக்குத் தஞ்சம் என்பாய்.
Translated by: Smt. Kalyani Venkataraman, Chennai
Marathi Translation
शरीर घेऊनि, जन्मा येतो प्राणी
जाती विसरुनि, कर्तव्याला
शेवटी येई ना, शरीर संगाती
होऊनिया माती जाई त्याची
इंद्रिय प्रबळ आहेत तोवरी
भक्ति कर खरी, परमेशाची
कूडलसंगमदेवा! वेळीच शरण होणे
पुन्हा नाही येणे, नरदेही
अर्थ - अशरीरी जन्म घेऊन या जगत कोणी आला आहे काय? ज्या अर्थी शरीर धारण करुन या जगात आला आहात त्या अर्थी वाटेल तसे वागता येणार नाही. एक दिवस येथेच देह ठेवून जावे लागणार आहे याची सदैव जाण ठेवा. सदैव सजगतेने राहा. म्हातारे होऊन शरीर जर्जर होण्याआधी परमेश्वर चरणी शरण जा. हे शुभ कार्य आताच करा. हा जन्म पुन्हा मिळेल याचा भरवसा कोण देऊ शकेल ?
Translated by Rajendra Jirobe, Published by V B Patil, Hirabaug, Chembur, Mumbai, 1983
लक्षात ठेव, लक्षात ठेव शरीर मिळाले आहे तर,
जीव असेपर्यंत सदुपयोग करुन घे.
आग जळत आहे तोपर्यंत जेवण शिजवून खा.
पुन्हा जन्म मिळेल, न मिळेल.
कर्ता कूडलसंगाची पूजाकर
Translated by Shalini Sreeshaila Doddamani
ಶಬ್ದಾರ್ಥಗಳು ಅಟ್ಟುಣ್ಣು = ಅಡುಗೆ ಮಾಡಿದ ಊಟ; ಕರ್ತು = ಸೃಷ್ಠಿಕರ್ತ; ಕಾಯ = ಶರೀರ; ಬೀಯ = ಖರ್ಚು; ಬೆರಣಿ = ಕುರುಳು(ಸಗಣಿಯ ಕುರುಳು); ಭವ = ಜೀವನ;
ಕನ್ನಡ ವ್ಯಾಖ್ಯಾನ ಜನ್ಮಜನ್ಮಾಂತರದಲ್ಲಿ ಪಟ್ಟ ಪ್ರಯಾಸದಿಂದ ಎಂತಾದರಾಗಲಿ ಪಡೆದ ಈ ಮಾನವದೇಹವನ್ನು ಇನ್ನು ಮುಂದೆ ಆಗಬೇಕಾದ ಉದ್ಧಾರಕ್ಕಾಗಿ ತಡಮಾಡದೆ ವಿನಿಯೋಗಿಸು. ಬೆರಣಿಯಿದ್ದರೆ ಬೆಂಕಿ, ಬೆಂಕಿಯಿದ್ದರೆ ಅನ್ನವೆಂಬಂತೆ-ದೇಹವಿದ್ದರೆ ಭಕ್ತಿ, ಭಕ್ತಿಯಿದ್ದರೆ ಮುಕ್ತಿ, ಬೆರಣಿಯಿದ್ದಾಗಲೇ, ಊಟದ ಹೊತ್ತು ಮಿಂಚಿ ಹೋಗಿ ಕತ್ತಲಾಗುವ ಮೊದಲೇ ಅಡಿಗೆ ಮಾಡಿ ಉಣ್ಣುವಂತೆ-ಈಗಲೋ ಆಗಲೋ ಸಾಯುವ ಈ ದೇಹವಿರುವಾಗಲೇ ಶಿವನಿಗೆ ಶರಣಾಗತಿ ಹೊಕ್ಕು, ಭಕ್ತರೊಡನಾಡಿ, ಅನುಭವಾಮೃತದಡಿಗೆಯನ್ನು ಮಾಡಿ ಉಣ್ಣು ಮತ್ತೆ ಮತ್ತೆ ಹುಟ್ಟುವ ಮತ್ತೆ ಮತ್ತೆ ಸಾಯುವ ಭವರೋಗ ನಿನಗೆ ಮರುಕಳಿಸುವುದಿಲ್ಲ.
(ಬಾಹೆ : ಬರುವಿಕೆ, ಬೀಯ<ವ್ಯಯ)
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು