ಭಕ್ತನ ಜ್ಞಾನಿಸ್ಥಲ - ಮೂಢನಂಬಿಕೆ
ಶಕುನವೆಂದೆಂಬೆ, ಅವಶಕುನವೆಂದೆಂಬೆ-
ನಿಮ್ಮವರು ಅಳಲಿಕೆ ಅಂದೇಕೆ ಬಂದೆ?
ನಿಮ್ಮವರು ಅಳಲಿಕೆ ಇಂದೇಕೆ ಹೋದೆ?
ನೀ ಹೋಹಾಗಳಕ್ಕೆ! ನೀ ಬಾಹಾಗಳಕ್ಕೆ!
ಅಕ್ಕೆ ಬಾರದ ಮುನ್ನ ಪೂಜಿಸು ಕೂಡಲಸಂಗಮದೇವನ.
Transliteration Śakunavendembe, avaśakunavendembe-
nim'mavaru aḷalike andēke bande?
Nim'mavaru aḷalike indēke hōde?
Nī hōhāgaḷakke! Nī bāhāgaḷakke!
Akke bārada munna pūjisu kūḍalasaṅgamadēvana.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 You say the omen is good,
You say the omen is bad-
Why did you come that day
To grieve your kin?
Why do you go today
To grieve your kin?
Whenever you come is grief,
And grief whenever you go...
Before grief comes, adore
Lord Kūḍala Saṅgama!
Translated by: L M A Menezes, S M Angadi
Hindi Translation शकुन कहते हो, अपशकुन कहते हो
स्वजनों को रुलाने तब क्यों आये?
स्वजनों को रुलाने अब क्यों गये?
तुम्हारे आते समय भी दुःख
जाते समय भी दुःख
दुःख के आने के पूर्व कूडलसंगमदेव को पूजो ॥
Translated by: Banakara K Gowdappa
Telugu Translation శకునమని అపశకునమని పల్కెదవే!
నీవార లేడ్వ నాడేల వచ్చితి:
నీవార లేడు నేడేల పోదువో!
వచ్చినా వ్యధ; పోయినా వ్యధ;
వ్యధపడక మునుపే కొల్వుమ;
కూడల సంగమ దేవుని.
Translated by: Dr. Badala Ramaiah
Tamil Translation நிமித்தமென்பாய், தீ நிமித்த மென்பாய்,
உம்மவரை அழச்செய்து அன்று என் வந்தாய்?
உம்மவரை அழச்செய்து இன்று ஏனு சென்றாய்?
நீ செல்வாகலுந் துன்பம் வருவாகலுந் துன்பம்
துன்பம் வரும் முன்னரே
கூடல சங்கம தேவனை வணங்குவாய்.
Translated by: Smt. Kalyani Venkataraman, Chennai
Marathi Translation
शकूनापशकून म्हणावे, कशाला
कळेना तुजला, अरे वेड्या
जन्माशि येताना, खूप रडविला
त्रास तू दिधला, जननीशि
जातानाही सारे रडती आप्तीष्ठ
तयालागी कष्ट, किती झाले ?
रडताचि आला, रडत राहिला
रडताचि गेला, जन्म तुझा
कूडलसंगमदेवा ! शरण गेल्याविण
सार्थक होईना, नरदेह
अर्थ - कसला शकून, कसला अपशकून घेऊन बसला आहात ? असले व्यर्थ विचार व त्यावर तोडगा यातच वेळ घालवू नका. अंधश्रद्धा व अज्ञान यांचा त्याग करा. जन्म घेताना जन्म देणाऱ्या आईलाच रडवीत आला नाही का? तेव्हा कुठला शकून होता ? आणि ईहलोक सोडून जाताना आपल्याच लोकांना रडवीत गेलात, तेव्हा कसला अपशकून होता? त्या ईश्वरी कृत्याला शकून व अपशकून असे संबोधणे हे अज्ञानाचे लक्षण नव्हे का? तुमचे जन्म, मरण आपल्याच लोकाना रडविण्यासाठीच होते का ? म्हणून असले बुरसटलेले विचार सोडून द्या. अशा विचारात वेळ घालविण्यात काय अर्थ ? जन्म घेतलाच आहात तर, जन्म मरणाच्या मधल्या कालात क्षणाचाही अपव्यय न करता मनोभावे परमेश्वराचे पूजन करा आणि त्याला शरण जा.
Translated by Rajendra Jirobe, Published by V B Patil, Hirabaug, Chembur, Mumbai, 1983
कसला शकून नि कसला अपशकून
आपल्यांना रडविण्यास तेव्हा का आला?
आपल्यांना रडविण्यास आता का जाता?
मृत्यूचे दुःख होण्यापूर्वी, मृत्यू घेऊन जाण्यापूर्वी,
पूजा करुन घे कूडलसंगमदेवाची.
Translated by Shalini Sreeshaila Doddamani
ಶಬ್ದಾರ್ಥಗಳು ಅಕ್ಕೆ = ದುಃಖ; ಅಳಲಿಕೆ = ; ಶಕುನ = ಶುಭ; ಹೋಹು = ;
ಕನ್ನಡ ವ್ಯಾಖ್ಯಾನ ಸತ್ತವನೊಬ್ಬನ ಬಿದ್ದ ಶವವನ್ನು ನೋಡಿ ಬಸವಣ್ಣನವರು ಮರುಗುತ್ತ ಮಿಕ್ಕವರಿಗೆ ಸಾಂತ್ವನ ಮಾಡುತ್ತಿರುವರು : ಆ ಸತ್ತವನು ಬದುಕಿದ್ದಾಗ ಯಾವ ಧರ್ಮಕಾರ್ಯ ಮಾಡುವುದಕ್ಕೂ ಶಕುನ-ಅಪಶಕುನಗಳನ್ನು ಎಣಿಸುತ್ತ ಕಾಲ ಕಳೆಯುತ್ತಿದ್ದ. ಇದ್ದಕ್ಕಿದ್ದಂತೆ ಅವನ ಪಾಪ ಕೂಪದಲ್ಲೇ ಅವನು ಬಿದ್ದು ಸತ್ತ. ಹೆಂಡತಿಮಕ್ಕಳು ನಂಟರಿಷ್ಟರೆಲ್ಲಾ ಎದೆ ಚಚ್ಚಿಕೊಂಡು ಅಳುತ್ತಿದ್ದರು-ಅದು ಅಪಶಕುನವಲ್ಲದೆ ಶಕುನವೆ ? ಅವನು ಹುಟ್ಟಿದಂದೂ ಪ್ರಸವವೇದನೆಯನ್ನು ತಾಳಲಾರದೆ ತಾಯಿ ಅಳುತ್ತಿದ್ದಳು-ಒಳಗೆ ಹೊರಗೆ ಕಾತರದಿಂದಬಂದಿದ್ದ ಜನರೂ ಅಳುತ್ತಿದ್ದರು-ಅದು ಅಪಶಕುನವಲ್ಲದೆ ಶಕುನವೆ ?
ಹೀಗೆ ಜೀವನು ಈ ಲೋಕಕ್ಕೆ ಬರುವಾಗಲೂ, ಇಲ್ಲಿಂದ ಹೋಗುವಾಗಲೂ ಹಲವು ಕಠಿಣ ಪರಿಸ್ಥಿತಿಗಳನ್ನೇ ಉತ್ಪಾದಿಸಿ ಎಲ್ಲರನ್ನೂ ದಿಕ್ಕುತಪ್ಪಿಸಿ ಅಳಿಸಿಹೋಗುವುದು ಯಾವ ಬುದ್ಧಿವಂತಿಕೆ ? ಹುಟ್ಟಿದ್ದಾಯಿತು-ಇನ್ನು ಸಾಯುವಾಗಲಾದರೂ ಜನರು ಬರೀ ಕಣ್ಣೀರಲ್ಲಿ ಕೈತೊಳೆಯದಂತಾಗಲಿ. ಅದಕ್ಕಾಗಿ ಮೀನಮೇಷವೆಣಿಸದೆ ಧರ್ಮಕಾರ್ಯದಲ್ಲಿ ನಿರತರಾಗಬೇಕು. ಸತ್ತಾಗ-ಸತ್ತವನ ಧರ್ಮಕಾರ್ಯಗಳು ಉಳಿದು ಅವನ ಅಗಲಿಕೆಯ ನೋವನ್ನು ಜನ ಸಹಿಸುವಂತಾಗಬೇಕು-ಎನ್ನುತ್ತ ಬಸವಣ್ಣನವರು ಆ ಸುತ್ತಲೂ ಬದುಕಿ ಕುಳಿತಿದ್ದವರ ಕಡೆ ಕಣ್ಣಾಡಿಸಿದರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು