•  
  •  
  •  
  •  
Index   ವಚನ - 169    Search  
 
ಭಕ್ತನ ಜ್ಞಾನಿಸ್ಥಲ - ಅನುಗ್ರಹ
ಹರನೀವ ಕಾಲಕ್ಕೆ ಸಿರಿಯು ಬೆನ್ನಲ್ಲಿ ಬರ್ಕು. ಹರಿದು ಹೆದ್ದೊರೆಯೆ, ಕೆರೆ ತುಂಬಿದಂತಯ್ಯಾ! ನೆರೆಯದ ವಸ್ತು ನೆರೆವುದು ನೋಡಯ್ಯಾ. ಅರಸು ಪರಿವಾರ ಕೈವಾರ ನೋಡಯ್ಯಾ! ಪರಮನಿರಂಜನನೆ ಮರೆದ ಕಾಲಕ್ಕೆ ತುಂಬಿದ ಹರವಿಯ ಕಲ್ಲು ಕೊಂಡಂತೆ, ಕೂಡಲಸಂಗಮದೇವಾ.
Transliteration Haranīva kālakke siriyu bennali barku. Haridu heddoreyē, kere tumbidantayyā! Nereyada vastu nerevudu nōḍayyā. Arasu parivāra kaivāra nōḍayyā! Parama niran̄janane mareda kālakke tumbida haraviya kallu koṇḍante, kūḍalasaṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Singer: Raja Hanumanna Nayaka Dore, Music Director: Raja Hanumanna Nayaka Dore, Music Publisher: Aananda Audio
Video
English Translation 2 When the Lord gives Wealth follows you! It's like the stream Flooding a tank: What is impossible Here comes to be. Monarchs and retinues Obey your hand. But when the High Immaculate One Forgets, it's like A stone that's flung At a full pot, O Lord Kūḍala Saṅgama! Translated by: L M A Menezes, S M Angadi
Hindi Translation शिव के देते समय संपदा पीछे आती है जैसे एक बृहत प्रवाह तालाब को भरता है देखा, अप्राप्य वस्तु प्राप्त होती है; राजा और परिवार वश में रहते हैं; परम निरंजन को भूलना भरे मटके पर पत्थर फेंकने की भाँति है कूडलसंगमदेव ॥ Translated by: Banakara K Gowdappa
Telugu Translation శివుడిచ్చునాటికి సిరివెన్నంటి వచ్చు ప్రవహించు ‘పెనువాగు చెరువునింపినట్లు; దొరకనివన్నియు దొరకు కదయ్య; ధరిణీళుభటులు దరిచేరి కొల్లురయ్యా; పరమనిరంజనుడే మలుచునాటికి నిండు కుండను రాచఱచినట్లగు కూడల సంగమదేవా! Translated by: Dr. Badala Ramaiah
Tamil Translation சிவனீயும்போது செல்வம் பின்பற்றி வரும் நதியிலே நீர் நிறைந்து, ஏரி நிறைந்ததனைய ஐயனே; அரியபொருள் கைகூடும் காணாய் ஐயனே, அரசு சுற்றம், கொடை காணாய் ஐயனே; பரம்பொருளை நீ மறக்குங் காலத்து, நிறை குடத்திலே கல்லெறிந்ததனைய கூடல சங்கம தேவனே. Translated by: Smt. Kalyani Venkataraman, Chennai
Marathi Translation देवाची कृपा झाली तर ऐश्वर्य पाठ लागेल जसा पावसाच्या पाण्याने तलाव भरतो. अप्राप्त वस्तूही प्राप्त होतील. राजपरिवारही सेवा करेल परम निरंजनाला विसरुन जाण्यावेळी भरलेल्या घागरीला दगड मारण्यासम कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಕೈವಾರ = ಹೊಗಳಿಕೆ; ನಿರಂಜನ = ಶಿವ; ಬರ್ಕು = ಬರುವುದು; ಹರ = ಶಿವ; ಹರವಿ = ;
ಕನ್ನಡ ವ್ಯಾಖ್ಯಾನ ಶಿವನು ಕೊಟ್ಟಾನೋ ಕೊಡನೋ ಎಂಬ ಶಂಕೆ ಬೇಡ. ಅವನು ಕೊಡಲಾರದುದನ್ನು ನರಮಾನವನೇನು ಕೊಟ್ಟಾನು ? ಆ ಶಿವ ನಿನಗೊಲಿದನೋ-ನಿನ್ನ ವೀರವನ್ನು ತಣಿಸುವ ರಾಜ್ಯಭಾರ, ನಿನ್ನ ಇಷ್ಟಾರ್ಥವನ್ನು ಸಲಿಸುವ ಕುಟುಂಬಪರಿವಾರ, ನಿನ್ನ ಹೃದಯಪುಷ್ಪವನ್ನು ಅರಳಿಸುವ ಮುದ್ದುಮಾತು ನಿನ್ನದಾಗುವುದು. ಇದಕ್ಕಿಂತಲೂ ಹೆಚ್ಚಾದುದೇನನ್ನು ನೀನು ನಿರೀಕ್ಷಿಸುವೆ ? ಸಣ್ಣದೊಂದು ಕೆರೆ ತುಂಬಲು ದೊಡ್ಡದೊಂದು ತೊರೆ ಹರಿದು ಬಂದರೆ ಸಾಲದೆ ? ಎಚ್ಚರಿಕೆ ! ಶಿವನನ್ನು ಮರೆಯಬೇಡ-ಅವನೇನಾದರೂ ನಿನ್ನನ್ನು ಮರೆತನೋ-ಇರುವ ನಿನ್ನೆಲ್ಲ ಭೋಗಭಾಗ್ಯವೂ ಬರಿದಾಗುವುದು-ತುಂಬಿದ ಕೊಡಕ್ಕೆ ಕಲ್ಲು ಬಿದ್ದಂತಾಗುವುದು. ಬಡತನದಲ್ಲಾಗಲಿ ಸಿರಿತನದಲ್ಲಾಗಲಿ ಜನ ಶಿವನನ್ನು ನೆನೆಯುವುದು ಮತ್ತು ಶಿವಶರಣರ ಕೈಂಕರ್ಯ ಮಾಡುವುದು ಐಹಿಕವಾಗಿಯೂ ಲಾಭದಾಯಕವೆಂಬುದು ವಚನದ ತಾತ್ಪರ್ಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು